Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವು ದಿನ ನಿತ್ಯ ಟೊಮೊಟೊ ತಿಂತೀರಾ ಹಾಗಾದರೆ ಇದನ್ನ ನೋಡಲೇಬೇಕು ….! ಯಪ್ಪಾ ಹೀಗೆ ಆಗುತ್ತಾ ..!

ಟೊಮೆಟೊ ಹಣ್ಣನ್ನು ನೀವೇನಾದರೂ ಪ್ರತಿ ದಿನ ಸೇವಿಸುತ್ತಿದ್ದೀರಾ, ಹಾಗಾದರೆ ದೇಹಕ್ಕೆ ಹಸಿ ಟೊಮೆಟೊ ಒಳ್ಳೆಯದು ಅಥವಾ ಬೇಯಿಸಿದ ಟೊಮೆಟೊ ಆರೋಗ್ಯಕ್ಕೆ ಉತ್ತಮವೋ ಅನ್ನೊ ಮಾಹಿತಿಯನ್ನು ತಿಳಿದುಕೊಳ್ಳೋಣ, ಇವತ್ತಿನ ಈ ಒಂದು ಲೇಖನದಲ್ಲಿ. ಹೌದು ಟೊಮೆಟೊ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ಒಂದು ಹಣ್ಣು ಕೂಡ ಹೌದು ತರಕಾರಿ ಕೂಡ. ಅಷ್ಟೇ ಅಲ್ಲ ಈ ಟೊಮೆಟೊ ಹಣ್ಣನ್ನು ಪ್ರತಿ ದಿನ ಅಡುಗೆಯಲ್ಲಿ ನಿಯಮಿತವಾಗಿ ಬಳಸುತ್ತಾ ಬಂದರೆ, ಅಡುಗೆಯ ರುಚಿ ಅನ್ನು ಹೆಚ್ಚಿಸುವುದಲ್ಲದೆ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.

ಟೊಮೆಟೊ ಹಣ್ಣನ್ನು ತಿನ್ನುವ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳ ಬೇಕಾಗಿರುವ ಮಾಹಿತಿ ಏನು ಅಂದರೆ ಈ ಟೊಮೆಟೊ ಹಣ್ಣನ್ನು ಹಸಿಯಾಗಿ ತಿನ್ನುವುದು ಉತ್ತಮ ಯಾಕೆ ಅಂದರೆ ಬೇಯಿಸಿದ ನಂತರ ಇದರಲ್ಲಿರುವ ಪೋಷಕಾಂಶಗಳು ನಾಶ ಆಗುವ ಸಾಧ್ಯತೆಗಳು ಇರುತ್ತದೆ,

ಇದರ ಜೊತೆಗೆ ನೀವೇನಾದರೂ ಟೊಮೆಟೊ ಹಣ್ಣನ್ನು ಇದರ ಬೀಜದ ಸಮೇತ ಸೇವಿಸುತ್ತಾ ಇದ್ದಲ್ಲಿ ಒಂದು ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಒಂದು ಟೊಮೆಟೊ ಹಣ್ಣನ್ನು ಇದರ ಬೀಜದ ಸಮೇತ ಸೇವಿಸಬೇಡಿ, ಇದರಿಂದ ಕಿಡ್ನಿಯಲ್ಲಿ ಕಲ್ಲಾಗುವ ಸಾಧ್ಯತೆಗಳು ಹೆಚ್ಚಾಗಿಯೆ ಇರುತ್ತದೆ ಅಂತ ಹೇಳಬಹುದು.

ಆದ ಕಾರಣ ಟೊಮೆಟೊ ಹಣ್ಣನ್ನು ಸೇವಿಸುವಾಗ ಟೊಮೆಟೊ ಹಣ್ಣಿನೊಳಗೆ, ಈ ಬೀಜವನ್ನು ಬದಿಗಿಟ್ಟು ನಂತರ ಈ ಟೊಮೆಟೊ ಹಣ್ಣನ್ನು ಸೇವಿಸಿ, ಇದೀಗ ಟೊಮೇಟೊ ಹಣ್ಣಿನ ಪ್ರಯೋಜನಗಳನ್ನು ತಿಳಿದುಕೊಳ್ಳಬೇಕಾದರೆ ಇದರಲ್ಲಿ ಹೇರಳವಾದ ವಿಟಮಿನ್ ಎ ಅಂಶ ಇದೆ, ಈ ವಿಟಮಿನ್ ಎ ಅಂಶ ತ್ವಚೆ ಮತ್ತು ಕಣ್ಣು ಕೆಂಪಾಗುವ ಒಂದು ಸಮಸ್ಯೆ ಅನ್ನು ಉಂಟು ಮಾಡುವ ಲೈಕೋಪಿನ್ ಎಂಬ ಅಂಶವನ್ನು ನಿಯಂತ್ರಣದಲ್ಲಿ ಇಡಲು ಟೊಮೆಟೊ ಹಣ್ಣು ಉತ್ತಮಕಾರಿ ಆಗಿದೆ.

ಮೂಳೆಗಳಿಗೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ ಒಳ್ಳೆಯ ಬಲವನ್ನು ನೀಡುತ್ತದೆ ಟೊಮೆಟೊ ಹಣ್ಣು ಆದ ಕಾರಣ ಈ ಟೊಮೆಟೊ ಹಣ್ಣನ್ನು ವೃದ್ಧರು ಕೂಡ ಸೇವಿಸಬಹುದು ಮತ್ತು ಇದರಿಂದ ಮೂಳೆಗಳು ಬಲಗೊಳ್ಳುತ್ತದೆ ಅಷ್ಟೇ ಅಲ್ಲ ಟೊಮೆಟೊ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿ ತಕ್ಷಣವೆ ಹೆಚ್ಚಾಗುವಂತಹ ಸಕ್ಕರೆ ಅಂಶದ ಒಂದು ಸಮಸ್ಯೆ ಅನ್ನು ಇದು ನಿವಾರಣೆ ಮಾಡುತ್ತದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಟೊಮೆಟೊ ಹಣ್ಣನ್ನು ನಿಯಮಿತವಾಗಿ ಬಳಸಬಹುದು ಇದರ ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿಲ್ಲ ಅನ್ನುವವರು ಕೂಡ ಟೊಮೆಟೊ ಹಣ್ಣನ್ನು ಸೇವಿಸ ಬಹುದು, ಇದರಿಂದ ಮುಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಬಾರದಂತೆ ಈ ಒಂದು ಟೊಮೆಟೊ ಹಣ್ಣು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.

ಟೊಮೆಟೊ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಇದು ತ್ವಚೆಯ ಅಂದವನ್ನು ಕೂಡ ಹೆಚ್ಚಿಸುತ್ತದೆ, ಇದನ್ನು ನೀವು ಹಸಿಯಾಗಿ ತಿನ್ನುವುದಕ್ಕೆ ಸಾಧ್ಯ ಆಗುತ್ತಿಲ್ಲ ಅನ್ನುವವರು, ಊಟದೊಂದಿಗೆ ಸಲಾಡ್ ರೂಪದಲ್ಲಿ ಕೂಡ ಈ ಟೊಮೆಟೊ ಹಣ್ಣನ್ನು ತಿನ್ನಬಹುದಾಗಿದೆ.

ಪ್ರತಿದಿನ ಒಬ್ಬ ವ್ಯಕ್ತಿಗೊಂದು ಟೊಮೇಟೊ ಹಣ್ಣಿನ ಜ್ಯೂಸ್ ಅನ್ನು ತಯಾರಿಸಿಕೊಂಡು ಕುಡಿಯುವುದರಿಂದ ಅನೇಕ ಆರೋಗ್ಯಕರ ಲಾಭಗಳಿವೆ, ಆದರೆ ಒಂದಂತೂ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಚಾರ ಏನು ಅಂದರೆ, ಟೊಮೆಟೊ ಹಣ್ಣನ್ನು ಸೇವಿಸುವಾಗ, ಇದರೊಳಗಿರುವ ಬೀಜವನ್ನು ತೆಗೆದು ಆ ನಂತರ ಈ ಹಣ್ಣನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಶುಭವಾಗಲಿ ಶುಭ ದಿನ ಧನ್ಯವಾದ.