Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ತುಟಿಯ ಮೇಲಿನ ಬೇಡವಾದ ಕೂದಲಿಗೆ ಇಲ್ಲಿದೆ ಸೂಪರ್ ಮನೆಯಲ್ಲೇ ಮಾಡುವ ಮನೆಮದ್ದು .!

ತುಟಿಯ ಮೇಲೆ ಇರುವ ಕೂದಲನ್ನು ತೆಗೆದು ಹಾಕುವುದಕ್ಕೆ ಒಂದೊಳ್ಳೆ ಉಪಯುಕ್ತಕರವಾದ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ. ಎಷ್ಟೋ ಜನರು ಈ ತುಟಿಯ ಮೇಲೆ ಇರುವ ಕೂದಲನ್ನು ತೆಗೆದು ಹಾಕೋದಕ್ಕೆ ಶೇವಿಂಗ್ ವ್ಯಾಕ್ಸಿಂಗ್ ಥ್ರೆಡ್ಡಿಂಗ್ ಅಂತ ಎಲ್ಲ ಮೊರೆ ಹೋಗ್ತಾರೆ. ಆದರೆ ನಾನು ಈ ದಿನ ನಿಮಗೆ ತಿಳಿಸುವಂತಹ ಈ ಒಂದು ಪರಿಹಾರ ಅತ್ಯಂತ ಸುಲಭವಾಗಿ ನೀವು ಮಾಡಬಹುದಾಗಿದ್ದು ಮತ್ತು ಪ್ರತಿದಿನ ಇದನ್ನ ನೀವು ಪಾಲಿಸುತ್ತಾ ಬರಬೇಕಾಗುತ್ತದೆ. ಇದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚುತ್ತದೆ ಮತ್ತು ನಿಮ್ಮ ಮುಖದಲ್ಲಿ ಬೇಡದಿರುವ ಕೂದಲನ್ನು ತೆಗೆದುಹಾಕುವುದಕ್ಕೆ,

ಈ ಪರಿಹರ ತುಂಬ ಸುಲಭ ಆಗಿರುತ್ತದೆ. ಆದಕಾರಣ ನೀವು ಸಂಪೂರ್ಣವಾಗಿ ಮಾಹಿತಿಯನ್ನ ತಿಳಿಯಿರಿ ಮತ್ತು ತ್ವಚೆಯ ಮೇಲೆ ಇರುವ ಬೇಡದಿರುವ ಕೂದಲನ್ನು ತೆಗೆದುಹಾಕುವುದಕ್ಕೆ ನೀವು ಈ ಒಂದು ವಿಧಾನವನ್ನು ಪಾಲಿಸಿ. ಈ ಒಂದು ವಿಧಾನವು ಹೀಗಿರುತ್ತದೆ, ಇದಕ್ಕಾಗಿ ಬೇಕಾಗಿರುವುದು ಗೋಧಿ ಹಿಟ್ಟು ಕಡಲೆ ಹಿಟ್ಟು ಮತ್ತು ಅಶ್ವಗಂಧ ಪುಡಿ ನಂತರ ಕಸ್ತೂರಿ ಹಳದಿಯನ್ನು ತೆಗೆದುಕೊಳ್ಳಿ ಕೊನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ನಂತರ ಎಲ್ಲಾ ಪದಾರ್ಥಗಳನ್ನು ಮಾಡಿಕೊಳ್ಳುವುದಕ್ಕೆ ನಿಮಗೆ ಬೇಕಾಗಿರುವುದು ನೀರು.

ಒಂದು ಚಮಚ ಗೋಧಿ ಹಿಟ್ಟಿಗೆ ಒಂದು ಚಮಚ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ. ಇದಕ್ಕೆ ಅರ್ಧ ಚಮಚ ಕಸ್ತೂರಿ ಹಳದಿಯನ್ನು ಹಾಕಿ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು, ನಂತರ ಇದನ್ನು ಪೇಸ್ಟ್ ಮಾಡಿಕೊಳ್ಳಬೇಕು. ನೀವು ಇದನ್ನು ಮುಖದ ಮೇಲೆ ಕೂದಲಿರುವ ಭಾಗಕ್ಕೆ ದಪ್ಪದಾಗಿ ಲೇಪನ ಮಾಡಿಕೊಳ್ಳಬೇಕು ನೆನಪಿನಲ್ಲಿಡಿ ನೀವು ಈ ಪೇಸ್ಟನ್ನು ಕೂದಲಿರುವ ಭಾಗದಲ್ಲಿ ದಪ್ಪದಾಗಿ ಲೇಪನ ಮಾಡಿಕೊಳ್ಳಬೇಕು. ನಾವು ಇಲ್ಲಿ ಗೋಧಿ ಹಿಟ್ಟನ್ನು ಬಳಸಿದ್ದೇವೆ, ಮುಖದ ಮೇಲಿರುವ ಸಣ್ಣ ಕೂದಲನ್ನು ತೆಗೆಯಲು ಸಹಕರಿಸುತ್ತದೆ.

ಕಡಲೆಹಿಟ್ಟಿನ ಬಗ್ಗೆ ತಿಳಿದಿದೆ ಇದು ಮುಖದ ಮೇಲಿರುವ ಸಣ್ಣ ರಂದ್ರದ ಕೂದಲಿನ ಬುಡವನ್ನು ವೀಕ್ ಮಾಡಿ ತ್ವಚೆಯ ಬುಡದಿಂದ ಕೂದಲು ತೆಗೆದುಹಾಕುವುದಕ್ಕೆ ಸಹಕರಿಸುತ್ತದೆ. ಇನ್ನು ಅರಿಶಿಣ, ಕೂದಲು ಬೆಳವಣಿಗೆಯನ್ನ ಕಡಿಮೆ ಮಾಡುತ್ತಾ ಬರುತ್ತದೆ ಕೊನೆಯಲ್ಲಿ ಬಳಸಿರುವ ಕೊಬ್ಬರಿ ಎಣ್ಣೆ ಮುಖದ ತೇವಾಂಶವನ್ನು ಕಾಪಾಡುತ್ತದೆ. ಯಾಕೆಂದರೆ ನಾವು ಪರಿಹಾರದಲ್ಲಿ ಬಳಸಿರುವ ಪದಾರ್ಥಗಳನ್ನು ಹೆಚ್ಚು ಮಾಡುತ್ತದೆ ಅಂಶವನ್ನು ಕಾಪಾಡುತ್ತದೆ.

ಈ ಪೇಸ್ಟನ್ನು ಲೇಖನ ಮಾಡಿಕೊಂಡ ನಂತರ ಇದನ್ನು ಒಣಗಲು ಬಿಡಿ ನಂತರ ನೀವು ಕೂಡಲೇ ನೀರನ್ನು ಬಳಸಿ ಈ ಲೇಪನವನ್ನು ತೆಗೆಯಬಾರದು, ನಿಧಾನವಾಗಿ ನಿಮ್ಮ ಕೈಗಳ ಸಹಾಯದಿಂದ ಸ್ಕ್ರಬ್ ಮಾಡಿಕೊಳ್ಳುತ್ತಾ ಮುಖದಲ್ಲಿರುವ ಸಣ್ಣ ಕೂದಲು ಸಹ ಆಚೆ ಬರುತ್ತದೆ. ಮತ್ತೆ ನೀವು ಇದನ್ನು ಪ್ರತಿದಿನ ಪಾಲಿಸಬೇಕು ಈ ರೀತಿ ಮಾಡುವುದರಿಂದ ಮುಖದ ಮೇಲೆ ಇರುವ ಬೆಡದಿರುವ ಕೂದಲು ವಾರದಲ್ಲಿಯೆ ಪರಿಹಾರ ಆಗುತ್ತದೆ ಮತ್ತು ಹೊಳಪಾದ ಕಾಂತಿಯುತ ತ್ವಚೆಯನ್ನು ಪಡೆದುಕೊಳ್ಳಬಹುದು.

ಇದು ಒಂದು ಸುಲಭ ಪರಿಹಾರ ಆಗಿರುತ್ತದೆ. ನಿಮಗೆ ಮುಖದ ಮೇಲೆ ಬೇಡದೇ ಇರುವ ಕೂದಲು ಇದ್ದಲ್ಲಿ ನೀವು ಇದನ್ನು ಬಳಸಿ ಕೂದಲನ್ನು ತೆಗೆಯಿರಿ. ಆದರೆ ಯಾವುದೇ ಕಾರಣಕ್ಕೂ ಥ್ರೆಡ್ಡಿಂಗ್ ಶೇವಿಂಗ್ ಬಳಸಿ ಮುಖದ ನೈಸರ್ಗಿಕತ್ವವನ್ನು ಹಾಳು ಮಾಡಿ ಕೊಳ್ಳಬೇಡಿ. ಈ ಪರಿಹಾರ ನಿಮಗೆ ಉಪಯುಕ್ತವಾಗಿದಲ್ಲಿ ತಪ್ಪದೇ ಒಂದು ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.