Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ತುಟಿಗಳು ಕಪ್ಪಾಗಿ ಹೋಗಿದೆಯಾ …! ತೊಂಡೆ ಹಣ್ಣಿನ ಹಾಗೆ ಮಾಡಿಕೊಳ್ಳಲು ಈ ಮನೆಮದ್ದು ಮಾಡಿ ನೋಡಿ ..!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿ ನಿಮಗೆ ತಿಳಿಸುವ ಈ ಒಂದು ಮನೆ ಮದ್ದು ಏನು ಅಂದರೆ ತುಟಿಗಳು ಕೆಂಪಾಗುವುದಕ್ಕೆ ಕೆಲವೊಂದು ಸುಲಭವಾದ ಪರಿಹಾರಗಳನ್ನು ಹೌದು ತುಟಿಗಳು ಕೆಂಪಗೆ ಇರುವುದಕ್ಕೆ ಯಾರಿಗೆ ತಾನೆ ಇಷ್ಟ ಇಲ್ಲ. ಇನ್ನೂ ಹುಡುಗರಲ್ಲಿ ಕೂಡ ಕೆಲವರಿಗೆ ತಮ್ಮ ತುಟಿಗಳು ಕೆಂಪಗೆ ಇರಬೇಕು ಅಂತ ಆಸೆ ಪಡುತ್ತಾರೆ ಹೆಣ್ಣುಮಕ್ಕಳ ಬಗ್ಗೆ ಹೇಳುವುದೇ ಬೇಡ ತಮ್ಮ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ತುಟಿಗಳು ತುಂಬಾ ಪ್ರಾಮುಖ್ಯತೆ ವಹಿಸುತ್ತದೆ.

ಅದರಲ್ಲಿಯೂ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿದಾಗ ತಮ್ಮ ಅಂದ ಇನ್ನೂ ಹೆಚ್ಚುತ್ತದೆ ಅನ್ನೋ 1ನಂಬಿಕೆ ಹುಡುಗಿಯರಿಗೆ. ಆದಕಾರಣ ಹೆಣ್ಣುಮಕ್ಕಳು ಲಿಪ್ ಸ್ಟಿಕ್ ಹಚ್ಚುವುದು ಜಾಸ್ತಿ ಏನೂ ಪದೇಪದೆ ಲಿಪ್ ಸ್ಟಿಕ್ ಹಚ್ಚುವುದರಿಂದ ಕೂಡ ತುಟಿಗಳು ಕಪ್ಪಗಾಗುತ್ತವೆ. ಇನ್ನೂ ಸೂರ್ಯನ ಬಿಸಿಲಿಗೆ ಕಾಫಿ ಟೀ ಹೆಚ್ಚಾಗಿ ಕುಡಿಯುವುದರಿಂದ ಮತ್ತು ಗಂಡು ಮಕ್ಕಳಿಗೆ ಈ ತುಟಿಗಳು ಕಪ್ಪಗಾಗುವುದು ಕ್ಕೆ ಕಾರಣ ಧೂಮಪಾನ ಮದ್ಯಪಾನ ಮಾಡುವುದರಿಂದ ಈ ರೀತಿಯ ಕಾರಣಗಳಿಂದ ತುಟಿಗಳು ಕಪ್ಪಗಾಗುತ್ತವೆ. ಆದ ಕಾರಣ ನಾವು ಈ ದಿನದ ಮಾಹಿತಿಯಲ್ಲಿ ತುಟಿಗಳನ್ನು ಕೆಂಪಗಾಗಿಸಿ ಕೊಳ್ಳುವುದಕ್ಕೆ ಕೆಲವೊಂದು ಮನೆ ಮದ್ದುಗಳನ್ನು ತಿಳಿಸಿಕೊಡುತ್ತೇವೆ, ಹಾಗೆ ನೀವು ಕೂಡ ಈ ಕೆಲವೊಂದು ಪರಿಹಾರವನ್ನು ಪಾಲಿಸುವ ಮುಖಾಂತರ ನಿಮ್ಮ ತುಟಿಗಳನ್ನು ಕೆಂಪಗಾಗಿಸಿ ಕೊಳ್ಳಬಹುದು.

ಜೇನುತುಪ್ಪ ಸಕ್ಕರೆ ಮತ್ತು ಕೊಬ್ಬರಿಯನ್ನು :
ಅರ್ಧ ಚಮಚ ಜೇನುತುಪ್ಪ ಅರ್ಧ ಚಮಚ ಸಕ್ಕರೆ ಮತ್ತು ಒಂದು ಚಮಚ ಕೊಬ್ಬರಿ ಎಣ್ಣೆ ಅನ್ನು ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ತುಟಿಯ ಮೇಲೆ ಲೇಪನ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಬೇಕು. ಈ ರೀತಿ ದಿನಕ್ಕೆ ಒಮ್ಮೆ ಮಾಡುತ್ತ ಬರುವುದರಿಂದ ತುಟಿಗಳು ಕೆಂಪಗಾಗುತ್ತದೆ.

ಅರಿಶಿಣ ಮತ್ತು ಹಾಲು :
ಹಸಿ ಹಾಲಿಗೆ ಚಿಟಿಕೆ ಅರಿಶಿನವನ್ನು ಮಿಶ್ರ ಮಾಡಿ ದಿನಕ್ಕೆ ಎರಡು ಅಥವಾ ಮೂರು ಬಾರಿ ತುಟಿಗೆ ಲೇಪನ ಮಾಡಿ ಮಸಾಜ್ ಮಾಡಿಕೊಳ್ಳುವುದರಿಂದ ಕೂಡ ತುಟಿಗಳು ಕೆಂಪಗೆ ಆಗುತ್ತದೆ.

ಗುಲಾಬಿ ದಳಗಳು :
ಈ ಗುಲಾಬಿ ದಳಗಳನ್ನು ಪೇಸ್ಟ್ ಮಾಡಿ ಇದಕ್ಕೆ ಹಸಿ ಹಾಲನ್ನು ಮಿಶ್ರಣ ಮಾಡಬೇಕು ನಂತರ ಇದನ್ನು ತುಟಿಗೆ ಲೇಪನ ಮಾಡಿಕೊಳ್ಳುವುದರಿಂದ ತುಟಿ ಕೆಂಪಗಾಗುತ್ತದೆ ಅಥವಾ ಈ ಗುಲಾಬಿ ದಳದ ಪೇಸ್ಟ್ ಗೆ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಬಹುದು. ಇದರಿಂದ ತುಟಿಗಳು ಕೆಂಪಗೆ ಆಗುತ್ತದೆ.

ಈ ಕೆಲವೊಂದು ಪರಿಹಾರಗಳನ್ನು ನಾವು ಮಾಡಿಕೊಳ್ಳುತ್ತ ಬರುವುದರಿಂದ ತುಟಿಗಳು ಕೆಂಪಗೆ ಆಗುತ್ತದೆ ಹಾಗೆ ಈ ಮೇಲೆ ತಿಳಿಸಿದ ಯಾವುದಾದರೂ ಒಂದು ಮನೆ ಮದ್ದನ್ನು ಪಾಲಿಸಿ ನಿಮ್ಮ ತುಟಿಗಳು ಕೆಂಪಗೆ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ರಾಸಾಯನಿಕ ಪದಾರ್ಥಗಳನ್ನು ಬಳಸಿ ತುಟಿಗಳು ಕೆಂಪಗೆ ಕಾಣಿಸಿಕೊಳ್ಳುವುದಕ್ಕಿಂತ ಈ ರೀತಿ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ತುಟಿಗಳನ್ನು ಕೆಂಪಗಾಗಿಸಿಕೊಳ್ಳುವುದರಿಂದ ತುಟಿಗಳ ಮೃದುವಾಗಿರುತ್ತದೆ. ತುಟಿಗಳು ಮುಂದಿನ ದಿನಗಳಲ್ಲಿಯೂ ಕೂಡ ಕೆಂಪಗೆ ಇರುತ್ತದೆ ಅದೇ ರಾಸಾಯನಿಕ ಯುಕ್ತ ಪದಾರ್ಥ ಗಳನ್ನು ಬಳಸಿದರೆ ತುಟಿಗಳು ಇನ್ನೂ ಕಪ್ಪಗಾಗುತ್ತದೆ ಅಷ್ಟೆ.