Categories
ಮನೆಔಷಧಿ ಮಾಹಿತಿ ಸಂಗ್ರಹ

ನೀವು ತಲೆ ಸ್ನಾನ ಮಾಡುವ ಮುನ್ನ ಶಾಂಪು ನಲ್ಲಿ ಉಪ್ಪು ಹಾಕಿ ಕೊಂಡರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಒಂದು ವಿಶೇಷ ಮಾಹಿತಿ

ಉಪ್ಪನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಅಂತ ಕೆಲವೊಂದು ಜನರು ಹೇಳುತ್ತಾರೆ, ಹೌದು ನೀವೇನಾದರೂ ಊಟ ಮಾಡುವಂತಹ ಸಂದರ್ಭದಲ್ಲಿ ಉಪ್ಪನ್ನು ಹೆಚ್ಚಾಗಿ ಬಳಕೆ ಮಾಡಿದ್ರೆ ಹಲವು ರೀತಿಯ ಖಾಯಿಲೆಗಳು ನಿಮ್ಮ ದೇಹಕ್ಕೆ ಬೇಗನೆ ಆವರಿಸುತ್ತದೆ .

ಆದ್ದರಿಂದ ಉಪ್ಪನ್ನು ಹೆಚ್ಚಾಗಿ ಸೇವನೆ ಮಾಡುವುದು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಲ್ಲದೆ ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಒತ್ತಡ ಅಥವಾ ಶುಗರ್ ಎನ್ನುವ ಕಾಯಿಲೆಗಳು ಕೂಡ ಬರುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ.

ಆದ್ದರಿಂದ ಉಪ್ಪನ್ನು ಮಿತವಾಗಿ ಬಳಸಬೇಕು ಮಿತಿಯಾಗಿ ಬಳಸುವುದರಿಂದ ನಿಮಗೆ ಬರುವಂತಹ ಕಿಡ್ನಿ ಸಂಬಂಧಿತ ರೋಗಗಳು ಕೂಡ ಕಡಿಮೆಯಾಗುತ್ತದೆ. ಉಪ್ಪಿನ ಬದಲು ಸೈಂದವ ಲವಣ ಬಳಕೆ ಮಾಡಿರಿ.

ಆದರೆ ನೀವೇನಾದರೂ ಉಪ್ಪನ್ನು ತಲೆ ಸ್ನಾನ ಮಾಡುವ ಮುನ್ನ ಬಳಕೆ ಮಾಡಿದ್ದಲ್ಲಿ ನಿಮಗೆ ಹಲವಾರು ತರವಾದ ಲಾಭಗಳು ಇವೆ, ಅವುಗಳು ಯಾವುವು ಯಾವುವು ಎನ್ನುವುದರ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ಸುಧೀರ್ಗ ಚರ್ಚೆಯನ್ನು ಮಾಡೋಣ ಬನ್ನಿ.

ಹೌದು ತಲೆ ಸ್ಥಾನ ಮಾಡುವ ಮುನ್ನ ನೀವೇನಾದರೂ ಉಪ್ಪನ್ನು ಬಳಸಿ ತಲೆಯನ್ನು ತೊಳೆದುಕೊಳ್ಳುವುದರಿಂದ ನಿಮ್ಮ ತಲೆಯಲ್ಲಿ ಇರುವಂತಹ ದೂಳು ಜಿಡ್ಡು ಹಾಗೂ ಸಣ್ಣ ಸಣ್ಣ ಬ್ಯಾಕ್ಟಿರಿಯ ಅಂಶಗಳು ನಿಮ್ಮ ತಲೆಯ ಕೂದಲಿನಿಂದ ಹೊರಗಡೆ ಹೋಗುತ್ತವೆ, ಇದರಿಂದಾಗಿ ನೀವು ಯಾವುದೇ ತರವಾದ ಹೆಚ್ಚಿನ ಬೆಲೆಯ ಕಂಡೀಷನರ್ ಬಳಸುವಂತಹ ಅವಶ್ಯಕತೆಯೇನು ಇರುವುದಿಲ್ಲ.

ಅದಲ್ಲದೆ ಉಪ್ಪನ್ನು ನೀವು ನೀವೇನಾದರೂ ಮುಖವನ್ನು ಸ್ಕ್ರಬ್ ಮಾಡಿಕೊಳ್ಳುತ್ತೀರಾ ಅಥವಾ ಫೇಸ್ ವಾಶ್ ಮಾಡಿ ಕೊಡ್ತೀರಾ ಅಂತ ಇದ್ರೆ ನೀವು ಇದನ್ನು ಬಳಸಿಕೊಂಡು ಫೇಸ್ ವಾಶ್ ಮಾಡಿಸಿಕೊಂಡರೆ ನಿಮ್ಮ ಮುಖದಲ್ಲಿ ಇರುವಂತಹ ರಂಧ್ರಗಳು ಮುಚ್ಚಿ ಕೊಂಡು ನಿಮ್ಮ ಮುಖವು ತುಂಬಾ ಕಾಂತಿಯುತವಾಗಿ ಹೊಳೆಯುತ್ತದೆ. ಅದಲ್ಲದೆ ನಿಮ್ಮ ಪಾದಗಳು ಏನಾದರೂ ಒಣಗಿದ್ದು ಬಿರುಕು ಬಿಟ್ಟಿದ್ದರೆ ಕೊಬ್ಬರಿ ಎಣ್ಣೆ ಅಥವಾ ಆಲೀವ್ ಆಯಿಲ್ ಇದಕ್ಕೆ ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳುವುದರಿಂದ ನಿಮ್ಮ ಪಾದಗಳ ಬಿರುಕು ತನವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು.

ಉಪ್ಪಿನಿಂದ ಹಲವಾರು ರೀತಿಯ  ಹೆಚ್ಚು ಲಾಭವನ್ನು ನೀವು ನೋಡಬಹುದು ಅದಕ್ಕೆ ಒಂದು ಉದಾಹರಣೆ ಏನಪ್ಪಾ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಪಾತ್ರೆಗಳು ಏನಾದರೂ ಹೆಚ್ಚು ಹೆಚ್ಚು ಕಪ್ಪಾಗಿದ್ದರೆ ಅದನ್ನು ಕಡಿಮೆ ಮಾಡಲು ಉಪ್ಪನ್ನು ಬಳಸಿ ತೊಳೆಯುವುದರಿಂದ ಕಪ್ಪಗಿನ ಅಂಶ ಸಂಪೂರ್ಣವಾಗಿ ಹೋಗಿ ಹೊಳಪು ಬರುತ್ತದೆ.

ವೈದ್ಯರು ಹೇಳುವ ಪ್ರಕಾರ ಅತೀ ಹೆಚ್ಚು ಉಪ್ಪು ಬಳಕೆ ಮಾಡುವುದು ಆರೋಗ್ಯಕ್ಕೆ ಹಾನಿಕರ ಆದರೆ ದೇಹಕ್ಕೆ ಸೋಡಿಯಂ ಅಂಶ ಬೇಕೇ ಬೇಕು ಆದರಿಂದ ಪ್ರತಿ ನಿತ್ಯ ನಿಗದಿತ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಿರಿ. ಉಪ್ಪಿನ ಬದಲು ಸೈಂದವ ಲವಣ ಬಳಕೆ ಮಾಡಿರಿ.

ಗೊತ್ತಾಯಿತಲ್ಲ ಸ್ನೇಹಿತರೆ ಉಪ್ಪಿನಿಂದ ಎಷ್ಟು ಲಾಭಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ನೋಡಬಹುದು ಎಂದು, ಹಾಗಾದರೆ ಇನ್ನೇಕೆ ತಡ ನಿಮ್ಮ ಸ್ನೇಹಿತರಿಗೆ ಈ ತರದ ವಿಚಾರವನ್ನು ಶೇರ್ ಮಾಡಿ ಹಾಗೂ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ರಶ್ಮಿ.