Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಾಣಂತಿಯರ ಎದೆ ಹಾಲು ಹೆಚ್ಚಿಸಲು ಎಲ್ಲರು ಮಾಡಬಹುದಾದಂತಹ ಮನೆ ಮದ್ದು..!

ಮಗುವಾದ ನಂತರ ತಾಯಿಗೆ ಇನ್ನೂ ಜವಾಬ್ದಾರಿ ಹೆಚ್ಚುತ್ತದೆ ಕೆಲಸ ಕೂಡ ಹೆಚ್ಚುತ್ತದೆ ಯಾಕೆಂದರೆ ಮಗುವಿನ ಕೆಲಸ ಅಂದರೆ ಹಾಗೆ ಸ್ವಲ್ಪ ಇರುವುದಿಲ್ಲ ಮಗುವಾದ ನಂತರ ತಾಯಿಯ ಜವಾಬ್ದಾರಿಯ ಜೊತೆ ಕೆಲಸಗಳು ಕೂಡ ಹೆಚ್ಚುತ್ತಾ ಹೋಗುತ್ತದೆ. ಮಗು ಹುಟ್ಟಿದಾಗಿನಿಂದ ಆ ಮಗುವಿಗೆ 6ತಿಂಗಳಿನ ವರೆಗೂ ತಾಯಿಯ ಹಾಲು ಕಡ್ಡಾಯವಾಗಿರುತ್ತದೆ ಆಗಲೇ ಮಗುವಿಗೆ ಒಳ್ಳೆಯ ಪೋಷಕಾಂಶಗಳು ದೊರೆಯುವುದು ಮತ್ತು ಮಗುವಿನ ಆರೋಗ್ಯ ಹೆಚ್ಚಬೇಕೆಂದರೆ ಮಗುವಿಗೆ ತಾಯಿಯ ಹಾಲು ಅವಶ್ಯಕವಾಗಿರುತ್ತದೆ ಆದಕಾರಣ ತಾಯಂದಿರು ಮಗುವಿಗೆ 6ತಿಂಗಳಿನ ವರೆಗೂ ಆದರೂ ಖಡ್ಡಾಯವಾಗಿ ಹಾಲನ ಕೊಡಿಸಲೇಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಕೆಲ ಅಮ್ಮಂದಿರಲ್ಲಿ ಈ ಎದೆ ಹಾಲು ಹೆಚ್ಚು ತಿಂಗಳಿನವರೆಗೂ ಬರುವುದಿಲ್ಲ ಇನ್ನು ಕೆಲವರಿಗೆ ಎದೆಹಾಲು ಹೆಚ್ಚು ಉತ್ಪತ್ತಿಯಾಗುತ್ತಾ ಇರುವುದಿಲ್ಲ ಆದಕಾರಣ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಎದೆ ಹಾಲನ್ನು ಹೆಚ್ಚು ಮಾಡುವುದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು ಆ ಪರಿಹಾರಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಮತ್ತು ಮಗುವಾದ ತಾಯಿ ಮಗುವಿನ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಆಕೆ ಕೂಡ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಲೇಬೇಕು. ಇದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ ಮಗುವಿನ ಆರೋಗ್ಯ ವೃದ್ಧಿಸುತ್ತದೆ ತಾಯಿಯ ಆರೋಗ್ಯವೂ ಕೂಡ ಹೆಚ್ಚುತ್ತದೆ.

ಇನ್ನು ಎದೆ ಹಾಲನ್ನು ಹೆಚ್ಚು ಮಾಡುವುದಕ್ಕೆ ಮೆಂತೆಕಾಳು ತುಂಬಾ ಪರಿಣಾಮಕಾರಿ, ಹೌದು ಎದೆಹಾಲನ್ನು ವೃದ್ಧಿಸುವುದಕ್ಕಾಗಿ ಪ್ರತಿದಿನ ಮೆಂತ್ಯೆ ಕಾಳುಗಳನ್ನು ಅಲ್ಪ ಪ್ರಮಾಣದಲ್ಲಿ ಅಂದರೆ ಸ್ವಲ್ಪ ಪ್ರಮಾಣದಲ್ಲಿ ನೆನೆಸಿಟ್ಟು ಸೇವಿಸುತ್ತ ಬಂದರೆ ಸಾಕು ಮತ್ತು ಮೆಂತ್ಯ ಸೊಪ್ಪನ್ನು ಕೂಡ ಸೇವಿಸಬಹುದು ಹಾಗೆ ಎದೆ ಹಾಲನ್ನು ಹೆಚ್ಚು ಮಾಡುವುದಕ್ಕಾಗಿ ಹಸಿರು ಸೊಪ್ಪುಗಳನ್ನು ಸೇವಿಸಲೇಬೇಕು ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಐರನ್ ಅಂಶವು ರಕ್ತವನ್ನು ಹೆಚ್ಚು ಮಾಡುವುದಲ್ಲದೆ ರಕ್ತಹೀನತೆ ಸಮಸ್ಯೆ ದೂರ ಮಾಡುತ್ತದೆ. ಇನ್ನೂ ಅನೇಕ ಪೋಷಕಾಂಶಗಳನ್ನು ತಾಯಿಯ ದೇಹಕ್ಕೆ ನೀಡುವುದಲ್ಲದೆ ಎದೆಹಾಲನ್ನು ಕೂಡ ಹೆಚ್ಚು ಮಾಡುವುದಕ್ಕೆ ಸಹಕಾರಿ ಆಗಿರುತ್ತದೆ.

ಎದೆ ಹಾಲನ ವೃದ್ಧಿಸುವುದಕ್ಕೆ ಮನೆಯಲ್ಲಿಯೇ ಹಿರಿಯರು ತುಂಬಾ ಮನೆಮದ್ದುಗಳ ಮಾಡಿಕೊಳ್ಳುತ್ತಾ ಇದ್ದರೂ ಅದನ್ನು ನಾವು ಪಾಲಿಸಬಹುದು ಮತ್ತು ಕೆಲವೊಂದು ಸೊಪ್ಪುಗಳನ್ನು ತಿನ್ನುವುದರಿಂದ ಕೂಡ ಎದೆಹಾಲು ವೃದ್ದಿಸುತ್ತದೆ ಬೀಟ್ ರೂಟ್ ಕ್ಯಾರೆಟ್ ನಂಥ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬಹುದು ಮತ್ತು ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಕೂಡ ಒಳ್ಳೆಯ ಆರೋಗ್ಯ ಲಭಿಸುತ್ತದೆ ಇನ್ನೂ ತಾಯಂದಿರು ಕಾಫಿ ಟೀ ಬದಲು ಹಾಲನ್ನು ಕುಡಿಯಬಹುದು ಇದರಲ್ಲಿ ಉತ್ತಮವಾದ ಕ್ಯಾಲ್ಶಿಯಂ ಅಂಶ ಇದು ದೇಹಕ್ಕೆ ಒಳ್ಳೆಯ ಕ್ಯಾಲ್ಷಿಯಂ ದೊರೆತು ಹಾಲು ಇನ್ನೂ ಹೆಚ್ಚು ಉತ್ಪತ್ತಿಯಾಗುತ್ತದೆ.

ಬೆಳಗ್ಗಿನ ಎಳೆಬಿಸಿಲಿನಲ್ಲಿ ತಾಯಂದಿರು ಸ್ವಲ್ಪ ಸಮಯ ಇರಬೇಕಾಗುತ್ತದೆ ಮತ್ತು ಮಗುವಿಗೂ ಕೂಡ ಎಳೆಬಿಸಿಲಿನ ತೋರಿಸುವುದು ಒಳ್ಳೆಯದು. ಇನ್ನು ಬಾಣಂತಿಯ ಹೆಣ್ಣುಮಕ್ಕಳು ಅಂಟಿನುಂಡೆಯನ್ನು ಸೇವಿಸಬೇಕು ಇದರಿಂದ ಇದರಲ್ಲಿರುವಂತಹ ಡ್ರೈ ಫ್ರೂಟ್ಸ್ ಗಳು ಮತ್ತು ಅಂಟು ಬಾಣಂತಿಯರಿಗೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ. ಈ ರೀತಿಯಾಗಿ ಕೆಲವೊಂದು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ಹೆಣ್ಣುಮಕ್ಕಳು ತಮ್ಮ ಎದೆಹಾಲನ್ನು ಕೂಡ ಹೆಚ್ಚು ಮಾಡಿಕೊಳ್ಳಬಹುದು. ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೊಂದು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದ ಶುಭದಿನ.