Categories
ಅರೋಗ್ಯ ಆರೋಗ್ಯ ಮಾಹಿತಿ

ಬೆಳಗ್ಗೆ ಎದ್ದ ತಕ್ಷಣ ಸಕ್ಕತಾಗಿ ಮಲ ವಿಸರ್ಜನೆ ಆಗಬೇಕು ಅಂದ್ರೆ .. ಮಲಗುವ ಮುಂದೆ ಒಂದು ಚಿಟಿಕೆ ಈ ಪುಡಿಯನ್ನ ಹೀಗೆ ಬಳಕೆ ಮಾಡಿ

ಪ್ರತಿದಿನ ನಾವು ತಿಂದ ಆಹಾರ ನಂತರ ಜೀರ್ಣಕ್ರಿಯೆ ಯಾದ ಬಳಿಕ ಅದು ತ್ಯಾಜ್ಯ ವಸ್ತುವಾಗಿ ನಮ್ಮ ಹೊಟ್ಟೆಯಲ್ಲಿ ಇರುತ್ತದೆ ಅದನ್ನು ನಾವು ಮಾರನೆ ದಿವಸ ಬೆಳಿಗ್ಗೆ ಮಲವಿಸರ್ಜನೆಯ ಮುಖಾಂತರ ಹೊರಹಾಕಬೇಕಾಗುತ್ತದೆ.

ಈ ರೀತಿ ಮಲವಿಸರ್ಜನೆಯು ಪ್ರತಿದಿನ ಸಲೀಸಾಗಿ ಆಗದೇ ಇದ್ದಲ್ಲಿ ಮುಂದೆ ಒಂದು ದಿನ ಪೈಲ್ಸ್ ಅಂದರೆ ಮೂಲವ್ಯಾದಿ ಸಮಸ್ಯೆಯಂತಹ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ .

ಹಾಗಾದರೆ ಮೊದಲಿಗೆ ಯಾಕೆ ಪ್ರತಿದಿನ ಸರಿಯಾದ ಕ್ರಮದಲ್ಲಿ ಮಲವಿಸರ್ಜನೆ ಆಗುವುದಿಲ್ಲ ಎಂದು ತಿಳಿಯುವುದಾದರೆ ಇದಕ್ಕೆ ಕಾರಣವೇನು ಅಂದರೆ ಪ್ರತಿದಿನ ಆಹಾರವಾದ ಬಳಿಕ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯದೇ ಇದ್ದಲ್ಲಿ ಅಥವಾ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವ ಕಾರಣದಿಂದಾಗಿ ಈ ರೀತಿ ಸಮಸ್ಯೆಗಳು ಎದುರಾಗುತ್ತವೆ .

ಪ್ರತಿದಿನ ಮಲ ವಿಸರ್ಜನೆ ಮಾಡದೇ ಇದ್ದಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಇದೀಗ ತಿಳಿಯೋಣ , ಹೌದು ಪ್ರತಿದಿನ ಮಲ ವಿಸರ್ಜನೆ ಮಾಡದೇ ಇದ್ದಲ್ಲಿ ಮುಂದೆ ಒಂದು ದಿನ ಫೈಲ್ಸ್ ಅಂದರೆ ಮೂಲವ್ಯಾಧಿ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಎಂದು ಈ ಮೇಲೆ ತಿಳಿಸಿದ .

ಆದರೆ ಪ್ರತಿದಿನ ಮಲ ವಿಸರ್ಜನೆ ಮಾಡದೇ ಇದ್ದಲ್ಲಿ ಇನ್ನೂ ನಾನಾ ತರಹದ ಸಮಸ್ಯೆಗಳು ಎದುರಾಗುತ್ತವೆ ಅವುಗಳು ಏನು ಅಂದರೆ ಪ್ರತಿ ದಿನ ಸರಿಯಾದ ಕ್ರಮದಲ್ಲಿ ಮಲ ವಿಸರ್ಜನೆ ಮಾಡದೇ ಇದ್ದಲ್ಲಿ ಅಂದರೆ ಬೆಳಗ್ಗೆ ಸಮಯದಲ್ಲಿ ಮಲ ವಿಸರ್ಜನೆ ಮಾಡದೇ ಇದ್ದಾಗ ಆ ದಿನದಲ್ಲಿ ಹೊಟ್ಟೆಯಲ್ಲಿ ಕಿರಿಕಿರಿ ಅನಿಸುತ್ತಾ ಇರುತ್ತದೆ .

ಹೊಟ್ಟೆ ನೋವು ಬರುವುದು ಅಥವಾ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಕೂಡ ಇರಬಹುದು ಈ ರೀತಿ ಪ್ರತಿದಿನ ಮಲ ವಿಸರ್ಜನೆ ಮಾಡದೇ ಇದ್ದಾಗ ಸಮಸ್ಯೆಗಳು ಎದುರಾಗುತ್ತವೆ .

ಮಲವಿಸರ್ಜನೆ ಮಾಡದೇ ಇದ್ದಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗುವುದು ಏನು ಅಂದರೆ ಪ್ರತಿದಿನ ಸರಿಯಾಗಿ ಮಲ ವಿಸರ್ಜನೆ ಮಾಡದೇ ಇದ್ದಾಗ ಅದು ನಮ್ಮ ಮೆದುಳಿಗೆ ಅಡ್ಡ ಪರಿಣಾಮವಾಗಿ ಪರಿಣಮಿಸುತ್ತದೆ .
ಈ ಕಾರಣದಿಂದಾಗಿ ಪ್ರತಿ ದಿನ ಸರಿಯಾದ ಕ್ರಮದಲ್ಲಿ ಮಲ ವಿಸರ್ಜನೆ ಮಾಡಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಹಾಗಾದರೆ ಪ್ರತಿದಿನ ಸಲೀಸಾಗಿ ಮಲ ವಿಸರ್ಜನೆ ಮಾಡಬೇಕು ಅಂದರೆ ಏನು ಮಾಡಬೇಕು .

ಎಷ್ಟೇ ಪ್ರಯತ್ನಿಸಿದರೂ ಕೂಡ ಪ್ರತಿ ದಿನ ಬೆಳಗ್ಗೆ ಸಮಯದಲ್ಲಿಯೇ ಮಲ ವಿಸರ್ಜನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬುವವರು ಈ ರೀತಿಯ ಮನೆ ಮದ್ದನ್ನು ಪಾಲಿಸಿ ನೋಡಿ ನಿಜಕ್ಕೂ ನೀವು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದಾಗಿದೆ .

ಹೌದು ಸ್ನೇಹಿತರೆ ಪ್ರತಿ ಸಮಸ್ಯೆಗೂ ಕೂಡ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು ಎಂಬುದು ಏನೂ ಇಲ್ಲ ಕೆಲವೊಂದು ಸಮಸ್ಯೆಗಳಿಗೆ ಮನೆ ಮದ್ದೆ ಪರಿಹಾರವನ್ನು ದೊರಕಿಸಿಕೊಡುತ್ತದೆ .

ಈ ರೀತಿ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಈ ರೀತಿ ಮಾಡಿ ಅದೇನೆಂದರೆ ಸೋಂಪಿನ ಕಾಳು ಅಜ್ವೈನ್ ಮತ್ತು ಜೀರಿಗೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಹುರಿದು ಪುಡಿ ಮಾಡಿಕೊಳ್ಳಿ ನಂತರ ಬ್ಲ್ಯಾಕ್ ಸಾಲ್ಟ್ ಅಂದರೆ ಕಪ್ಪು ಉಪ್ಪನ್ನು ತೆಗೆದುಕೊಂಡು ಅದನ್ನು ಕೂಡ ಪುಡಿ ಮಾಡಿ ಮುಂಚೆ ಮಾಡಿದಂತಹ ಮಿಶ್ರಣಕ್ಕೆ ಚೆನ್ನಾಗಿ ಮಿಶ್ರಣ ಮಾಡಿ .

ಈ ರೀತಿಯಾಗಿ ನೀವು ಇದನ್ನು ಒಂದು ತಿಂಗಳಿನವರೆಗೆ ಶೇಖರಿಸಿ ಇಟ್ಟುಕೊಳ್ಳಬಹುದಾಗಿದೆ ಹಾಗೂ ರಾತ್ರಿ ಮಲಗುವ ಮುನ್ನ ಅರ್ಧ ಗಂಟೆಯ ಮೊದಲು ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಕುಡಿದು ಮಲಗುವುದರಿಂದ ಕೊಬ್ಬು ಕರಗುವುದರ ಜತೆಗೆ ಇಂತಹ ಸಮಸ್ಯೆ ಕೂಡ ದೂರವಾಗುತ್ತದೆ .