Categories
ಭಕ್ತಿ ಮಾಹಿತಿ ಸಂಗ್ರಹ

ಬೆಂಗಳೂರಿನಲ್ಲಿ ಇರುವಂತಹ ಶ್ರೀ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಕುರಿತು ನಿಮಗೇನಾದರೂ ಗೊತ್ತಾ ? ಸಮಯವಿದ್ದರೆ ಇಲ್ಲಿಗೆ ಒಂದು ಸಾರಿ ಹೋಗಿ ಬನ್ನಿ !!

ಒಂದು ಕಾಲದಲ್ಲಿ ಬೆಂಗಳೂರು ಅನ್ನುವುದು ಒಂದು ಚಿಕ್ಕ ಹಳ್ಳಿಯ ಹಾಗೆ ಇದು ಅಲ್ಲಿ ಹಲವಾರು ಗಿಡ ಮರಗಳು ಬೆಳೆದು ಕೊಂಡು ದೊಡ್ಡ ಅರಣ್ಯ ವಾಗಿ ಬೆಳೆದು ನಿಂತಿತ್ತು,

ಆದರೆ ಇವಾಗ ಬೆಂಗಳೂರು ಅನ್ನುವುದು ಅಕ್ಷರ ಸಹ ಒಂದು ದೊಡ್ಡ ಪಟ್ಟಣವಾಗಿ ಹೊರಹೊಮ್ಮಿದೆ. ಆದರೆ ಪಟ್ಟಣಗಳು ದೊಡ್ಡದಾಗಿ ಬೆಳೆದರು ಹಳೆ ಕಾಲದಲ್ಲಿ ಇರುವಂತಹ ದೇವಸ್ಥಾನಗಳು ಹಾಗೂ ಅದರ ಕುರುಹುಗಳು  ಯಾವಾಗಲೂ ಹಾಗೆಯೇ ಇರುತ್ತವೆ.

ಇವತ್ತು  ನಾನು ನಿಮಗೆ ಹೇಳುವಂತಹ ಒಂದು ವಿಶೇಷವಾದ ದೇವಸ್ಥಾನ ಅದು ಬೆಂಗಳೂರಿನಲ್ಲಿ ಇರುವಂತಹ ಶ್ರೀ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಕುರಿತು.

ಹಾಗಾದರೆ ಬನ್ನಿ ಈ ದೇವಸ್ಥಾನದ ಬಗ್ಗೆ ಯಾವ ತರಹದ ವಿಶೇಷತೆಗಳು ಇವೆ ನೋದನ್ನ ತಿಳಿದುಕೊಳ್ಳೋಣ. ಹಾಗಾದರೆ ಈ ಸ್ಥಳ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದು .

ಬೆಂಗಳೂರಿನಲ್ಲಿ ಇರುವಂತಹ ಮಲ್ಲೇಶ್ವರಂ ಎನ್ನುವ ಸ್ಥಳದಲ್ಲಿ ಇಲ್ಲಿಗೆ ವ್ಯಾಪಾರದ ರೂಪ ದಲ್ಲಿ ಬರುವಂತಹ ಜನರು ಈ ಪ್ರದೇಶದಲ್ಲಿ ಬಂದು ವಿಶ್ರಾಂತಿಯನ್ನು ಪಡೆದು ಕೊಂಡು ಹೋಗುತ್ತಿದ್ದರಂತೆ, ಹೀಗೆ ವ್ಯಾಪಾರಕ್ಕೆ ಬಂದಂತಹ ಜನರಿಗೆ ಅವತ್ತು ಒಂದಿನ ಒಂದು ಚಕಿತ ವಾದಂತಹ ವಿಶೇಷತೆ ಉಂಟಾಯಿತಂತೆ ಅದು ಏನಪ್ಪ ಅಂದರೆ.

ವ್ಯಾಪಾರಕ್ಕೆ ಬಂದಂತಹ ಕೆಲವು ಜನರು ಈ ದೇವಸ್ಥಾನದ ಹತ್ತಿರ ಒಂದು ದಿನ ಮಲಗಿ ಕೊಂಡು ಹೋಗಲು ಯೋಚನೆ ಮಾಡಿ ಅವತ್ತಿನ ರಾತ್ರಿ ಅಲ್ಲೇ ಅಡುಗೆಯನ್ನು ತಯಾರಿ ಮಾಡಲು ಯೋಜನೆ ಮಾಡಿದರಂತೆ. ಹೀಗೆ ಆಲೋಚನೆ ಮಾಡಿದಂತಹ ಈ ಜನರಿಗೆ ಅವತ್ತೊಂದು ದಿನ ಒಂದು ವಿಚಿತ್ರವಾದ ಘಟನೆ ನಡೆಯಿತು.

ಆ ಘಟನೆ ಏನಪ್ಪಾ ಅಂದರೆ ಅವರು ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಅವರು ಬಳಕೆ ಮಾಡಿದಂತಹ ಪಾತ್ರೆಯ ಕೆಳಗೆ ಒಂದು ಲಿಂಗ ಪತ್ತೆಯಾಯಿತು. ನಂತರ ಈ ವಿಚಾರವನ್ನು ಅಲ್ಲಿನ ಜನರಿಗೆ ತಿಳಿಸಿದ ನಂತರ ಅಲ್ಲಿನ ಜನರು ಇದರ ಬಗ್ಗೆ ಸ್ವಲ್ಪ ಆಲೋಚನೆಯನ್ನು ಮಾಡಿ ಇಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಹೀಗೆ ಕಟ್ಟಿಸಿದಂತ ಹಾಕಿ ದೇವಸ್ಥಾನದ ಹೆಸರು ಶ್ರೀ ಮಲ್ಲಿಕಾರ್ಜುನ ಕಾಡು ದೇವಸ್ಥಾನ ಎಂದು.

ಇದನ್ನು 1898ರಲ್ಲಿ ದೊರೆ ಯಾರು ಅಂತ  ದೊರೆಯಾದ ಅಂತ ರಾಯ ಬಹುದ್ದೂರ್ ಎನ್ನುವವರು . ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ, ಈ ದೇವಸ್ಥಾನ ಇರುವುದು ಒಂದು ಗುಡ್ಡದ ಮೇಲೆ ಇದಕ್ಕೆ 40 ಮೆಟ್ಟಿಲುಗಳಿವೆ ಹಾಗೂ ವಿಶಾಲವಾದ ಜಾಗ ಕೂಡ ಈ ದೇವಸ್ಥಾನದ ಸುತ್ತ ಮುತ್ತಲ ನೀವು ನೋಡಬಹುದಾಗಿದೆ. ಈ ದೇವಸ್ಥಾನದ ಹೊರಗಡೆ ನೀವು ಅರ್ಧ ಅಡಿ ಎತ್ತರ ಇರುವಂತಹ ಒಂದು ಶಿವಲಿಂಗವನ್ನು ಕೂಡ ನೋಡಬಹುದು. ಅದಲ್ಲದೆ ಬಲಭಾಗದಲ್ಲಿ ಕಾಶಿ ವಿಶ್ವನಾಥ ಹಾಗೂ ಗಣಪತಿಯ ವಿಗ್ರಹಗಳನ್ನು ಕೂಡ ಪ್ರತಿಷ್ಠಾಪನೆ ಮಾಡಲಾಗಿದೆ.

ಅದಲ್ಲದೆ ಎರಡು ಕೈಯಲ್ಲಿ ಕಮಲವನ್ನು ಹಿಡಿದುಕೊಂಡು ಹಾಗೂ ಇನ್ನೊಂದು ಕೈಯಲ್ಲಿ ಚಕ್ರವನ್ನೂ ಹಿಡಿದುಕೊಂಡಿರುವ ಅಂತಹ ಬ್ರಹ್ಮ ರಾಮ ದೇವಿಯನ್ನು ಕೂಡ ನೀವು. ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.