Categories
ಮಾಹಿತಿ ಸಂಗ್ರಹ

ಮಣ್ಣಿನ ಮಡಕೆಯಲ್ಲಿನ ನೀರು ಸೇವಿಸಿದರೆ ಏನಾಗುತ್ತೆ ಗೊತ್ತಾ…. ಉಪಯುಕ್ತ ಮಾಹಿತಿ ..

ನಮ್ಮ ಪೂರ್ವಿಕರ ಬಗ್ಗೆ ಹೇಳೋದಾದರೆ ಹಿಂದಿನ ಕಾಲದಲ್ಲಿ ಜನರು ತುಂಬಾನೇ ಆರೋಗ್ಯದಿಂದ ಇರುತ್ತಿದ್ದರು ನೂರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಜೀವನ ನಡೆಸುತ್ತಿದ್ದರು ಮತ್ತು ಆರೋಗ್ಯದ ವಾತಾವರಣ ಅಂದಿನ ದಿನಗಳಲ್ಲಿ ಇರುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ಜನರು ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುತ್ತಾರೆ .

ಮತ್ತು ಆರೋಗ್ಯ ಸುಧಾರಣೆಗಾಗಿ ಎಷ್ಟೇ ಮಾತ್ರೆಗಳನ್ನು ತೆಗೆದುಕೊಂಡರೆ ಎಂಥ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಂಡರು ಕೂಡ ಆರೋಗ್ಯ ಸಮಸ್ಯೆ ಬರುತ್ತಲೇ ಇರುತ್ತದೆ ಅದು ಯಾಕೆ ಯಾವ ಕಾರಣಗಳಿಂದ ಈ ರೀತಿಯ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

ಅನ್ನೋದನ್ನ ಇಂದು ತಿಳಿದುಕೊಳ್ಳೋಣ ಈ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಸ್ನೇಹಿತರೇ ಆರೋಗ್ಯವಾದ ಜೀವನ ನಮ್ಮದಾಗಿಸಿಕೊಳ್ಳಬೇಕು ಅನ್ನೋದಾದರೆ ಯಾವ ರೀತಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಅಂತಾನೂ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ .

ಹಿಂದಿನ ಕಾಲದಲ್ಲಿ ಜನರು ಅಡಿಕೆ ಮಾಡುವುದಕ್ಕಾಗಿ ಮಣ್ಣಿನ ಮಡಕೆಯನ್ನು ಬಳಸುತ್ತಿದ್ದರಂತೆ ಮತ್ತು ಈ ಒಂದು ಮಣ್ಣಿನ ಮಡಕೆಯಲ್ಲಿ ಅಡುಗೆ ಮಾಡಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ ಮತ್ತು ಆರೋಗ್ಯದ ಜೀವನವನ್ನು ನಾವು ಬಾಳಬಹುದು .

ಇಂದಿನ ದಿನಗಳಲ್ಲಿ ಜನರು ಅಡುಗೆ ಮಾಡುವುದಕ್ಕಾಗಿ ಟೆಫ್ಲಾನ್ ಕೋಟಿಂಗ್ ಪಾತ್ರೆಗಳನ್ನು ಮತ್ತು ಸ್ಟೀಲ್ ಪಾತ್ರೆಗಳನ್ನು ಅಲುಮಿನಿ ಪಾತ್ರೆಗಳನ್ನು ಬಳಸುತ್ತಾರೆ ಈ ರೀತಿ ಮೆಟಲ್ ಪಾತ್ರೆಗಳನ್ನು ಅಡುಗೆ ಮಾಡುವುದಕ್ಕೆ ಬಳಸುವುದರಿಂದ ಆರೋಗ್ಯದಲ್ಲಿ ಕ್ಷೀಣತೆಯನ್ನು ನಾವು ಕಾಣಬಹುದು ಇದಕ್ಕೆ ನಾವು ಇಂದಿನ ಕಾಲದ ಜನರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು .

ನಾವು ರೂಢಿಸಿಕೊಂಡಿರುವ ಆರೋಗ್ಯ ಪದ್ಧತಿ ಏನು ಚೆನ್ನಾಗಿರುತ್ತದೆ ಆದರೂ ಕೂಡ ನಮ್ಮ ಆರೋಗ್ಯ ಯಾಕೆ ಕೆಡುತ್ತಿದೆ ಅಂತ ಕೆಲವರು ಯೋಚಿಸುತ್ತಿರುತ್ತಾರೆ ಇದಕ್ಕೆ ಕಾರಣವಾಗಿ ನಾವು ಅಡುಗೆ ಮಾಡುವಂತಹ ಪಾತ್ರೆಗಳು ಕೂಡ ಒಂದು ಅಂಶವಾಗುತ್ತದೆ .

ಇಂದಿನ ಜನರು ರೆಫ್ರಿಜರೇಟರ್ ಅಂದರೆ ತಂಗಳು ಪೆಟ್ಟಿಗೆ ಅಂತಾರಲ್ಲ ಅದರ ಮೇಲೆ ತುಂಬಾನೇ ಅವಲಂಬಿತರಾಗಿರುತ್ತಾರೆ ಆದರೆ ಫ್ರಿಡ್ಜ್ನಲ್ಲಿ ಇಟ್ಟಂತಹ ನೀರಾಗಲಿ ಆಹಾರವನ್ನಾಗಲಿ ತಿನ್ನುವುದರಿಂದ ಶರೀರದಲ್ಲಿ ಇರುವಂತಹ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಫ್ರಿಡ್ಜ್ ನಲ್ಲಿ ಇರುವಂತಹ ನೀರನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಸಮತೋಲನ ಕಳೆದುಕೊಳ್ಳುತ್ತದೆ.

ಮತ್ತು ಈ ರೀತಿಯ ರೆಫ್ರಿಜರೇಟರ್ ಬಳಸುವುದರಿಂದ ಪರಿಸರವು ಕೂಡ ಹಾಳಾಗುತ್ತದೆ ಇದರಿಂದ ಆಚೆ ಬರುವಂತಹ ಕ್ಲೋರೋಫ್ಲೋರೊ ಕಾರ್ಬನ್ ಅನ್ನೊ ಗ್ಯಾಸ್ ಓಝೋನ್ ಪದರವನ್ನು ಕೂಡ ಹಾಳು ಮಾಡುತ್ತದೆ .

ಆದ್ದರಿಂದ ಮಡಿಕೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಉಷ್ಣಾಂಶ ಕೂಡ ಸಮತೋಲನದಿಂದ ಇರುತ್ತದೆ ಇದರ ಜೊತೆಗೆ ನಮ್ಮ ದೇಹ ಬೆವರಿನಿಂದ ಕಳೆದುಕೊಂಡಂತಹ ಲವಣಾಂಶಗಳನ್ನು ಈ ನೀರಿನಿಂದ ಪಡೆದುಕೊಳ್ಳುತ್ತದೆ ಆದ್ದರಿಂದ ಸ್ನೇಹಿತರೇ ಮಣ್ಣಿನ ಮಡಿಕೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದು ತುಂಬಾನೇ ಉತ್ತಮ ಮತ್ತು ಒಳ್ಳೆಯದು ಕೂಡ .

ಹೌದು ಸ್ನೇಹಿತರೇ ನಮ್ಮ ದೇಹಕ್ಕೆ ಬೇಕಾಗಿರುವಂತಹ ಲವಣಾಂಶಗಳನ್ನು ನಾವು ಮಡಿಕೆಯ ನೀರನ್ನು ಕುಡಿಯುವುದರಿಂದ ಪಡೆದುಕೊಳ್ಳಬಹುದು ಮತ್ತು ಈ ರೀತಿ ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವುದು ಮತ್ತು ಮಣ್ಣಿನ ಮಡಿಕೆಯಲ್ಲಿ ಮಾಡಿದಂತಹ ಅಡುಗೆಯನ್ನು ಸೇವನೆ ಮಾಡುವುದರಿಂದ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳುವ ಜೊತೆಗೆ ನಾವು ಸದೃಢರಾಗಿ ಬದುಕಬಹುದು .

ಮಣ್ಣಿನ ಮಡಿಕೆಯಲ್ಲಿ ಇರುವಂತಹ ನೀರನ್ನು ಕುಡಿಯುವುದರಿಂದ ಮತ್ತೊಂದು ತುಂಬಾನೇ ಪ್ರಯೋಜನಕರ ಅಂಶ ಏನು ಅಂದರೆ ನಮ್ಮ ಕಿಡ್ನಿ ಮತ್ತು ಮಿದುಳು ಚುರುಕುಗೊಳ್ಳುತ್ತದೆ ಈ ಕಾರಣದಿಂದಾಗಿಯೂ ಕೂಡ ನಾವು ಮಣ್ಣಿನ ಮಡಿಕೆಯಲ್ಲಿ ಇಟ್ಟಂತಹ ನೀರನ್ನು ಕುಡಿದರೆ ಉತ್ತಮ .