Categories
ಭಕ್ತಿ ಮಾಹಿತಿ ಸಂಗ್ರಹ

ಪ್ರಪಂಚದಲ್ಲಿ ಏಕೈಕ ವಿಷ್ಣು ಹಾಗೂ ಶಿವ ಒಟ್ಟಿಗೆ ಇರುವಂತಹ ಸ್ಥಳ ಇದೆ !!! ಈ ಕ್ಷೇತ್ರದ ಬಗ್ಗೆ ನೀವೇನಾದರೂ ಕೊಂಡರೆ ನಿಮ್ಮ ಭಕ್ತಿ ಹೆಚ್ಚಾಗುತ್ತದೆ !!!

ನಮ್ಮ ಭಾರತ ದೇಶದಲ್ಲಿ ಒಂದೊಂದು ದೇವಸ್ಥಾನಕ್ಕೆ ಒಂದೊಂದು ರೀತಿಯ ಕಥೆ ಹಾಗೂ ನಿದರ್ಶನಗಳು ತುಂಬಾ, ಹಾಗೂ ಒಂದೊಂದು ದೇವಸ್ಥಾನಕ್ಕೂ ಅದರದ್ದೇ ಆದಂತಹ ಒಂದು ಇತಿಹಾಸ ಇದ್ದೇ ಇರುತ್ತದೆ.

ಅದೇ ತರಹ ಪ್ರಪಂಚದಲ್ಲಿ ಏಕೈಕ ವಿಷ್ಣು ಹಾಗೂ ಶಿವ ಒಟ್ಟಿಗೆ ಇರುವಂತಹ ದೇವಸ್ಥಾನ ನಮ್ಮ ಕರ್ನಾಟಕ  ರಾಜ್ಯ ದಾವಣಗೆರೆ ಹರಿಹರ ಎನ್ನುವ ಪ್ರದೇಶದಲ್ಲಿ ನಿಮ್ಮ ನೋಡಬಹುದಾಗಿದೆ. ಇದರ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ನಿಮಗೆ ಈ ಲೇಖನದ ಮುಖಾಂತರ ಕೊಡುತ್ತೇವೆ.

ದಾವಣಗೆರೆ ಜಿಲ್ಲೆಯ ಅತ್ಯುತ್ತಮ ಪ್ರದೇಶ ಎಂದರೆ ಅದು ಹರಿಹರ, ಹೆಸರಿನಲ್ಲೇ ಇರುವಂತಹ ಈ ಊರಿನ ಹೆಸರು ಹರಿ ಮತ್ತು ಹರ, ಈ ತಾಲೂಕಿನಲ್ಲಿ ಶಿವ ಹಾಗೂ ವಿಷ್ಣು ಇಬ್ಬರೂ ಇರುವಂತಹ ಒಂದು ದೇವಸ್ಥಾನ ಇದೆ, ಈ ಜಾಗವನ್ನು ಹರಿಹರ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ.

ಬೆಂಗಳೂರಿಂದ ಕೇವಲ ಮುನ್ನೂರು ಕಿಲೋಮೀಟರ್ ದೂರದಿಂದ ಇರುವಂತಹ ಈ ಕ್ಷೇತ್ರ 1200 ಇಸವಿಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಪುರಾಣದ ಉಲ್ಲೇಖವಿದೆ. ಹೊಯ್ಸಳರ ಕಾಲದಲ್ಲಿ ಅನೇಕ ದೇವಸ್ಥಾನವನ್ನು ಕಟ್ಟಿಸಿದ್ದರು ಅವರು ಕಟ್ಟಿಸಿದ ದೇವಸ್ಥಾನ ಗಳು ಒಂದೇ ತರನಾಗಿ ಇರುತ್ತಿದ್ದವು ,

ಅದೇ ತರನಾಗಿ ಈ ದೇವಸ್ಥಾನವು ಕೂಡ ಅವರು ಕಟ್ಟಿಸುವ ಅಂತಹ ದೇವಸ್ಥಾನದ ಶೈಲಿಯಲ್ಲಿ ಇದೆ ಅದಕ್ಕೆ ಉದಾಹರಣೆ ದೇವಾಲಯದಲ್ಲಿ ಪ್ರವೇಶ ದ್ವಾರ, ಮುಖಮಂಟಪ, ಗರುಡಗಂಬ, ಸುಖನಾಸಿ ಹಾಗೂ ಭುವನೇಶ್ವರಿ ಹೊಂದಿವೆ.

ದೇವಸ್ಥಾನದ ಗರ್ಭಗುಡಿ ಒಳಗೆ ಹೋದರೆ ನಿಮಗೆ ಹರಿಹರನ ಮೂರ್ತಿ ನೋಡಬಹುದಾಗಿದೆ, ನಿಜವಾಗಲು ಹೋಗಿ ಹರಿಹರನ ಮೂರ್ತಿ ನೋಡಿದರೆ ನಿಮ್ಮ ಕಣ್ಣು ತುಂಬಿಕೊಳ್ಳುತ್ತದೆ, ಏಕೆಂದರೆ ನೀವು  ಹರಿಯ ಅರ್ಧ ಮೂರ್ತಿ ಹಾಗೂ ಹರನ ಅರ್ಧ ಮೂರ್ತಿಯನ್ನು ನೀವು ಇಲ್ಲಿ ನೋಡಬಹುದಾಗಿದೆ. ಎರಡು ಮೂರ್ತಿಗಳು 4 ಕೈಯನ್ನು ಹೊಂದಿದ್ದು ಎರಡು ಕೈಯಲ್ಲಿ ತ್ರಿಶೂಲ ವನ್ನು ಹಿಡಿದುಕೊಂಡು ನಿಂತಿದ್ದಾರೆ. ಒಂದು ಕೈಯಲ್ಲಿ ಶಂಕು ಇದ್ದರೆ ಇನ್ನೊಂದು ಕೈಯಲ್ಲಿ ಅಭಯ ಮುದ್ರೆ ಕೂಡ ಇದೆ.

ಹಾಗೆ ಈ ದೇವಸ್ಥಾನದ ಒಳಗಡೆ ಉತ್ತಮವಾದ ಕೆತ್ತನೆಯನ್ನು ಮಾಡಿದ್ದು ಹಲವಾರು ತರನಾದ ಆ ಶಿಲೆಗಳನ್ನು ನೀವು ನೋಡಬಹುದು, ಒಂದೊಂದು ಕೆತ್ತನೆಯೂ ಕೂಡ ಆದರೆ ಹಿಂದಿನ ಕತೆಯನ್ನು ಹೇಳುವಂತೆ ಅದನ್ನು ಕೆತ್ತನೆ ಮಾಡಲಾಗಿದೆ. ನಿಮಗೆ ಸಮಯ ಏನಾದರೂ ಇದ್ದರೆ ಹರಿಹರಕ್ಕೆ ಹೋಗಿ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮ್ಮ ಕಣ್ಣುಗಳು ತುಂಬುವುದರಲ್ಲಿ ಯಾವುದೇ ಮಾತಿಲ್ಲ.

ಹರಿಹರದಲ್ಲಿ ಇರುವಂತಹ ಈ ದೇವಸ್ಥಾನದ ಹಿನ್ನೆಲೆಯಾದರೂ ಏನು ?

ಈ ದೇವಸ್ಥಾನ ತುಂಗಭದ್ರ ನದಿಯ ತಪ್ಪಲಿನಲ್ಲಿ ಇದ್ದು ಈ ದೇವಸ್ಥಾನಕ್ಕೆ ಒಂದು ಐತಿಹಾಸಿಕ ಹಿನ್ನೆಲೆ ಹಾಗೂ ಒಂದು ರೋಚಕ ಕತೆ ಕೂಡ ಇದೆ ಅದು ಏನು ಅಂತ ನಾವು ತಿಳಿದುಕೊಳ್ಳೋಣ, ಈ ಪ್ರದೇಶದಲ್ಲಿ ಒಬ್ಬ ರಾಕ್ಷಸ ಇದ್ದ ಅವನು ಈ ಪ್ರದೇಶವನ್ನು ತನ್ನ ಸಾಮ್ರಾಜ್ಯವಾಗಿ ಮಾಡಿಕೊಂಡಿದ್ದ. ಒಂದು ದಿನ ಬ್ರಹ್ಮನ ಕುರಿತು ಒಂದು ಕಠೋರವಾದ ಧ್ಯಾನವನ್ನು ಮಾಡಿ ಒಂದು ವರವನ್ನು ಕೇಳುತ್ತಾನೆ, ಅದು ನನಗೆ ಸಾವು ಬರಬಾರದು ಎನ್ನುವಂತಹ ವರ ವಾಗಿರುತ್ತದೆ.

ಇದನ್ನು ಆಲಿಸಿದ ಅಂತಹ ಬ್ರಹ್ಮ ಈ ತರದ ವರವನ್ನು ನಾನು ಕೊಡಲು ಆಗುವುದಿಲ್ಲ ಎಂದು  ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆ ಅನ್ನು ಮಾಡಿದಂತಹ ಆ ರಾಕ್ಷಸರನ್ನು ಹರಿ ಅಥವಾ ಹರ ನಿಂದ ಯಾವುದೇ ತೆರನಾದ ಸಾವು ಬರಬಾರದು ಎಂದು ಕೇಳಿಕೊಳ್ಳುತ್ತಾನೆ. ಹೀಗೆ ಕೇಳಿ ಕೊಟ್ಟಂತಹ ರಾಕ್ಷಸನ ಬೇಡಿಕೆಗೆ ಬ್ರಹ್ಮ ತಥಾಸ್ತು ಎಂದು ವರವನ್ನು ಕೊಡುತ್ತಾನೆ.

ಇವನ ಹೆಸರು ಗುಹಾಸುರ ಎಂದು. ಹೀಗೆ ವರವನ್ನು ಪಡೆದಂತಹ ಗುಹಾಸುರ ರಾಕ್ಷಸ ಮನುಷ್ಯರನ್ನು ಹಾಗೂ ದೇವರನ್ನು ಚಿತ್ರಹಿಂಸೆ ಕೊಡಲು ಶುರು ಮಾಡುತ್ತಾನೆ, ಅವನ ಟಾರ್ಚರ್ ಗಳಿಗೆ ಇಡೀ ದೇವರು ದೇವತೆಗಳು ಹಾಗು ಭೂಮಿಯಲ್ಲಿ ಇರುವಂತಹ ನರರು ರೋಸಿ ಹೋಗುತ್ತಾರೆ. ಎಲ್ಲರ ಒತ್ತಾಯದ ಮೇರೆಗೆ ಹರಿ ಮತ್ತು ಹರರ ಇಬ್ಬರು ಒಂದೇ ರೂಪವನ್ನು ತಾಳಿ ಈ ರಾಕ್ಷಸನನ್ನು ಸಂಹಾರ ಮಾಡುತ್ತಾರೆ. ಹೀಗೆ ಈ ರಾಕ್ಷಸನನ್ನು ಕೊಲ್ಲುವ ಮುನ್ನ ದೇವರು ಅವರೊಂದಿಗೆ ನಿನಗೆ ಏನು ಬೇಕು ಎಂದು ಕೇಳುತ್ತಾರೆ ಈ ಕ್ಷೇತ್ರವನ್ನು ನನ್ನ ಹೆಸರಿನಿಂದ ಕರೆಯಬೇಕು ಎನ್ನುವ ಕೊನೆಯ ಮಾತನ್ನು ಕೇಳುತ್ತಾನೆ. ಆದ್ದರಿಂದ ಈ ಕ್ಷೇತ್ರವನ್ನು ಗುಹಾರಣ್ಯ  ಕ್ಷೇತ್ರ ಎಂದು ಕೂಡ ಕರೆಯುತ್ತಾರೆ

ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಹಾಗು ಲೈಕ್ ಮಾಡಿ, ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.