Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮನೆಯಲ್ಲೇ ಕೆಲವೇ ನಿಮಿಷದಲ್ಲಿ ತಯಾರಿಸುವ ಮೂಲವ್ಯಾಧಿ ಮನೆ ಮದ್ದು…!

ಇಂದಿನ ಜೀವನ ಶೈಲಿಯಿಂದಾಗಿ ಸುಮಾರು ನೂರು ಜನರಲ್ಲಿ ಹತ್ತು ಜನ ಆದರೂ ಈ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಾ ಇರ್ತಾರೆ. ಇನ್ನು ಕೆಲವರಂತೂ ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರು ಅದನ್ನು ಅಷ್ಟಾಗಿ ಹೇಳಿಕೊಳ್ಳುವುದು ಇಲ್ಲ. ಹಾಗಾದರೆ ಇವತ್ತು ಸಮಸ್ಯೆಗೆ ಪರಿಹಾರವೇನು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕೆಲವೊಂದು ಮನೆಮದ್ದುಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ತುಂಬ ಸರಳ ಮತ್ತು ಸುಲಭವಾದ ಪರಿಹಾರಗಳನ್ನು ತಿಳಿಸಿಕೊಡುತ್ತೇವೆ .

ಇದನ್ನು ನೀವು ಪಾಲಿಸಿಕೊಂಡು ಬನ್ನಿ ಸಾಕು ಮೂಲವ್ಯಾಧಿ ಸಮಸ್ಯೆ ಬೇಗ ಪರಿಹಾರ ಆಗುತ್ತದೆ. ಮೂಲವ್ಯಾಧಿಯಿಂದ ಬಳಲುತ್ತಾ ಇರೋವ್ರು ಹೆಚ್ಚಿನ ಸಮಯ ಶೌಚಾಲಯದಲ್ಲಿಯೇ ಕಳೆಯಬೇಕಾಗುತ್ತದೆ. ಇನ್ನು ಈ ಸಮಸ್ಯೆ ಕಾಡುತ್ತಾ ಇದ್ದರೆ ಕುತ್ತಲ್ಲಿ ಕೂರುವುದಕ್ಕೆ ಆಗೋದಿಲ್ಲಾ, ಅಷ್ಟು ಸಮಸ್ಯೆ ಅಷ್ಟು ಬಾಧೆಯನ್ನು ನೀಡುತ್ತಾ ಇರುತ್ತದೆ ಈ ಮೂಲವ್ಯಾಧಿ ಸಮಸ್ಯೆ.

ಈ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ ಅಜೀರ್ಣತೆಯಿಂದ ಆದಕಾರಣ ನಾವು ನಾರಿನಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳನ್ನು ಸೇರಿಸಬೇಕಾಗುತ್ತದೆ ಮತ್ತು ಲಘು ಉಪಹಾರ ಸೇವಿಸುವ ಮುಖಾಂತರ ಮೂಲವ್ಯಾಧಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಮೂಲವ್ಯಾಧಿಯಿಂದ ಇರುವವರು ತಪ್ಪದೆ ಪ್ರತಿದಿನ ಖಾಲಿ ಹೊಟ್ಟೆಗೆ ಎಳನೀರನ್ನು ಸೇವಿಸ ಬೇಕು ಎಳನೀರನ್ನು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ ಮತ್ತು ಮಲಬದ್ಧತೆಯನ್ನು ಕೂಡ ಬೇಗ ಪರಿಹಾರ ಮಾಡುತ್ತದೆ.

ಮೂಲವ್ಯಾಧಿಗೆ ಮಾಡಿಕೊಳ್ಳಬಹುದಾದ ಮೊದಲನೆಯ ಪರಿಹಾರ ದೇಸಿ ಹಸುವಿನ ಹಾಲನ್ನು ತೆಗೆದುಕೊಳ್ಳಿ ಅದನ್ನು ಕಾಯಿಸಿ ಸ್ವಲ್ಪ ತಣ್ಣಗಾದ ಮೇಲೆ ಅದಕ್ಕೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಮಿಶ್ರ ಮಾಡಿ ತಕ್ಷಣವೆ ಕುಡಿಯಬೇಕು ಈ ರೀತಿ ಪ್ರತಿದಿನ ಮಾಡಿಕೊಳ್ಳುವುದರಿಂದ ಮೂಲವ್ಯಾಧಿ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಈ ಮೂಲವ್ಯಾಧಿಗೆ ಮಾಡಿಕೊಳ್ಳಬಹುದಾದ ಮತ್ತೊಂದು ಪರಿಹಾರ ಅಂದರೆ ಮೂಲಂಗಿಯನ್ನು ತುರಿದು ಅದಕ್ಕೆ ಮೊಸರನ್ನು ಮಿಶ್ರಣ ಮಾಡಿ ಈ ಮಿಶ್ರಣವನ್ನು ಸೇವಿಸ ಬೇಕು. ಮೂಲವ್ಯಾಧಿಗೆ ಮೂಲಂಗಿ ಬಹಳ ಪ್ರಯೋಜನಕಾರಿ ಆದ ಪರಿಣಾಮಕಾರಿ ಆದ ಫಲಿತಾಂಶವನ್ನು ನೀಡುತ್ತದೆ ಬೇಗ ಮೂಲವ್ಯಾಧಿ ಅನ್ನೋ ನಿವಾರಿಸುತ್ತದೆ.

ಈ ಮೂಲವ್ಯಾಧಿ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಮಂದಿ ಗರಿಕೆ ಹುಲ್ಲಿನ ರಸವನ್ನು ಮಾಡಿ ಕೂಡ ಸೇವಿಸುತ್ತಾರೆ. ಈ ಗರಿಕೆ ಹುಲ್ಲು ಕೂಡ ಮೂಲವ್ಯಾಧಿ ಸಮಸ್ಯೆ ಅನ್ನು ಬೇಗ ಪರಿಹಾರ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಆದಕಾರಣ ನೀವು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಈ ಗರಿಕೆ ಹುಲ್ಲಿನ ರಸವನ್ನು ಸೇವಿಸಬಹುದು ಪರಿಣಾಮಕಾರಿಯಾದ ಫಲಿತಾಂಶವು ನಿಮಗೆ ದೊರೆಯುತ್ತದೆ. ಇದರ ಜೊತೆಗೆ ಪ್ರತಿದಿನ ಹಣ್ಣುಗಳನ್ನು ಸೇವಿಸಬೇಕು ಜೊತೆಗೆ ನಾರಿನಾಂಶ ಹೆಚ್ಚಾಗಿರುವಂತಹ ತರಕಾರಿ ಗಳನ್ನ ಕೂಡ ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಮತ್ತೊಂದು ವಿಚಾರವೇನು ಅಂದರೆ ಮೂಲವ್ಯಾಧಿ ಯಿಂದ ಬಳಲುತ್ತಾ ಇರುವವರು ಮಸಾಲಾ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು ಹೆಚ್ಚು ದ್ರವರೂಪದ ಆಹಾರಗಳನ್ನು ಸೇವಿಸುವುದರಿಂದ ತುಂಬಾ ಒಳ್ಳೆಯದು. ಇದರಿಂದ ಪರಿಹಾರ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನೀವು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.