Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ತೂಕವನ್ನ ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬೇಕಾದರೆ ಈ ಮನೆ ಔಷಧಿಯನ್ನ ಬಳಸಿ ನೋಡಿ ..!

ದಪ್ಪಗಾಗಲು ಈ ಸುಲಭವಾದ ಮನೆ ಮದ್ದನ್ನು ಪಾಲಿಸಿ ಹೌದು ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ದಪ್ಪಗಾಗಲು ಕೆಲವೊಂದು ಸುಲಭ ಮಾರ್ಗಗಳನ್ನು ಕೆಲವರಂತೂ ಹೆಚ್ಚು ತಿಂದು ಬೇಕರಿ ಫುಡ್ ಚಾಟ್ಸ್ ಇವುಗಳನ್ನು ಸೇವಿಸುವ ಮುಖಾಂತರ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ ಅಥವಾ ಇದ್ದಕ್ಕಿದ್ದ ಹಾಗೆ ಈ ರೀತಿ ನಾವು ನಮ್ಮ ದೇಹದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿಕೊಂಡು ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಂಡಿದ್ದೇ ಆದಲ್ಲಿ ಇದು ಮುಂದಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಆದ ಕಾರಣ ನಾವು ನಮ್ಮ ತೂಕವನ್ನ ಹೆಚ್ಚಿಸಿಕೊಳ್ಳಬೇಕು ದಪ್ಪಗಾಗಬೇಕು ಅಂದರೆ ಕೆಲವೊಂದು ನೈಸರ್ಗಿಕವಾದ ವಿಧಾನಗಳಿವೆ ಆ ಕೆಲವೊಂದು ಪದ್ದತಿಯನ್ನ ಪಾಲಿಸಿ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಆರೋಗ್ಯಕರವಾಗಿ. ಇನ್ನೂ ಮೊದಲನೆಯದಾಗಿ ನಾವು ಚಿಂತೆ ಮಾಡುವುದನ್ನು ಬಿಡಬೇಕು. ಹೆಚ್ಚಿನ ಜನರು ಚಿಂತೆ ಮಾಡುವುದರಿಂದಲೇ ತಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಹೇರುವುದರಿಂದಾಗಿಯೆ ತೂಕ ಇಳಿಕೆಯಾಗುತ್ತದೆ. ಆದಕಾರಣ ಮೊದಲು ನಾವು ಚೆನ್ನಾಗಿದ್ದೇವೆ ಅನ್ನೋದು ಯೋಚನೆಯನ್ನು ಬಿಡಬೇಕು ಹಾಗೆ ಪಾಸಿಟಿವ್ ಆಗಿ ಯೋಚನೆ ಮಾಡುವುದನ್ನು ಕಲಿಯಬೇಕು.

ಇನ್ನು ಆಹಾರ ಪದ್ಧತಿಯ ಬಗ್ಗೆ ಬರುವುದಾದರೆ ಸಾಮಾನ್ಯವಾಗಿ ಊಟ ಮಾಡುವುದಕ್ಕಿಂತ ಸ್ವಲ್ಪ ಹೆಚ್ಚು ಊಟ ಮಾಡುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು 1ಚಪಾತಿ ತಿನ್ನುವ ಜಾಗದಲ್ಲಿ 2ಚಪಾತಿ ಅನ್ನ ತಿನ್ನಬೇಕು ಈ ರೀತಿ ನಾವು ಸೇವಿಸುವ ಆಹಾರದಲ್ಲಿ ಆಹಾರ ಪ್ರಮಾಣವನ್ನು ಹೆಚ್ಚು ಮಾಡಿಕೊಂಡು ಹೋದದ್ದೇ ಆದಲ್ಲಿ ನಿಮ್ಮ ತೂಕ ಹೆಚ್ಚುತ್ತದೆ ಆರೋಗ್ಯಕರವಾಗಿ.

ಪ್ರತಿದಿನ ನಾವು ರಾತ್ರಿ ಮಲಗುವ ಮುನ್ನ 1ಬಾಳೆಹಣ್ಣನ್ನು ತಿಂದು ಮಲಗುವ ರೂಢಿ ಯನ ಮಾಡಿಕೊಂಡಿದ್ದೇ ಆದಲ್ಲಿ ಇದು ಕೂಡ ನಮ್ಮ ತೂಕವನ್ನು ಹೆಚ್ಚು ಮಾಡುವುದರಲ್ಲಿ ಸಹಕರಿಸುತ್ತದೆ. ಬಾಳೆಹಣ್ಣಿನಲ್ಲಿ ಇರುವ ಉತ್ತಮವಾದ ಪೋಷಕಾಂಶವು ತೂಕವನ್ನು ಹೆಚ್ಚು ಮಾಡುತ್ತದೆ. ಆರೋಗ್ಯಕರವಾಗಿ ಮತ್ತು ಬಾಳೆ ಹಣ್ಣಿನ ಬದಲು ಬಾಳೆಹಣ್ಣಿನ ಮಿಲ್ಕ್ ಶೇಕ್ ಅನ್ನು ಕೂಡ ಬಳಸಬಹುದು. ಈ ಮಿಲ್ಕ್ ಶೇಕ್ ಮಾಡುವ ವಿಧಾನ 1ಬಾಳೆಹಣ್ಣಿಗೆ ಅರ್ಧ ಕಪ್ ಹಾಲು ಅರ್ಧ ಕಪ್ ನೀರನ್ನು ಹಾಕಿ, ಇದಕ್ಕೆ ಸಕ್ಕರೆ ಬಳಸುವುದು ಬೇಡ ಬೆಲ್ಲವನ್ನು ಬೆರೆಸಿ ಜ್ಯೂಸ್ ಮಾಡಬೇಕು. ನಂತರ ಒಣ ಹಣ್ಣುಗಳನ್ನು ಈ ಮಿಲ್ಕ್ ಶೇಕ್ ಗೆ ಹಾಕಿ ಸೇವಿಸುತ್ತ ಬರಬೇಕು.

ಈ ಮಿಲ್ಕ್ ಶೇಕ್ ಅನ್ನು ಊಟದ ಮುಂಚೆ ಕುಡಿಯಬಾರದು ಊಟವಾದ ಬಳಿಕ ಈ ಮಿಲ್ಕ್ ಶೇಕ್ ಅನ್ನು ಕುಡಿಯುತ್ತ ಬರುವುದರಿಂದ ತೂಕ ಗಣನೀಯವಾಗಿ ಹೆಚ್ಚುತ್ತದೆ ಮತ್ತು ಒಣ ಹಣ್ಣುಗಳನ್ನು ಸೇವಿಸುವುದು ತಪ್ಪಿಸಬಾರದು ಒಣ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತದೆ.

ಇದರಿಂದ ತೂಕ ಹೆಚ್ಚುತ್ತದೆ ಇದರ ಜೊತೆಗೆ ಪ್ರತಿದಿನ ಮೊಟ್ಟೆ ಅನ್ನ ತಿನ್ನಬೇಕು ಮೊಟ್ಟೆ ಅನ್ನ ತಿನ್ನದೆ ಇರುವವರೂ ಕಾಳುಗಳನ್ನು ಮೊಳಕೆ ಕಟ್ಟಿಸಿ ಕೂಡ ಸೇರಿಸಬಹುದು ಈ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವ ಮುಖಾಂತರ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಮತ್ತು ತೂಕವನ್ನು ಹೆಚ್ಚು ಮಾಡಿಕೊಳ್ಳಲು ಬಯಸುವವರು ಕೂಡ ಪ್ರತಿದಿನ ವ್ಯಾಯಾಮವನ್ನು ಮಾಡಬೇಕು ಇದರಿಂದ ದೇಹದ ಮೆಟಬಾಲಿಸಮ್ ರೇಟ್ ಹೆಚ್ಚಾಗಿ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು ಹಸಿವು ಹೆಚ್ಚಾಗಿ ಊಟ ಸರಿಯಾಗಿ ಸೇರುತ್ತದೆ.