Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಹಿಮ್ಮಡಿ ಒಡೆಯತ್ತ? ಹಾಗಾದ್ರೆ ಈ ಮನೆಮದ್ದನ್ನಾ ಬಳಕೆ ಮಾಡಿ ನೋಡಿ ಕ್ಷಣದಲ್ಲಿ ಹೋಗುತ್ತೆ ..!

ಸಾಮಾನ್ಯವಾಗಿ ಚಳಿಗಾಲ ಬಂತು ಅಂದರೆ ನಮಗೆ ನಮ್ಮ ಗಮನ ಹೋಗುವುದು ಹಿಮ್ಮಡಿಗಳ ಮೇಲೆ ಹೌದು ಹಿಮ್ಮಡಿಗಳು ಚಳಿಗಾಲದಲ್ಲಿ ತುಂಬಾ ಹೊಡೆಯುತ್ತದೆ ಈ ಒಡೆಯುವ ಹಿಮ್ಮಡಿಗೆ ನಾವು ಸಾಕಷ್ಟು ಕ್ರೀಂ ಗಳನ್ನು ಬಳಸುತ್ತೇವೆ ಈ ರೀತಿ ಕ್ರೀಮ್ ಗಳನ್ನು ಬಳಸಿದರೂ ಕೂಡ ನಮಗೆ ಫಲಿತಾಂಶವೇ ದೊರೆತಿರುವುದಿಲ್ಲ 1ದಿನ ಮಾತ್ರ ನಮಗೆ ಶಮನವನ್ನು ನೀಡಿ ಈ ಹಿಮ್ಮಡಿ ಒಡೆಯುವುದು ಮತ್ತೆ ಶುರುವಾಗಿ ಬಿಡುತ್ತದೆ. ಹಾಗಾದರೆ ನಾವು ಈ ಹಿಮ್ಮಡಿ ಹೊಡೆಯುವ ಸಮಸ್ಯೆಗೆ ಪರಿಹಾರವನ್ನಾಗಿ ಯಾವ ಒಂದು ಮನೆ ಮದ್ದನ್ನು ಮಾಡ ಬಹುದು ಅನ್ನೊ ಮಾಹಿತಿ ಅನ್ನು ನಿಮಗೆ ತಿಳಿಸಿಕೊಡುತ್ತೇವೆ. ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ನೀವು ಕೂಡ ತಿಳಿದು ಬೇರೆಯವರಿಗು ಕೂಡ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಚಳಿಗಾಲದಲ್ಲಿ ಹಿಮ್ಮಡಿ ಒಡೆದಾಗ ಅದನ್ನು ಪರಿಹರಿಸುವುದಕ್ಕೆ ಹೀಗೆ ಮಾಡಿ ಈ ಮನೆಮದ್ದನ್ನು ಮಾಡುವುದಕ್ಕಿಂತ ಮುನ್ನ ನೀವು ಒಂದು ಕೆಲಸವನ್ನು ಮಾಡಬೇಕು. ಅದೇನೆಂದರೆ ಒಂದು ಟಬ್ ನಲ್ಲಿ ಬಿಸಿ ನೀರನ್ನು ಹಾಕಬೇಕು ಅಂದರೆ ನೀವು ಸ್ನಾನ ಮಾಡುವುದಕ್ಕೆ ಬಳಸುವಷ್ಟು ಬಿಸಿ ನೀರನ್ನು ಟಬ್ ಗೆ ಹಾಕಿ ಅದಕ್ಕೆ ರೋಸ್ ವಾಟರ್ ಗ್ಲಿಸರಿನ್ ಮತ್ತು ನೀವು ಬಳಸುವ ಶಾಂಪೂವನ್ನು ನೀರಿಗೆ ಹಾಕಿ ನೀವು ಇದಕ್ಕೆ ಅರ್ಧ ಚಮಚ ಉಪ್ಪನ್ನು ಹಾಕಿ ಈ ನೀರಿನಲ್ಲಿ ಇಪ್ಪತ್ತು ನಿಮಿಷಗಳ ಕಾಲ ಪಾದಗಳನ್ನು ಇರಿಸಬೇಕು.

ಪಾದಗಳನ್ನು ಇರಿಸಿದ ನಂತರ ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಪಾದಗಳನ್ನು ಒರೆಸಬೇಕು ನಂತರ ನಾವು ಹೇಳುವ ಈ ಮನೆಮದ್ದನ್ನು ನೀವು ಪಾಲಿಸಬೇಕಾಗುತ್ತದೆ ಇನ್ನು ಈ ಒಂದು ಪರಿಹಾರವನ್ನ ಮಾಡುವುದಕ್ಕೆ ಕಾರಣವೇನು ಅಂದರೆ ಈ ರೀತಿ ಬಿಸಿ ನೀರಿನಲ್ಲಿ ಕಾಲನ್ನು ಇರಿಸುವುದರಿಂದ ಪಾದದ ಚರ್ಮ ಮೃದುವಾಗುತ್ತದೆ ಮತ್ತು ಡೆಡ್ ಸ್ಕಿನ್ ತೆಗೆದು ಹಾಕುತ್ತದೆ ಈ ಪರಿಹಾರ ಆದಕಾರಣ ನೀವು ವಾರದಲ್ಲಿ 1ಬಾರಿಯಾದರೂ ಈ 1ಪರಿಹಾರವನ್ನು ಮಾಡಿಕೊಳ್ಳಿ ಕೋಮಲವಾದ ಪಾದಗಳು ನಿಮ್ಮದಾಗುತ್ತದೆ.

ನಂತರ ನೀವು ಹಿಮ್ಮಡಿ ಒಡೆದಾಗ ಕೇಳೇ ಬರಮಾಡಿಕೊಳ್ಳುವ ಮನೆಮದ್ದನ್ನು ಈ ರೀತಿ ಮಾಡಿಕೊಳ್ಳಿ ಇದಕ್ಕಾಗಿ ಬೇಕಾಗಿರುವುದು ಮೇಣದಬತ್ತಿ ಈ ಮೇಣದ ಬತ್ತಿಯನ್ನು ನೀವು 1ಬೌಲ್ ಗೆ ಸಣ್ಣಗೆ ಕತ್ತರಿಸಿ ಹಾಕಿ ಕುದಿಯುತ್ತಿರುವ ಬಿಸಿ ನೀರಿನ ಮೇಲೆ ಸ್ವಲ್ಪ ಸಮಯ ಇರಿಸಿ ಇದನ್ನು ಡಬಲ್ ಬೌಲಿಂಗ್ ಪ್ರೊಸೆಸ್ ಅಂತ ಕರಿತಾರೆ ಆಗ ಮೇಣ ಕರಗುತ್ತದೆ. ಇದಕ್ಕೆ ನೀವು ವ್ಯಾಸಲೀನ್ ರೋಸ್ ವಾಟರ್ ಅನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು ನಂತರ ಸ್ವಲ್ಪ ಬಿಸಿ ಇದ್ದಾಗಲೇ ಹೊಡೆದ ಹಿಮ್ಮಡಿಯ ಮೇಲೆ ಈ ಲೇಪನವನ್ನು ಲೇಪಿಸಿಕೊಳ್ಳಬೇಕು.

ಆದರೆ ಮೇಣ ಪೂರ್ತಿ ಬಿಡಿಸಿದಾಗ ಕಾಲಿಗೆ ಲೇಪನ ಮಾಡಿಕೊಳ್ಳಬೇಡಿ ಇರು ಸುಡುವ ಸಾಧ್ಯತೆ ಇರುತ್ತದೆ ಆದಕಾರಣ ನೀವು ಮುಟ್ಟಬಹುದು ಅನ್ನೋ ಅಷ್ಟು ಬಿಸಿಯಲ್ಲಿ ಮಾತ್ರ ಆ ಮೇಣವನ್ನ ಪಾದಗಳಿಗೆ ಲೇಪನ ಮಾಡಿಕೊಳ್ಳಿ ಈ ರೀತಿ ನೀವು ಮಾಡುವುದರಿಂದ ಒಡೆದ ಹಿಮ್ಮಡಿ ಬೇಗ ಪರಿಹಾರ ಆಗುತ್ತದೆ ಮೃದುವಾದ ಪಾದಗಳು ನೀವು ಪಡೆದುಕೊಳ್ಳಬಹುದು.