Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ದೇವರ ಕೋಣೆಯಲ್ಲಿ ಈ ವಸ್ತುಗಳಿಂದ ಹೀಗೆ ಮಾಡಿದರೆ ನಿಮ್ಮ ಮನೆಯ ಎಲ್ಲಾ ದೋಷಗಳಿಗೆ ಪರಿಹಾರ ಸಿಗುತ್ತದೆ

ಮನೆ ಅಂದ ಮೇಲೆ ಅದರಲ್ಲಿ ಎಂಟು ದಿಕ್ಕುಗಳು ಇದ್ದೇ ಇರುತ್ತದೆ ಅದರಲ್ಲಿಯೂ ಕೂಡಾ ಮನೆಯಲ್ಲಿ ಯಾವ ಕೊಠಡಿ ಯಾವ ದಿಕ್ಕಿನಲ್ಲಿ ಇರಬೇಕು ಯಾವ ವಸ್ತುಗಳು ಯಾವ ಮೂಲೆಯಲ್ಲಿ ಇರಬೇಕು ಅಲ್ಲಿಯೇ ಇರಬೇಕು ಇದರಿಂದ ಮನೆಯ ಏಳಿಗೆಯಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ .

ಇದನ್ನೇ ವಾಸ್ತುಶಾಸ್ತ್ರ ಎಂದು ತಿಳಿಸಲಾಗುತ್ತದೆ. ಈ ವಾಸ್ತು ಶಾಸ್ತ್ರವನ್ನು ಅಷ್ಟಾಗಿ ಯಾರೂ ಕಡೆಗಣಿಸುವುದಿಲ್ಲ ಮನೆ ಕಟ್ಟುವಾಗ ಮನೆಯನ್ನು ವಾಸ್ತು ಪ್ರಕಾರವೇ ಕಟ್ಟಲು ಹೆಚ್ಚಿಸುತ್ತಾರೆ. ಆದರೆ ಕೆಲವೊಂದು ಬಾರಿ ಜಾಗದ ಅಭಾವದಿಂದ ಇನ್ನು ಯಾವುದಾದರೂ ಕಾರಣಗಳಿಂದ ಮನೆಯಲ್ಲಿ ವಾಸ್ತು ಪ್ರಕಾರವೆ ಕೋಣೆಗಳನ್ನು ಕಟ್ಟಿಸಲು ಆಗುವುದಿಲ್ಲ.

ಹಾಗಾದರೆ ಮನೆಯಲ್ಲಿ ವಾಸ್ತು ದೋಷಗಳು ಹೆಚ್ಚಾಗಿದ್ದರೆ ಈ ವಾಸ್ತು ದೋಷದ ನಿವಾರಣೆಗಾಗಿ ಏನನ್ನು ಮಾಡಬೇಕು ಮತ್ತು ಹೊರಗಿನವರ ಕೆಟ್ಟ ದೃಷ್ಟಿಯನ್ನು ನಿವಾರಿಸಿಕೊಳ್ಳಲು ಯಾವೆಲ್ಲ ಪರಿಹಾರವನ್ನು ಮನೆಯಲ್ಲಿಯೇ ಕೈಗೊಳ್ಳಬಹುದಾಗಿದೆ ಅನ್ನುವುದನ್ನು ತಿಳಿಯೋಣ ಹಾಗೆ ಕೆಲವೊಂದು ಪರಿಹಾರವನ್ನು ಇಂದಿನ ಮಾಹಿತಿಯಲ್ಲಿ ತಿಳಿದ ನಂತರ ನೀವು ಕೂಡ ನಿಮ್ಮ ಮನೆಯಲ್ಲಿ ಕೆಲವೊಂದು ದೋಷಗಳ ನಿವಾರಣೆಗಾಗಿ ಇಂತಹ ಪರಿಹಾರವನ್ನು ಕೈಗೊಳ್ಳಿ ನೆಮ್ಮದಿಯ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಮನೆಯಲ್ಲಿ ವಾಸ್ತು ಪ್ರಕಾರ ಎಲ್ಲವೂ ಕೂಡ ಇದ್ದರೆ ಆ ಮನೆಯಲ್ಲಿ ಎಲ್ಲವೂ ಕೂಡ ಸರಿ ಇರುತ್ತದೆ ಅಂತ ಹೇಳಲು ಅಸಾಧ್ಯ ಹಾಗೆ ಮನೆಯಲ್ಲಿ ವಾಸ್ತು ದೋಷ ಇದ್ದರೆ ಯಾವುದಾದರೂ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ ಅಂತ ಅವರು ನಾನು ಈ ದಿನ ತಿಳಿಸಿದ ಕೆಲವೊಂದು ಪರಿಹಾರವನ್ನು ಮಾಡಿ ವಾಸ್ತು ದೋಷ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾಗುತ್ತದೆ.

ಮನೆ ಅಂದ ಮೇಲೆ ನೆರೆ ಹೊರೆಯವರು ಬಂದು ಹೋಗುತ್ತಲೇ ಇರುತ್ತಾರೆ ಇನ್ನು ಕೆಲವರು ನಮ್ಮ ಏಳಿಗೆಯನ್ನು ಕಂಡು ಕೆಟ್ಟ ದೃಷ್ಟಿಯನ್ನು ಹಾಕುತ್ತಿರುತ್ತಾರೆ ಅಂಥವರು ಮನೆಗೆ ಬಂದಾಗ ಮನೆಯ ಸುತ್ತ ಮುತ್ತಲೂ ನೋಡಿ ನಮ್ಮ ಮನೆ ಹೇಗೆ ಇಲ್ಲವಲ್ಲ ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿರುತ್ತಾರೆ .

ಅಂತಹ ಸಮಯದಲ್ಲಿ ನೀವು ನಿಮ್ಮ ಮನೆಗೆ ಕೆಟ್ಟ ದೃಷ್ಟಿ ತಗುಲಬಾರದು ಅನ್ನುವುದಾದರೆ ೨ ಮರದ ಕೋಲನ್ನು ತೆಗೆದುಕೊಂಡು ಕೆಂಪು ಬಟ್ಟೆಯ ಸಹಾಯದಿಂದ ಅದನ್ನು ಎಕ್ಸ್ ಆಕಾರದಲ್ಲಿ ಮನೆಯ ಗೋಡೆಯ ಮೇಲೆ ಹಾಕಬೇಕು ಇದರಿಂದ ನಿಮ್ಮ ಮನೆಗೆ ದೃಷ್ಟಿ ತಗುಲುವುದಿಲ್ಲ.

ಮತ್ತೊಂದು ಪರಿಹಾರವೆಂದರೆ ಮನೆಯ ವಾಸ್ತು ಸರಿ ಇಲ್ಲವಾದರೆ ದೇವರ ಸಾಮಾಗ್ರಿಗಳನ್ನು ಮಾರುವ ಅಂಗಡಿಗೆ ಹೋಗಿ ಏಳು ಗೋಮತಿ ಚಕ್ರವನ್ನು ಕೊಂಡುಕೊಂಡು ಬನ್ನಿ ಅದನ್ನು ದೇವರ ಮನೆಯಲ್ಲಿರುವ ಲಕ್ಷ್ಮೀದೇವಿಯ ಪಟದ ಕೆಳಗೆ ಇಟ್ಟು ಪ್ರತಿದಿನ ಇದನ್ನು ಪೂಜಿಸಿ ಇದರಿಂದ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ, ಜೊತೆಗೆ ಮನೆಯ ಮುಂಭಾಗದಲ್ಲಿ ಕಣ್ಣು ದೃಷ್ಟಿ ಗಣಪತಿಯ ಪಟವನ್ನು ಹಾಕುವುದು ಒಳ್ಳೆಯದು ಹಾಗೆ ಮನೆಯ ಸಿಂಹ ದ್ವಾರದ ಗೋಡೆಯ ಒಳ ಮುಖದ ಮೇಲ್ಭಾಗದಲ್ಲಿ ವಾಸ್ತು ದೋಷ ನಿವಾರಣ ಯಂತ್ರ ಹಾಕಬೇಕು.

ಈ ರೀತಿ ನಾನು ಈ ಮೇಲೆ ತಿಳಿಸಿದ ಕೆಲವೊಂದು ಪರಿಹಾರವನ್ನು ಮನೆಯಲ್ಲಿಯೇ ಕೈಗೊಳ್ಳಿ ಇದರಿಂದ ಕ್ರಮೇಣವಾಗಿ ವಾಸ್ತು ದೋಷ ನಿವಾರಣೆಯಾಗುತ್ತಾ ಬರುತ್ತದೆ ಇಂತಹ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ತಕ್ಷಣವೇ ನಮಗೆ ಫಲಿತಾಂಶ ದೊರೆಯುತ್ತದೆ ಎಂಬುದು ತಪ್ಪು ಕಲ್ಪನೆ ಆದರೆ ಸ್ವಲ್ಪ ಸಮಯ ಹಿಡಿದರೂ ನಿಮಗೆ ಫಲಿತಾಂಶ ಮಾತ್ರ ಬರಿದಾಗಿಯೇ ಇರುತ್ತದೆ ಅಂತ ಹೇಳಬಹುದಾಗಿದೆ. ಈ ಒಂದು ಪರಿಹಾರ ಶಾಸ್ತ್ರದ ಚಿಕ್ಕ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.