Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಾಯಿಯಿಂದ ಬರುವ ಕೆಟ್ಟ ದುರ್ವಾಸನೆಗೆ ಸುಲಭ ಮನೆ ಮದ್ದಿನ ಉತ್ತಮ ಪರಿಹಾರ ಇಲ್ಲಿದೆ ನೋಡಿ ..!!

ಬಾಯಿಯ ದುರ್ವಾಸನೆ ನಮ್ಮನ್ನು ಅನೇಕ ಬಾರಿ ಮುಜುಗರಕ್ಕೆ ಒಳಗಾಗುವುದೂ, ಹಲ್ಲು ಮತ್ತು ಬಾಯಿಯ ಸ್ವಚ್ಛತೆಗೆ ಬಾಯಿಯ ದುರ್ವಾಸನೆಗೆ ಮುಖ್ಯ ಕಾರಣ,

ಸುಮಾರು ದಿನಗಳ ಕಾಲ ಹಲ್ಲಿನ ಅಸ್ವಚ್ಛತೆಯನ್ನು ಹಾಗೆ ಬಿಡುವುದರಿಂದ ಕೊನೆಗೆ ದುರ್ವಾಸನೆ ಪ್ರಾರಂಭವಾಗಿ ನಮ್ಮನ್ನು ಸಂಕಟಕ್ಕೆ ಗುರಿಮಾಡುತ್ತದೆ, ಬಾಯಿಯೂ ದುರ್ವಾಸನೆ ಬರದಂತೆ ಮುಂಜಾಗ್ರತೆ ಕ್ರಮಗಳು ಯಾವುದೆಂದು ಎಂದು ನಾವು ನಿಮಗೆ ತಿಳಿಸುತ್ತೇವೆ.

ಬಾಯಿಯ ದುರ್ವಾಸನೆಯನ್ನು ತಡೆಯಲು ಜಾಕಾಯಿ, ಏಲಕ್ಕಿ ಕಾಡುಗಳನ್ನು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಈ ಕಾಯಿಲೆಯಿಂದ ಕ್ರಮೇಣ ದೂರವಾಗಬಹುದು.

ದಂತ ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು, ಹಲ್ಲು ಹುಳುಕು ಅತಿಯಾದ ಹಲ್ಲು ನೋವು ಈ ರೀತಿಯ ಸಮಸ್ಯೆಗಳಿಗೆ ಯಾವ ಕಾರಣಕ್ಕೂ ನಿಧಾನ ಮಾಡಲೇ ಮೊದಲು ವೈದ್ಯರ ಸಂಪರ್ಕ ಮಾಡುವುದು ಒಳ್ಳೆಯದು.

ಪುದೀನಾ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುವುದು.

ಕೊತ್ತಂಬರಿ ಸೊಪ್ಪನ್ನು ಶುಭ್ರಗೊಳಿಸಿ ಅಗಿಯುವುದರಿಂದ ಬಾಯಿಯಲ್ಲಿ ಬರುವ ದುರ್ವಾಸನೆ ನಿವಾರಣೆಯಾಗುವುದು.

ಹಸಿ ಶುಂಠಿ, ಉಪ್ಪು, ಲವಂಗವನ್ನು ಚೆನ್ನಾಗಿರು ರುಬ್ಬಿ ಪೇಸ್ಟ್ ಮಾಡಿಕೊಂಡು, ಬಾಯಿಗೆ ಹಾಕಿಕೊಂಡು ಅಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುವುದು ಜೊತೆಯಲ್ಲಿ ನಾಲಿಗೆಯ ರುಚಿ ಹೆಚ್ಚುವುದು.

ಶ್ರೀಗಂಧವನ್ನು ಚೆನ್ನಾಗಿ ಗಂಧ ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಗೊಟಾಯಿಸ ಬೇಕು, ಹೀಗೆ ಗೊಟಾಯಿಸಿದ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

ರಾತ್ರಿ ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಸೊಂಪಿನ ಕಾಲನ್ನ ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಕೂಡ ಬಾಯಿಯ ದುರ್ಗಂಧ ನಿಲ್ಲುತ್ತದೆ.

ಗಮನಿಸಿ : ಬಾಯಿಯ ದುರ್ಗಂಧ ನಿವಾರಿಸಲು ಸೋಂಪು, ಏಲಕ್ಕಿ, ಜಾಕಾಯಿ ಮುಂತಾದ ಪದಾರ್ಥಗಳಲ್ಲಿ ಔಷದಿಯ ಗುಣಗಳು ಇರುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

ಬಾಯಿಂದ ಬರುವ ದುರ್ವಾಸನೆ ಬಗ್ಗೆ ನೀಡಲಾದ ಈ ಅದ್ಭುತ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.