Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬೀಜಗಳನ್ನ ಬಳಸುವುದರಿಂದ ಎಷ್ಟೆಲ್ಲಾ ಆರೋಗ್ಯಕ್ಕೆ ಲಾಭವಿದೆ ಗೊತ್ತಾ.!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಈ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತ ಇರುವ ಈ ಒಂದು ಮಾಹಿತಿ ಕಾಮಕಸ್ತೂರಿ ಬೀಜಗಳ ಬಗ್ಗೆ, ಕಾಮಕಸ್ತೂರಿ ಬೀಜದ ಬಗ್ಗೆ ಅಷ್ಟಾಗಿ ಜನರಲ್ಲಿ ಅರಿವು ಇಲ್ಲ ತಮಗೆ ಎದುರಾಗುವ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳ ಮೊರೆ ಹೋಗುತ್ತಾರೆ ಔಷಧಿಯ ಮೊರೆ ಹೋಗುತ್ತಾರೆ. ಆದರೆ ಈ ಕಾಮಕಸ್ತೂರಿ ಬೀಜದ ಪ್ರಯೋಜನವನ್ನು ನಾವು ಪಡೆದುಕೊಳ್ಳುತ್ತ ಬಂದರೆ ಅನೇಕ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮಾತ್ರೆಯ ಬಳಕೆ ಇಲ್ಲದೆ ನಾವು ನಮ್ಮ ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳನ್ನು ಬೇಗ ಪರಿಹಾರ ಮಾಡಿಕೊಳ್ಳಬಹುದು. ಅದರಲ್ಲಿಯೂ ಕಾಮಕಸ್ತೂರಿ ಬೀಜ ದೇಹಕ್ಕೆ ತುಂಬಾ ತಂಪು ಮತ್ತು ಆರೋಗ್ಯಕರ ಲಾಭಗಳನ್ನು ಕೂಡ ನೀಡುತ್ತದೆ.

ಇದೀಗ ತಿಳಿಯೋಣ ಕಾಮಕಸ್ತೂರಿ ಬೀಜದ ಒಂದೊಂದೆ ಪ್ರಯೋಜನಗಳ ಬಗ್ಗೆ ಯಾವೆಲ್ಲ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಬಲ್ಲದು ಕಾಮಕಸ್ತೂರಿ ಬೀಜ ಅನ್ನೋದನ್ನ ತಿಳಿಯೋಣ. ಹಾಗೆ ತಪ್ಪದೆ ನೀವು ಕೂಡ ಈ ಚಿಕ್ಕ ಪುಟ್ಟ ಸಮಸ್ಯೆಗಳಿಗೆಲ್ಲಾ ತಪ್ಪದೆ ಕಾಮಕಸ್ತೂರಿ ಬೀಜದ ಪ್ರಯೋಜನವನ್ನು ಪಡೆದುಕೊಳ್ಳಿ. ನೀವು ಕೂಡ ಈ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಈ ಉತ್ತಮ ಆರೋಗ್ಯಕರ ಮಾಹಿತಿಯನ್ನು ಶೇರ್ ಮಾಡಿ.

ಮೊದಲನೆಯದಾಗಿ ಕಾಮಕಸ್ತೂರಿ ಬೀಜವನ್ನು ರಾತ್ರಿಯೆಲ್ಲ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ನೀರನ್ನು ಶೋಧಿಸಿ ಅದಕ್ಕೆ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಆ ನೀರನ್ನು ಕುಡಿಯುವುದರಿಂದ ಗಂಟಲು ನೋವು ಶಮನವಾಗುತ್ತದೆ ಹೌದು ಗಂಟಲು ನೋವು ಅನೇಕ ಕಾರಣಗಳಿಂದ ಬರುತ್ತದೆ. ಆದರೆ ಈ ಗಂಟಲು ನೋವಿಗೆ ನೀವು ಬೇಗ ಶಮನವನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ಈ ಕಾಮಕಸ್ತೂರಿ ಬೀಜದ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿಡಬೇಕು ನಂತರ ಆ ನೀರಿಗೆ ಕಲ್ಲು ಸಕ್ಕರೆಯನ್ನು ಮಿಶ್ರಮಾಡಿ ಶರಬತ್ತು ಮಾಡಿಕೊಂಡು ಕುಡಿಯುತ್ತ ಬರುವುದರಿಂದ, ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ ಮತ್ತು ಈ ಕಾಮಕಸ್ತೂರಿ ಇಂದ ಮಾಡಿದಂತಹ ಶರಬತ್ತು ಉರಿಮೂತ್ರ ರಂತಹ ಸಮಸ್ಯೆಯನ್ನು ಕೂಡ ಪರಿಹರಿಸುತ್ತದೆ ಮತ್ತು ಹೊಟ್ಟೆ ಉಬ್ಬರ ಹೊಟ್ಟೆಯಲ್ಲಿ ಬಿಸಿ ಆಗುವ ಅನುಭವ ಆಗುತ್ತಿದ್ದರೂ ಕೂಡ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು.

ಕಾಮಕಸ್ತೂರಿಯ ಪ್ರಯೋಜನವನ್ನು ನೀವು ಪಡೆದುಕೊಳ್ಳುತ್ತ ಬರುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು ಇದನ್ನು ನೀವು ಸಾಕಷ್ಟು ಮಾಹಿತಿ ತಿಳಿದಿರುತ್ತದೆ ಆದರೆ ಕಾಮ್ ಕಾಮಕಸ್ತೂರಿ ಬೀಜವನ್ನು ನೀವು ಕೇವಲ ತೂಕ ಇಳಿಕೆಯಲ್ಲಿ ಅಲ್ಲ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಬಳಸಬಹುದಾಗಿದೆ. ಕಾಮಕಸ್ತೂರಿ ಬೀಜಗಳು ಸಾಮಾನ್ಯವಾಗಿ ಗ್ರಂಥಿಗೆ ಅಂಗಡಿಯಲ್ಲಿ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ ನೋಡಲು ಚಿಕ್ಕದಾಗಿರುವ ಈ ಕಾಮಕಸ್ತೂರಿ ಬೀಜ ನೀರಿನಲ್ಲಿ ಹಾಕಿದಾಗ ಇದರ ಗಾತ್ರವನ್ನು ಹುಬ್ಬಿಸಿಕೊಳ್ಳುತ್ತದೆ.

ಹಾಗಾದರೆ ಇವತ್ತಿನ ಈ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ಮಾಹಿತಿಗೆ ಒಂದು ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.