Categories
ಮಾಹಿತಿ ಸಂಗ್ರಹ

ಬೆಕ್ಕಿನ ಮರಿಗಳು ಎಂದುಕೊಂಡು ಮನೆಗೆ ತಂದ ಹುಡುಗ ನಂತರ ಆಗಿದ್ದೇನು…

ಹಲೋ ಫ್ರೆಂಡ್ಸ್ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಒಂದು ಪ್ರಾಣಿ ಮತ್ತು ಮಗುವಿನ ನಡುವೆ ಬೆಳೆದ ಒಂದು ಬಾಂಧವ್ಯದ ಕಥೆಯನ್ನು ಹಾಗೂ ಆ ಚಿರತೆ ಮರಿಗಳನ್ನು ಬೆಕ್ಕಿನ ಮರಿ ಎಂದು ತಂದು ಸಾಕಿದ ಆ ಪುಟ್ಟ ಹುಡುಗ ನಿಜಕ್ಕೂ ಧೈರ್ಯಶಾಲಿ ಅಲ್ವಾ ಹಾಗಾದರೆ,

ಆ ಹುಡುಗ ಮತ್ತು ಹುಲಿ ಮರಿಯ ಕತೆ ಏನಾಯ್ತು ಮುಂದೆ ಅನ್ನೋದನ್ನು ತಿಳಿಯೋಣ ಬನ್ನಿ ಈ ಕೆಳಗಿನ ಲೇಖನದಲ್ಲಿ ನೀವು ಕೂಡ ಈ ಕಥೆಯನ್ನು ಓದುತ್ತಿದ್ದರೆ ನಿಮ್ಮ ಫ್ರೆಂಡ್ಸ್ ಗಳೊಂದಿಗೂ ಕೂಡ ಇದನ್ನು ಶೇರ್ ಮಾಡಿ ಮತ್ತು ನಿಮಗೂ ಕೂಡ ಯಾವುದಾದರೂ ಪೆಟ್ಟ್ ಅನಿಮಲ್ ಇದ್ದರೆ ಅದನ್ನು ನಮಗೆ ಮಿಸ್ ಮಾಡದೇ ಕಾಮೆಂಟ್ ಮಾಡಿ.

ನಮ್ಮ ಬಾಲ್ಯದಲ್ಲಿ ನಾವು ಈ ರೀತಿ ಒಂದಲ್ಲ ಒಂದು ಬಾರಿ ಮಾಡಿಯೇ ಇರುತ್ತೇವೆ ಅದೇನೆಂದರೆ ರಸ್ತೆಗಳ ಅಕ್ಕಪಕ್ಕದಲ್ಲಿ ಯಾವುದಾದರೂ ಮುದ್ದಾದ ಬೆಕ್ಕಿನ ಮರಿ ನಾಯಿ ಮರಿಯನ್ನು ಅಥವಾ ಪಕ್ಷಿ ಮರಿಯೊ ಕಂಡರೆ ಅದನ್ನು ಮನೆಗೆ ತಂದು ಸಾಕುತ್ತಿದ್ದೆವು. ಅದೆಲ್ಲವೂ ಬಾಲ್ಯದ ಒಂದು ಸವಿ ಸವಿ ನೆನಪಾಗುತ್ತಿದ್ದವು .

ಅದೇ ರೀತಿಯಲ್ಲಿ ನಮ್ಮ ಈ ಕಥೆಯಲ್ಲಿಯೂ ಕೂಡ ಒಬ್ಬ ಪುಟಾಣಿ ಹುಡುಗ ಆ ಹುಡುಗ ಆಂಧ್ರಪ್ರದೇಶದ ವಿಶಾಖಪಟ್ಟಣಂ ಗೆ ಸೇರಿದ ಗುಂಡೂರು ಎಂಬ ಹಳ್ಳಿ ಅರಣ್ಯ ಪಕ್ಕದಲ್ಲಿಯೇ ಇದೆ ಈ ಊರಿನಲ್ಲಿ ಪುಟ್ಟ ಹುಡುಗ ಆಟವಾಡುತ್ತಿರುವಾಗ ಎರಡು ಮರಿಗಳನ್ನು ಕಂಡು ಅದು ಬೆಕ್ಕಿನ ಮರಿ ಎಂದು ಮನೆಗೆ ತಂದು ಸಾಕಿಕೊಂಡ.

ಆ ಎರಡು ಪುಟ್ಟ ಮರಿಗಳ ಜೊತೆ ಹೆಚ್ಚು ಬಾಂಧವ್ಯವನ್ನು ಮೂಡಿಸಿಕೊಂಡ ಹುಡುಗ ಪ್ರತಿದಿನ ಆ ಎರಡು ಮರಿಗಳೊಂದಿಗೆ ಆಟವನ್ನು ಆಡುತ್ತ ತನ್ನ ಸಮಯವನ್ನು ಕಳೆಯುತ್ತಿದ್ದ. ಸ್ವಲ್ಪ ದಿನಗಳು ಕಳೆದ ಮೇಲೆ ಊರಿನವರೆಲ್ಲ ಸೇರಿ ಆ ಮರಿಗಳನ್ನು ಸರಿಯಾಗಿ ಪರಿಶೀಲಿಸಿ ಅದು ಬೆಕ್ಕಿನ ಮರಿಗಳೆಲ್ಲ ಚಿರತೆಯ ಮರಿ ಎಂದು ಹೇಳಿದರೂ ನಂತರ ಈ ವಿಚಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಕೂಡ ತಿಳಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಆ ಹುಡುಗನ ಮನೆಗೆ ಬಂದು ಮರಿಗಳನ್ನು ಕರೆದುಕೊಂಡು ಹೋದರು.

ಹುಡುಗನು ಮರಿಗಳೊಂದಿಗೆ ಆಟವಾಡುತ್ತಾ ಸುಮಾರು ಏಳು ದಿನಗಳ ಕಾಲ ಕಳೆದು ಹೋಯಿತು ಆ ಮರಿಗಳಿಗೆ ಹಾಲುಣಿಸುವುದು ಮರಿಗಳ ಕೆಲಸ ಎಲ್ಲವನ್ನೂ ಕೂಡ ಉಡುಗೊರೆ ಮಾಡುತ್ತಿದ್ದ ಕಾರಣ ಅದರ ಜೊತೆ ಉತ್ತಮವಾದ ಬಾಂಧವ್ಯ ಕೂಡ ಬೆಳೆದಿತ್ತು ಆದರೆ ಆ ಮರಿಗಳನ್ನು ಕರೆದುಕೊಂಡು ಹೋಗುವಾಗ ಆತನಿಗೆ ಬಹಳ ಬೇಸರವಾಯಿತು ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಮಾತುಗಳನ್ನ ಕೇಳಿ ಊರಿನವರು ಶಾಕ್ ಆದರು.

ಅರಣ್ಯ ಇಲಾಖೆಯವರು ಊರಿನವರಿಗೆ ಹೇಳಿದ ಮಾತುಗಳೇನು ಅಂದರೆ ಆ ಹುಡುಗ ತುಂಬಾ ಅದೃಷ್ಟಶಾಲಿ ಯಾಕೆ ಅಂದರೆ ಆ ಮರಿಗಳ ತಾಯಿ ಮರಿಗಳನ್ನು ಕಳೆದುಕೊಂಡದ್ದಕ್ಕೆ ತುಂಬಾನೇ ಕೋಪ ಗೊಂಡಿರುತ್ತದೆ ಮರಿಗಳನ್ನು ಆ ಹುಡುಗನೇ ಎತ್ತಿಕೊಂಡು ಬರುವುದನ್ನು ಕಂಡಿದ್ದರೆ ಚಿರತೆ ಆ ಹುಡುಗನನ್ನು ಸುಮ್ಮನೆ ಬಿಡುತ್ತಿರಲಿಲ್ಲ .

ಎಂದು ಹೇಳಿದರೂ ಹಾಗೆ ಮನುಷ್ಯ ಕೂಡ ತನ್ನ ದುರಾಸೆಯಿಂದ ಆ ಹಳ್ಳಿಯ ಸುತ್ತ ಇರುವ ಅರಣ್ಯ ಪ್ರದೇಶಗಳನ್ನು ಸ್ವಚ್ಛ ಪಡಿಸಿಕೊಂಡು ವ್ಯವಸಾಯ ಮಾಡಲು ಶುರು ಮಾಡಿದ್ದರು ಆದರೆ ಚಿರತೆ ಅದು ಅರಣ್ಯ ಪ್ರದೇಶವೆಂದು ತನ್ನ ಮರಿಯನ್ನು ಅಲ್ಲೇ ಬಿಟ್ಟು ಬೇಟೆಯಾಡಲೆಂದು ಹೋಗಿತ್ತು. ಈ ಕಥೆಯಿಂದ ನಾವು ತಿಳಿದುಕೊಳ್ಳಬೇಕಾದದ್ದು ಏನು ಅಂದರೆ ಅರಣ್ಯವನ್ನು ಉಳಿಸಿ ಅರಣ್ಯವನ್ನು ಬೆಳೆಸಿ ಧನ್ಯವಾದ.