Categories
ಮಾಹಿತಿ ಸಂಗ್ರಹ

ನೀವು ಬಿಸಾಕಿದ ತಲೆಕೂದಲು ಎಲ್ಲಿಗೆ ಹೋಗ್ತಾ ಇದೆ ಗೊತ್ತಾ ಕೂದಲಲ್ಲ ಕಪ್ಪು ಚಿನ್ನ..

ನೀವು ಬಿಸಾಡುವಂತಹ ಕೂದಲು ಏನಾಗುತ್ತದೆ ಗೊತ್ತಾ ಮತ್ತು ಇದರ ಬಗ್ಗೆ ಯಾರಿಗೂ ಕೂಡ ತಿಳಿಯದಂತಹ ಒಂದು ಸತ್ಯ ಇದೆ ಹಾಗಾದರೆ ಬನ್ನಿ ನೀವು ಬಿಸಾಕುತ್ತಿರುವ ಕೂದಲು ಏನಾಗುತ್ತಿದೆ ಮತ್ತು ಈ ಕೂದಲಿನಿಂದ ಏನು ಮಾಡುತ್ತಾರೆ ಅನ್ನೋದರ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮತ್ತು ಈ ಒಂದು ಉಪಯುಕ್ತ ಮಾಹಿತಿಯನ್ನು ನೀವು ಕೂಡ ಓದಿ ಮತ್ತು ನಿಮ್ಮ ಗೆಳೆಯರೊಂದಿಗೆ ಕೂಡ ತಪ್ಪದೇ ಶೇರ್ ಮಾಡಿ , ಇದೇ ರೀತಿಯ ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಮರೆಯದೆ ಲೈಕ್ ಮಾಡಿ . ಹೌದು ಸ್ನೇಹಿತರೇ ನೀವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೀರಿ ಮತ್ತು ನೋಡಿರುತ್ತೀರಾ.

ನಿಮ್ಮ ಮನೆಯ ಮುಂದೆ ಚಿಂದಿ ವಸ್ತುಗಳನ್ನು ಆಯುವವರು ಕೂಡ ಇತ್ತೀಚಿನ ದಿನಗಳಲ್ಲಿ ಕೂದಲನ್ನು ಕೇಳಿಕೊಂಡು ಬರುತ್ತಾರೆ ಹಾಗಾದರೆ ಆದರೆ ಈ ರೀತಿಯ ಬೇಡದೆ ಇರುವ ಕೂದಲುಗಳನ್ನು ಏನು ಮಾಡುತ್ತಾರೆ ಇದನ್ನು ತೆಗೆದುಕೊಂಡು ಹೋಗುವುದರಲ್ಲಿ ಅವರಿಗೇನು ಉಪಯೋಗ ಎನ್ನುವುದನ್ನು ತಿಳಿಸುತ್ತೇನೆ ತಪ್ಪದೇ ಈ ಕೆಳಗಿನ ಮಾಹಿತಿಯನ್ನು ವೀಕ್ಷಿಸಿ .

ಹೌದು ಸ್ನೇಹಿತರೆ ನೀವು ಬಿಸಾಡುತ್ತಿರುವ ಕೂದಲು ಬೇರೊಂದು ದೇಶಕ್ಕೆ ಹೋಗಿ ಅದು ಫ್ಯಾಷನ್ ಲೋಕವನ್ನು ಸೇರಿಕೊಳ್ಳುತ್ತಾ ಇದೆ ಈ ಕೂದಲಿನಿಂದ ನಾನಾ ರೀತಿಯ ಹೇರ್ ಸ್ಟೈಲ್ ಗಳನ್ನು ಮಾಡಿಕೊಳ್ಳುತ್ತಾರೆ ಇನ್ನೂ ಇದರ ಬಗ್ಗೆ ಸಾಕಷ್ಟು ಮಾಹಿತಿ ನಿಮಗೆ ತಿಳಿದುಕೊಳ್ಳಬೇಕು ಅನ್ನೊದಿದ್ದರೆ ನಾನು ನಿಮಗೆ ಇದರ ಬಗ್ಗೆ ಪೂರ್ತಿ ವಿವರವಾಗಿ ಹೇಳುತ್ತೇನೆ .

ತಿರುಪತಿಯಲ್ಲಿ ಕೂಡ ಒಂದು ದಂಧೆ ನಡೆಯುತ್ತಿದೆ ಅದೇನೆಂದರೆ ನೀವು ಭಕ್ತಿಗಾಗಿ ಮತ್ತು ನಿಮ್ಮ ಹರಕೆಯನ್ನು ತೀರಿಸಿಕೊಳ್ಳುವುದಕ್ಕಾಗಿ ಕೂದಲನ್ನು ಕೊಡುತ್ತೀರಾ ಆದರೆ ಈ ಕೂದಲು ಬೇರೊಂದು ವ್ಯವಹಾರಕ್ಕೆ ಉಪಯೋಗವಾಗುತ್ತಿದೆ ಮತ್ತು ಇನ್ನೂ ಹೇಳಬೇಕು ಅಂದರೆ ಈ ಕೂದಲುಗಳು ವಿದೇಶಕ್ಕೆ ಮಾರಾಟವಾಗುತ್ತಿದೆ .

ಹೌದು ಸ್ನೇಹಿತರೇ ತಿರುಪತಿಯಲ್ಲಿ ಸುಮಾರು ಆರುನೂರು ಜನರು ಈ ಒಂದು ಕ್ಷೌರಿಕ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ತಿಂಗಳಿಗೆ ಒಂದು ಲಕ್ಷ ಪೌಂಡ್ ಅಷ್ಟು ಕೂದಲು ಸಂಗ್ರಹ ವಾಗುವುದರ ಜತೆಗೆ ಇದನ್ನು ಬೇರೊಂದು ದೇಶಕ್ಕೆ ಎಕ್ಸ್ಪೋರ್ಟ್ ಮಾಡಲಾಗುತ್ತದೆ ಮತ್ತು ತಿರುಪತಿಯಲ್ಲಿ ಈ ಒಂದು ಕೂದಲಿನ ಹರಾಜು ಕೂಡ ಮಾಡಲಾಗುತ್ತದೆ ಇದರಲ್ಲಿ ಪ್ರಪಂಚದ ನಾನಾ ರೀತಿಯ ಉದ್ಯಮಿಗಳು ಪಾಲ್ಗೊಳ್ಳುತ್ತಾರೆ ಈ ಒಂದು ಹರಾಜಿನಲ್ಲಿ ಕೂದಲುಗಳು ಹೆಚ್ಚಿನ ಬೆಲೆಗೆ ಮಾರಾಟ ಕೂಡ ಆಗುತ್ತದೆ .

ಕಳೆದ ವರ್ಷ ಅಮೆರಿಕ ನಮ್ಮ ಭಾರತ ದೇಶದ ಕೂದಲಿಗೆ ಕಪ್ಪು ಚಿನ್ನ ಅಂತ ಕೂಡ ಕರೆದಿತ್ತು ಇದಕ್ಕೆ ಸಾಕಷ್ಟು ಬೆಲೆ ಕೂಡ ಇದೇ ಮತ್ತು ಕೋಟಿ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಈ ಒಂದು ಕೂದಲಿನ ವ್ಯವಹಾರದಿಂದ ಅಂತ ಹೇಳಿದರೆ ಯಾವುದೇ ರೀತಿಯಲ್ಲೂ ತಪ್ಪಾಗಲಾರದು .

ಇದೀಗ ಒಂದು ಕೆಜಿ ಕೂದಲಿಗೆ ಐದರಿಂದ ಹತ್ತು ಸಾವಿರ ಬೆಲೆ ಇರುತ್ತದೆ ಮತ್ತು ನೀವು ನಿಮ್ಮ ಮನೆಯ ಮುಂದೆ ಕೆಲ ಹೆಂಗಸರು ಕೂದಲನ್ನು ಕೊಡಿ ಎಂದು ಕೇಳಿಕೊಂಡು ಬರುತ್ತಾರೆ ಇದಕ್ಕೆ ಪ್ರತಿಯಾಗಿ ನಮಗೆ ರಿಬ್ಬನ್ಗಳು ಪಿನ್ನುಗಳನ್ನು ಮತ್ತು ಪಾತ್ರೆಗಳನ್ನು ಕೊಡುತ್ತಾರೆ ಈ ರೀತಿಯ ವ್ಯವಹಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಾಡುತ್ತಿದ್ದಾರೆ .

ಹಾಗಾದರೆ ನಮ್ಮ ಭಾರತ ದೇಶದ ಕೂದಲಿಗೆ ಯಾಕೆ ಇಷ್ಟು ಬೆಲೆ ಅಂತ ಹೇಳೋದಾದರೆ ನಮ್ಮ ಭಾರತ ದೇಶದ ಜನರ ಕೂದಲು ತುಂಬಾನೇ ಮೃದುವಾಗಿರುವ ಕಾರಣದಿಂದಾಗಿ ಇದನ್ನು ಬೇರೆ ಬೇರೆ ಶೈಲಿಯಾಗಿ ಮಾಡುವುದಕ್ಕೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಆದ್ದರಿಂದ ನಮ್ಮ ದೇಶದ ಕೂದಲಿಗೆ ಅಷ್ಟು ಬೆಲೆ ಅಂತ ಹೇಳಬಹುದು .