Categories
ಭಕ್ತಿ ಮಾಹಿತಿ ಸಂಗ್ರಹ

ಪ್ರತಿದಿನ ಎರಡು ಬಾರಿ ದೇವರ ಮುಂದೆ ತುಪ್ಪದ ದೀಪ ಹಚ್ಚಿದರೆ ಏನು ಲಾಭ ಗೊತ್ತಾ…!

ಇತ್ತೀಚಿನ ಪೀಳಿಗೆಯವರು ಕಣ್ಣು ದೃಷ್ಟಿ ಕೆಟ್ಟ ಶಕ್ತಿ ಇದನ್ನೆಲ್ಲ ಅಷ್ಟಾಗಿ ನಂಬುವುದಿಲ್ಲ, ಯಾಕೆ ಅಂದರೆ ಅವೆಲ್ಲ ಮೂಢನಂಬಿಕೆಗಳು ಅದರಲ್ಲಿ ಏನೂ ಇಲ್ಲ ಅರ್ಥ ಅಂತ ಹೇಳ್ತಾರೆ, ಆದರೆ ಒಂದಲ್ಲ ಒಂದು ಬಾರಿ ಅವರ ಜೀವನದಲ್ಲಿ ಕಷ್ಟಗಳು ಎದುರಾದಾಗ ಅದಕ್ಕೆ ಮೂಲ ಕಾರಣ ನಮ್ಮ ಪೂರ್ವಜರು ಪಾಲಿಸುತ್ತಿದ್ದ ಕೆಲವೊಂದು ಪದ್ಧತಿ ಎಂದು ತಿಳಿದುಕೊಂಡ ನಂತರ ಅವರಿಗೂ ಕೂಡ ಅರಿವಾಗುತ್ತದೆ ನಮ್ಮ ಪೂರ್ವಜರು ಮಾಡಿರುವ ಪದ್ಧತಿಗಳು ಯಾವುದು ಕೂಡ ತಪ್ಪಲ್ಲ ಎಂದು.

ಮನೆಯಲ್ಲಿ ಧೂಪ ಹಾಕುವುದು ದೇವರ ಪೂಜೆಯನ್ನು ಮಾಡುವುದು ಮತ್ತು ದೇವರ ಪೂಜೆಯನ್ನು ಇಂತಹದ್ದೇ ಪದಾರ್ಥವನ್ನು ಬಳಸಿ ಪೂಜೆ ಮಾಡಬೇಕು ಅನ್ನುವುದೆಲ್ಲ ನಮ್ಮ ಸಂಪ್ರದಾಯದ ಒಂದು ವಿಚಾರವಾಗಿದ್ದು, ಅದನ್ನಾ ನಾವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಮನೆಯಲ್ಲಿ ಯಾವ ಪದಾರ್ಥಗಳನ್ನು ಬಳಸಬೇಕು ಧೂಪವನ್ನು ಹಾಕಬೇಕು,

ಯಾವ ಸಮಯದಲ್ಲಿ ಧೂಪವನ್ನು ಹಾಕಬೇಕು ಮತ್ತು ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಒಳಿತು ಎಂಬುದರ ಪ್ರತಿ ಮಾಹಿತಿಯನ್ನು ತಿಳಿಯೋಣ, ಇಂದಿನ ಮಾಹಿತಿಯಲ್ಲಿ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದು ಇನ್ನು ಮುಂದೆ ಈ ಒಂದು ಪದ್ಧತಿಯನ್ನು ನಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಬನ್ನಿ.

ಮೊದಲನೆಯದಾಗಿ ಮನೆಯಲ್ಲಿ ರೂಪಾ ಹಾಕುವಾಗ ಅಂದರೆ ದೇವರ ಪೂಜೆಯ ಕೊನೆಯಲ್ಲಿ ಕರ್ಪೂರದ ಧೂಪವನ್ನು ಹಾಕುವಾಗ ಕರ್ಪೂರ ದೊಂದಿಗೆ ಲವಂಗವನ್ನು ಹಾಕಿ ಧೂಪವನ್ನು ಹಾಕುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿ ದೂರವಾಗುತ್ತದೆ, ಮನೆಯಲ್ಲಿ ದೇವರ ಪೂಜೆಯನ್ನು ಪ್ರತಿದಿನ ಮಾಡಬೇಕು ಇಲ್ಲವಾದಲ್ಲಿ, ಆ ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರವೇಶವಾಗುತ್ತದೆ .

ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಳಾಗುತ್ತದೆ ಎಂದು ಹೇಳಲಾಗಿದ್ದು ಈ ಒಂದು ವಿಚಾರ ನೂರು ಪ್ರತಿಶತದಷ್ಟು ಸತ್ಯ ಅಂತ ಹೇಳಬಹುದು, ಯಾಕೆ ಅಂದರೆ ಎಲ್ಲಿ ದೇವರ ನಾಮಸ್ಮರಣೆಗೆ ಇರುವುದಿಲ್ಲವೋ ಎಲ್ಲಿ ದೇವರ ಜಪ ತಪಗಳು ಇರುವುದಿಲ್ಲವೋ ಅಂತಹವರ ಮನಸ್ಥಿತಿಯೂ ಬಹಳ ಕೆಟ್ಟದಾಗಿರುತ್ತದೆ ಅವರಿಗೆ ಏನು ಏಳಿಗೆಯೇ ಆಗುತ್ತಿರುವುದಿಲ್ಲ ಎಲ್ಲವೂ ಕೂಡ ವಿಫಲವೇ ಆಗುತ್ತಿರುತ್ತದೆ.

ಆದ ಕಾರಣ ಪ್ರತಿದಿನ ದೇವರ ಪೂಜೆಯನ್ನು ಮನೆಯಲ್ಲಿ ಮಾಡಿ ಜೊತೆಗೆ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ತುಪ್ಪದ ದೀಪವನ್ನು ಹಚ್ಚುವುದರಿಂದ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಕೆಟ್ಟ ಶಕ್ತಿಯ ಅಟ್ಟಹಾಸ ಅಲ್ಲಿ ಇರುವುದಿಲ್ಲ ಎಂದು ಹೇಳಲಾಗಿದೆ ಮತ್ತು ಮನೆಯಲ್ಲಿ ವಾರಕ್ಕೆ ಒಂದು ಬಾರಿ ಬೇವಿನ ಸೊಪ್ಪನ್ನು ಬಳಸಿ ಧೂಪವನ್ನು ಹಾಕುವುದರಿಂದ ಮನೆಯಲ್ಲಿರುವ ಸಣ್ಣ ಕ್ರಿಮಿ ಕೀಟಗಳ ನಾಶವಾಗುತ್ತದೆ.

ಕರ್ಪೂರ ದೊಂದಿಗೆ ಚಂದನವನ್ನು ಬೆರೆಸಿ ಮನೆಯಲ್ಲಿ ಧೂಪ ಹಾಕುವುದರಿಂದ ಇದು ಮನೆಯಲ್ಲಿ ದೈವಶಕ್ತಿಯನ್ನು ನೆಲೆಯೂರುವಂತೆ ಮಾಡುತ್ತದೆ. ಧೂಪವನ್ನು ಹಾಕುವಾಗ ಅದಕ್ಕೆ ತುಪ್ಪ ಮತ್ತು ಸಾಂಬ್ರಾಣಿ ಯನ್ನು ಹಾಕಿ ರೂಪವನ್ನು ಹಾಕುವುದರಿಂದ ಮನೆಯಲ್ಲಿರುವ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ.

ಈ ರೀತಿಯಾಗಿ ಧೂಪವನ್ನು ಹಾಕುವಾಗ ಕೆಲವೊಂದು ಪದಾರ್ಥಗಳನ್ನು, ಅದರೊಂದಿಗೆ ಹಾಕಿ ಪೂಜೆ ಮಾಡುವುದರಿಂದ ಅಥವಾ ಮನೆಯಲ್ಲಿ ಧೂಪ ಹಾಕುವುದರಿಂದ ಮನೆಯ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು, ಮನೆಯ ವಾತಾವರಣವನ್ನು ಉತ್ತಮವಾಗಿ ಇರಿಸಿಕೊಳ್ಳಬಹುದು.

ಮನೆಯಲ್ಲಿ ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮಾಡಿದರೆ ಉತ್ತಮ ಎಂದು ಹೇಳುವುದಾದರೆ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರ ಪೂಜೆಯನ್ನು ಮಾಡುವುದು ಉತ್ತಮ ಮತ್ತು ಸಂಜೆ ಸಮಯದಲ್ಲಿ ಗೋಧೂಳಿ ಸಮಯದಲ್ಲಿ ಅಂದರೆ ಸಂಜೆ ಆರರಿಂದ ಏಳು ಗಂಟೆಗಳ ಒಳಗೆ ದೇವರ ಪೂಜೆಯನ್ನು ಮಾಡುವುದು ಉತ್ತಮ ಎಂದು ಶಾಸ್ತ್ರ ತಿಳಿಸುತ್ತದೆ.