Categories
ಭಕ್ತಿ ಮಾಹಿತಿ ಸಂಗ್ರಹ

ಬ್ರಹ್ಮಚಾರಿ ಆಗಿರುವಂತಹ ಹನುಮಂತನಿಗೆ ಮಗ ಇದ್ದಾನಂತೆ ? ಬೆಚ್ಚಿ ಬೀಳಿಸುವಂತಹ ರಹಸ್ಯ ತಿಳಿದುಕೊಳ್ಳಿ !!!!

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹನುಮಂತ ಅಪ್ಪಟ ಬ್ರಹ್ಮಚಾರಿ. ಹಲವರು ಬ್ರಹ್ಮಚಾರಿಗಳು ಹನುಮಂತನನ್ನು ಪೂಜೆಯನ್ನು ಮಾಡುತ್ತಾರೆ.

ಆದರೆ ಹನುಮಂತನಿಗೆ ಒಂದು ಮಗನಿದ್ದಾನೆ ಎನ್ನುವುದು ನಮಗೆ ನಿಜವಾಗಲೂ ನಂಬುವುದಕ್ಕೆ ಆಗದೇ ಇರುವಂತಹ ವಿಚಾರ ಅನಿಸುತ್ತದೆ ಅಲ್ವಾ. ಆದರೆ ಹನುಮಂತನಿಗೂ ಒಬ್ಬ ಮಗನಿದ್ದಾನೆ ಎನ್ನುತ್ತದೆ ನಮ್ಮ ಪುರಾಣ.

ಇವತ್ತು ನಾವು ನಿಮಗೆ ಒಂದು ರೋಚಕ ದ ಕಥೆಯ ಬಗ್ಗೆ ಹೇಳಲಿದ್ದೇವೆ, ಬ್ರಹ್ಮಚಾರಿ ಆದಂತಹ ಹನುಮಂತನಿಗೆ ಇರುವ ಮಗನ ಬಗ್ಗೆ. ಹನುಮಂತನ ಮಗನ ಹೆಸರು ಮಕರಧ್ವಜ ಅಂತ. ಒಂದು ವೇಳೆ ನಿಮಗೆ ಏನಾದರೂ ಈ ಕಥೆಯ ಬಗ್ಗೆ ಗೊತ್ತಿದ್ದರೂ ಕೂಡ ಆದರೆ ಹಿಂದಿನ ರಹಸ್ಯ ತುಂಬಾ ಜನರಿಗೆ ಗೊತ್ತಿಲ್ಲ. ಬನ್ನಿ ಇವತ್ತು ನಾವು ನಿಮಗೆ ಇದರ ಸಂಪೂರ್ಣವಾದ ವಿವರವನ್ನು ವಿವರಿಸುತ್ತೇನೆ .

ಈ ಕಥೆಯನ್ನು ಕೇಳಿದ ಮೇಲೆ ನಿಜವಾಗಲೂ ನಿಮ್ಮ  ಮೈ ರೋಮಾಂಚನವಾಗುತ್ತದೆ ?

ಹನುಮಂತನು ಸೀತೆಯನ್ನು ನೋಡಲು ಲಂಕೆಗೆ ಹೋದಾಗ ತನ್ನ  ಬಾಲದಿಂದ ಇಡೀ ಲಂಕೆಯನ್ನು ಸುಟ್ಟಿದ್ದು ನಮಗೆ ಗೊತ್ತಿರುವಂತಹ ವಿಚಾರ. ಹೀಗೆ ತನ್ನ ಬಾಲಕ್ಕೆ  ಬೆಂಕಿ ಬಿದ್ದಾಗ ಆ ಬೆಂಕಿಯನ್ನು ಆರಿಸಲು ಸಮುದ್ರದ ನೀರಿನ ಒಳಗೆ ಮುಳುಗುತ್ತಾನೆ. ಹೀಗೆ ಮುಳುಗಿದ ಅಂತಹ ಈ ಹನುಮನ ಬೆವರನ್ನು ಒಂದು ಮೊಸಳೆ ಕುಡಿಯುತ್ತದೆ.

ಇದಾದ ನಂತರ ಪಾತಾಳದಲ್ಲಿ ಇರುವಂತಹ ಅಸುರ ಸೇವಕರು ಹೋಗಿ ಮೊಸಳೆಯನ್ನು ಹಿಡಿಯುತ್ತಾರೆ. ಹೀಗೆ ಹಿಡಿದಂತಹ ಮೊಸಳೆಯ ಹೊಟ್ಟೆಯನ್ನು ಸೀಳಿದಾಗ ಒಂದು ವಾನರ ರೂಪದಲ್ಲಿ ಇರುವಂತಹ ಒಂದು ಮಗು ಸಿಗುತ್ತದೆ. ಆ ಮಗುವೇ ಪಾತಾಳದ ದ್ವಾರಕ  ಪಾಲಕರ ಆಗುತ್ತಾನೆ ಎಂದು ಹಲವಾರು ಪುರಾಣಗಳು ಹೇಳುತ್ತವೆ. ಈ ಮಗುವಿನ ಹೆಸರು ಮಕರ ಧ್ವಜ.

ಆದರೆ ಈ ತರದ ವಿಚಾರ ನಡೆದಿದೆ ಎನ್ನುವುದರ ಬಗ್ಗೆ ಹನುಮಂತನಿಗೆ ಯಾವುದೇ ಅರಿವು ಇರುವುದಿಲ್ಲ. ಒಂದು ಸಾರಿ ರಾಮ ಲಕ್ಷ್ಮಣರನ್ನು ಅಸುರರು ಪಾತಾಳಕ್ಕೆ ಕರೆದುಕೊಂಡು ಹೋಗುತ್ತಾರೆ. ಇದನ್ನು ಕಂಡಂತ ಹನುಮಂತನು ರಾಮಲಕ್ಷ್ಮಣರು ರಕ್ಷಿಸುವುದಕ್ಕಾಗಿ ಪಾತಾಳಕ್ಕೆ ಹೋಗಲು ಪ್ರಯತ್ನ ಪಡುತ್ತಾರೆ .

ಆದರೆ ಅಲ್ಲಿ ಇರುವಂತಹ  ದ್ವರಕ ಪಾಲಕ ಹನುಮಂತನ ಮಗ ಮಕರಧ್ವಜ ಹನುಮಂತನನ್ನು ಒಳಗಡೆ ಹೋಗಲು ಬಿಡುವುದಿಲ್ಲ. ಇದರಿಂದಾಗಿ ಕೋಪ ಕಂಡಂತಹ ಹನುಮಂತನು ತನ್ನ ಮಗನ ಜೊತೆ ಯುದ್ಧಕ್ಕೆ ಇಳಿಯುತ್ತಾನೆ. ಹೀಗೆ ಯುದ್ಧ ಮಾಡುತ್ತಿರುವಾಗ ಹನುಮಂತನಿಗೆ ತನಗೆ ತಾನೇ ಯುದ್ಧ ಮಾಡಿದಂತಹ ಅನುಭವ ಆಗುತ್ತದೆ.

ಇದಾದ ನಂತರ ಹನುಮಂತನ ಮಕರ ಧ್ವಜನಿಗೆ ಪ್ರಶ್ನೆ ಕೇಳಲು ಆರಂಭ ಮಾಡುತ್ತಾನೆ ನೀನು ಯಾರು? ನಿನ್ನ ತಂದೆತಾಯಿಯರು ಯಾರು ?  ಎಂದು ಪ್ರಶ್ನೆಯನ್ನು ಮಕರಧ್ವಜನಗೆ ಕೇಳುತ್ತಾನೆ . ಹೀಗೆ ಕೇಳಿದಂತಹ ಹನುಮಂತನ ಆ ಪ್ರಶ್ನೆಗಳಿಗೆ ಉತ್ತರಿಸಿದ ಮಕರ ಧ್ವಜ  ಹನುಮಂತನ ಮಗನ ಎಂದು ಹೇಳುತ್ತಾರೆ.

ಈ ವಿಷಯವನ್ನು ಕೇಳಿದ ತಕ್ಷಣ ಹನುಮಂತನಿಗೆ ತುಂಬಾ ಕೋಪ ಬರುತ್ತದೆ. ಆದರೆ ಮಕರ ಧ್ವಜ ನ ತಾನು ಹುಟ್ಟಿದಂತಹ ಸಂಪೂರ್ಣವಾದ ವಿವರವನ್ನು ಹನುಮಂತನಿಗೆ ಹೇಳುತ್ತಾರೆ. ಇದಾದ  ನಂತರ ಹನುಮಂತನು ಪಾತಾಳ ರಾಕ್ಷಸರ ಜೊತೆಗೆ ಯುದ್ಧವನ್ನು ಮಾಡಿ ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗುತ್ತಾನೆ. ಹೀಗೆ ಕರೆದುಕೊಂಡು ಹೋಗುವ ಮೊದಲು ತನ್ನ ಮಗನಾದ ಅಂತಹ ಮಕರಧ್ವಜ ನನ್ನು ಹನುಮಂತನು ಪಾತಾಳ ರಾಜನಾಗಿ ಮಾಡುತ್ತಾನೆ.

ಗೊತ್ತಾಯ್ತಲ್ಲ ಸ್ನೇಹಿತರೆ ಹನುಮಂತನಿಗೂ ಕೂಡ ಒಬ್ಬ ಮಗನಿದ್ದಾನೆ, ಹಾಗೆ ಆ ಮಗನ ಹಿಂದಿನ ರಹಸ್ಯ ಏನು ಎಂದು ನಿಮಗೆ ಅರ್ಥ ವಾಗಿರಬಹುದು. ಇವಾಗಲು ಕೂಡ ಗುಜರಾತ್ ನಲ್ಲಿ ಇರುವಂತಹ ಪೋರ ಬಂದರಿನಲ್ಲಿ ವಡೋದರ ಎನ್ನುವ ಪುಟ್ಟ ಹಳ್ಳಿಯಲ್ಲಿ ಮಕರ ಧ್ವಜ ನ ದೇವಾಲಯವಿದೆ. ದ್ವಾರಕ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಕರಧ್ವಜ ನನ್ನು ಕೆಲವು ಮನೆಯಲ್ಲಿ ಮನೆ ದೇವರಾಗಿ ಪೂಜೆ ಕೂಡ ಮಾಡುತ್ತಾರೆ. ಕೆಲವು ಕಡೆ ಹನುಮಂತನನ್ನು ಹಾಗೂ ಮಕರಧ್ವಜ ನನ್ನು ಒಟ್ಟಿಗೇ ಇಟ್ಟು ಪೂಜೆ ಮಾಡುತ್ತಾರೆ ಹಾಗೆ, ಇಬ್ಬರಿಗೂ ಯಾವುದೇ ಭೇದಭಾವ ಮಾಡದೇ ಪೂಜೆಯನ್ನು ಕೂಡ ಮಾಡುತ್ತಾರೆ.

ನೀವು ನಮ್ಮ ಪೇಜ್ ಅನ್ನು ಇಲ್ಲಿವರೆಗೂ ಲೈಕ್ ಮಾಡದೇ ಇದ್ದಲ್ಲಿ ಮೇಲೆ ಅಥವಾ ಕೆಳಗೆ ನಮಗೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಹಿಂಬಾಲಿಸಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಹಾಗೂ ಮಂಡ್ಯ ದ ಹುಡುಗಿ ರಶ್ಮಿ.