Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಹೆಂಡತಿ ಹೀಗೆ ಕುಂಕುಮವಿಟ್ಟರೆ ನಿಮಗೆ ನಿಮಗೆ ಏನೆಲ್ಲಾ ಅದೃಷ್ಟ ಬರುತ್ತೆ ಬರುತ್ತೆ ಅನ್ನೋದು ತಿಳಿದಿದಿಯ …

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಎಂಬ ಪದಕ್ಕೆ ತುಂಬಾನೇ ಒಂದು ವಿಶಿಷ್ಟವಾದ ಸ್ಥಾನಮಾನ ಗೌರವಗಳು ಇವೆ ಅದೇ ರೀತಿಯಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೂ ಕೂಡ ನಮ್ಮ ಸಂಪ್ರದಾಯದಲ್ಲಿ ಸಾಕಷ್ಟು ಒಳ್ಳೆಯ ಗೌರವವಿರುತ್ತದೆ ಮತ್ತು ಆಕೆಗೆ ಸುಮಂಗಲಿ ಅಂತ ಕೂಡ ಕರೆಯುತ್ತಾರೆ ಆ ಒಬ್ಬ ಸುಮಂಗಲಿಯನ್ನು ಲಕ್ಷ್ಮಿಗೆ ಹೋಲಿಸುತ್ತಾರೆ .

ಈ ರೀತಿಯಾಗಿ ಮದುವೆಯಾದ ನಂತರ ಆ ಒಂದು ಹೆಣ್ಣು ಮಗುವಿಗೆ ಸುಮಂಗಲಿ ಎಂದು ಕರೆಯಲಾಗುವುದು ಮತ್ತು ಈಕೆ ಮದುವೆಯಾದ ಬಳಿಕ ಈಕೆ ಪ್ರತಿಯೊಂದು ವ್ಯಕ್ತಿತ್ವವು ಕೂಡ ತನ್ನ ಗಂಡನ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ .

ಆದ್ದರಿಂದ ಹೆಣ್ಣು ಅಂದರೆ ಸುಮಂಗಲಿ ಮದುವೆಯಾದ ನಂತರ ಗಂಡನ ಶ್ರೇಯಸ್ಸಿಗಾಗಿ ಹೇಗೆಲ್ಲಾ ಇರಬೇಕು ಅನ್ನೋದನ್ನು ನಮ್ಮ ಹಿರಿಯರು ಒಂದು ಚೌಕಟ್ಟನ್ನು ಹಾಕಿ ಕೊಟ್ಟಿದ್ದಾರೆ ಆ ರೀತಿ ನಾವು ಪಾಲಿಸುವುದರಿಂದ ತಮ್ಮ ಗಂಡಂದಿರ ಸೌಭಾಗ್ಯವನ್ನು ಬದಲಿಸಬಹುದು .

ಮದುವೆಯಾದ ಸುಮಂಗಲಿ ಯಾವಾಗಲೂ ಕೂಡ ಹಣೆಯ ಮೇಲೆ ಕುಂಕುಮವನ್ನು ಇಟ್ಟುಕೊಂಡಿರಬೇಕು ಮತ್ತು ಹೆಣ್ಣಿನ ಬೈತಲೆ ಸ್ಥಾನವನ್ನು ಗಂಗೆಯ ಸ್ಥಾನ ಮತ್ತು ಗಂಗೆ ಅಲ್ಲಿ ನೆಲೆಸಿರುತ್ತಾಳೆ ಅಂತ ನಂಬಲಾಗುವುದು ಆ ಒಂದು ಜಾಗದಲ್ಲಿ ಕುಂಕುಮವನ್ನು ಅಂದರೆ ಹಣೆಯ ಮೇಲ್ಭಾಗದಲ್ಲಿ ಕುಂಕುಮವನ್ನು ಸುಮಂಗಲಿಯರು ಇಟ್ಟುಕೊಳ್ಳುವುದರಿಂದ ಗಂಡಂದಿರಿಗೆ ಆಯಸ್ಸು ಹೆಚ್ಚಾಗುವುದು ಅಂತ ಹೇಳಲಾಗುತ್ತದೆ .

ಮದುವೆಯಾದ ಹೆಣ್ಣು ಮಕ್ಕಳು ಯಾವಾಗಲೂ ಸೂರ್ಯ ಉದಯ ಮುಂಚೆ ಎದ್ದು ಸ್ನಾನವನ್ನು ಮಾಡಿ ದೇವರ ಪೂಜೆಯನ್ನು ಮಾಡಿ ತುಳಸಿ ಪೂಜೆಯನ್ನು ಮಾಡಬೇಕು ಈ ರೀತಿ ಸೂರ್ಯೋದಯದ ವೇಳೆ ತುಳಸಿ ಪೂಜೆ ಮಾಡಿ ತುಳಸಿ ಮಾತೆಯ ಆಶೀರ್ವಾದವನ್ನು ತೆಗೆದುಕೊಳ್ಳುವುದರಿಂದ ದೀರ್ಘ ಸುಮಂಗಲಿ ಯಾಗಿ ಬಾಳುತ್ತಾರೆ ಎಂದು ಹೇಳುತ್ತಾರೆ .

ಮನೆಯಲ್ಲಿ ಹೆಣ್ಣು ಮಕ್ಕಳು ಪೂಜೆ ಮಾಡುವ ವೇಳೆಯಲ್ಲಿ ದೀಪಕ್ಕೆ ಎಳ್ಳೆಣ್ಣೆಯನ್ನು ಬಳಸಬೇಕು ಈ ರೀತಿಯಲ್ಲಿ ಎಣ್ಣೆಯನ್ನು ಬಳಸುವುದರಿಂದ ನಮ್ಮ ಮನೆಯ ಕಷ್ಟಗಳೆಲ್ಲ ದೂರವಾಗುತ್ತವೆ ಎಂದು ನಂಬಲಾಗಿದೆ . ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯಾರೂ ತಮ್ಮ ಮನೆಯ ಮುಂದೆ ರಂಗೋಲಿಯನ್ನು ಬಿಡಲು ಇಚ್ಛಿಸುವುದಿಲ್ಲ.

ಆದರೆ ಮನೆಯ ಮುಂದೆ ರಂಗೋಲಿಯನ್ನು ಹಾಕುವುದರಿಂದ ಮನೆಗೆ ದುಷ್ಟಶಕ್ತಿಗಳ ಪ್ರವೇಶ ಆಗುವುದಿಲ್ಲ ಆದರೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಜನರು ಅಪಾರ್ಟ್ ಮೆಂಟ್ ಗಳಲ್ಲಿ ಇರುವುದರಿಂದ ಈ ರೀತಿ ರಂಗೋಲಿಯನ್ನು ಬಿಡಲು ಸಾಧ್ಯವಾಗುವುದಿಲ್ಲ , ಆದರೆ ಮನೆಯ ಅಸಲಿನ ಮೇಲೆ ರಂಗೋಲಿಯನ್ನು ಹಾಕಿದರೆ ಸಾಕು ಸಾಕಷ್ಟು ಉತ್ತಮ .

ಮತ್ತೊಂದು ಮುಖ್ಯವಾದ ವಿಷಯವೇನು ಅಂದರೆ ಮದುವೆಯಾದ ಸುಮಂಗಲೆಯರು ಯಾವಾಗಲೂ ಕೈಗೆ ಗಾಜಿನ ಬಳೆಯನ್ನು ತೊಡಬೇಕು ಈ ರೀತಿ ಗಾಜಿನ ಬಳೆಗಳನ್ನು ತೊಡುವುದರಿಂದ ಆ ಹೆಣ್ಣು ಮಗುವಿಗೂ ಕೂಡ ಆರೋಗ್ಯಕರ ಮತ್ತು ಗಂಡನಿಗೂ ಕೂಡ ಶ್ರೇಯಸ್ಸು ಎಂದು ಹೇಳಲಾಗುವುದು .

ಆದರೆ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಸುಮಂಗಲಿಯರು ಚಿನ್ನದ ಬಳೆಗಳನ್ನು ಅಥವಾ ಪ್ಲಾಸ್ಟಿಕ್ ವಲಯಗಳನ್ನು ಯಾವತ್ತಿಗೂ ಧರಿಸಲು ಹೋಗಬಾರದು ಹೀಗೆ ಧರಿಸಲೇಬೇಕು ಅನ್ನೋ ಸನ್ನಿವೇಶ ಬಂದಲ್ಲಿ ಗಾಜಿನ ಬೆಳೆಗಳೊಂದಿಗೆ ಸೇರಿಸಿ ಹಾಕಿಕೊಳ್ಳುವುದು ಉತ್ತಮ .

ಈ ರೀತಿ ಮದುವೆಯಾದ ಸುಮಂಗಲಿಯರು ತನ್ನ ಮನೆಯ ಮತ್ತು ತನ್ನ ಮನೆಯ ಒಡೆಯನಾದ ಪತಿಯ ಆಯಸ್ಸು ಸೌಭಾಗ್ಯ ಅದೃಷ್ಟವನ್ನು ಹೆಚ್ಚಿಸುವುದಕ್ಕೆ ಇಷ್ಟು ಪಾಲಿಸಿದರೆ ಸಾಕು ಮನೆಗೆ ಕೂಡ ಒಳ್ಳೆಯದು ಗಂಡನ ಶ್ರೇಯಸ್ಸು ಕೂಡ ವೃದ್ಧಿಸುತ್ತದೆ .
ನಾನು ತಿಳಿಸಿದಂತೆ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭ ದಿನ ಶುಭವಾಗಲಿ ಧನ್ಯವಾದಗಳು .