Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಪ್ರೇಮ ವೈಫಲ್ಯ ಹಣಕಾಸಿನ ತೊಂದರೆ ಹಾಗೂ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವನ್ನು ಕೊಡುವಂತಹ ದೇವರು ಇವನು? ಈ ಪವಾಡವನ್ನು ಮಾಡುತ್ತಿರುವ ದೇವಸ್ಥಾನ ಎಲ್ಲಿದೆ ಗೊತ್ತಾ?

ಆಂಜನೇಯನ ನೀವು ಬೇಡಿಕೊಂಡರೆ ನಿಮಗೆ ಇರುವ ಕಷ್ಟಗಳು ಪರಿಹಾರವಾಗುತ್ತದೆ ಅದಕ್ಕಾಗಿ ಆಂಜನೇಯನನ್ನು ಕಷ್ಟ  ಪರಿಹಾರ ಮಾಡುವಂತಹ ದೇವರು ಎಂದು ಕರೆಯುತ್ತಾರೆ.

ಇಲ್ಲಿರುವ ಆಂಜನೇಯ ದೇವಸ್ಥಾನದಲ್ಲಿಬೇಡಿದರೆ  ನಿಮಗೆ ಏನಾದರೂ ಮಕ್ಕಳ ಸಮಸ್ಯೆ ಅಥವಾ ಮಕ್ಕಳೇ ಆಗಿಲ್ಲ ಎಂದರೆ ಹಾಗೂ ಪ್ರೇಮ ವೈಫಲ್ಯ ಅಥವಾ ಹಣಕಾಸಿನ ತೊಂದರೆ ಇದ್ದಲ್ಲಿ ಈ ದೇವಸ್ಥಾನಕ್ಕೆ ಬಂದು ಹೇಳಿಕೊಂಡರೆ ಇರುವಂತಹ ,

ತೊಂದರೆಗಳು  ಸಂಪೂರ್ಣವಾಗಿ ದೂರವಾಗುತ್ತವೆ. ಇತರ ಪವಾಡ ಮಾಡುತ್ತಿರುವ ಆಂಜನೇಯ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರಕ್ಕಾಗಿ ಮುಂದೆ ಓದಿ.

ನೀವು ಕೇಳಿರಬಹುದು ಈ ದೇವರ ಹೆಸರು ಹೊಳೆ ಆಂಜನೇಯ ಕ್ಷೇತ್ರವೆಂದು,  ಇದು ಇರುವುದು ನಮ್ಮ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿಯ ಮೇಲೆ ಇದೆ. ಮಂಡ್ಯದಲ್ಲಿ ಸಾಕಷ್ಟು ದೇವಸ್ಥಾನಗಳಲ್ಲಿ ಇದ್ದು ಈ ದೇವಸ್ಥಾನ ಅತಿ ಹೆಚ್ಚು ಪ್ರಖ್ಯಾತಿಯನ್ನು ಹೊಂದಿದೆ.

ಈ ದೇವಸ್ಥಾನಕ್ಕೆ  ಪುರಾತನ ಹಿನ್ನೆಲೆಯನ್ನು ಹೊಂದಿದ್ದು ಸಾಕಷ್ಟು ಜನರ ಹೆಗ್ಗಳಿಕೆಗೆ ಕಾರಣವಾಗಿದೆ. ಈ ದೇವಸ್ಥಾನವನ್ನು ಶ್ರೀಪಾದರು ಹಾಗೂ ಶ್ರೀ ವ್ಯಾಸರು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನುವ ಪ್ರತೀತಿ ಇದೆ.

ಈ ದೇವಸ್ಥಾನ 550 ವರ್ಷಗಳ ಹಿಂದಿನ ದೇವಸ್ಥಾನವಾಗಿದ್ದು ಇಲ್ಲಿ ದಿನಕ್ಕೆ ಸಾವಿರಾರು ಜನ  ಇಲ್ಲಿ ಬಂದು ಹೋಗುತ್ತಾರೆ, ಹಾಗೆ ಬಂದಂತಹ ಭಕ್ತಾದಿಗಳು ಈ ಸ್ವಾಮಿಗೆ ಅಭಿಷೇಕವನ್ನು ಮಾಡಿ  ಹೋಗುತ್ತಾರೆ. ಈ ತರಹ ಜನರ ನಂಬಿಕೆಗೆ ಪಾತ್ರವಾಗಿರುವ ಅಂತಹ ಈ ದೇವಸ್ಥಾನ ಕಟ್ಟಿಸಿರುವುದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಹಾಗೆ ಇಲ್ಲಿನ ಜನರು ಈ ಆಂಜನೇಯನು ಜಾಗೃತವಾಗಿ ಇಲ್ಲಿ ನೆಲೆಸಿದ್ದಾನೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಈ ಹೊಳೆ ಆಂಜನೇಯ ದೇವಸ್ಥಾನದ ವಿಶೇಷತೆ ಏನಾದರೂ ಏನು?

ಇಲ್ಲಿನ ಹೊಳೆ ಆಂಜನೇಯ ದೇವಸ್ಥಾನ ಎಲ್ಲಾ ಆಂಜನೇಯ ಮೂರ್ತಿಗೆ ವಿಚಿತ್ರವಾಗಿದೆ, ಈ ಆಂಜನೇಯನ ಮೂರ್ತಿಯ ವಿಗ್ರಹದಲ್ಲಿ ಅವನ ಕೈಯಲ್ಲಿ ಸೌಗಂಧಿಕಾ ಪುಷ್ಪವನ್ನು ಹಿಡಿದುಕೊಂಡು ಭೀಮನ ಅವತಾರದಲ್ಲಿ ನಿಂತಿರುವ ಹಾಗೆ ಕಾಣಿಸುತ್ತದೆ. ಹಾಗೆಯೇ ಹನುಮಾನ ಬಾಲದಲ್ಲಿ ಗಂಟೆಯ ಕೂಡ ಇದೆ, ಹನುಮಾನ ತಲೆಯಮೇಲೆ ಚಂದ್ರ ಹಾಗೂ ಸೂರ್ಯರು ಇದ್ದಾರೆ. ಹಾಗೆಯೇ ಇಲ್ಲಿನ ಹನುಮಂತನಿಗೆ ತಲೆಯಲ್ಲಿ ಜುಟ್ಟು ಇದೆ.

ವಿಚಿತ್ರವಾದ ಪೂಜೆಯ ಪದ್ಧತಿ ಇಲ್ಲಿ ನಡೆಯುತ್ತದೆ ಅಂತೆ?

ನೀವು ಯಾವ ದೇವಸ್ಥಾನಕ್ಕೆ ಆದರೂ ಹೋದರೆ ನೀವೇ ದೇವರಿಗೆ ಕಾಣಿಕೆಯನ್ನು ಕೊಡಬೇಕಾಗುತ್ತದೆ,  ಆದರೆ ಬೇರೆ ದೇವಸ್ಥಾನಕ್ಕೆ ಹೋಲಿಸಿದರೆ ಇಲ್ಲಿನ ಸಂಪ್ರದಾಯ ತದ್ವಿರುದ್ಧ. ಇಲ್ಲಿಗೆ ಪೂಜೆಗೆ ಬರುವಂತಹ ಭಕ್ತಾದಿಗಳಿಗೆ ಇಲ್ಲಿನ ಅರ್ಚಕರು ಒಂದು ರೂಪಾಯಿ ಕೊಡುತ್ತಾರೆ . ಹೀಗೆ ಕೊಡುವಂತಹ ಒಂದು ರೂಪಾಯಿ ಪ್ರಸಾದ ರೂಪದಲ್ಲಿ ಕೊಡುವಂತಹ  ಪ್ರಸಾದ ವಾಗಿರುತ್ತದೆ . ಇದನ್ನು ಭಕ್ತಿಯಿಂದ ಪೂಜೆ ಮಾಡಿದರೆ ನಿಮಗೆ ಇರುವಂತಹ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಜನರ ಮಾತಾಗಿದೆ ಹಾಗೆ ಒಳಿತನ್ನು ಕಂಡವರ ಅಭಿಪ್ರಾಯ ಕೂಡ ಆಗಿದೆ.

ನಿಮಗೇನಾದರೂ ಮಕ್ಕಳ ಸಮಸ್ಯೆ ಅಥವಾ ಉದ್ಯೋಗದ ಸಮಸ್ಯೆ ಅಥವಾ ಆರ್ಥಿಕವಾಗಿ ಸಮಸ್ಯೆ ಏನಾದರೂ ಇದ್ದಲ್ಲಿ ಹೊಳೆಯ ಅಂಜನೇಯ ದೇವಸ್ಥಾನಕ್ಕೆ ಭೇಟಿ ಕೊಡಿ ನಿಮಗೆ ಕಷ್ಟಗಳು ದೂರವಾಗುವುದು ಖಂಡಿತವಾಗಿ ಆಗುತ್ತದೆ. ನೀವೇನಾದರೂ ಈ ದೇವಸ್ಥಾನಕ್ಕೆ ಹೋಗಬೇಕೆಂದರೆ ನೀವು ಮದ್ದೂರಿನಲ್ಲಿ ಉಳಿದುಕೊಳ್ಳಬಹುದು. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿದರೆ ಮುಖಾಂತರ ನಮಗೆ ಹಂಚಿಕೊಳ್ಳಿ.