Categories
ಭಕ್ತಿ ಮಾಹಿತಿ ಸಂಗ್ರಹ

ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅಂತಾರೆ ಯಾಕೆ ಅಂತ ಗೊತ್ತ … ಅದರ ಹಿಂದಿನ ರಿಯಲ್ ಸ್ಟೋರಿ ಇಲ್ಲಿದೆ …

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಪ್ರಾಣಿಗಳೆಂದರೆ ಅತಿ ಹೆಚ್ಚು ಪ್ರೀತಿ ಅದರಲ್ಲೂ ಕೂಡ ಸಾಕು ಪ್ರಾಣಿಗಳೆಂದರೆ ‍ ಎಲ್ಲರಿಗೂ ಕೂಡ ಅತಿ ಹೆಚ್ಚು ಪ್ರೀತಿ ಅದರಲ್ಲೂ ಕೂಡ ನಾಯಿ ಹಸು ಬೆಕ್ಕು ಇವುಗಳನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಸಾಕಿರುತ್ತಾರೆ .

ಅವುಗಳನ್ನು ಮನೆ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ ಅವುಗಳಿಗೆ ಅಷ್ಟೇ ಆರೈಕೆಯನ್ನು ಮಾಡುತ್ತಾರೆ ಆದರೆ ಕೆಲವೊಂದು ವಿಷಯಗಳಲ್ಲಿ ಕೆಲವೊಂದು ಪ್ರಾಣಿಗಳ ವಿರುದ್ಧ ಕೆಲವೊಂದು ಮಾತುಗಳನ್ನು ನಾವು ಕೇಳಿರುತ್ತೇವೆ ಅದರಲ್ಲೂ ಸಾಮಾನ್ಯವಾಗಿ ಬೆಕ್ಕು ಬೆಕ್ಕಿನ ಬಗ್ಗೆ ಎಷ್ಟೊಂದು ನೆಗೆಟಿವ್ ಮಾತುಗಳನ್ನು ಕೇಳಿರುತ್ತೇವೆ ಎಂಬುದು ನಮಗೆ ತಿಳಿದಿದೆ.

ಅದು ಏನೆಂದರೆ ಬೆಕ್ಕು ಅಡ್ಡ ಬಂದರೆ ಅಪಶಕುನ ನಮಗೆ ಒಳ್ಳೆಯದಾಗುವುದಿಲ್ಲ ಕೆಡುಕಾಗುತ್ತದೆ ಎಂಬ ಮಾತುಗಳು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುತ್ತಿರುವುದನ್ನು ನಾವು ಗಮನಿಸಿರುತ್ತೇವೆ.

ಹಿಂದಿನವರು ಏನನ್ನು ಮಾಡಿದರೂ ಕೂಡ ಒಂದು ವೈಜ್ಞಾನಿಕ ಕಾರಣದಿಂದ ಮಾಡಿರುತ್ತಾರೆ ಯಾವುದೇ ಮೂಢನಂಬಿಕೆಗಳಿಂದ ಅವುಗಳನ್ನು ಬೆಳೆಸಿಕೊಂಡು ಬಂದಿರುವುದಿಲ್ಲ ಆದರೆ ಅದು ಬೆಳೆದಂತೆ ಬೆಳೆದಂತೆ ಮೂಢನಂಬಿಕೆಯಾಗಿ ಬದಲಾವಣೆಯಾಗಿ ಅದರ ಹಿಂದಿರುವ ವೈಜ್ಞಾನಿಕ ಕಾರಣವೇ ಮರೆತುಹೋಗಿರುತ್ತದೆ .

ಎಂಬುದು ನಮಗೆಲ್ಲ ತಿಳಿದಿರುವಂತಹ ವಿಷಯ ಬೆಕ್ಕು ಅಡ್ಡ ಬಂದರೆ ಕೆಟ್ಟದಾಗುತ್ತದೆ ಎಂಬುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಬಂದಿರುವುದು ಸಾಮಾನ್ಯ ಅದಕ್ಕಿರುವ ವೈಜ್ಞಾನಿಕ ಕಾರಣ ಏನೆಂದರೆ ಸಾಮಾನ್ಯವಾಗಿ ಬೆಕ್ಕು ಹಿಂದಿನ ಕಾಲದಲ್ಲಿ ಅದರಲ್ಲೂ ಕೂಡ ಕಾಡು ಬೆಕ್ಕು ಅತಿ ಹೆಚ್ಚಾಗಿ ಇರುತ್ತಿದ್ದವು ಅವು ಜನರು ಒಂದೂರಿನಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡುತ್ತಿರುವಾಗ ರಸ್ತೆಯಲ್ಲಿ ಅಡ್ಡ ಬರುತ್ತಿದ್ದವು .

ಹಿಂದಿನ ಕಾಲದಲ್ಲಿ ಒಂದೂರಿಂದ ಮತ್ತೊಂದು ಊರಿಗೆ ಹೋಗುವಾಗ ಯಾವುದೇ ವಾಹನಗಳನ್ನು ಬಳಸುತ್ತಿರಲಿಲ್ಲ ಕುದುರೆಗಾಡಿ ಅಥವಾ ಎತ್ತಿನ ಗಾಡಿಯನ್ನು ಬಳಸಿ ತಮ್ಮ ಪ್ರಯಾಣವನ್ನು ಬೆಳೆಸುತ್ತಿದ್ದರು ಅಂತಹ ಸಂದರ್ಭದಲ್ಲಿ ಬೆಕ್ಕುಗಳು ಅಡ್ಡ ಬಂದಾಗ ಅವುಗಳ ಕಣ್ಣಿನ ಬೆಳಕಿಗೆ ಎತ್ತು ಅಥವಾ ಕುದುರೆ ಹೆದರಿ ಓಡಿ ಹೋಗುತ್ತಿದ್ದವು.

ಅದರಿಂದ ಕೆಲವೊಬ್ಬರ ಸಾವು ಕೂಡ ಆಗುತ್ತಿತ್ತು ಅದರಿಂದ ಹೆಚ್ಚು ಹೆಚ್ಚಿನ ಅಪಘಾತ ಕೂಡ ಸಂಭವಿಸುತ್ತಿತ್ತು ಆದ ಕಾರಣದಿಂದಾಗಿ ಜನರು ಈ ರೀತಿ ಬೆಕ್ಕುಗಳ ಅಡ್ಡ ಬಂದಾಗ ಆ ಗಾಡಿಗಳನ್ನು ನಿಲ್ಲಿಸಿ ಎತ್ತು ಅಥವಾ ಕುದುರೆಗೆ ಸಮಾಧಾನ ಮಾಡಿಕೊಂಡು ಅವು ಸಮಾಧಾನವಾದ ನಂತರ ಆ ಸ್ಥಳದಿಂದ ಹೊರಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಯಾವ ಸಂದರ್ಭದಲ್ಲಾದರೂ ಸಹ ಬೆಕ್ಕು ಅಡ್ಡ ಬಂದರೆ ಒಂದು ಕ್ಷಣ ಸ್ಥಳದಲ್ಲಿ ನಿಂತು ಹೋಗುವುದು.

ವಾಡಿಕೆಯಾಗಿದೆ ಅದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ಮರೆತಿರುವ ಜನರು ಅದನ್ನು ಮೂಢನಂಬಿಕೆಯಾಗಿ ಬದಲಾವಣೆ ಮಾಡಿಕೊಂಡು ಈಗಿನ ಆಧುನಿಕ ಯುಗದಲ್ಲೂ ಕೂಡ ಬಾಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇನ್ನು ಮುಂದೆ ಆದರೂ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ಅಂದುಕೊಳ್ಳದೆ ನಿಮ್ಮ ಕೆಲಸವನ್ನು ನೀವು ಆರಾಮಾಗಿ ಮಾಡಿಕೊಳ್ಳಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ ಮತ್ತು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು.