Categories
ಅರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಲು ಇಲ್ಲಿದೆ ಮನೆ ಮದ್ದು ಹಾಗು ಆರೋಗ್ಯಕರವಾದ ಉಪಾಯ ..!

ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ಸೇವಿಸಲೇಬೇಕು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ನಾವು ಕೆಲವೊಂದು ವಿಚಾರಗಳನ್ನು ಕೂಡ ತಿಳಿದಿರಬೇಕು ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಜನರು ತಮ್ಮ ಸುವ್ಯವಸ್ಥೆಗಾಗಿ ಕೆಲವೊಂದು ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾರೆ ಅದೇನೆಂದರೆ ಕಂಪ್ಯೂಟರ್ ಲ್ಯಾಪ್ ಟಾಪ್ ಕ್ಯಾಲ್ಕುಲೇಟರ್ ಮೊಬೈಲ್ ಹೀಗೆ ಆದ ಕಾರಣ ಮನುಷ್ಯ ತನ್ನ ಮೆದುಳಿನ ಮೇಲೆ ಹಾಕುವ ಕೆಲಸ ಕಡಿಮೆಯಾಗಿದೆ ಇದರಿಂದಲೇ ನಮಗೆ ನಮ್ಮ ಮೆದುಳು ಸರಿಯಾಗಿ ಕೆಲಸ ನಿರ್ವಹಿಸದೆ ನೆನಪಿನ ಶಕ್ತಿ ಕಡಿಮೆಯಾಗುತ್ತಾ ಬರುತ್ತಿದೆ.

ಕೆಲವರಿಗೆ ಅಂತೂ ಅವರ ತಂದೆ ತಾಯಿಯ ಮೊಬೈಲ್ ನಂಬರ್ ಕೂಡಾ ತಿಳಿದಿರುವುದಿಲ್ಲ. ಇನ್ನೂ ಕೆಲವರಿಗೆ ತಮ್ಮ ಮೊಬೈಲ್ ನಂಬರ್ ತಿಳಿದಿರುವುದಿಲ್ಲ ಯಾಕೆ ಅಂದರೆ ಮೊಬೈಲ್ ನಲ್ಲಿ ಸೇವ್ ಆಗಿರುತ್ತದೆ ಅಂತಾ ಚಿಕ್ಕ ಮಾತನ್ನು ಹೇಳಿ ಸುಮ್ಮನಾಗಿಬಿಡುತ್ತಾರೆ ಆದಕಾರಣ ನಾವು ಎಷ್ಟು ಟೆಕ್ನಾಲಜಿಯಲ್ಲಿ ಮುಂದುವರಿಯುತ್ತೇವೆ. ಅಷ್ಟು ಮನುಷ್ಯನಿಗೆ ಕೆಲಸಗಳಿವೆ ಆಗುತ್ತದೆ ಇದರಿಂದ ಅವನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಕೂಡ ಬೀರುತ್ತದೆ.

ಇನ್ನೂ ಮಾಹಿತಿಗೆ ಬರುವುದಾದರೆ ಮೆದುಳಿನ ಕಾರ್ಯಕ್ಷಮತೆಯನ್ನು ಮಿದುಳಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ, ನಾವು ಸೇವಿಸಬಹುದಾದ ಕೆಲವೊಂದು ಆಹಾರ ಪದಾರ್ಥಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಇದರ ಜೊತೆಗೆ ನೀವು ನೆನಪಿನ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಈ ಸಲಹೆಯನ್ನು ತಪ್ಪದೆ ಪಾಲಿಸಿ ಅದೇನೆಂದರೆ ನಮಗೆ ನೆನಪೇ ಇಲ್ಲ ಅಂತ ಅಂದುಕೊಳ್ಳುವುದಕ್ಕಿಂತ ನಮಗೆ ಎಲ್ಲ ನೆನಪಿದೆ ಅಂತ ಅಂದುಕೊಂಡು ಇರುವುದು ಒಳ್ಳೆಯದು ಆತ್ಮವಿಶ್ವಾಸ ಎಂಬುದು ನಮ್ಮಲ್ಲಿ ಮೊದಲಿಗೆ ಇರಬೇಕು. ಆಗ ನಾವು ಯಾವ ವಿಷಯಗಳನ್ನು ಕೂಡ ಮರೆಯುವುದಿಲ್ಲ.

ಇನ್ನು ಮೆದುಳಿಗೆ ನಾವು ಹೆಚ್ಚು ಕೆಲಸವನ್ನು ನೀಡಬೇಕು ಅಂದರೆ ಕೆಲವೊಂದು ಮೈಂಡ್ ಗೇಮ್ ಅಂದರೆ ಕೆಲವೊಂದು ಆಟಗಳನ್ನು ಆಡಬೇಕು ಅದೇನೆಂದರೆ ಪದಬಂಧ ಚೆಸ್ ಇಂತಹ ಮಿದುಳಿಗೆ ಕೆಲಸವನ್ನು ನೀಡುವಂತಹ ಆಟಗಳನ್ನು ಆಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ಮೆಂತೆ ಸೊಪ್ಪಿನೊಂದಿಗೆ ಮೂಲಂಗಿಯನ್ನು ಮಿಶ್ರ ಮಾಡಿ ಇದಕ್ಕೆ ಒಗ್ಗರಣೆಯನ್ನು ಮಾಡಬೇಕು ಅಂದರೆ ಮೆಂತೆ ಸೊಪ್ಪು ಮತ್ತು ಮೂಲಂಗಿಗೆ ಜೀರಿಗೆ ಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಹುರಿದು ಇದನ್ನು ನಾವು ಸೇವನೆಮಾಡುತ್ತ ಬರುವುದರಿಂದ, ನೆನಪಿನ ಶಕ್ತಿ ಹೆಚ್ಚುತ್ತದೆ ಇದರ ಜೊತೆಗೆ ನೀವು ಬೇಕಾದರೆ ಈ ಪರಿಹಾರವನ್ನು ಕೂಡ ಮಾಡಿಕೊಳ್ಳಬಹುದು. ಹಸಿಶುಂಠಿ ಜೀರಿಗೆಯನ್ನು ಕಲ್ಲುಸಕ್ಕರೆಯೊಂದಿಗೆ ಮಿಶ್ರಮಾಡಿ ಇದನ್ನು ಚೆನ್ನಾಗಿ ಚಪ್ಪರಿಸಿ ಇದರ ರಸವನ್ನು ನುಂಗಬೇಕು. ಇದರಿಂದ ರುಚಿ ಕೂಡ ಹೆಚ್ಚುತ್ತದೆ ಮತ್ತು ತೆರಪಿನ ಶಕ್ತಿ ಕೂಡ ಹೆಚ್ಚುತ್ತದೆ.

ಮಕ್ಕಳಿಗೆ ನೆನಪಿನ ಶಕ್ತಿ ವೃದ್ಧಿಯಾಗಬೇಕೆಂದರೆ ಹಾಲಿನೊಂದಿಗೆ ಸಕ್ಕರೆಯನ್ನು ಬಳಸಬಾರದು ಜೇನು ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಮಾಡಿ ಮಲಗುವ ಮುನ್ನ ನೀಡಬೇಕು ಅಥವಾ ಬೆಳಗಿನ ಉಪಹಾರಕ್ಕೂ ಮುನ್ನ ನೀಡಬೇಕು ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಸೇಬುಹಣ್ಣನ್ನು ತಿನ್ನುವುದರಿಂದ ಕೂಡ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ.

ನಲ್ಲಿ ಕಾಯಿಯನ್ನು ತಿನ್ನುವುದರಿಂದ ಮೆದುಳಿನ ಜೀವಸತ್ವಗಳು ಆ್ಯಕ್ಟೀವ್ ಆಗುತ್ತದೆ ಇದರಿಂದ ನೆನಪಿನ ಶಕ್ತಿ ವೃದ್ಧಿ ಆಗುತ್ತದೆ. ಮೀನುಗಳನ್ನು ತಿನ್ನುವುದರಿಂದ ಇದರಲ್ಲಿರುವಂತಹ ಒಮೆಗಾ ತ್ರಿ ಅಂಶ ಮಿದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚು ಮಾಡುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಗೆ ಬೀಟ್ರೂಟ್ ಈರುಳ್ಳಿ ಸೊಪ್ಪು ಗಳನ್ನು ಸೇವಿಸಬೇಕು. ಇನ್ನೂ ನೀಲಿ ಕೆಂಪು ಮತ್ತು ಹಸಿರು ಬಣ್ಣದ ತರಕಾರಿಗಳನ್ನು ಸೇವಿಸುವುದರಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ.