Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಹು ಉಪಯೋಗಿ ಸಪೋಟ ಅಥವಾ ಚಿಕ್ಕು ಹಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ ..!

ಚಿಕ್ಕು ಹಣ್ಣು ಹೌದು ಇದನ್ನು ಸಪೋಟ ಹಣ್ಣು ಅಂತ ಕೂಡ ಕರೆತಾರೆ ಬಹಳ ರುಚಿಯಾಗಿರುವ ಚಿಕ್ಕು ಹಣ್ಣನ್ನು ಬಳಸಿ ಜ್ಯೂಸ್ ಮಾಡುತ್ತಾರೆ ಮತ್ತು ಮಿಲ್ಕ್ ಶೇಕ್ ರೂಪದಲ್ಲಿ ಕೂಡ ಈ ಚಿಕ್ಕು ಹಣ್ಣನ್ನೂ ತಿನ್ನುವುದುಂಟು. ಚಿಕ್ಕು ಹಣ್ಣು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರ ಲಾಭಗಳನ್ನು ಕೂಡ ಹೊಂದಿದೆ ಅದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಇಂದಿನ ಈ ಲೇಖನದಲ್ಲಿ. ಹೌದು ಸಪೋಟ ಹಣ್ಣು ಎಷ್ಟು ರುಚಿ ಅದೊಂದೇ ನಮಗೆ ಗೊತ್ತು ಆದರೆ ಈ ಸಪೋಟ ಹಣ್ಣಿನ ಬಗ್ಗೆ ಇರುವ ಆರೋಗ್ಯಕರ ಲಾಭಗಳನ್ನು ಕುರಿತು ನಾವು ತಿಳಿದುಕೊಂಡಿರುವುದಿಲ್ಲ ನಿಮಗೆ ತಿಳಿಸಿಕೊಡುತ್ತೇವೆ ಈ ಚಿಕ್ಕು ಹಣ್ಣನ್ನು ಯಾರೆಲ್ಲ ಹೇಗೆ ಬಳಸುವುದರಿಂದ ನಾವು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು.

ಮೊದಲನೆಯದಾಗಿ ಸಪೋಟಾ ಹಣ್ಣಿನಲ್ಲಿ ಸಿ ಜೀವ ಸತ್ವ ಹೇರಳವಾಗಿರುತ್ತದೆ ಈ ಚಿಕ್ಕು ಹಣ್ಣಿನಲ್ಲಿ ಸುಮಾರು ಇಪ್ಪತ್ತ್ ಮೂರು ಪ್ರತಿಶತದಷ್ಟು ವಿಟಮಿನ್ ಸಿ ಅಂಶ ಇರುವುದನ್ನು ನಾವು ಗಮನಿಸಬಹುದಾಗಿದೆ. ಅದೇ ರೀತಿಯಲ್ಲಿ ಚಿಕ್ಕು ಹಣ್ಣಿನಲ್ಲಿ ವಿಟಮಿನ್ ಎ ಜೀವಸತ್ವ ಕೂಡ ಇದೆ ಹೌದು ವಿಟಮಿನ್ ಎ ಜೀವಸತ್ವ ಯಾವೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಅಂತ ನಾವು ತಿಳಿದಿದ್ದೇವೆ.

ಹೌದು ವಯಸ್ಸಾದ ನಂತರ ಈ ಕಣ್ಣಿನ ದೃಷ್ಟಿ ಕುಗ್ಗುವ ಸಾಧ್ಯತೆ ಇರುತ್ತದೆ ಇದಕ್ಕೆ ಕಾರಣ ಅಂದರೆ ವಿಟಮಿನ್ ಎ ಅಂಶದ ಕೊರತೆಯಿಂದಾಗಿ ಆಗಿರುತ್ತದೆ ಆದರೆ ನಾವು ಈ ಚಿಕ್ಕು ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಹೇರಳವಾಗಿ ವಿಟಮಿನ್ ಎ ಅಂಶ ದೊರೆತು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ದೃಷ್ಟಿ ಕುಗ್ಗುವುದು ಕಣ್ಣಿನಲ್ಲಿ ಪೊರೆ ಇಂತಹ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ.

ನಿಮಗಿದು ಗೊತ್ತಾ ಫ್ರೆಂಡ್ಸ್ ಚಿಕ್ಕು ಹಣ್ಣಿನಲ್ಲಿ ಸುಮಾರು ಎಂಬತ್ತ್ ಮೂರು ಪ್ರತಿಶತದಷ್ಟು ಕ್ಯಾಲೊರಿ ಇರುವುದನ್ನು ನಾವು ಗಮನಿಸಬಹುದಾಗಿದೆ, ಹಾಗಾಗಿ ನಾವು ಚಿಕ್ಕು ಹಣ್ಣನ್ನು ತಿನ್ನುವುದರಿಂದ ಎನರ್ಜಿಯನ್ನು ಕೂಡ ಪಡೆದುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಈ ಸಪೋಟ ಹಣ್ಣನ್ನು ತಿನ್ನುವುದರಿಂದ ಇನ್ನೂ ಆರೋಗ್ಯಕರ ಲಾಭಗಳೂ ಇವೆ, ಹೇಗೆ ಅಂದರೆ ಈ ಸಪೋಟ ಹಣ್ಣು ಸಿಹಿಯಾಗಿರುತ್ತದೆ ಇದು ನೈಸರ್ಗಿಕವಾದ ಸಿಹಿ ಆಗಿದ್ದು ನಮ್ಮ ದೇಹಕ್ಕೆ ಒಳ್ಳೆಯದು ಒಳ್ಳೆಯ ಶಕ್ತಿಯನ್ನು ನೀಡಿ ನಿಶ್ಶಕ್ತಿಯನ್ನು ದೂರ ಮಾಡುತ್ತದೆ.

ಚಿಕ್ಕು ಹಣ್ಣನ್ನು ಹಾಲುಣಿಸುವ ತಾಯಂದಿರು ಸೇವಿಸಬಹುದು ಈ ರೀತಿ ತಾಯಂದಿರು ಸೇವಿಸುವುದರಿಂದ ಅವರ ದೇಹಕ್ಕೆ ಬೇಕಾಗಿರುವಷ್ಟು ಪೋಷಕಾಂಶ ದೊರೆತು ಮಗುವಿನ ಆರೋಗ್ಯ ಕೂಡ ವೃದ್ಧಿಸುತ್ತದೆ ಹಾಗೆ ಗರ್ಭಿಣಿ ಸ್ತ್ರೀಯರು ಮಿತಿಯಾಗಿ ಸಪೋಟ ಹಣ್ಣನ್ನು ಸೇವಿಸಬಹುದು ಬೆಳಗಿನ ಸಮಯದಲ್ಲಿ ಈ ಸಪೋಟ ಹಣ್ಣನ್ನು ಸೇವಿಸುವುದರಿಂದ ಗರ್ಭಿಣಿ ಸ್ತ್ರೀಯರಲ್ಲಿ ಶಕ್ತಿ ಹೆಚ್ಚುತ್ತದೆ ಮತ್ತು ಸಪೋಟ ಹಣ್ಣಿನ ಜ್ಯೂಸ್ ಮಾಡಿ ಸೇವಿಸುವುದರಿಂದ ಕೂಡ ಗರ್ಭಿಣಿ ಸ್ತ್ರೀಯರಿಗೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ.

ಹಾಗಾದರೆ ತಪ್ಪದೆ ಪ್ರತಿಯೊಬ್ಬರೂ ಸಪೋಟ ಹಣ್ಣನ್ನು ತಿಂತೀರಾ ಅಲ್ವಾ ಸಪೋಟ ಹಣ್ಣನ್ನು ಸಿಹಿ ಇದೆಯೆಂದು ಸೇವಿಸಬೇಡಿ ಇದರಿಂದ ನಮಗೆ ಆರೋಗ್ಯಕರ ಲಾಭಗಳೂ ಇವೆ ಅನ್ನೋ ದೃಷ್ಟಿಯಿಂದ ಸಪೋಟ ಹಣ್ಣನ್ನು ಸೇವಿಸಿ, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.