Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆ ಮದ್ದು ಮಾಡಿ ಸಾಕು ..!

ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಂಬುದು ಹೆಚ್ಚಾಗಿದ್ದರೆ ನಮಗೆ ಯಾವುದೇ ತರಹದ ಸಮಸ್ಯೆಗಳು ಆಗಲೇ ಅಂದರೆ ಅನಾರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಆಗಲಿ ಎದುರಾಗುವುದಿಲ್ಲ ಯಾಕೆಂದರೆ ರೋಗನಿರೋಧಕ ಶಕ್ತಿ ಎಂಬುದು ನಮ್ಮ ದೇಹದಲ್ಲಿ ಸೈನಿಕರು ಇದ್ದ ಹಾಗೆ ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯ ಆಗಲಿ ದಾಳಿ ಮಾಡಿದಾಗ ಅದನ್ನು ನಾಶ ಮಾಡುವಂತಹ ಒಂದು ಕೆಲಸ ಈ ರೋಗ ನಿರೋಧಕ ಶಕ್ತಿ ಮಾಡುತ್ತಾ ಇರುತ್ತದೆ. ಆದಕಾರಣ ರೋಗ ನಿರೋಧಕ ಶಕ್ತಿಯನ್ನು ಅಂದರೆ ಇಮ್ಯೂನಿಟಿ ಪವರ್ ಅನ್ನು ಹೆಚ್ಚು ಮಾಡುವಂತಹ ಆಹಾರ ಪದಾರ್ಥಗಳನ್ನು ನಾವು ಸೇವಿಸಬೇಕಾಗುತ್ತದೆ.

ಇಂದಿನ ಆಹಾರ ಪದ್ಧತಿಯಲ್ಲಿ ನಾವು ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಪಡೆದುಕೊಳ್ಳುವುದು ಅಸಮಾನ್ಯ ಆಗಿದೆ ಯಾಕೆಂದರೆ ಸಾಕಷ್ಟು ಆಹಾರ ಪದಾರ್ಥಗಳ ಕಲಬೆರಕೆ ಮತ್ತು ಇನ್ನೂ ಕೆಲ ಮಂದಿ ಆಹಾರವನ್ನು ರುಚಿಗಾಗಿ ಸೇರಿಸ್ತಾರೆ ಆರೋಗ್ಯಕ್ಕಾಗಿ ಸೇವಿಸುತ್ತಿಲ್ಲ ಈ ಎಲ್ಲ ಕಾರಣಗಳಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಎಂಬುದು ಇರುವುದೇ ಕಡಿಮೆ ಆಗಿದೆ ಆದಕಾರಣ ನೀವು ಪದೇಪದೆ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾ ಇದ್ದರೆ ಈ ಪರಿಹಾರಗಳನ್ನು ಮಾಡಿಕೊಳ್ಳಿ.

ಇದರಿಂದ ನಿಮ್ಮ ಇಮ್ಯೂನಿಟಿ ಪವರ್ ಬೂಸ್ಟ್ ಆಗುತ್ತದೆ ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ನೀವು ಹೆಚ್ಚಿನ ಕಾಲ ಆರೋಗ್ಯದಿಂದ ಇರಬಹುದು ಈ ಮನೆಮದ್ದು ಮಾಡುವುದನ್ನು ಹೇಗೆ ಅಂತ ಹೇಳ್ತೇವೆ ಕೇಳಿ. ಇದಕ್ಕಾಗಿ ನಮಗೆ ಬೇಕಾಗಿರುವುದು ಮೆಣಸಿನಕಾಳು ಜೇಷ್ಠಮಧು ಸೋಂಪಿನ ಕಾಳು ಬೆಳ್ಳುಳ್ಳಿ ಶುಂಠಿ.

ಇದೀಗ ಒಂದೂವರೆ ಲೋಟ ನೀರನ್ನು ತೆಗೆದುಕೊಳ್ಳಬೇಕು ಅಂದರೆ ಸರಿಯಾಗಿ ನೂರ ಐವತ್ತು ಎಂಎಲ್ ನೀರನ್ನು ತೆಗೆದುಕೊಂಡು ಅದಕ್ಕೆ ಮೊದಲು ಬೆಳ್ಳುಳ್ಳಿ ಅನ್ನು ನಾಲ್ಕು ಎಸಳು ಜಜ್ಜಿ ಹಾಕಬೇಕು. ನಂತರ ಇದಕ್ಕೆ ಅರ್ಧ ಇಂಚು ಶುಂಠಿಯನ್ನು ಸಣ್ಣಗೆ ಕತ್ತರಿಸಿ ಹಾಕಿ ಕಾಲು ಚಮಚ ಮೆಣಸಿನಕಾಳಿನ ಪುಡಿಯನ್ನು ಬೆರೆಸಬೇಕು ಅರ್ಧ ಇಂಚಿನಷ್ಟು ಜೇಷ್ಠಮಧುವಿನ ಪುಡಿಯನ್ನು ನೀರಿಗೆ ಹಾಕಿ ನೀರನ್ನು ಚೆನ್ನಾಗಿ ಕುದಿ ಬರೆಸಬೇಕು. ಇದೀಗ ಈ ಕಷಾಯವನ್ನು ಶೋಧಿಸಿ ಇಟ್ಟುಕೊಳ್ಳಿ ಇದನ್ನು ಬೆಳಿಗ್ಗೆ ಅರ್ಧ ಲೋಟ ಮತ್ತು ಸಂಜೆ ಅರ್ಧ ಲೋಟ ಸೇವಿಸಬೇಕು. ಈ ರೀತಿ ಪ್ರತಿದಿನ ಹದಿನೈದು ದಿನಗಳವರೆಗೂ ಮಾಡಿ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಮತ್ತೊಂದು ವಿಧಾನವಿದೆ ಅದೇನೆಂದರೆ ಅಮೃತಬಳ್ಳಿ ಕೆಲವರು ಮನೆಯಲ್ಲಿ ಬಳಸುತ್ತಾರೆ. ಈ ಅಮೃತಬಳ್ಳಿಯ ಎಲೆ ಅನ್ನು ಐದು ತೆಗೆದುಕೊಂಡು ಅದನ್ನು ಜಜ್ಜಿ ರಸ ತೆಗೆದುಕೊಳ್ಳಬೇಕು. ಇದೀಗ ಒಂದು ಲೋಟ ನೀರಿಗೆ ಈ ಎಲೆಯ ರಸವನ್ನು ಹಾಕಿ ಅರ್ದ ಚಮಚ ಅರಿಶಿನವನ್ನು ಹಾಕಿ ನೀರನ್ನು ಕುದಿಸಬೇಕು. ನಂತರ ನೀರು ತಣ್ಣಗಾದ ಮೇಲೆ ಅರ್ಧ ಚಮಚ ಜೇನುತುಪ್ಪವನ್ನು ಮಿಶ್ರ ಮಾಡಿ, ಈ ಡ್ರಿಂಕ್ ಅನ್ನು ಕುಡಿಯಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಈ ಪರಿಹಾರ ಸುಲಭವಾದ ಪರಿಹಾರ ಅಂತ ಹೇಳಬಹುದು ಮತ್ತು ಜ್ವರದ ಸಮಸ್ಯೆಗೆ ಆಯುರ್ವೇದದಲ್ಲಿ ಈ ಒಂದು ಪರಿಹಾರವನ್ನು ಕೂಡ ಮಾಡಿಕೊಡಲಾಗುತ್ತದೆ. ಇವತ್ತಿನ ಮಾಹಿತಿ ಇಷ್ಟವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದ.