Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ಪದೇ ಪದೇ ತೊಂದರೆ ಕೊಡುವ ಗ್ಯಾಸ್ ಸಮಸ್ಯೆಗೆ ಸರಳ ಟಿಪ್ಸ್ ಗಳು.! ಸಿಂಪಲ್ಲಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸಿ

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ವಯೋಮಿತಿ ಇಲ್ಲದೇ ಎಲ್ಲರನ್ನೂ ಕಾಡುವಂತಹ ಆ ಒಂದು ಆರೋಗ್ಯ ಸಮಸ್ಯೆಯೆಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ, ಹೌದು ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಾವು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕಾಣಬಹುದಾಗಿದ್ದು ಗ್ಯಾಸ್ಟ್ರಿಕ್ ಸಮಸ್ಯೆ ಬಂದರೆ ತುಂಬಾನೇ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಹಾಗೆಯೇ ಸಾಮಾಜಿಕವಾಗಿ ಯಾರೊಂದಿಗೂ ಬೆರೆಯುವುದಕ್ಕೆ ಕೂಡ ಸಾಧ್ಯವಾಗದೆ ಇರುವ ಹಾಗೆ ಮಾಡಿಬಿಡುತ್ತದೆ. ಈ ಗ್ಯಾಸ್ಟ್ರಿಕ್ ಸಮಸ್ಯೆ ಆದ್ದರಿಂದ ನಿಮ್ಮಲ್ಲಿಯೂ ಇಂತಹ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತಿದ್ದರೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳದೇ ನಾವು ಹೇಳುವ ಸುಲಭ ಮನೆಮದ್ದನ್ನು ಪಾಲಿಸಿ.

ಹಾಗಾದರೆ ಈ ದಿನದ ಮಾಹಿತಿಯಲ್ಲಿ ನಾವು ತಿಳಿಯೋಣ ಗ್ಯಾಸ್ಟ್ರಿಕ್ ಸಮಸ್ಯೆಗೆ ಯಾವ ಮನೆ ಮದ್ದನ್ನು ಪಾಲಿಸುವುದರಿಂದ ಬೇಗನೆ ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಶಮನ ಪಡೆಯಬಹುದು ಎಂದು.

ಹಾಗಾದರೆ ತಿಳಿಯೋಣ ಬನ್ನಿ ಸ್ನೇಹಿತರ ಇಂದಿನ ಮಾಹಿತಿಯಲ್ಲಿ ರಾಷ್ಟ್ರ ಸಮಸ್ಯೆಯನ್ನು ಮನೆಯಲ್ಲಿಯೆ ಹೇಗೆ ದೂರ ಮಾಡಿಕೊಳ್ಳುವುದು ಎಂದು, ಹಾಗೆ ಇಂತಹ ನೈಸರ್ಗಿಕವಾದ ಪದಾರ್ಥಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ಅಡ್ಡ ಪರಿಣಾಮಗಳು ಕೂಡ ಆಗುವುದಿಲ್ಲ.

* ಬೆಳ್ಳುಳ್ಳಿ ..
ಹೌದು ಸ್ನೇಹಿತರೆ ಬೆಳ್ಳುಳ್ಳಿಯಲ್ಲಿ ಸಾಕಷ್ಟು ಹಲವಾರು ರೀತಿಯ ಔಷಧಿಯ ಗುಣ ಇರುವ ಕಾರಣದಿಂದಾಗಿ ಈ ಬೆಳ್ಳುಳ್ಳಿ ಯಾವುದೇ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದ್ದು, ಬೆಳ್ಳುಳ್ಳಿಯನ್ನು ಪ್ರತಿದಿನ ಹಸಿಯಾಗಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಯಾವ ಸಮಸ್ಯೆಗಳಾಗಲಿ ದೂರವಾಗುತ್ತದೆ. ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಶಮನ ಮಾಡುತ್ತದೆ ಬೆಳ್ಳುಳ್ಳಿ.

* ಓಮಿನ ಕಾಳು ಮತ್ತು ಉಪ್ಪು ..
ಓಮಿನ ಕಾಲಿನೊಂದಿಗೆ ಉಪ್ಪನ್ನು ಸೇರಿಸಿ ಜಗಿದು ರಸವನ್ನು ನುಂಗುವುದರಿಂದ ಬೇಕಾದ ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ ಹಾಗೆಯೇ ಈ ಮನೆ ಮದ್ದನ್ನು ಪಾಲಿಸುವುದರಿಂದ ಹೊಟ್ಟೆ ಉರಿ ಕೂಡ ಬೇಗನೆ ಕಡಿಮೆ ಆಗುತ್ತದೆ.

* ಬೆಳ್ಳುಳ್ಳಿಯ ನೀರು ..
ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಮೂರು ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿ ಆ ನೀರನ್ನು ಕುದಿಸಿ ಶೋಧಿಸಿ ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಹೊಟ್ಟೆ ನೋವಿನ ಸಮಸ್ಯೆಯಾಗಲಿ ಹಾಗೆಯೇ ಗ್ಯಾಸ್ಟಿಕ್ ಸಮಸ್ಯೆ ಆಗಲಿ ದೂರವಾಗುತ್ತದೆ.

* ಬೆಳ್ಳುಳ್ಳಿ ಮತ್ತು ಇಂಗು ..
ಊಟದ ಮೊದಲು ಬೆಳ್ಳುಳ್ಳಿಯೊಂದಿಗೆ ಇಂಗನ್ನು ಬೆರೆಸಿ ಜಗಿದು ರಸವನ್ನು ನುಂಗಿದರೆ ಸಾಕು ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ ಹಾಗೂ ಹೊಟ್ಟೆ ಉರಿಯಿಂದ ಹೆಚ್ಚು ಊಟ ಮಾಡೋದಕ್ಕೆ ಸಾಧ್ಯವಾಗುತ್ತಿಲ್ಲವಾ ಅಂಥವರು ಊಟದ ಮೊದಲು ಈ ಮನೆ ಅದನ್ನು ಪಾಲಿಸಿ, ಹಸಿವಾಗುತ್ತದೆ ಜೊತೆಗೆ ಗ್ಯಾಸ್ಟಿಕ್ ಕೂಡ ದೂರವಾಗುತ್ತದೆ.

* ಶುಂಠಿ ನಿಂಬೆ ರಸ ಮತ್ತು ಉಪ್ಪು ..
ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಶುಂಠಿ ಜಜ್ಜಿ ಹಾಕಿ ನಿಂಬೆಹಣ್ಣಿನ ರಸವನ್ನು ಹಾಕಿ ಕುದಿಸಿ ನಂತರ ಅದಕ್ಕೆ ಚಿಟಿಕೆ ಉಪ್ಪನ್ನು ಹಾಕಿ ನೀರನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.

* ಜೀರಿಗೆ ಮತ್ತು ಬೆಳ್ಳುಳ್ಳಿ ..
ಒಂದು ಗ್ಲಾಸ್ ನೀರನ್ನು ಕುದಿಸಿ ಅದಕ್ಕೆ ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಆಕೆ ನೀರನ್ನು ಕುದಿಸಿ ಆ ನೀರನ್ನು ಕುಡಿಯುವುದರಿಂದ ಕೂಡ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ದೂರವಾಗುವುದರ ಜೊತೆಗೆ ಗ್ಯಾಸ್ಟ್ರಿಕ್ ನಿವಾರಣೆಯಾಗುತ್ತದೆ.

ಇದಿಷ್ಟು ಮನೆಯಲ್ಲಿಯೇ ಮಾಡಬಹುದಾದಂತಹ ಸುಲಭವಾದ ಮನೆ ಮದ್ದುಗಳಾಗಿದ್ದು, ಗ್ಯಾಸ್ಟ್ರಿಕ್ ಸಮಸ್ಯೆ ಬಂದರೆ ತಕ್ಷಣವೇ ಇದನ್ನು ಪಾಲಿಸಿ ಹಾಗೆ ಗ್ಯಾಸ್ಟಿಕ್ ಸಮಸ್ಯೆ ಬಾರದೇ ಇರುವ ಹಾಗೆ ನೋಡಿಕೊಳ್ಳುವುದಕ್ಕಾಗಿ ಪ್ರತಿ ದಿನ ಎರಡರಿಂದ ಮೂರು ಲೀಟರ್ ನೀರನ್ನು ತಪ್ಪದೇ ಸೇವಿಸಿ.