Categories
ಮಾಹಿತಿ ಸಂಗ್ರಹ

ಬಹು ಅಂಗಾಂಗ ವೈಫಲ್ಯದಿಂದ ಬುಲೆಟ್ ಪ್ರಕಾಶ್ ಇನ್ನಿಲ್ಲ .. ಅವರ ಆತ್ಮಕ್ಕೆ ಶಾಂತಿ ಸಿಗಲಿ

ಬುಲೆಟ್ ಪ್ರಕಾಶ್ ಅವರು 300ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಸಿನಿಮಾ ಕಾಮಿಡಿ ಆಕ್ಟರ್ ಅನ್ನುವಂತಹ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರು ಪ್ರತಿಯೊಬ್ಬರ ಮನಸ್ಸಿನಲ್ಲೂ ಮನೆಮಾತಾಗಿರುವ ಅಂತಹ ಬುಲೆಟ್ ಪ್ರಕಾಶ್ ಅವರು ಕಳೆದ ಎರಡು ಮೂರು ದಿನದಿಂದ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣದಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. 

ಮೂಲಗಳ ಪ್ರಕಾರ ಬಹು ಅಂಗಾಂಗ ವೈಫಲ್ಯದಿಂದ ಹಾಕಿ ಇವತ್ತು ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರನ್ನು ಬಿಟ್ಟಿದ್ದಾರೆ. ಇವರ ಈ ಅಗಲಿಕೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಹುದೊಡ್ಡ ಲಾಸ್ ಅಂತ ನಾವು ಹೇಳಬಹುದು. ಇನ್ನೊಂದು ವಿಚಾರ ಏನಪ್ಪಾ ಅಂದರೆ ಇವರ ವಯಸ್ಸು ಕೇವಲ 44 ವರ್ಷ, ಇಂಥ ಚಿಕ್ಕ ವಯಸ್ಸಿಗೆ ಇವರಿಗೆ ರೀತಿಯಾಗಿರುವುದು ನಿಜವಾಗ್ಲೂ ಮನಸ್ಸಿಗೆ ನೋವು ತರುವಂತಹ ವಿಚಾರ.