Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವು ಕಾಳು ಮೆಣಸನ್ನು ತಿಂದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಅನ್ನೋದು ಗೊತ್ತ …!

ಈ ಮೆಣಸಿನ ಕಾಳನ್ನು ನೀವು ತಿನ್ನುವುದರಿಂದ ನಿಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಎಷ್ಟಿದೆ ಗೊತ್ತಾ! ಈ ಮೆಣಸಿನ ಕಾಳನ್ನು ಹೇಗೆ ಯಾವಾಗ ಯಾವ ರೂಪದಲ್ಲಿ ಯಾರು ಸೇವಿಸಬೇಕು ಮತ್ತು ಈ ಮೆಣಸಿನ ಕಾಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಗಳು ಕಂಡು ಬರುತ್ತದೆ ಅನ್ನುವುದನ್ನು ತಿಳಿಯೋಣ ಇಂದಿನ ಈ ಮಾಹಿತಿಯಲ್ಲಿ ಇದೊಂದು ಉಪಯುಕ್ತ ಆರೋಗ್ಯ ಮಾಹಿತಿ ಆದ ಕಾರಣ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ.

ಹೌದು ಮೆಣಸಿನ ಕಾಳು ಇದೊಂದು ಮಸಾಲಾ ಪದಾರ್ಥ ಈ ಮಸಾಲೆ ಪದಾರ್ಥವನ್ನು ಅಡುಗೆಯಲ್ಲಿ ಬಳಸುವುದುಂಟು ಹಾಗೆ ಆರೋಗ್ಯವನ್ನು ಉತ್ತಮವಾಗಿಸುವ ಅಂಶಗಳು ಈ ಮೆಣಸಿನ ಕಾಲಿನಲ್ಲಿ ಇದೆ ಈ ಮೆಣಸಿನ ಕಾಳನ್ನು ಯಾರು ಹೇಗೆ ಸೇವಿಸಬೇಕು ಅನ್ನುವುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಮಾಂಸ ಖಂಡಗಳು ನೋಯುತ್ತಿದ್ದರೆ ಆಗ ಬಾದಾಮಿಗಳನ್ನು ಪುಡಿ ಮಾಡಿ ಅದರೊಂದಿಗೆ ಮೆಣಸಿನ ಕಾಳಿನ ಪುಡಿ ಅನ್ನು ಬೆರೆಸಿ ಸೇವಿಸಬೇಕು ಈ ರೀತಿ ಮಾಡುವುದರಿಂದ ಮಾಂಸಖಂಡಗಳ ನೋವು ನಿವಾರಣೆ ಆಗುತ್ತದೆ. ಹೌದು ಕೆಲವರಲ್ಲಿ ವಿಪರೀತ ಮಾಂಸ ಖಂಡಗಳ ನೋವು ಬರುತ್ತಿರುತ್ತದೆ ಅಂತಹವರು ಒಂದು ಪ್ರಯತ್ನವನ್ನು ಪ್ರತಿ ದಿನ ಮಾಡುತ್ತಾ ಬನ್ನಿ ಈ ರೀತಿ ಮಾಡುವುದರಿಂದ ನಿಜಕ್ಕೂ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

ಕೆಲವರು ಮೆಣಸಿನ ಕಾಳು ಕೇವಲ ಕಫ ಶೀತ ಕೆಮ್ಮು ಈ ಸಮಸ್ಯೆಯನ್ನು ಮಾತ್ರ ನಿವಾರಿಸುತ್ತದೆ ಅಂತ ನಂಬಿದ್ದಾರೆ ಆದರೆ ಈ ಮೆಣಸಿನ ಕಾಳು ಅಜೀರ್ಣತೆ ಯನ್ನು ಹೋಗಲಾಡಿಸುತ್ತದೆ ಜೀರ್ಣಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವುದರಲ್ಲಿ ಈ ಮೆಣಸಿನ ಕಾಳು ಅತ್ಯಂತ ಪ್ರಯೋಜನಕಾರಿಯಾಗಿದ್ದು ಇದರಿಂದ ಇನ್ನು ಆರೋಗ್ಯ ಪ್ರಯೋಜನಗಳು ಹಲವಾರು ಇದೆ.

ಕಫದ ಸಮಸ್ಯೆ ಶೀತದ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇದ್ದರೆ ಒಂದು ಲೋಟ ನೀರಿಗೆ ಅರ್ಧ ಗ್ರಾಂ ಮೆಣಸಿನ ಕಾಳಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಜೇನು ತುಪ್ಪವನ್ನು ಹಾಕಿ ಕುದಿಸಿ ನಂತರ ಈ ನೀರನ್ನು ಸೇವಿಸುತ್ತಾ ಬರಬೇಕು ಇದರಿಂದ ಕಸದ ಸಮಸ್ಯೆ ನಿವಾರಣೆಯಾಗುತ್ತದೆ.

ಶೀತ ಕೆಮ್ಮು ನಿಮ್ಮನ್ನು ಕಾಡ್ತಾ ಇದ್ದರೆ ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ವಾತಾವರಣದಿಂದ ಶೀತ ಕೆಮ್ಮು ಬರುವುದು ಸಹಜ ಅದಕ್ಕಾಗಿ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಕಾಳು ಮೆಣಸಿನ ಪುಡಿಯ ಧರಿಸಬೇಕು ನಂತರ ನಾಲ್ಕು ಏಲಕ್ಕಿಯನ್ನು ಕುಟ್ಟಿ ಸಿಪ್ಪೆಯ ಸಮೇತ ನೀರಿಗೆ ಹಾಕಿ ನೀರನ್ನು ಕುದಿಸಿ ನಂತರ ಈ ನೀರನ್ನು ಸೇವಿಸುತ್ತಾ ಬರುವುದರಿಂದ ನೀರು ಆದಷ್ಟು ಬಿಸಿ ಇದ್ದಾಗಲೇ ಸೇವಿಸಬೇಕು ಇದರಿಂದ ಶೀತ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೆ ಏಲಕ್ಕಿ ಮತ್ತು ಮೆಣಸಿನ ಪುಡಿ ಗಂಟಲಿನಲ್ಲಿರುವ ಕಫ ಶೀತ ಕೆಮ್ಮನ್ನು ನಿವಾರಿಸುತ್ತದೆ.

ಅಡುಗೆಯಲ್ಲಿ ಖಾರದ ಪುಡಿಯನ್ನು ನೀವೇನಾದರೂ ಬಳಸುತ್ತಾ ಇದ್ದರೆ ಅದರ ಬದಲಾಗಿ ನಿಯಮಿತವಾಗಿ ಮೆಣಸಿನ ಪುಡಿಯನ್ನು ಬಳಸುತ್ತಾ ಬಂದರೆ ಆರೋಗ್ಯವೂ ಉತ್ತಮವಾಗಿರುತ್ತದೆ ಜತೆಗೆ ಮೆಣಸಿನ ಕಾಳಿನಲ್ಲಿರುವ ಪಿಪ್ರಿನ್ ಎಂಬ ಅಂಶವು ಮೆದುಳಿನ ಚಟುವಟಿಕೆಯನ್ನು ವೃದ್ಧಿಸುತ್ತದೆ.

ಹೊಟ್ಟಿನ ಸಮಸ್ಯೆ ನಿಮ್ಮನ್ನು ಕಾಡ್ತಾ ಇದ್ರೆ ಈ ಮೆಣಸಿನ ಕಾಳಿನ ಪುಡಿ ಅನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಬೇಕು ಇದರಲ್ಲಿರುವ ಜೀವವಿರೋಧಿ ಅಂಶವೂ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಸಹಕರಿಸುತ್ತದೆ. ಆದರೆ ಕೂದಲಿಗೆ ಹೆಚ್ಚು ಮೆಣಸಿನ ಕಾಳಿನ ಪುಡಿಯನ್ನು ಬಳಸದೇ ಇರುವುದೇ ಒಳ್ಳೆಯದು.

ದಂತ ಸಮಸ್ಯೆಯಿಂದ ಬಳಲುವವರು ಮೆಣಸಿನ ಕಾಳಿನ ಪುಡಿಯೊಂದಿಗೆ ಉಪ್ಪನ್ನು ಬೆರೆಸಿ ಇದರಿಂದ ಹಲ್ಲನ್ನು ಉಜ್ಜುವುದರಿಂದ ಅಥವಾ ನೋವಾದ ಹಲ್ಲನ್ನು ಉಜ್ಜುವುದರಿಂದ ಹಲ್ಲು ನೋವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಅಜೀರ್ಣತೆ ನಿಮ್ಮನ್ನು ಕಾಡ್ತಾ ಇದ್ದರೆ ಶುಂಠಿ ರಸದೊಂದಿಗೆ ಜೇನು ಮತ್ತು ಮೆಣಸಿನ ಪುಡಿಯನ್ನು ಬೆರೆಸಿ ಇದನ್ನು ನೀರಿನಲ್ಲಿ ಮಿಶ್ರಿತ ಮಾಡಿ ಸೇವಿಸುತ್ತಾ ಬರುವುದರಿಂದ ಅಜೀರ್ಣತೆ ಕಡಿಮೆಯಾಗುತ್ತದೆ ಇದರ ಜೊತೆಗೆ ಮಜ್ಜಿಗೆಯಲ್ಲಿ ಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಕೂಡ ಅಜೀರ್ಣತೆ ಕಡಿಮೆಯಾಗುತ್ತದೆ.

ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ಸಲಾಡ್ಗಳಿಗೆ ಹಣ್ಣಿನ ಜ್ಯೂಸ್ಗಳಿಗೆ ಪೆಪ್ಪರ್ ಪುಡಿಯನ್ನು ಹಾಕಿ ಸೇವಿಸುತ್ತಾ ಬರಬೇಕು ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಈ ರೀತಿ ನಿಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಮೆಣಸಿನ ಪುಡಿಯನ್ನು ಕೂಡ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.