Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮೂಳೆಗಳು ಕಬ್ಬಿಣದ ತರಹ ಗಟ್ಟಿಮುಟ್ಟಾಗಿ ಇರಬೇಕಾ ಹಾಗಾದರೆ ಈ ಆಹಾರವನ್ನು ಸೇವಿಸಿ..!

ಸಾಮಾನ್ಯವಾಗಿ ನಮ್ಮ ದೇಹ ಗಟ್ಟಿಮುಟ್ಟಾಗಿ ಇರಬೇಕೆಂದರೆ ಇದಕ್ಕೆ ನಮ್ಮ ದೇಹದ ಬ್ಯಾಲೆನ್ಸಿಂಗ್ ಕಂಬಗಳ ಹಾಗೆ ಇರುವ ಮೂಳೆಗಳ ಆರೋಗ್ಯ ಚೆನ್ನಾಗಿರಬೇಕು ಈ ಮೂಳೆಗಳು ಗಟ್ಟಿಮುಟ್ಟಾಗಿ ಇರಬೇಕು ಆಗಲೇ ನಮ್ಮ ದೇಹ ಗಟ್ಟಿಮುಟ್ಟಾಗಿ ಇರಲು ಸಾಧ್ಯ ಹಾಗಾದರೆ ಈ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಮೂಳೆಗಳು ಗಟ್ಟಿಮುಟ್ಟಾಗಿ ಇರಬೇಕೆಂದರೆ ನಾವು ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ವಯಸ್ಸಾದ ನಂತರ ನಮಗೆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಡಬಾರದು.

ಅಂದರೆ ನಾವು ಯಾವೊಂದು ಆಹಾರಕ್ರಮವನ್ನು ಪಾಲಿಸಬೇಕು ಅನ್ನೋ ಮಾಹಿತಿ ಅನ್ನು ನಿಮಗೆ ತಿಳಿಸಿಕೊಡುತ್ತೇವೆ ಈ ಸೂಕ್ಷ್ಮವಾದ ವಿಚಾರವನ್ನು ತಪ್ಪದೆ ತಿಳಿದು ನೀವು ಕೂಡ ಈ 1ಪದ್ದತಿಯನ್ನ ಪಾಲಿಸಿ ಈ ಆಹಾರಗಳನ್ನು ನೀವು ಸೇವನೆಮಾಡುತ್ತ ಬರುವುದರಿಂದ ವಯಸ್ಸಾದ ಕಾಲದ ಸಮಯದಲ್ಲಿ ನಿಮಗೆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಬಾರದೆ ನೀವು ಗಟ್ಟಿಮುಟ್ಟಾಗಿ ಆರೋಗ್ಯದಿಂದ ಇರಬಹುದು.

ಮೊದಲನೆಯದಾಗಿ ಈ ಮೂಳೆಗಳು ಪೊಟಾಶಿಯಂ ಮೆಗ್ನಿಶಿಯಂ ಕ್ಯಾಲ್ಷಿಯಂನಿಂದ ಸಂಯೋಜಿತವಾಗಿದ್ದು ಸುಮಾರು ಎಪ್ಪತ್ತು ಪ್ರತಿಶತದಷ್ಟು ಕ್ಯಾಲ್ಸಿಯಂನಿಂದ ಕೂಡಿದೆ ಈ ಮೂಳೆಗಳು ಆದಕಾರಣ ನಾವು ಮೂಳೆಗಳಿಗೆ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಾಗಿ ನೀಡಬೇಕೋ ಆದಕಾರಣ ಕ್ಯಾಲ್ಸಿಯಂ ಹೆಚ್ಚಿರುವ ಆಹಾರವನ್ನು ಸೇವಿಸಬೇಕು ಬರೀ ಕ್ಯಾಲ್ಶಿಯಂ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ಸಾಲದು ನಮ್ಮ ದೇಹದಲ್ಲಿರುವ ಈ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳುವುದಕ್ಕೆ ನಮ್ಮ ದೇಹಕ್ಕೆ ವಿಟಮಿನ್ ಡಿ ಅಂಶ ಅವಶ್ಯಕತೆಯಿದೆ. ಆದ್ದರಿಂದ ಈ ವಿಟಮಿನ್ ಡಿ ಅಂಶದ ಜೊತೆಗೆ ಕ್ಯಾಲ್ಸಿಯಂ ಅಂಶ ಕೂಡ ಇರುವ ಆಹಾರವನ್ನು ನಾವು ಸೇವಿಸಬೇಕಾಗುತ್ತದೆ ಆಗಲೇ ನಮ್ಮ ದೇಹ ಸದೃಢ ದಿಂದ ಇರಲು ಆಗುವುದು.

ಮೊದಲನೆಯದಾಗಿ ನಾವು ಹಸಿರು ತರಕಾರಿಗಳನ್ನು ಸೇವಿಸಬೇಕು ಹೌದು ಈ ಹಸಿರು ತರಕಾರಿಗಳಲ್ಲಿ ಕ್ಯಾಲ್ಷಿಯಮ್ ಅಂಶ ಮಾತ್ರ ಇರುವುದಿಲ್ಲ ಇದರ ಜೊತೆಗೆ ವಿಟಮಿನ್ ಡಿ ಜೀವಸತ್ವ ಕೂಡ ಇರುತ್ತದೆ ಆಗ ನಾವು ನಮ್ಮ ದೇಹಕ್ಕೆ ಕ್ಯಾಲ್ಷಿಯಂ ಅಂಶವನ್ನು ಕೂಡ ನೀಡಿದಂತಾಗುತ್ತದೆ ಇದರ ಜೊತೆಗೆ ವಿಟಮಿನ್ ಡಿ ಅಂಶವೂ ಕೂಡ ದೇಹಕ್ಕೆ ಸೇರಿ ಈ ಕ್ಯಾಲ್ಷಿಯಂ ಅಂಶವನ್ನು ಸಂಪೂರ್ಣವಾಗಿ ಹೀರಿಕೊಂಡು ದೇಹಕ್ಕೆ ಪೋಷಕಾಂಶಗಳನ್ನು ನೀಡುತ್ತದೆ.

ಆಹಾರ ಕ್ರಮದಲ್ಲಿ ಸೊಪ್ಪುಗಳನ್ನು ಮಾತ್ರ ತರಕಾರಿಗಳನ್ನು ಮಾತ್ರ ಅಳವಡಿಸಿಕೊಳ್ಳುವುದಿಲ್ಲ ಹಾಲನ್ನು ಕೂಡ ನಾವು ಸಲ್ಲಿಸಬೇಕು ಹಾಲಿನಲ್ಲಿ ಪೊಟ್ಯಾಶಿಯಂ ಮೆಗ್ನೀಶಿಯಂ ರಂಜಕ ಕೂಡ ಇದ್ದು, ಮೂಳೆಗಳಿಗೆ ಬೇಕಾದ ಬಲವನ್ನು ನಾವು ಈ ಹಾಲನ್ನು ಕುಡಿಯುವುದರಿಂದ ಪಡೆದುಕೊಳ್ಳಬಹುದಾಗಿದೆ. ಆದಕಾರಣವೆ ಹುಟ್ಟಿದ ಮಕ್ಕಳಿನಿಂದ ಹಿಡಿದು ಒಂದು ವರ್ಷದ ವರೆಗೂ ಮಕ್ಕಳಿಗೆ ಹಾಲನ್ನು ನೀಡುವುದು ಈ ಸಮಯದಲ್ಲಿ ಮೂಳೆಗಳು ಬಹಳ ಎಳೆಯದಾಗಿರುತ್ತದೆ, ಆದಕಾರಣವೆ ಮಕ್ಕಳಿಗೆ ಹೆಚ್ಚು ಹಾಲನ್ನು ನೀಡುವುದು. ಈ ಹಾಲಿನಲ್ಲಿ ಕ್ಯಾಲ್ಸಿಯಂ ಪೊಟ್ಯಾಶಿಯಂ ಮೆಗ್ನೀಶಿಯಂ ಅಂಶ ಇದ್ದು ಮೂಳೆಗಳಿಗೆ ಒಳ್ಳೆಯ ಪೋಷಣೆ ನೀಡುತ್ತದೆ. ಮೂಳೆಗಳಿಗೆ ಒಳ್ಳೆಯ ಬಲ ನೀಡುತ್ತದೆ ಎಂದು.

ಇನ್ನೂ ದೊಡ್ಡವರಾದರೆ ಬಿಳಿ ಎಳ್ಳನ್ನು ಸೇರಿಸಬಹುದು ಮಿತಿಯಾಗಿ ಬಿಳಿ ಎಳ್ಳು ತಿನ್ನುವುದರಿಂದ ಮೂಳೆಗೆ ಒಳ್ಳೆಯ ಪೋಷಣೆ ದೊರೆಯುತ್ತದೆ ಅಷ್ಟೇ ಅಲ್ಲ ಪಾಲಕ್ ಸೊಪ್ಪನ್ನು ಕೂಡ ಸೇವಿಸಬಹುದು ಇದರಲ್ಲಿ ಕೂಡ ಕ್ಯಾಲ್ಸಿಯಂ ಪೊಟಾಷಿಯಂ ರಂಜಕ ಮೆಗ್ನೀಷಿಯಂ ಅಂಶ ಹೇರಳವಾಗಿರುತ್ತದೆ. ನಮ್ಮ ದೇಹಕ್ಕೆ ಹದಿನೆಂಟು ವರ್ಷದಿಂದ ಹಿಡಿದು ಮೂವತ್ತೈದು ವರುಷದ ವರೆಗೂ ಒಳ್ಳೆಯ ಪೋಷಣೆಯನ್ನು ನೀಡಬೇಕಾಗುತ್ತದೆ ಆಗ ವಯಸ್ಸಾದ ಕಾಲದಲ್ಲಿ ನಮಗೆ ಮುಳುಗಿ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ ಗಟ್ಟಿಮುಟ್ಟಾಗಿ ಆರೋಗ್ಯದಿಂದ ಇರಬಹುದು.