Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಬೇಸಿಗೆಯಲ್ಲಿ ದೇಹ ತಂಪು ಮಾಡಿಕೊಳ್ಳಲು ಈ ವಿಧಾನಗಳನ್ನು ಬಳಸಿ… ಹಾಗದರೆ ನೋಡಿ ಮತ್ತೆ ….!

ಸ್ನೇಹಿತರೇ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದನ್ನು ನಾವು ಗಮನಿಸಬಹುದು ಅಥವಾ ಪ್ರತಿನಿತ್ಯವೂ ಅದನ್ನು ಕಾಣುತ್ತಾ ಹೋಗಬಹುದು ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಕಷ್ಟ ಎಂಬುದು ಕೂಡ ಎಲ್ಲರಿಗೂ ಗೊತ್ತು ಅದನ್ನು ಕಾಪಾಡಿಕೊಳ್ಳಲು ನಾವು ಎಷ್ಟೊಂದು ಪ್ರಯತ್ನಗಳನ್ನು ಮಾಡುತ್ತೇವೆ ಎಂಬುದು ಕೂಡ ನಮಗೆ ತಿಳಿದಿದೆ.

ಪ್ರತಿಯೊಂದು ಕಾಲದಲ್ಲೂ ಅಂದರೆ ಬೇಸಿಗೆ ಕಾಲ ಚಳಿಗಾಲ ಮಳೆಗಾಲ ಈ ರೀತಿ ಪ್ರತಿಯೊಂದು ಕಾಲದಲ್ಲೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಮಾನವರನ್ನು ಕಾಡುತ್ತಿರುವುದನ್ನು ಕಾಣಬಹುದು.

ಮತ್ತು ಅದಕ್ಕೆ ನಾವು ಕೂಡ ಹೊರತಲ್ಲ ಅದರಲ್ಲೂ ಈಗಿನ ಬೇಸಿಗೆ ಕಾಲಕ್ಕೆ ಬಂದರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಅದರಲ್ಲೂ ಈ ಬಿಸಿಲಿನ ಧಗೆಯಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳುವುದು ಎಲ್ಲ ರೀತಿಯಿಂದಲೂ ಕೂಡ ಕಷ್ಟ ಸಾಧ್ಯ.

ಈ ರೀತಿ ಈಗಿನ ಬಿಸಿಲಿನಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಜನರು ಕೂಲ್ಡ್ರಿಂಕ್ಸ್ ನ ಮೊರೆ ಹೋಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ, ಅದರಲ್ಲೂ ಕೂಡ ಕೂಲ್ ಡ್ರಿಂಕ್ಸ್ ಅಥವಾ ತಂಪು ಪಾನೀಯಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಬಳಸುವುದರಿಂದ ನಮ್ಮ ದೇಹವನ್ನು ತಂಪು ಮಾಡಿಸಿಕೊಳ್ಳಬಹುದು.

ಎಂಬ ಭ್ರಮೆಯಲ್ಲಿ ಜನರು ಈ ತಂಪು ಪಾನೀಯಗಳ ಮೊರೆಯನ್ನು ಹೋಗುತ್ತಾರೆ ಅಂದರೆ ಪೆಪ್ಸಿ ಸೆವೆನ್ನಪ್ ಥಮ್ಸಪ್ ಮಿರಿಂಡಾ ಮಾಸ್ಸ ಈ ರೀತಿ ತಂಪು ಪಾನೀಯಗಳ ಮೊರೆಯನ್ನು ಸಾಮಾನ್ಯವಾಗಿ ಈಗಿನ ಜನರು ಹೋಗುವುದನ್ನು ನಾವು ಗಮನಿಸಬಹುದು.

ಆದರೆ ಈ ತಂಪು ಪಾನೀಯಗಳನ್ನು ಕುಡಿಯುವುದರಿಂದ ಬೇಸಿಗೆಯಿಂದ ನಮ್ಮ ದೇಹವನ್ನು ತಂಪಾಗಿ ಇಡಬಹುದು ಮತ್ತು ಪಿತ್ತವನ್ನು ಕಡಿಮೆ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಯಾರಿಗೂ ಬರುವುದಿಲ್ಲ ಆ ಕ್ಷಣಕ್ಕೆ ನಮ್ಮ ದೇಹ ತಂಪಾಗುತ್ತದೆ ಅಷ್ಟಾದರೆ ಸಾಕು ಎಂಬ ಭ್ರಮೆಯಲ್ಲಿ ಇರುತ್ತಾರೆ.

ಆದರೆ ಈ ಕೋಲ್ಡ್ರಿಂಕ್ಸ್ ನಂತಹ ಪಾನೀಯಗಳನ್ನು ಕುಡಿಯುವುದರಿಂದಾಗಿ ನಮ್ಮ ದೇಹದಲ್ಲಿ ಪಿತ್ತ ಕಡಿಮೆ ಆಗುವ ಸಾಧ್ಯತೆ ಯಾವ ಕಡೆಯಿಂದಲೂ ಇಲ್ಲದ್ದರಿಂದಾಗಿ, ಈ ಬೇಸಿಗೆ ಕಾಲದಲ್ಲಿ ತಂಪು ಪಾನೀಯಗಳ ಬದಲಾಗಿ ಎಳನೀರು ಮಜ್ಜಿಗೆ ಶರಬತ್ತು ಬೆಲ್ಲದ ಪಾನಕ ಬೇಲದ ಹಣ್ಣಿನ ಪಾನಕ ಸಬ್ಬಕ್ಕಿ ಪಾಯಸ ಕಲ್ಲುಸಕ್ಕರೆಯ ನೀರು ಈ ರೀತಿ ಪಾನೀಯಗಳನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಎಸಿಡಿಟಿ ಪವರ್ ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿರುವ ಪಿತ್ತದ ಅಂಶ ಕೂಡ ಕಡಿಮೆಯಾಗುವುದನ್ನು ಗಮನಿಸಬಹುದು ಈ ಎರಡೂ ಕಡಿಮೆಯಾಗುವುದರಿಂದ ಅಂದರೆ ಪಿತ್ತ ಮತ್ತು ಅಸಿಡಿಟಿ ಪವರ್ ಕಡಿಮೆಯಾಗುವುದರಿಂದ ನಮ್ಮ ದೇಹವನ್ನು ಇದರಿಂದ ತಂಪಾಗಿರಿಸುವ ಎಲ್ಲ ಸಾಧ್ಯತೆಗಳು ಇದೆ.

ಇವು ನಮ್ಮ ದೇಹಕ್ಕೆ ಎನರ್ಜಿಯನ್ನು ಕೂಡ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಇವುಗಳಿಂದ ನಮ್ಮ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಆಗದೇ ಇರುವುದನ್ನು ಕಾಣಬಹುದು ಅದರ ಜೊತೆಯಲ್ಲಿ ಇವುಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಹಣಕಾಸಿನ ದೃಷ್ಟಿಯಿಂದ ಕೂಡ ತುಂಬಾ ಒಳ್ಳೆಯದು ಎಂಬುದು ನಮ್ಮ ಗಮನಕ್ಕೆ ಬಂದಿದ್ದರೆ ಸಾಕು.

ಕೇವಲ ತಣ್ಣನೆಯ ಪದಾರ್ಥವನ್ನು ತಿಂದರೆ ಮಾತ್ರ ಈ ಬಿಸಿಲಿನ ಧಗೆಯಿಂದ ನಾವು ಹೊರಬರಲು ಸಾಧ್ಯವಿಲ್ಲ ಎಂಬುದು ಎಲ್ಲರ ಗಮನಕ್ಕೂ ಮೊದಲು ಬರಬೇಕು ಎಳನೀರನ್ನು ಹೆಚ್ಚಾಗಿ ಕುಡಿಯಿರಿ ಅದರ ಜೊತೆಯಲ್ಲಿ ನೀರನ್ನು ಮಾಮೂಲಿ ಕುಡಿಯುವುದಕ್ಕಿಂತ ಹೆಚ್ಚಾಗಿ ಈ ಬೇಸಿಗೆ ಕಾಲದಲ್ಲಿ ಕುಡಿಯುವುದು ನಮ್ಮ ದೇಹಕ್ಕೆ ಅತಿ ಉತ್ತಮವಾದಂತಹ ಅಂಶವಾಗಿದೆ.

ಸಾಧ್ಯವಾದಷ್ಟು ಎಲ್ಲರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ನೀವು ಕೂಡ ಪ್ರತಿನಿತ್ಯ ಈ ರೀತಿ ಪಾನೀಯಗಳನ್ನು ಬಳಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದಗಳು.