Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ತಲೆಯಲ್ಲಿ ಹೇನುಗಳ ಕಾಟ ಹೆಚ್ಚಾಗಿದ್ದರೆ ಈ ಮನೆ ಔಷದಿಯನ್ನ ಬಳಸಿ ನೋಡಿ ಸಾಕು ..!

ನಮಸ್ಕಾರ ಪ್ರಿಯ ವೀಕ್ಷಕರ ಹೇನು ನಿವಾರಣೆಗೆ ಇಲ್ಲಿದೆ ನೋಡಿ 1ಸುಲಭ ಪರಿಹಾರ ಹೌದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಈ ಹೇನಿನ ಸಮಸ್ಯೆ ಕಂಡುಬರುತ್ತದೆ ಮಕ್ಕಳಿಗೆ ಏನು ಸಮಸ್ಯೆ ಆದರೆ ಈ ಸಮಸ್ಯೆ ಮನೆಮಂದಿಗೆಲ್ಲ ಹಬ್ಬಿ ಬಿಡುತ್ತದೆ ಯಾಕೆಂದರೆ ಈ ಹೇನು ಏಳು ಹಾಸಿಗೆಯನ್ನು ದಾಟಬಲ್ಲದಂತೆ. ಆದಕಾರಣ ಮನೆಯಲ್ಲಿ ಒಬ್ಬರಿಗೆ ಹೇನಿನ ಸಮಸ್ಯೆ ಉಂಟಾದರೆ ಅದು ಮನೆಮಂದಿಗೆಲ್ಲಾ ಹರಡುವುದಕ್ಕೆ ಹೆಚ್ಚಿನ ಸಮಯವೆ ಬೇಡ. ಈ ಹೇನು ಒಬ್ಬರಿಗೆ ಆದರೆ ಆ ಹೇನಿನ ಸಮಸ್ಯೆ ಎಷ್ಟು ಬೇಗನೆ ಮನೆ ಮಂದಿಗೆಲ್ಲಾ ಹರಡುತ್ತದೆ ಅಂದರೆ ಈ ಹೇನು ಬಟ್ಟೆ ಮುಖಾಂತರ ಅಥವಾ ಮಕ್ಕಳು ಒಟ್ಟಿಗೆ ಆಡುವಾಗ ಯಾವಾಗ ಬೇಕಾದರೂ ಹರಡಬಹುದು.

ಹಾಗಾದರೆ ಈ ಹೇನಿನ ಸಮಸ್ಯೆಗೆ ಪರಿಹಾರವೇನು ತುಂಬ ಸುಲಭ, ಇದಕ್ಕಾಗಿ ನೀವು ಯಾವುದೊ ಶಾಂಪೂ ಸೋಪು ಗಳನ್ನ ಬಳಸುವುದಕ್ಕಿಂತ ಈ ಸುಲಭವಾದ ಮನೆ ಮದ್ದನ್ನು ಪಾಲಿಸಿ. ಇದಕ್ಕಾಗಿ ನಿಮಗೆ ಬೇಕಾಗಿರುವುದು ಬೇವಿನ ಸೊಪ್ಪು ಮತ್ತು ತುಳಸಿ ದಳಗಳು. ಮೊದಲಿಗೆ ನೀವು ಸಮಪ್ರಮಾಣದಲ್ಲಿ ಈ ಎರಡು ಪದಾರ್ಥಗಳನ್ನು ತೆಗೆದುಕೊಳ್ಳಬೇಕು, ಅಂದರೆ ಸಮಪ್ರಮಾಣದಲ್ಲಿ ಬೇವಿನ ಸೊಪ್ಪು ಮತ್ತು ತುಳಸಿ ದಳವನ್ನು ತೆಗೆದುಕೊಳ್ಳಿ ನಂತರ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು ಇದಕ್ಕೆ 3ಚಮಚ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಬೇಕು. ಒಮ್ಮೆ ಕೂದಲಿಗೆ ಎಣ್ಣೆ ಹಾಕಿ ಕೂದಲನ್ನು ಸ್ಪಷ್ಟಪಡಿಸಿದ ನಂತರ ಈ ಪೇಸ್ಟನ್ನು ಕೂದಲಿಗೆ ಲೇಖನ ಮಾಡಿಕೊಳ್ಳಬೇಕು.

ಒಂದು ಗಂಟೆಯ ಬಳಿಕ ಕೂದಲನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಬೇಕು ಈ ಲೇಪನವನ್ನು ಕೂದಲಿಗೆ ಲೇಪನ ಮಾಡುವಾಗ ಕೂದಲಿನ ಬುಡಕ್ಕೆ ತಪ್ಪದೆ ಹಚ್ಚಬೇಕು. ಯಾಕೆ ಅಂದರೆ ಈ ಹೇನು ಹೇನಿನ ಮೊಟ್ಟೆ ಎಲ್ಲವೂ ಕೂದಲಿನ ಬುಡದಲ್ಲಿ ಹೆಚ್ಚಾಗಿ ಇರುವುದು ಆದಕಾರಣ ಹೆಚ್ಚು ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಲೇಪನ ಮಾಡಿ ನಂತರ ಕೂದಲಿಗೆ ಲೇಪನ ಮಾಡಿ. ಈ ಪರಿಹಾರವನ್ನು ವಾರಕ್ಕೆ 2ಬಾರಿ ಮಾಡುತ್ತಾ ಬರುವುದರಿಂದ ಹೇನಿನ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಈ ಪರಿಹಾರದ ಜೊತೆಗೆ ಕೂದಲಿಗೆ ಎಣ್ಣೆ ಹಾಕಿದಾಗ ಅಂದರೆ ಕೊಬ್ಬರಿ ಎಣ್ಣೆಯನ್ನು ಹಾಕಿದಾಗ ಸಣ್ಣ ಹಲ್ಲಿನ ಬಾಚಣಿಕೆಯ ಸಹಾಯ ದಿಂದ ಕೂದಲನ್ನು ಬಾಚಬೇಕು. ಈ ಪರಿಹಾರವನ್ನು ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆ ಆಗುತ್ತದೆ ಮತ್ತು ನಿಮಗೆ ಏನಾದರೂ ಡ್ಯಾಂಡ್ರಫ್ ನಂತಹ ಸಮಸ್ಯೆ ಕಾಡುತ್ತಿದ್ದರೆ, ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಕೂಡ ಈ ಪರಿಹಾರವನ್ನು ಪಾಲಿಸಬಹುದು. ತುಳಸಿ ದಳ ಮತ್ತು ಬೇವಿನ ಎಲೆಗಳು ಕೂದಲಿಗೆ ಚೆನ್ನಾಗಿ ಪೋಷಣೆ ಮಾಡುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಅನ್ನು ಕೂಡ ದೂರ ಮಾಡುತ್ತದೆ.

ಹಾಗಾದರೆ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಯಿತು ಅಲ್ಲಲ್ಲಿ ತಪ್ಪದ ಮಾಹಿತಿಗೆ 1ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.