Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಸೌಂದರ್ಯಕ್ಕೆ ಅಡ್ಡ ಆಗುವೆ ಕೈ ಮೇಲಿನ ಕೂದಲನ್ನು ತೆಗೆಯುವ ಸಿಂಪಲ್ ಮನೆ ಮದ್ದು…

ಕೆಲ ಹೆಣ್ಣು ಮಕ್ಕಳಿಗಂತೂ ಕೈಮೇಲೆ ಮತ್ತು ಕಾಲಿನ ಮೇಲೆ ವಿಪರೀತ ಕೂದಲು ಇರುತ್ತದೆ ಇದನ್ನು ಕೆಲವರು ಸಹಿಸಿಕೊಳ್ಳುವುದಿಲ್ಲ ಕೆಲವರಿಗೆ ಅಂತೂ ಕೈಮೇಲೆ ಕಾಲಿನ ಮೇಲೆ ಕೂದಲು ಇದ್ದರೆ ಅದನ್ನು ನೋಡುವುದಕ್ಕೆ ಇಷ್ಟ ಪಡುವುದಿಲ್ಲಾ. ಈ ರೀತಿಯಾಗಿ ಹೆಣ್ಣುಮಕ್ಕಳು ಕೈಮೇಲೆ ಮತ್ತು ಕಾಲಿನ ಮೇಲೆ ಇರುವ ಅನಗತ್ಯ ಕೂದಲನ್ನು ತಗ್ಗಿಸುವುದಕ್ಕೆ ವ್ಯಾಕ್ಸಿಂಗ್ ಮೊರೆಹೋಗ್ತಾರೆ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ನಾನಾ ತರಹದ ಕ್ರೀಮ್ ಗಳನ್ನು ಬಳಸಿರುತ್ತಾರೆ. ಆದರೆ ಈ ಕ್ರೀಮ್ ಗಳನ್ನು ಬಳಸುವುದರಿಂದ ಕೈ ಮೇಲೆ ಇರುವ ಕಾಲಿನ ಮೇಲೆ ಇರುವ ಕೂದಲನ್ನು ತೆಗೆಯಬಹುದು ಆದರೆ ಕೈಗಳು ಕಪ್ಪಗಾಗುತ್ತದೆ ಕೈಗಳ ಬಣ್ಣ ಬದಲಾಗುತ್ತದೆ ಆದಕಾರಣ ನಾವು ಹೇಳುವ ಈ ಪರಿಹಾರವನ್ನು ಮಾಡಿ ಇದರಿಂದ ವ್ಯಾಕ್ಸಿಂಗ್ ಬೇಡ ಕ್ರೀಮ್ ಗಳ ಅವಶ್ಯಕತೆ ಕೂಡ ಇರುವುದಿಲ್ಲ.

ವ್ಯಾಕ್ಸಿಂಗ್ ಮಾಡಿಸುವುದು ಒಳ್ಳೆಯದು ಆದರೆ ರಾಸಾಯನಿಕ ಪದಾರ್ಥಗಳಿಂದ ಮಾಡಿರುವ ಕ್ರೀಮ್ ಗಳನ್ನು ಬಳಸಿ ವ್ಯಾಕ್ಸಿಂಗ್ ಮಾಡಿಕೊಳ್ಳುವುದು ಒಳ್ಳೆಯದಲ್ಲಾ. ಹಾಗಾದರೆ ಕೈ ಮೇಲೆ ಇರುವ ಕೂದಲು ತೆಗೆಸುವುದಕ್ಕೆ ಉತ್ತಮವಾದ ಪರಿಹಾರ ಏನು ಅಂದರೆ ಇಲ್ಲಿದೆ ನೋಡಿ ಈ ಪರಿಹಾರವನ್ನು ನೀವು ತುಂಬಾ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಕೈ ಮತ್ತು ಕಾಲಿನ ಮೇಲೆ ಇರುವ ಅನಗತ್ಯ ಕೂದಲನ್ನು ಕೂಡ ತೆಗೆದುಹಾಕಬಹುದು ಜೊತೆಗೆ ಚರ್ಮದ ಮೇಲಿರುವ ಡೆಡ್ ಸ್ಕಿನ್ ಅನ್ನು ಕೂಡ ಈ ಪರಿಹಾರದಿಂದ ತೆಗೆಯಬಹುದು.

ಈ ಪರಿಹಾರ ಅಂದರೆ ಮೊದಲಿಗೆ ಒಂದ್ ಕಪ್ ಸಕ್ಕರೆಯನ್ನ ತೆಗೆದುಕೊಳ್ಳಿ ಅಂದರೆ ಇನ್ನೂರು ಗ್ರಾಂ ಸಕ್ಕರೆಯನ್ನು ತೆಗೆದುಕೊಂಡು ಇದಕ್ಕೆ ಅರ್ಧ ಕಪ್ ನೀರನ್ನು ಹಾಕಬೇಕು ನಂತರ ಇದಕ್ಕೆ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಇದನ್ನು ಚೆನ್ನಾಗಿ ಕುದಿಸಬೇಕು ಎಷ್ಟು ಪ್ರಮಾಣದಲ್ಲಿ ಅಂದರೆ ಈ ಸಕ್ಕರೆಯ ಮಿಶ್ರಣ ಬ್ರೌನ್ ಕಲರ್ ಗೆ ಹಾಕಬೇಕು ಹೌದೋ ಇದರ ಬಣ್ಣ ಬದಲಾಗಬೇಕು ಅಲ್ಲಿಯವರೆಗೂ ನೀವು ಈ ಸಕ್ಕರೆಯನ್ನು ನೀರಿನಲ್ಲಿ ಬೇಯಿಸಬೇಕು ನಂತರ ಇದು ಗಟ್ಟಿ ಪಾಕವಾಗುತ್ತದೆ ಇದೀಗ ನೀವು ಈ ಸಕ್ಕರೆಯ ಮಿಶ್ರಣದಿಂದ ಕೂದಲನ್ನು ತೆಗೆಯಬೇಕು.

ಹೇಗೆ ಅಂದರೆ ಈ ಸಕ್ಕರೆಯ ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಇದನ್ನು ಕೈ ಮೇಲೆ 1ಸ್ಟಿಕ್ ನ ಸಹಾಯದಿಂದ ಲೇಪನ ಮಾಡಿಕೊಂಡು ಒಂದು ಕಾಟನ್ ಬಟ್ಟೆ ಅಥವಾ ಜೀನ್ಸ್ ಬಟ್ಟೆಯಿಂದ ಕೈಮೇಲೆ ಹಾಕಿದ ಲೇಪನವನ್ನು ತೆಗೆಯಬೇಕು ಈ ರೀತಿ ಮಾಡುವುದರಿಂದ ಕೈಮೇಲೆ ಮತ್ತು ಕಾರಿನ ಮೇಲೆ ಇರುವ ಕೂದಲನ್ನು ಸುಲಭವಾಗಿ ತಗೆಯಬಹುದು ಮತ್ತು ಈ ಪರಿಹಾರದಿಂದ ಯಾವ ಅಡ್ಡ ಪರಿಣಾಮಗಳು ಆಗುವುದಿಲ್ಲ. ಆದರೆ ನೀವು ಈ ಪರಿಹಾರವನ್ನು ಮಾಡಿಕೊಳ್ಳುವಾಗ ತುಂಬ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಈ ಸಕ್ಕರೆಯ ಮಿಶ್ರಣ ಚರ್ಮಕ್ಕೆ ಸುಡುವ ಸಾಧ್ಯತೆ ಇರುತ್ತದೆ ಆದಕಾರಣ ಸ್ವಲ್ಪ ಬಿಸಿ ಇದ್ದಾಗ ಚರ್ಮದ ಮೇಲೆ ಲೇಪನ ಮಾಡಿಕೊಳ್ಳಬೇಕು.

ಈ ಪರಿಹಾರ ಕೂಡ ಸ್ವಲ್ಪ ವ್ಯಾಕ್ಸಿಂಗ್ ರೀತಿಯೇ ಇರುತ್ತದೆ ಆದರೆ ಇಲ್ಲಿ ನಾವು ಯಾವುದೇ ಕೆಮಿಕಲ್ ಯುಕ್ತ ಕ್ರೀಮ್ ಗಳನ್ನು ಬಳಸುತ್ತಿಲ್ಲಾ. ನೈಸರ್ಗಿಕವಾದ ವ್ಯಾಕ್ಸಿಂಗ್ ಕ್ರೀಮನ್ನು ಬಳಸುತ್ತಿದ್ದೇವೆ. ಅದೇ ಶುಗರ್ ವ್ಯಾಕ್ಸಿಂಗ್ ನೀವು ಈ ಪರಿಹಾರವನ್ನು ಮಾಡಿಕೊಳ್ಳಿ ಅಂದರೆ ಈ ಪರಿಹಾರವನ್ನು ಹದಿನೆಂಟು ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳು ಮಾಡಿದರೆ ತುಂಬಾ ಒಳ್ಳೆಯದು. ಇಲ್ಲದಿದ್ದಲ್ಲಿ ಎಳೆಯ ಚರ್ಮ ಇರುವವರೆಗೆ ಮಾಡಿದರೆ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.