Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ತೂಕವನ್ನು & ಹೊಟ್ಟೆ ಬೊಜ್ಜನ್ನು ವೇಗವಾಗಿ ಕರಗಿಸಲು ಮನೆ ಮದ್ದು…!

ಇವತ್ತಿನ ಲೇಖನದಲ್ಲಿ ಬೊಜ್ಜು ಕರಗಿಸುವುದಕ್ಕೆ ಒಂದೊಳ್ಳೆ ಮನೆಮದ್ದನ್ನು ತಿಳಿಸುತ್ತವೆ ಈ ಮನೆ ಮದ್ದಿನಲ್ಲಿ ನಾವು ನಿಮಗೆ ತಿಳಿಸುತ್ತಾ ಇರುವುದು 2ಆರೋಗ್ಯಕರವಾದ ಡ್ರಿಂಕ್ ಬಗ್ಗೆ ಹೌದು ನಾವು ಖರ್ಚು ಮಾಡಿ ಎಷ್ಟೋ ಹಣವನ್ನು ವ್ಯರ್ಥ ಮಾಡಿ ಆಚೆ ಡ್ರಿಂಕ್ ಗಳನ್ನು ಕುಡಿಯುವುದರಿಂದ, ಅದರಿಂದ ನಮಗೆ ಯಾವ ಆರೋಗ್ಯಕರ ಲಾಭಗಳು ಕೂಡ ಆಗುವುದಿಲ್ಲಾ, ಆದರೆ ನಾವು ಇಂತಹ ಡ್ರಿಂಕ್ ಅನ್ನು ಕುಡಿಯುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು ಮತ್ತು ದೇಹದಲ್ಲಿ ಬೊಜ್ಜು ಕೂಡ ಹೆಚ್ಚಾಗುವುದಿಲ್ಲಾ.

ಇದಕ್ಕಾಗಿ ನೀವು ಮಾಡಬೇಕಾಗಿ ಇರುವುದು ಏನು ಮತ್ತು ಈ ಡ್ರಿಂಕ್ ಅನ್ನು ಮಾಡುವುದು ಹೇಗೆ ಮತ್ತು ಯಾವ ಸಮಯದಲ್ಲಿ ಈ ಡ್ರಿಂಕ್ ಅನ್ನು ಕುಡಿಯಬೇಕು ಅನ್ನೊ ಮಾಹಿತಿಯನ್ನು ನೀಡ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೆ ಪ್ರತಿಯೊಬ್ಬರಿಗೂ ಈ ಆರೋಗ್ಯಕರವಾದ ಡ್ರಿಂಕ್ಸ್ ನ ಬಗೆಗಿನ ಈ ಮಾಹಿತಿಯನ್ನು ಶೇರ್ ಮಾಡಿ.

ಮೊದಲಿಗೆ ಈ ಡ್ರಿಂಕ್ ಅನ್ನ ಮಾಡುವುದು ಹೇಗೆಂದು ತಿಳಿಯೋಣ ಮತ್ತು ಇದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುದು ಅಂತ ಕೂಡ ತಿಳಿಯೋಣ ಮೊದಲಿಗೆ ಸೌತೆಕಾಯಿ ಸೌತೆಕಾಯಿ ದೇಹದ ಎಷ್ಟು ಅಲ್ವಾ ಈ ಸೌತೆಕಾಯಿಯನ್ನು ಯಾವ ಆಹಾರ ಪದಾರ್ಥಗಳೊಂದಿಗೆ ಸೇವಿಸಿದರೂ ಆಹಾರ ಒಳ್ಳೆ ಜೀರ್ಣವಾಗುತ್ತದೆ. ನಂತರ ಬೇಕಾಗಿರುವುದು ಟೊಮೆಟೊ ಹಣ್ಣು ಕಲ್ಲಂಗಡಿ ಹಣ್ಣು ಮತ್ತು ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ಹಣ್ಣು.

ಮೊದಲಿಗೆ ಕಲ್ಲಂಗಡಿ ಹಣ್ಣು ಸೌತೆಕಾಯಿ ಮತ್ತು ಟೊಮೆಟೊ ಹಣ್ಣು ಹಾಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು ಅಂದರೆ ಇದನ್ನು ರುಬ್ಬಿಕೊಳ್ಳಬೇಕು ನಂತರ ಇದನ್ನು ಗ್ಲಾಸ್ ಗೆ ಹಾಕಿ ಇದಕ್ಕೆ ನೀವು ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ಇದನ್ನು ನೀವು ಕುಡಿಯಬೇಕು ಇದೀಗ ಡ್ರಿಂಕ್ ತಯಾರಾಗಿದೆ ನೀವು ಇದನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಕಲ್ಲಂಗಡಿ ಹಣ್ಣು ನೀರಿನ ಅಂಶದಿಂದ ಕೂಡಿದ್ದು ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ತೂಕ ಇಳಿಕೆಯಾಗುತ್ತದೆ ದೇಹ ತಂಪಾಗಿರುತ್ತದೆ ಇದರ ಜೊತೆಗೆ ನಾವು ಬಳಸಿರುವುದು ಟೊಮೆಟೊ ಹಣ್ಣು, ಇದು ಕೂಡ ಒಳ್ಳೆಯ ಪೋಷಕಾಂಶಗಳು ಖನಿಜಾಂಶಗಳು ದೇಹಕ್ಕೆ ನೀಡುತ್ತದೆ.

ಇನ್ನು ಎರಡನೆಯದಾಗಿ ಈ ಡ್ರಿಂಕ್ ಅನ್ನ ಮಾಡುವುದಕ್ಕೆ ಬೇಕಾಗಿರುವುದು ಕಾಮಕಸ್ತೂರಿ ಬೀಜಗಳು ಈ ಕಾಮಕಸ್ತೂರಿ ಬೀಜ ದೇಹಕ್ಕೆ ತುಂಬಾ ತಂಪು ಮತ್ತು ತೂಕವನ್ನು ಇಳಿಸಿಕೊಳ್ಳಲು ಕೂಡ ಬಹಳ ಪ್ರಯೋಜನಕಾರಿ ಹೇಗೆ ಅಂದರೆ ಈ ಕಾಮಕಸ್ತೂರಿ ಬೀಜದ ಡ್ರಿಂಕ್ ಅನ್ನಮಾಡಿ ಕುಡಿದಾಗ ಇದು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಇದರಿಂದ ನೋವು ಕಡಿಮೆ ಊಟ ಮಾಡುತ್ತೇವೆ ಮತ್ತು ತೂಕ ಕೂಡ ಕಡಿಮೆಯಾಗುತ್ತದೆ ಬೊಜ್ಜು ಕೂಡ ಕರಗುತ್ತದೆ.

ಕಾಮಕಸ್ತೂರಿ ಬೀಜವನ್ನು 1ಚಮಚ ತೆಗೆದುಕೊಂಡು 1ಲೋಟ ನೀರಿನಲ್ಲಿ ನೆನೆಸಿಡಬೇಕು ನಂತರ ಮಾರನೆ ದಿವಸ ಆ ನೀರಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಡ್ರಿಂಕ್ ಅನ್ನ ಕುಡಿಯುತ್ತ ಬರುವುದರಿಂದ ಬೇಗ ತೂಕ ಇಳಿಕೆಯಾಗುತ್ತದೆ. ಇದನ್ನು ಕೂಡ ನೀವು ಬೆಳಿಗ್ಗೆ ಸಮಯದಲ್ಲಿ ಕುಡಿಯಬಹುದು, ಈ ಡ್ರಿಂಕ್ ಅನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಮತ್ತು ಮೇಲೆ ತಿಳಿಸಿದಂತಹ ವೆಜಿಟೆಬಲ್ಸ್ ಸ್ಮೂತಿ ಅನ್ನು ಉಪಾಹಾರಕ್ಕೆ ಮೊದಲು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ತೂಕ ಇಳಿಕೆಯಾಗುತ್ತದೆ.