Categories
ಭಕ್ತಿ ಮಾಹಿತಿ

ನೀವು ಏನು ಹೇಳಿದರೂ ಕೂಡ ಅದನ್ನು ವರವಾಗಿ ಕೊಡುವಂತಹ ಸೌತಡ್ಕ ಗಣಪತಿ ಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಮತ್ತು ತಂದಿದ್ದೇವೆ … ಈ ಮಹತ್ವದ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ ….

ನಿಮಗೆ ಗೊತ್ತಿರಬಹುದು ನೀವು ಯಾವುದೇ ವಾಹನಗಳನ್ನು ಅಥವಾ ಯಾವುದೇ ರೀತಿಯಾದಂತಹ ಒಂದು ಒಳ್ಳೆಯ ಕಾರ್ಯವನ್ನು ಮಾಡುವುದಕ್ಕಿಂತ ಮುಂಚೆ ನಾವು ಭೇಟಿಯಾಗುವುದು ಒಂದೇ ಒಂದು ದೇವರು ಆ ದೇವರು ಎಂದರೆ ಗಣಪತಿ,

ಏಕೆಂದರೆ ಗಣಪತಿ ಹತ್ತಿರ ಹೋದರೆ ನಮಗೆ ಇರುವಂತಹ ಹಲವಾರು ವಿಘ್ನಗಳನ್ನು ದೂರ ಮಾಡುವಂತಹ ಏಕೈಕ ದೇವರು ಗಣಪತಿ ಆಗಿರುವುದರಿಂದ ನಾವು ಯಾವುದೇ ಕೆಲಸಕ್ಕೆ ಅಥವಾ ಯಾವುದೇ ಹೊಸ ಕೆಲಸವನ್ನು ಶುರು ಮಾಡುವ ಮೊದಲು ಅಥವಾ ಯಾವುದೇ ವಾಹನವನ್ನು ಕಂಡರೂ ಕೂಡ ಅದನ್ನು ಪೂಜೆ ಮಾಡಿಸುವುದು ಗಣಪತಿ ದೇವರ ಹತ್ತಿರ ಮಾತ್ರವೇ.

ಇಲ್ಲೊಂದು ಸ್ಥಳ ಇದೆ ಈ ಸ್ಥಳಕ್ಕೆ ಹೋದರೆ ನೀವು ಬೇಡಿ ನಂತಹ ಅಥವಾ ನಿಮಗೆ ಇರುವಂತಹ ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿಯನ್ನು ಬಂದಿರುವಂತಹ ಒಂದು ಸ್ಥಳ ಆಗಿದೆ.

ಆ ಸ್ಥಳದಲ್ಲಿ ನಿಮಗೆ ಆಗಿರುವಂತಹ ಕಷ್ಟಗಳು ಹಾಗೂ ನಿಮಗೆ ಬೇಕಾಗಿರುವಂತಹ ವರವನ್ನು ಸಿದ್ಧಿಯಾಗಿ ಕೊಡುವಂತಹ ಒಂದು ವಿಶಿಷ್ಟ ದೇವರ ಬಗ್ಗೆ ನಾವು ನಿಮಗೆ ಹೇಳಲು ಮಾಡಿದ್ದೇವೆ. ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವುದಕ್ಕೆ ಉತ್ತರ ಇದು ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ,

ಇನ್ನೊಂದು ವಿಶೇಷ ಎಂದರೆ ಈ ದೇವಸ್ಥಾನದಲ್ಲಿ ಇರುವಂತಹ ಗಣಪನಿಗೆ ಯಾವುದೇ ರೀತಿಯಾದಂತಹ ಒಂದು ದೇವಸ್ಥಾನ ಇಲ್ಲ ಇಲ್ಲಿರುವಂತಹ ಗಣಪತಿ ಬಟಾಬಯಲಿನಲ್ಲಿ ನೆಲೆಸಿದ್ದಾನೆ. ಅದಲ್ಲದೆ ಈ ರೀತಿಯಾಗಿ ಇರುವಂತಹ ಗಣಪತಿಯನ್ನು ಇಲ್ಲಿನ ಸ್ಥಳೀಯರು ಬಯಲು ಗಣಪತಿ ಅಂತ ಕೂಡ ಕರೆಯುತ್ತಾರೆ.

ಈ ಗಣಪತಿ ನೆಲೆಸಿರುವಂತಹ ಈ ಪ್ರದೇಶದಲ್ಲಿ ಸುತ್ತಮುತ್ತಲು ತುಂಬಾ ಹಸಿರು ಇರುತ್ತದೆ ಹಾಗೂ ಇಲ್ಲಿ ನೀವೇನಾದರೂ ಹೋದರೆ ನಿಮ್ಮ ಕಣ್ಣುಗಳು ತುಂಬಿಕೊಳ್ಳುತ್ತವೆ ಏಕೆಂದರೆ ಇಲ್ಲಿರುವಂತಹ ಪ್ರದೇಶ ಅಷ್ಟೊಂದು ಹಸಿರಾಗಿರುತ್ತದೆ. ಈ ಗಣಪನ ಹಿಂದೆ ಒಂದು ಸುಂದರವಾದ ಕಥೆ ಇದೆ ಆ ಕತೆಯ ಪ್ರಕಾರ, ಸೌತಡ್ಕ ಕ್ಷೇತ್ರ ಸುಮಾರು 1000 ಹಳೆಯ ವರ್ಷದ ಇತಿಹಾಸವಿದ್ದು, ಹಿಂದಿನ ಕಾಲದಲ್ಲಿ ಇದ್ದ ನಕಾಯಿ ಅವರು ಇಲ್ಲಿಗೆ ಬರುತ್ತಿದ್ದರಂತೆ,

ಇಲ್ಲಿಗೆ ಬಂದಂತಹ ಆತನ ಕಾಯುವವರಿಗೆ ಕಲ್ಲಿನಲ್ಲಿ ಸಿಕ್ಕಿದಂತಹ ಈ ಗಣಪತಿಯನ್ನು ಅವರು ಇಲ್ಲಿ ಪ್ರತಿಷ್ಠಾಪಿಸಿ ಅದನ್ನು ಹೋದನೆ ನಿತ್ಯ ಪೂಜೆ ಮಾಡಲು ಶುರು ಮಾಡಿದರಂತೆ, ಹಾಗೆ ದನಕಾಯುವವರು ಕಲ್ಲುಗಳನ್ನು ಇಟ್ಟು ಅದನ್ನು ಪೂಜೆ ಮಾಡಲು ಶುರು ಮಾಡಿ ತಾವು ತಿನ್ನೋದಕ್ಕೆ ತಂದಂತಹ  ಸೌತೆಕಾಯಿ ಈ ಗಣಪನಿಗೆ ಇಟ್ಟು ನೈವಿದ್ಯ ಕೊಡುತ್ತಿದ್ದರಂತೆ. ಈ ರೀತಿಯಾಗಿ ಸೌತೆಕಾಯಿಯನ್ನು ಇಡುವುದು ಇವಾಗಲು ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ.

ಇಲ್ಲಿರುವಂತಹ ಇನ್ನೊಂದು ವಿಶೇಷ ಎಂದರೆ ಈ ದೇವಸ್ಥಾನದ ಪಕ್ಕದಲ್ಲಿ ಅಂದರೆ ಬಲಭಾಗದಲ್ಲಿ ವೀರಭದ್ರಸ್ವಾಮಿ ಜನಾರ್ಧನ ರೂಪಿ ವಿಗ್ರಹವಿದೆ ಅದಲ್ಲದೆ ಮಹಾವಿಷ್ಣುವಿನ ವಿಗ್ರಹವು ಕೂಡ ಇದೆ, ಇಲ್ಲಿರುವಂತಹ ಈ ಗಣಪತಿಯನ್ನು ಇಷ್ಟಾರ್ಥ ಸಿದ್ಧಿ ಗಣಪತಿ ಎಂದು ಕರೆಯುತ್ತಾರೆ .

ಯಾಕೆಂದರೆ ಯಾವುದೇ ಜಾತಿ ಮತ ಇಲ್ಲದೆ ಎಲ್ಲ ಜನರು ಇಲ್ಲಿಗೆ ಬಂದು ಈ ಗಣಪತಿಯನ್ನು ಬೇಡಿಕೊಳ್ಳುತ್ತಾರೆ ಹಾಗೂ ಇಲ್ಲಿ ಬೇಡಿಕೊಂಡರೆ ಯಾವುದೇ ಕಷ್ಟದಲ್ಲಿ ಯಾವುದೇ ಕೆಲಸವಿರಲಿ ಅದು ನೆರವೇರುತ್ತದೆ ಎನ್ನುವಂತಹ ನಂಬಿಕೆ ಇಲ್ಲಿನ ಜನರಲ್ಲಿ ಗಾಢವಾಗಿ ನಂಬಿಕೊಂಡಿದ್ದಾರೆ. ಈ ದೇವಸ್ಥಾನ ಪ್ರತಿದಿನವೂ 7:00 ಗೆ ಇತರ ಆದರೆ ಪ್ರತಿದಿನ ಸಂಜೆ ಏಳು ಮೂವತ್ತಕ್ಕೆ ಬಾಗಿಲು ಹಾಕುತ್ತದೆ. ಇಲ್ಲಿ ಯಾವುದೇ ಸೇವೆ ಮಾಡುವುದಕ್ಕೂ ಕೂಡ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಇಲ್ಲಿ ನಿಮಗೆ ಪಂಚಕಜ್ಜಾಯ ಹಾಗೂ ಅವಲಕ್ಕಿಯನ್ನು ಸೇವೆಯಾಗಿ ಈ ಗಣಪತಿಗೆ ಸಲ್ಲಿಸುತ್ತಾರೆ.

ನಿಮಗೂ ಏನಾದರೂ ಕಷ್ಟಗಳು ಅಥವಾ ಯಾವುದಾದರೂ ಹೊಸ ವಿಚಾರಗಳನ್ನು ನೀವು ಶುರು ಮಾಡಲು ಹೊರಟಿದ್ದಾರೆ ಒಂದು ಸಾರಿ ನೀವು ಒಂದುಸಾರಿ ಸೌತಡ್ಕ ಗಣಪತಿಯನ್ನು ನೆನಸಿಕೊಂಡು ನಿಮ್ಮ ಕೆಲಸವನ್ನು ಶುರು ಮಾಡಿದರೆ ನಿಜವಾಗಲೂ ನಿಮ್ಮ ಜೀವನದಲ್ಲಿ ನೀವು ಯಶಸ್ಸಿನ ಕಾಣ್ತೀರ, ಈಲೇಖನವು ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ.