Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮಕ್ಕಳ ಇಮ್ಯೂನಿಟಿ ಹೆಚ್ಚಿಸಲು ಈ ಆಹಾರ ತುಂಬಾ ಸಹಾಯಕ ಆಗುತ್ತದೆ ..!

ಹಾಯ್ ಫ್ರೆಂಡ್ ಈ ಮಾಹಿತಿಯಲ್ಲಿ ಮಕ್ಕಳ ಬೆಳವಣಿಗೆಗಾಗಿ ಉತ್ತಮವಾಗಿರುವಂತಹ ವನ್ನು ಸಲಾಡನ ತಿಳಿಸಿಕೊಡುತ್ತದೆ ಈ ರೀತಿಯ ಸಲಾಡನ ನೀವು ಮಕ್ಕಳಿಗೆ ಮಾಹಿತಿ ನೀಡುವುದರಿಂದ ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ ಮತ್ತು ಅವರ ದೈನಂದಿನ ಚಟುವಟಿಕೆಯಲ್ಲಿ ಆಕ್ಟಿವ್ ಆಗಿ ತಮ್ಮನ್ನು ತಾವು ತೊಡಗಿಸಿ ಕೊಳ್ತಾರೆ. ಇನ್ನು ಮಕ್ಕಳ ಸ್ಮರಣ ಶಕ್ತಿ ಕೂಡ ಹೆಚ್ಚುತ್ತದೆ ಅಷ್ಟೇ ಅಲ್ಲ ಇಮ್ಯೂನಿಟಿ ಪವರ್ ಕೂಡ ಹೆಚ್ಚುತ್ತದೆ.

ಹಾಗಾದರೆ ತಿಳಿಯೋಣ ಬನ್ನಿ ಆ ಸಲಾಡ್ ಹೇಗೆ ಮಾಡೋದು ಅಂತ. ಈ ಸಲಾಡ್ ರುಚಿಕರವಾಗುರುತ್ತದೆ ಮಕ್ಕಳಿಗೂ ಕೂಡ ಆಕರ್ಷಕವಾದ ರುಚಿಕರವಾದ ಈ ಸಲಾಡ್ ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಈ ಸಲಾಡ್ ನಲ್ಲಿ ಕೇವಲ ನಾವು ಹಣ್ಣನು ಮಾತ್ರ ಬಳಸಿರುವುದಿಲ್ಲ ಇದರ ಜೊತೆಗೆ ಡ್ರೈಫ್ರೂಟ್ ಅಂದರೆ ಒಣ ಹಣ್ಣುಗಳನ್ನು ಕೂಡ ಬಳಕೆ ಮಾಡಿ ಈ ಸಲಾಡನ್ನು ಮಾಡಲಾಗಿರುತ್ತದೆ. ಈ ರೀತಿಯ ಸಲಾಡನ್ನು ನೀವು ಮಾಡಿ ಮಕ್ಕಳಿಗೆ ನೀಡುವುದರಿಂದ ಮಕ್ಕಳು ತುಂಬ ಖುಷಿಯಿಂದ ಈ ರೀತಿಯ ಸಲಾಡನ್ನು ತಿಂತಾರೆ.

ಕಾಲಕ್ಕೆ ತಕ್ಕ ಹಾಗೆ ವಿಧವಿಧವಾದ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ ಆದರೆ ನೀವು ಆಗ ಯಾವ ಹಣ್ಣುಗಳು ದೊರೆಯುತ್ತವೆ ಅಂತಹ ಹಣ್ಣುಗಳನ್ನು ಬಳಸಿ. ಯಾಕೆಂದರೆ ನಮಗೆ ಕಾಲ ಬದಲಾದಂತೆ ದೊರೆಯುವ ಹಣ್ಣುಗಳು ಬಹಳ ಅಪರೂಪವಾಗಿ ಸಿಗತದ ಆದಕಾರಣ ಅಂತಹ ಹಣ್ಣುಗಳನ್ನು ಸಲಾಡ್ ಗೆ ಬಳಸಿ. ಆ ಹಣ್ಣುಗಳು ಆ ಸಮಯಕ್ಕೆ ನಮಗೆ ಒಳ್ಳೆಯ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಇನ್ನು ನಾವು ಈ ದಿನದ ರೆಸಿಪಿಗಾಗಿ ಮಾಡುವ ಸಲಾಡ್ ಗೆ ಬಳಸುತ್ತಿರುವ ಹಣ್ಣುಗಳು ಮಾವಿನ ಹಣ್ಣು ಪಪ್ಪಾಯ ಹಣ್ಣು ದಾಳಿಂಬೆ ಹಣ್ಣು ಬಾಳೆ ಹಣ್ಣು ಮತ್ತು ಒಣ ಹಣ್ಣುಗಳು ಅಂದರೆ ಬಾದಾಮಿ ಗೋಡಂಬಿ ಶೇಂಗಾ ಬೀಜ ಹಾಗೆ ಒಣದ್ರಾಕ್ಷಿ.

ಇದಕ್ಕಾಗಿ ನೀವು ಬೆಲ್ಲವನ್ನು ಕೂಡ ಬಳಸಬೇಕಾಗುತ್ತದೆ ನೀವು ಸಾಮಾನ್ಯವಾಗಿ ಒಣ ಹಣ್ಣುಗಳನ್ನು ಹುರಿದು ಕೊಳ್ಳುವಾಗ ಕೇವಲ ತುಪ್ಪವನ್ನು ಮಾತ್ರ ಬಳಸಿ ಹುರಿದುಕೊಳ್ಳಿ. ಆದರೆ ತುಪ್ಪದೊಂದಿಗೆ ಬೆಲ್ಲವನ್ನು ಕೂಡ ಕರಗಿಸಿ ಅದಕ್ಕೆ ಒಣ ಹಣ್ಣುಗಳನ್ನು ಹಾಕಿ ಫ್ರೈ ಮಾಡಿ ನಂತರ ಸಲಾಡ್ ಗೆ ಬಳಸುವುದರಿಂದ ಬಹಳ ರುಚಿಕರವಾಗಿರುತ್ತದೆ. ಇದೀಗ ತೆಗೆದುಕೊಂಡಿರುವ ಒಣ ಹಣ್ಣುಗಳನ್ನು ಸಣ್ಣಗೆ ಕತ್ತರಿಸಿಕೊಂಡು ತುಪ್ಪ ಮತ್ತು ಬೆಲ್ಲದೊಂದಿಗೆ ಹುರಿದಿಟ್ಟುಕೊಳ್ಳಿ ನಂತರ ಸಣ್ಣಗೆ ಕತ್ತರಿಸಿಕೊಂಡು ಹಣ್ಣಿನೊಂದಿಗೆ ಈ ಒಣ ಹಣ್ಣುಗಳನ್ನು ಹಾಕಿ ಅಂದರೆ ಹಣ್ಣು ಮತ್ತು ಒಣ ಹಣ್ಣುಗಳನ್ನು ಮಿಶ್ರ ಮಾಡಿ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರ ಮಾಡಿ ಕೊಳ್ಳಬಹುದು.

ಇದೀಗ ಈ ರುಚಿಕರವಾದ ಸಲಾಡ್ ತಯಾರಾಗಿದೆ ತುಂಬ ರುಚಿಯಾಗಿರುತ್ತದೆ ಕೇವಲ ಸಲಾಡ್ ಅಂದ್ರೆ ಮಕ್ಕಳು ಬೇಸರವಾಗಿ ತಿಂತಾರೆ. ಆದರೆ ಇದರಲ್ಲಿ ಬಳಸಿರುವ ಬೆಲ್ಲ ಒಣ ಹಣ್ಣುಗಳು ಎಲ್ಲವೂ ಕೂಡ ಬಹಳ ಸಲಾಡ್ ಗೆ ರುಚಿಯನ್ನು ನೀಡುತ್ತದೆ. ಈ ಸಲಾಡ್ ನಲ್ಲಿ ಬಳಸುವ ಎಲ್ಲಾ ಹಣ್ಣುಗಳು ಮಕ್ಕಳಿಗೆ ಒಳ್ಳೆಯ ಪೋಷಕಾಂಶವನ್ನು ನೀಡುತ್ತದೆ. ಇನ್ನು ಒಣಹಣ್ಣುಗಳು ಮಕ್ಕಳಿಗೆ ಒಳ್ಳೆಯ ಶಕ್ತಿಯನ್ನು ನೀಡಿ ಅವರಿಗೆ ಇನ್ನೂ ಹೆಚ್ಚು ಎನರ್ಜಿಯನ್ನ ನೀಡಿ ಆ್ಯಕ್ಟಿವ್ ಆಗಿರಲು ಸಹಕರಿಸುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದ.