Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮೊಣಕೈ ಮತ್ತು ಮೊಣಕಾಲು ಕಪ್ಪಾಗುತಿದ್ದರೆ ಇಲ್ಲಿದೆ ಮನೆಯಲ್ಲೇ ಮಾಡುವ ಮನೆಮದ್ದು ..!

ನಮಸ್ಕಾರ ಇವತ್ತಿನ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತಿರುವ ವಿಚಾರವೇನು ಅಂದರೆ 1ಸುಲಭವಾದ ಮನೆಮದ್ದು ಯಾವುದಕ್ಕಾಗಿ ಅಂದರೆ ಮೊಣಕಾಲು ಮೊಣಕೈ ಕಪ್ಪಗಿದ್ದರೆ ಆ ಮೊಣಕಾಲು ಮತ್ತು ಮೊಣಕೈ ಭಾಗವನ್ನು ಹೇಗೆ ಹೊಳಪು ಹಾಕಿಸಿಕೊಳ್ಳುವುದು ಅನ್ನೋ 1ವಿಚಾರವನ್ನು ತಿಳಿಸಿ ಕೊಡುತ್ತವೆ ನಿಮಗೂ ಕೂಡ ಈ ಮೊಣಕಾಲು ಮೊಣಕೈ ಭಾಗ ಕಪ್ಪಾಗಿದ್ದಲ್ಲಿ ಅದನ್ನ ಹೊಳಪು ,

ಮಾಡಿಕೊಳ್ಳುವುದಕ್ಕಾಗಿ ಅನೇಕ ಪ್ರಯತ್ನ ಮಾಡುತ್ತಾ ಇದ್ದರೆ ನಾವು ಈ ದಿನದ ಮಾಹಿತಿಯಲ್ಲಿ ಕೆಲವೊಂದು ಸುಲಭವಾದ ಪರಿಹಾರಗಳನ್ನು ತಿಳಿಸಿಕೊಡುತ್ತೇವೆ ನೀವು ಇದನ್ನು ಪಾಲಿಸಿ ಸಾಕು ಮೊಣಕಾಲಿನ ಭಾಗವನ್ನು ಮೊಣಕೈನ ಭಾಗವನ್ನ ಸುಲಭವಾಗಿ ಹೊಳಪಾಗಿ ಸಿಕೊಳ್ಳಬಹುದು ಹೇಗೆ ಅಂತ ತಿಳಿಯುವುದಕ್ಕಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ನಿಮಗೂ ಕೂಡ ಮಾಹಿತಿ ಮಾಹಿತಿಗೆ ತಪ್ಪದೆ ಒಂದು ಲೈಕ್ ಮಾಡಿ.

ಹೌದು ನಾವು ಮುಖದ ಬಗ್ಗೆ ತುಂಬ ಕಾಳಜಿ ಮಾಡ್ತೇವೆ ಅದಕ್ಕಾಗಿ ಸಾಕಷ್ಟು ಕ್ರೀಂಗಳನ್ನು ಫೇಸ್ ವಾಶ್ ಗಳನ್ನು ಬಳಕೆ ಮಾಡ್ತೇವೆ. ಆದರೆ ಕೈಕಾಲುಗಳಿಗೆ ಮಾಡುವ ಕಾಳಜಿ ಅಷ್ಟಕಷ್ಟೆ. ಆದಕಾರಣವೆ ಈ ಕೈ ಕಾಲು ಭಾಗ ಕಪ್ಪಾಗಿರುತ್ತದೆ ಕಪ್ಪಾದ ಭಾಗವನ್ನು ಹೊಳಪಾಗಿ ಮಾಡಿಕೊಳ್ಳುವುದು ಹೇಗೆ ಅಂದರೆ ತುಂಬಾ ಸುಲಭ ಮನೆಯಲ್ಲಿಯೆ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಕೈ ಕಾಲಿನ ಭಾಗವನ್ನು ಹೊಳಪು ಮಾಡಿಕೊಳ್ಳಬಹುದು. ನೀವು ಕೂಡ ಈ ಮಾಹಿತಿ ತಿಳಿಸಿದ ಕೆಲವೊಂದು ಪರಿಹಾರಗಳನ್ನು ಮಾಡಿ ಮತ್ತು ಸುಂದರವಾದ ತ್ವಚೆಯನ್ನು ಪಡೆದುಕೊಳ್ಳಿ.

* ಸಾಮಾನ್ಯವಾಗಿ ಮನೆಯಲ್ಲಿ ನಿಂಬೆಹಣ್ಣು ಇರುತ್ತದೆ ಅದರಲ್ಲಿಯೂ ನೀವು ನಿಂಬೆಹಣ್ಣಿನ ರಸವನ್ನು ತೆಗೆದು ಆ ಸಿಪ್ಪೆಯನ್ನು ಬಿಸಾಡುತ್ತೇವೆ ಆದರೆ ಅದರ ಬಿಸಾಡದಿರಿ ಮೊಣಕಾಲು ಮೊಣಕೈ ಭಾಗಕ್ಕೆ ಅದನ್ನ ಉಜ್ಜಿಕೊಳ್ಳಿ ಈ ರೀತಿ ಮಾಡುವುದರಿಂದ ಈ ವಿಟಮಿನ್ ಸಿ ಅಂಶ ಚರ್ಮದ ಮೇಲೆ ಇರುವ ಕಪ್ಪು ಕಲೆಯನ್ನು ತೆಗೆದು ಹಾಕಲು ಸಹಕರಿಸುತ್ತದೆ.

* ನಿಮ್ಮ ಬಳಿ ಬಾದಾಮಿ ಎಣ್ಣೆ ಇದ್ದರೆ ಸ್ನಾನ ಮಾಡುವುದಕ್ಕಿಂತ ಮುನ್ನ ಕೈಕಾಲುಗಳಿಗೆ ಲೇಪನ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ ನಂತರ ಸ್ನಾನವನ್ನು ಮಾಡುವುದರಿಂದ ಈ ರೀತಿ ಪ್ರತಿದಿನ ಮಾಡುವುದರಿಂದ ಕೈ ಕಾಲಿನ ಭಾಗದಲ್ಲಿ ಇರುವ ಕಪ್ಪು ಕಲೆ ಸಂಪೂರ್ಣವಾಗಿ ಪರಿಹರವಾಗುತ್ತದೆ ಮತ್ತು ತ್ವಚೆ ಮೃದುವಾಗುತ್ತದೆ.

* ಅಡುಗೆ ಸೋಡಾ ತೆಗೆದುಕೊಳ್ಳಿ ಅರ್ಧ ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ ನಂತರ ಕಪ್ಪಾದ ಭಾಗಕ್ಕೆ ಲೇಪನ ಮಾಡಿ ಸ್ವಲ್ಪ ಸಮಯ ಹಾಗೇ ಸ್ಕ್ರಬ್ ಮಾಡಿ ಈ ರೀತಿ ಮಾಡುವುದರಿಂದ ಕೂಡ ಚರ್ಮದ ಮೇಲೆ ಇರುವ ಕಪ್ಪು ಕಲೆ ನಿವಾರಣೆಯಾಗುತ್ತದೆ ಆದರೆ ಇದನ್ನು ಪ್ರತಿದಿನ ಪಾಲಿಸುವುದು ಬೇಡ ವಾರಕ್ಕೆ 2ಬಾರಿ ಮಾಡಿದರೆ ಸಾಕು.

* ಕೊಬ್ಬರಿ ಎಣ್ಣೆಯೊಂದಿಗೆ ಅರಿಶಿಣವನ್ನು ಮಿಶ್ರಣ ಮಾಡಿ ಇದಕ್ಕೆ ಸ್ವಲ್ಪ ರೋಸ್ ವಾಟರ್ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಮೊಣಕಾಲು ಮೊಣಕೈ ನ ಮೇಲೆ ಲೇಪನ ಮಾಡಿ ಅರ್ಧ ಗಂಟೆಯ ಬಳಿಕ ತಣ್ಣೀರನ್ನು ಬಳಸಿ ಇಸಾಕನ ಸರಿಪಡಿಸಿಕೊಳ್ಳುವುದರಿಂದ ಕಪ್ಪು ಕಲೆ ಮಾಯ ಆಗುತ್ತದೆ.

* ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಬೇರ್ಪಡಿಸಿಕೊಳ್ಳಿ ಈ ಆಲೂಗಡ್ಡೆಯ ರಸ ಕಪ್ಪು ಕಲೆಯನ್ನು ತೆಗೆದು ಹಾಕಲು ತುಂಬ ಪರಿಣಾಮಕಾರಿಯಾಗಿರುತ್ತದೆ ನೀವು ಕೂಡ ಈ ಆಲೂಗಡ್ಡೆಯ ರಸವನ್ನು ಕೈ ಕಾಲಿನ ಮೇಲೆ ಲೇಪನ ಮಾಡಿಕೊಳ್ಳಿ ಇದರಿಂದ ಕಪ್ಪು ಕಲೆ ಬೇಗ ಪರಿಹಾರ ಆಗುತ್ತದೆ ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ.

* ಟೊಮೆಟೊ ಹಣ್ಣಿನ ರಸಕ್ಕೆ ಅರಿಶಿನ ಬೆರೆಸಿ ಇದನ್ನು ಕೂಡ ಕೈ ಕಾಲುಗಳ ಮೇಲೆ ಲೇಪನ ಮಾಡಿಕೊಳ್ಳಬಹುದು ಮತ್ತು ಮುಲ್ತಾನಿ ಮಿಟ್ಟಿ ಕಡಲೆ ಹಿಟ್ಟಿನ ಮಿಶ್ರಣ ಮಾಡಿ ಇದಕ್ಕೆ ನೀವು ಹಾಲನ್ನು ಬೆರೆಸಿ ಅಥವಾ ಮೊಸರನ್ನು ಬೆರೆಸಿ ಕೈಕಾಲುಗಳ ಮೇಲೆ ಲೇಪನ ಮಾಡಿಕೊಂಡು ಇದು ಒಣಗಿದ ಮೇಲೆ ತೊಳೆಯುವುದರಿಂದ ಕೂಡ ಕಪ್ಪು ಕಲೆ ನಿವಾರಣೆಯಾಗುತ್ತದೆ.