Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬೇಸಿಗೆಯಲ್ಲಿ ಎಳೆನೀರು ಕುಡಿಯುವ ಅಭ್ಯಾಸ ಇದೆಯಾ ..! ಹಾಗಾದರೆ ಇದನ್ನ ನೀವು ತಿಳಿದುಕೊಳ್ಳಲೇ ಬೇಕು ..!

ಚಳಿಗಾಲ ಮುಗಿಯುತ್ತಿದ್ದ ಹಾಗೆ ಬೇಸಿಗೆ ಸಮಯ ಬಂದೇ ಬಿಡುತ್ತದೆ ಈ ಬೇಸಗೆ ಸಮಯದಲ್ಲಿ ವಾತಾವರಣ ಹೆಚ್ಚು ಉಷ್ಣಾಂಶದಿಂದ ಇರುವ ಕಾರಣ ಆಗಾಗ ನಮಗೆ ನೀರು ಕುಡಿಯುವ ಅನುಭವ ಆಗುತ್ತಲೇ ಇರುತ್ತದೆ ಈ ಅನುಭವ ಆದಾಗ ಕೆಲವರು ತಂಪು ಪಾನೀಯಗಳನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ ಆದರೆ ಈ ರೀತಿ ಐಸ್ ವಾಟರ್ ಕುಡಿಯುವುದು ಅಥವಾ ಕೆಮಿಕಲ್ ಯುಕ್ತ ತಂಪು ಪಾನೀಯಗಳನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದೇ ಆದಲ್ಲಿ ಅದು ನಿಮ್ಮ ಆರೋಗ್ಯವನ್ನು ಕ್ಷೀಣಿಸುವ ಸಾಧ್ಯತೆ ಇರುತ್ತದೆ.

ಏಕೆಂದರೆ ತಂಪುಪಾನೀಯಗಳಲ್ಲಿ ಇರುವಂತಹ ಕೂಲಿಂಗ್ ಏಜೆಂಟ್ ಮತ್ತು ಇದರಲ್ಲಿ ಬಳಸಿರುವಂತಹ ರಸಾಯನಿಕಯುಕ್ತ ಪದಾರ್ಥಗಳು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ ತಕ್ಷಣವೇ ನಿಮಗೆ ದೇಹದ ಉಷ್ಣಾಂಶ ಕಡಿಮೆಯಾದ ಹಾಗೆ ನಿಮಗೆ ಅನಿಸಿದರೂ ಇದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಕ್ಷೀಣಿಸುವ ಸಾಧ್ಯತೆ ತುಂಬಾ ಇರುತ್ತದೆ ಆದಕಾರಣ ಬೇಸಿಗೆ ಸಮಯದಲ್ಲಿ ಯಾವುದೇ ಕಲಬೆರಕೆ ಆಗದೆ ಇರುವ ಈ ಎಳನೀರನ್ನ ನೀವು ಸೇರಿಸಿ ಹೌದು ಯಾವತ್ತಿಗೂ ಕೂಡ ಕಲಬೆರಿಕೆ ಅಂತ ಅರಿತುಕೊಳ್ಳದೆ ಇರುವ ಈ ಎಳನೀರನ್ನು ನಾವು ನೈಸರ್ಗಿಕವಾದ ಪಾನೀಯ ಅಂತ ಹೇಳುತ್ತೇವೆ ಮತ್ತು ಪ್ರಕೃತಿ ಮಾತೆಯ ಉಡುಗೊರೆ ಅಂತ ಹೇಳಬಹುದು.

ನಾವು ಎಳನೀರನ್ನು ರಸ್ತೆಬದಿಯಲ್ಲಿ ಇದೆಯೆಂದು ಅದನ್ನ ನಿರ್ಲಕ್ಷ್ಯ ಮಾಡ್ತೇವೆ ಆದರೆ ಯಾವುದೇ ಕಲಬೆರಕೆಗೊಳ್ಳದೆ ಇರುವ ಎಳನೀರನ್ನ ನಾವು ಕುಡಿಯುತ್ತಾ ಬಂದರೆ ನಮಗೆ ಉತ್ತಮ ಜೀರ್ಣ ಶಕ್ತಿ ದೊರೆಯುತ್ತದೆ ಹೌದು ಬೇಸಿಗೆ ಸಮಯದಲ್ಲಿ ಜೀರ್ಣಶಕ್ತಿ ಸ್ವಲ್ಪ ಕಡಿಮೆ ಆಗಿರುತ್ತದೆ ಆ ಸಮಯದಲ್ಲಿ ನಾವು ಎಳನೀರನ್ನ ಕುಡಿಯುವುದು ಅತ್ಯವಶ್ಯಕವಾಗಿರುತ್ತದೆ ಇದು ದೇಹಕ್ಕೆ ಬೇಕಾಗಿರುವ ಕೆಲವೊಂದು ಆಸನಗಳನ್ನ ನೀಡುವುದರ ಜೊತೆಗೆ ದೇಹವನ್ನು ತಂಪಾಗಿ ಇರಸತದೆ ನೈಸರ್ಗಿಕವಾದ ಒಂದು ಡ್ರಿಂಕ್ ಈ ಎಳನೀರು ಆಗಿದ್ದು ತಪ್ಪದೆ ಬೇಸಿಗೆ ಸಮಯದಲ್ಲಿ ಎಳನೀರನ್ನು ಕುಡಿಯುವ ಅಭ್ಯಾಸವನ್ನು ಮರೆಯದಿರಿ.

ಯಾಕೆ ಅಂದರೆ ಎಷ್ಟೋ ತಂಪು ಪಾನೀಯಗಳಿಗಿಂತ ಲೇಸು ಈ ಎಳನೀರು ಆದಕಾರಣ ಎಳನೀರನ್ನು ಕುಡಿಯಿರಿ ಇದರಲ್ಲಿ ನೈಸರ್ಗಿಕವಾದ ಪೋಷಕಾಂಶಗಳು ಇವೆ ಆದಕಾರಣ ದೇಹಕ್ಕೆ ತಂಪು ಆರೋಗ್ಯಕ್ಕೂ ತಂಪು ಎಳನೀರು ಎಳನೀರು ಕುಡಿಯುವುದರಿಂದ ನಿಶ್ಶಕ್ತಿ ದೂರವಾಗುತ್ತದೆ ಯಾರು ಹೆಚ್ಚು ಸಮಯ ಬಿಸಿಲಿನಲ್ಲಿಯೇ ನಿಂತು ಕೆಲಸ ಮಾಡುವ ಅವಶ್ಯಕತೆ ಇರುತ್ತದೆ ಅವರು ತಪ್ಪದೆ ಎಳನೀರನ್ನ ಸೇವಿಸಬಹುದು ಈ ಎಳನೀರಿನಿಂದ ಹೃದಯದ ಆರೋಗ್ಯ ಕೂಡ ವೃದ್ಧಿಸುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಾದರೆ ನೀವ್ಯಾಕೆ ಎಳನೀರನ್ನು ಕುಡಿಯಬಾರದು ನೈಸರ್ಗಿಕವಾದ ಒಂದು ಪಾನೀಯ ಆಗಿರುತ್ತದೆ, ಇದರಿಂದ ಎಷ್ಟೆಲ್ಲಾ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು.

ಇವತ್ತಿನ ಮಾಹಿತಿ ಇದಿಷ್ಟು ನಿನಗೆ ಕೂಡ ಎಳನೀರು ಇಷ್ಟಾನಾ ಹಾಗಾದರೆ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಫಾಲೋ ಮಾಡಿ ಶುಭದಿನ ಆರೋಗ್ಯದಿಂದ ಇರಿ ಧನ್ಯವಾದ.