Categories
ಭಕ್ತಿ ಮಾಹಿತಿ ಸಂಗ್ರಹ

ಮಕ್ಕಳು ತಿನ್ನುವ ಊಟಕ್ಕೆ ಹಾವು ಬಿದ್ದಾಗ ಶ್ರೀಗಳು ಮಾಡಿದ ಆ ಪವಾಡ ಏನು ಗೊತ್ತ !

ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಈಗ ನಮ್ಮ ಜೊತೆಗೆ ಇಲ್ಲ ಆದರೆ ಅವರು ಮಾಡಿರುವಂತಹ ಸಾಕಷ್ಟು ಪವಾಡಗಳು ಅಚ್ಚರಿಗಳು ನಮ್ಮ ಕಣ್ಣು ಕಟ್ಟಿದ ಅದು ಹೇಗೆ ಅಂತೀರಾ ಹೌದು ಸ್ನೇಹಿತರೆ ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಭಕ್ತಿಯಿಂದಲೇ ಪವಾಡಗಳನ್ನು ಮಾಡುತ್ತಿದ್ದರು.

ಆ ಹಲವಾರು ಪವಾಡಗಳಲ್ಲಿ ಒಂದು ಪವಾಡದ ಬಗ್ಗೆ ನಾನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೇ ಶಿವಕುಮಾರ ಸ್ವಾಮಿಗಳ ಈ ಒಂದು ಪವಾಡದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ ತಪ್ಪದೇ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ ಮತ್ತು ಲೈಕ್ ಮಾಡಿ .

ತುಮಕೂರಿನ ಶ್ರೀ ಸಿದ್ಧಗಂಗಾ ಸ್ವಾಮಿಯವರ ಮಠದಲ್ಲಿ ಬಡ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಲಾಗುವುದು ಜೊತೆಗೆ ಅನ್ನದಾಸೋಹವನ್ನು ಕೂಡಾ ಮಾಡಲಾಗುವುದು ಮಠದಲ್ಲಿ ಪ್ರತಿನಿತ್ಯ ಅನ್ನ ದಾಸೊಹ ನಡೆಯುತ್ತಲೇ ಇರುತ್ತದೆ ಬಂದ ಭಕ್ತಾದಿಗಳಿಗೂ ಕೂಡ ಈ ಒಂದು ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿರುತ್ತದೆ .

ಒಮ್ಮೆ ಅಡುಗೆ ಮಾಡುವಾಗ ಮಾಡಿದ ಸಾಂಬಾರಿನ ಒಳಗೆ ಹಾವು ಒಂದು ಬಿದ್ದು ಹೋಗಿರುತ್ತದೆ ನಂತರ ಇದನ್ನು ಕಂಡ ಭಟ್ಟರು ಏನೂ ಮಾಡಲು ತೋಚದೆ ಸ್ವಾಮಿಗಳನ್ನು ಕರೆತಂದು ಸಾಂಬಾರಿನ ಒಳಗೆ ಬಿದ್ದಂತಹ ಹಾವಿನ ವಿಚಾರದ ಬಗ್ಗೆ ತಿಳಿಸಿ ಹೇಳುತ್ತಾರೆ ಆ ನಂತರ ಶ್ರೀ ಶಿವಕುಮಾರ ಸ್ವಾಮೀಜಿಗಳು ಯಾವುದೇ ಗಾಬರಿಯನ್ನು ಮಾಡಿಕೊಳ್ಳದೆ ಶಿವನನ್ನು ನೆನೆದು , ಹಾವು ಬಿದ್ದಂತಹ ಸಾಂಬಾರಿನ ಒಳಗೆ ಕೈಹಾಕಿ ಹಾವನ್ನು ತೆಗೆದು ಆಚೆ ಹಾಕುತ್ತಾರೆ .

ಆ ನಂತರ ಮತ್ತೆ ಶಿವನನ್ನು ಬೇಡುತ್ತಾ ತಮ್ಮ ಕೈಯಲ್ಲಿಯೇ ಸಾಂಬಾರಿನ ಒಳಗೆ ಕೈಯಾಡಿಸುತ್ತಾರೆ ನಂತರ ಅವರೇ ಆ ಸಾಂಬಾರನ್ನು ಕುಡಿದು ಸ್ವಲ್ಪ ಸಮಯ ಕಳೆದ ನಂತರ ಭಟ್ಟರಿಗೆ ಆ ಒಂದು ಅನ್ನವನ್ನು ಮಕ್ಕಳಿಗೆ ಬಡಿಸಲು ಹೇಳುತ್ತಾರೆ .

ಹೀಗೆ ಮಾಡಿದ ನಂತರ ಅಲ್ಲಿದ್ದವರಿಗೆ ಒಂದು ಅಚ್ಚರಿ ಕಾದಿತ್ತು ಹಾವು ಬಿದ್ದಂತಹ ಸಾಂಬಾರನ್ನು ಕುಡಿದರೂ ಕೂಡ ಶ್ರೀಗಳಿಗೆ ಏನೂ ಆಗಿಲ್ಲ ಇದು ಇವರು ಮಾಡಿದಂತಹ ಪವಾಡ ಅಥವಾ ನಡೆದಾಡುವ ದೇವರ ಮಹಿಮೆ ಅಂತ ಅಲ್ಲಿಯ ಜನರಿಗೆ ತಿಳಿಯದೆ ಅನ್ನವನ್ನು ಕಣ್ಣಿಗೆ ಹೊತ್ತುಕೊಂಡು ತಿನ್ನುತ್ತಾರೆ .

ಹೌದು ಸ್ನೇಹಿತರೇ ಭಕ್ತಿ ಹೊಂದಿದ್ದಾರೆ ಯಾವ ಕೆಟ್ಟ ಶಕ್ತಿಯಾಗಲಿ ಯಾವ ದುಷ್ಟ ಪ್ರಾಣಿಗಳಾಗಲಿ ಯಾರನ್ನೂ ಏನೂ ಮಾಡೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನು ಶ್ರೀಗಳು ಈ ರೀತಿಯಾಗಿ ನಮಗೆ ತಿಳಿಸಿಕೊಟ್ಟಿದ್ದಾರೆ .

ನಡೆದಾಡುವ ದೇವರಾಗಿರುವ ಶ್ರೀ ಶಿವಕುಮಾರ ಸ್ವಾಮಿ ಅವರು ಇಂತಹ ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ ಮತ್ತು ಶಿವಲಿಂಗವನ್ನು ನಂಬುತ್ತಿದ್ದ ಶ್ರೀಗಳು ಬಂದ ಭಕ್ತಾದಿಗಳಿಗೂ ಕೂಡ ಅನ್ನದಾಸೋಹವನ್ನು ಮಾಡಿಸುತ್ತಿದ್ದರು ಮತ್ತು ಬಂದವರಿಗೆ ಯಾವುದೇ ರೀತಿಯಲ್ಲಿ ಕಷ್ಟವಾಗದ ರೀತಿ ವ್ಯವಸ್ಥೆಯನ್ನು ಕೂಡ ಮಾಡಿಕೊಡುತ್ತಿದ್ದರು .

ಈ ರೀತಿಯಲ್ಲಿ ಒಮ್ಮೆ ಪವಾಡ ನಡೆದಿತ್ತು ಎಂದು ರಂಗಮ್ಮನ ಅವರು ವಿಚಾರವನ್ನು ತಿಳಿಸಿದ್ದರು , ನಡೆದಾಡುವ ದೇವರು ಎಂದು ಕರೆಯುವ ಶ್ರೀ ಶಿವಕುಮಾರ ಸ್ವಾಮಿ ಅವರು ತಾವು ಎಷ್ಟೇ ಪವಾಡ ಮಾಡುತ್ತಿದ್ದರೂ ಬೇರೆಯವರ ಬಳಿ ಹೇಳಿಕೊಳ್ಳುತ್ತಿರಲಿಲ್ಲ .

ಶ್ರೀಶಿವಕುಮಾರ ಸ್ವಾಮೀಜಿಯವರು ಎಂದೆಂದಿಗೂ ಕೂಡ ನಮ್ಮ ಕರ್ನಾಟಕದ ಜನತೆಯ ಮನಸ್ಸಿನಲ್ಲಿ ಇರುತ್ತಾರೆ ಮತ್ತು ಸ್ನೇಹಿತರೇ ಒಮ್ಮೆಯಾದರೂ ತುಮಕೂರಿಗೆ ಭೇಟಿ ನೀಡಿದ್ದಲ್ಲಿ ತಪ್ಪದೇ ಸಿದ್ದಗಂಗಾ ಸ್ವಾಮಿ ಮಠಕ್ಕೆ ಹೋಗಿ ಲಿಂಗೈಕ್ಯರಾಗಿರುವ ನಡೆದಾಡುವ ದೇವರ ಆಶೀರ್ವಾದವನ್ನು ಪಡೆದುಕೊಂಡು ಬನ್ನಿ .

ನಾನು ಎಂದು ತಿಳಿಸಿದಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಮತ್ತು ಸ್ನೇಹಿತರೇ ಶಿವಕುಮಾರ ಸ್ವಾಮಿಯವರು ಅಂದರೆ ನಡೆದಾಡುವ ದೇವರು ಮಾಡಿದಂತಹ ಈ ಪವಾಡದ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ .