Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬಿಳಿ ರಕ್ತ ಕಣ ಹೆಚ್ಚಿಸೋ ಆಹಾರಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ..!

ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪತ್ತಿ ಹೆಚ್ಚಾಗಬೇಕು ಅಂದರೆ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ. ಹಾಗಾದರೆ ಇಂದಿನ ಮಾಹಿತಿಯಲ್ಲಿ ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ಮತ್ತು ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುವಂತಹ ಆಹಾರ ಪದಾರ್ಥಗಳು ಯಾವುವು ಎಂಬ ಮಾಹಿತಿಯನ್ನು ನೀಡುತ್ತೇವೆ. ನೀವು ಕೂಡ ಈ ಆಹಾರ ಪದಾರ್ಥಗಳನ್ನು ಮಿತಿಯಾಗಿ ಸೇವಿಸುತ್ತಾ ಬನ್ನಿ .

ನಿಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಕೊಳ್ಳಿ ಹಾಗೆ ನೀವು ಕೂಡ ಈ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಹಾಗೆ ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಅನೇಕ ಆರೋಗ್ಯಕರ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ.

ಬಿಳಿ ರಕ್ತ ಕಣಗಳು ಅಂದರೆ ವೈಟ್ ಬ್ಲಡ್ ಸೆಲ್ಸ್ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಹಾಗೆ ಯಾವ ವೈರಸ್ ಮತ್ತು ಬ್ಯಾಕ್ಟೀರಿಯಾ ನಮ್ಮನ್ನು ದಾಳಿ ಮಾಡಿದರೂ ಕೂಡ ನಮ್ಮ ಆರೋಗ್ಯವನ್ನು ಕಾಪಾಡುವಂತಹ ಒಂದು ಕೆಲಸವನ್ನು ಈ ಬಿಳಿ ರಕ್ತಕಣಗಳು ಮಾಡುತ್ತದೆ. ಹಾಗಾದರೆ ಈ ಬಿಳಿ ರಕ್ತಕಣಗಳನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ನಾವು ಸೇವಿಸಬೇಕಾಗಿರುವ ಆಹಾರಗಳು ಯಾವುದು ಅಂದರೆ, ಮೊದಲನೆಯದಾಗಿ ಕಿತ್ತಳೆಹಣ್ಣು ಈ ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು, ನಾವು ದಿನಕ್ಕೆ ಒಂದು ಕಿತ್ತಳೆ ಹಣ್ಣು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಎರಡನೆಯದಾಗಿ ಕಿವಿಹಣ್ಣು ಹೌದು ಮಾರುಕಟ್ಟೆಯಲ್ಲಿ ಇದೀಗ ಹೆಚ್ಚಾಗಿ ಕಾಣಿಸಿಕೊಳ್ಳುವ ಕಿವಿ ಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ ನಮ್ಮ ದೇಶದಲ್ಲಿ ಬೆಳೆಯುವ ಹಣ್ಣು ಅಲ್ಲದಿದ್ದರೂ ಕೂಡ, ಈ ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಮತ್ತು ವಿಟಮಿನ್ ಕೆ ಅಂಶ ಹೇರಳವಾಗಿದೆ. ಈ ಕಿವಿ ಹಣ್ಣನ್ನು ನಾವು ಪ್ರತಿದಿನ ಒಂದರಂತೆ ಸೇವನೆ ಮಾಡುತ್ತ ಬರುವುದರಿಂದ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚುತ್ತದೆ.

ಮೂರನೆಯದಾಗಿ ಜೊವೆಗೋಧಿ, ಈ ಜೊವೆಗೋಧಿ ಯಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ ಈ ನಾವು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಯಾವುದಾದರೊಂದು ರೂಪದಲ್ಲಿ ಬಳಕೆ ಮಾಡುತ್ತ ಬರುವುದರಿಂದ ಅಧಿಕ ನಾರಿನಂಶ ನಮ್ಮ ದೇಹಕ್ಕೆ ದೊರೆಯುತ್ತದೆ. ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು ಇದೇ ರೀತಿಯಲ್ಲಿ ಹಣಬೆಲೆಯಲ್ಲಿಯೂ ಕೂಡ ಹೆಚ್ಚಿನ ಪೋಷಕಾಂಶವಿದ್ದು, ನಾರಿನಂಶ ಇರುವ ಆಹಾರವನ್ನು ಸಂಪೂರ್ಣವಾಗಿ ಜೀರ್ಣವಾಗಿಸಿ ಆರೋಗ್ಯವೂ ಉತ್ತಮವಾಗಿರುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಬಾದಾಮಿಯಲ್ಲಿ ಅಧಿಕವಾದ ವಿಟಮಿನ್ ಇ ಅಂಶ ಇತ್ತು ಸುಮಾರು ಐವತ್ತು ಪ್ರತಿಶತದಷ್ಟು ವಿಟಮಿನ್ ಈ ಅಂಶ ಈ ಬಾದಾಮಿಯಲ್ಲಿ ಇರುತ್ತದೆ. ಆದಕಾರಣ ನಾವು ಪ್ರತಿದಿನ ಬಾದಾಮಿಯನ್ನು ಅಲ್ಪಪ್ರಮಾಣದಲ್ಲಿ ತಿನ್ನುತ ಬರುವುದರಿಂದ ನಮಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಚರ್ಮದ ಆರೋಗ್ಯ ಕೂಡ ವೃದ್ಧಿಸುತ್ತದೆ. ಮೊಸರಿನಲ್ಲಿ ಉತ್ತಮ ಗುಣಮಟ್ಟದ ಬ್ಯಾಕ್ಟೀರಿಯಾ ಇದೆ. ಇದರಲ್ಲಿರುವ ಬ್ಯಾಕ್ಟೀರಿಯಾ ಆಹಾರವನ್ನು ಸಂಪೂರ್ಣವಾಗಿ ಜೀರ್ಣಮಾಡುತ್ತದೆ ಕರುಳಿನ ಆರೋಗ್ಯವನ್ನು ಕಾಪಾಡುವುದಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ವಿಟಮಿನ್ ಸಿ ಅಂಶ ಕೂಡ ಇದರಲ್ಲಿ ಹೆಚ್ಚಾಗಿಯೆ ಇದೆ.

ಈ ಕೆಲವೊಂದು ಆಹಾರ ಪದಾರ್ಥಗಳು ಉತ್ತಮ ಆರೋಗ್ಯವನ್ನು ಕೂಡ ನೀಡುತ್ತದೆ ಮತ್ತು ಹೆಚ್ಚಿನ ದಿನಗಳ ಕಾಲ ನಾವು ಆರೋಗ್ಯವಂತರಾಗಿ ಇರುವುದಕ್ಕಾಗಿ ಈ ಪದಾರ್ಥಗಳು ನಮ್ಮ ಆರೋಗ್ಯವನ್ನು ಸಹಕರಿಸುತ್ತದೆ ಮಾಹಿತಿ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ ಧನ್ಯವಾದ