Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪುರುಷನ ನರ ದೌರ್ಬಲ್ಯ ನಿವಾರಣೆಗೆ ಖರ್ಜೂರವನ್ನು ಕಪ್ಪು ಹಸುವಿನ ಹಾಲಿನೊಂದಿ ಹೀಗೆ ಮಾಡಿ ಸೇವಿಸಿ..!!

ಖರ್ಜೂರ ಶಕ್ತಿವರ್ಧಕ ಹಾರ, ಮಕ್ಕಳಿಗೆ ಕಚ್ಚಿ ತಿನ್ನುವ ಸಲುವಾಗಿ ಖರ್ಜೂರ ಕೊಡುವುದು ಬಹಳ ಒಳ್ಳೆಯದು, ಮಧುಮೇಹ ರೋಗಿಗಳು ಸಿಹಿ ತಿನ್ನಲು ಇಚ್ಚಿಸಿದಾಗ ಖರ್ಜೂರ ತಿನ್ನುವುದು ಲೇಸು, ಮೂಲವ್ಯಾಧಿಯಿಂದ ಬಳಲುವವರು ಕರ್ಜೂರ ಸೇವಿಸುವುದರಿಂದ ಗುಣ ಉಂಟು.

ಇನ್ನು ಆಮಶಂಕೆ ಅತಿಸಾರ ರೋಗಗಳಿಂದ ನರಳುವವರು ಕರ್ಜೂರ ಸೇವಿಸುತ್ತಿದ್ದಲ್ಲಿ ಉಪಶಮನವಾಗುವುದು.ಒಂದು ಹಿಡಿ ಬೀಜ ತೆಗೆದ ಖರ್ಜೂರವನ್ನು ಹಸುವಿನ ಹಾಲಿನಲ್ಲಿ ಇಡೀ ರಾತ್ರಿ ನೆನೆ ಹಾಕಿ, ಮಾರನೆ ದಿನ ಬೆಳಗ್ಗೆ ಖರ್ಜೂರವನ್ನು ಅದೇ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ, ನಂತರ ಒಂದು ಚಿಟಿಕೆ ಏಲಕ್ಕಿ ಚೂರ್ಣ ಮತ್ತು ಎರಡು ಊಟದ ಚಮಚ ಜೇನು ತುಪ್ಪ ಅದರೊಡನೆ ಬೆರೆಸಿ,

ಈ ರಸಾಯನವನ್ನು ಪ್ರತಿದಿನ ಊಟದ ನಂತರ ದಿನಕ್ಕೆ ಎರಡು ಬಾರಿ ಒಂದು ಊಟದ ಚಮಚದಷ್ಟು ಸೇವಿಸುವುದರಿಂದ ರಕ್ತ ವೃದ್ಧಿಯಾಗುವುದು, ಸಂಭೋಗ ಸಾಮರ್ಥ್ಯ ಹೆಚ್ಚುವುದು, ನರ ದೌರ್ಬಲ್ಯ ನಿವಾರಣೆಯಾಗುವುದು, ಸಂತಾನ ಶಕ್ತಿ ವೃದ್ಧಿಯಾಗುವುದು ಮತ್ತು ಗರ್ಭಿಣಿಯರಿಗೆ ಉತ್ತಮ ಆಹಾರ.

ಜೊತೆಯಲ್ಲಿ ಓದಿ ಕರ್ಬೂಜ ಹಣ್ಣಿನ ಆರೋಗ್ಯ ಉಪಯೋಗಗಳು. ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಆಹಾರ ಸುಲಭವಾಗಿ ಮತ್ತು ಶೀಘ್ರವಾಗಿ ಜೀರ್ಣವಾಗುವುದು, ತಂಪು ಹೊತ್ತಿನಲ್ಲಿ ಮತ್ತು ಹಸಿದ ಹೊಟ್ಟೆಯಲ್ಲಿ ಈ ಹಣ್ಣು ತಿನ್ನುವುದು ಅನಾರೋಗ್ಯಕರ.

ಕರ್ಬೂಜದ ಹಣ್ಣನ್ನು ಸಕ್ಕರೆಯೊಂದಿಗೆ ತಿನ್ನಬಾರದು, ಬೆಲ್ಲ ವನ್ನಾಗಲಿ ಅಥವಾ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಮಿಶ್ರಣ ವನ್ನಾಗಲಿ ಬಳಸುವುದು ಆರೋಗ್ಯಕರ.ಕರ್ಬೂಜದ ಹಣ್ಣು ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು ಆದ್ದರಿಂದ ಚರ್ಮ ರೋಗಗಳಿಂದ ನರಳುವವರು ಈ ಹಣ್ಣು ಹೆಚ್ಚು ಹೆಚ್ಚು ಸೇವಿಸಿ ದರಿಂದ ಸಿಗುತ್ತದೆ.

ಖರ್ಬೂಜದ ಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಹಾಲಿನಂತಹ ದ್ರವ ತಯಾರಿಸಿ ಅದಕ್ಕೆ ಖರ್ಜೂರ ಮತ್ತು ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ವೀರ್ಯ ವೃದ್ಧಿಯಾಗುವುದು ಮತ್ತು ಸಂಭೋಗ ಕ್ರಿಯೆಯಲ್ಲಿ ಆಸಕ್ತಿ, ಹೆಚ್ಚು ಕಾಲ ಸಂಭೋಗ ಕ್ರಿಯೆ ನಡೆಸುವ ಸಾಮರ್ಥ್ಯ ಉಂಟಾಗುವುದು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.