Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಮದ್ಯಾಹ್ನದ ಉಪಹಾರಕ್ಕೆ ,ಬಿಸಿ ಬಿಸಿ ಅನ್ನದ ಜೊತೆ ಈ ಹಣ್ಣು ಮೆಣಸಿನಕಾಯಿ ಹುಳಿ ಸೇರಿಸಿಕೊಂಡು ತಿಂತಾಯಿದ್ದರೆ.. ಹಾ ಹಾ ಹಾ ಹಾ

ಮಧ್ಯಾಹ್ನದ ಉಪಾಹಾರಕ್ಕೆ ಈ ರೀತಿಯ ರುಚಿರುಚಿಯಾದ ಚಟ್ನಿಯನ್ನು ಮಾಡಿ ನೋಡಿ ಹೇಗೆ ಊಟ ಇನ್ನೂ ಹೆಚ್ಚು ಮಾಡಬೇಕು ಅಂತ ಅನ್ನಿಸುತ್ತದೆ ಅಂತ ಹೌದು ಈ ಚಟ್ನಿಯನ್ನು ನಿಮ್ಮ ಮನೆಯಲ್ಲಿ ಮಕ್ಕಳು ಕೂಡ ಇಷ್ಟಪಟ್ಟು ತಿನ್ನಲು ಬಯಸುತ್ತಾರೆ.

ಹಾಗಾದರೆ ಈ ಚಟ್ನಿಯನ್ನು ಮಾಡುವ ವಿಧಾನ ಹೇಗೆ ಮತ್ತು ಈ ಚಟ್ನಿಯನ್ನು ಮಾಡೋದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುವು ಅನ್ನೋದನ್ನು ಕೂಡ ತಿಳಿಯೋಣ ಈ ಮಾಹಿತಿ ನಿಮಗೆ ಇಷ್ಟವಾದ ಲೇಪದ ಬೇರೆಯವರಿಗೂ ಕೂಡ ಶೇರ್ ಮಾಡಿ ಮತ್ತು ಈ ಒಂದು ರೆಸಿಪಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

ಹೌದು ಪ್ರತಿಯೊಬ್ಬರಿಗೂ ಕೂಡ ಆರೋಗ್ಯ ಚೆನ್ನಾಗಿರಬೇಕು ಆದರೆ ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಅದಕ್ಕೆ ತಕ್ಕ ಹಾಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ಮಾಡಿ ತಿನ್ನಬೇಕು .

ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಲಸದಲ್ಲಿ ಬಿಸಿ ಆಕೆಯ ಮನೆಯಲ್ಲಿ ಅಡುಗೆ ಮಾಡಿಕೊಳ್ಳೋದಕ್ಕೆ ಇಷ್ಟಪಡೋದಿಲ್ಲ ಅದರಲ್ಲಿ ಸುಸ್ತಾಗಿರುತ್ತದೆ ಯಾರು ಅಡುಗೆಯನ್ನು ಮಾಡುತ್ತಾರೆ ಆಚೆಯಿಂದ ತಂದು ತಿನ್ನೋಣ ಅನ್ನೋ ಉಡಾಫೆ ಕೂಡ ಮಾಡುತ್ತಾರೆ.

ಆದ್ದರಿಂದ ಅಂಥವರಿಗಾಗಿ ಮತ್ತು ಬ್ಯಾಚುಲರ್ಸ್ ಗಳಿಗಾಗಿ ಹಾಗೂ ಮನೆಯಿಂದ ಆಚೆ ಹೋಗಿ ಓದುತ್ತಿರುವಂತೆ ವಿದ್ಯಾರ್ಥಿಗಳಿಗಾಗಿ ಈ ಸಿಂಪಲ್ ರೆಸಿಪಿಯನ್ನು ನಾನು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತದೆ ಇದಕ್ಕಾಗಿ ಅವಶ್ಯಕತೆ ಇರುವಂತಹ ಪದಾರ್ಥಗಳು ಹೆಚ್ಚು ದುಬಾರಿ ಏನೂ ಅಲ್ಲ ಮತ್ತು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಈ ಪದಾರ್ಥಗಳು ಇದ್ದೇ ಇರುತ್ತದೆ.

ಈ ಚಟ್ನಿಯನ್ನು ಮಾಡೋದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಈರುಳ್ಳಿ ಒಣಮೆಣಸಿನಕಾಯಿ ಎಣ್ಣೆ ಉಪ್ಪು ಅಷ್ಟೇ, ಇದನ್ನು ಮಾಡುವ ವಿಧಾನ ಮೊದಲು ಒಂದು ಬಾಣಲೆಯಲ್ಲಿ ಆಲಿವ್ ಆಯಿಲ್ ಅಥವಾ ನೀವು ಯಾವ ಅಡುಗೆ ಎಣ್ಣೆಯನ್ನು ಬಳಸುತ್ತೀರೋ ಆ ಎಣ್ಣೆಯನ್ನು ಎರಡು ಚಮಚ ಹಾಕಿಕೊಳ್ಳಿ ನಂತರ ಅದಕ್ಕೆ ಸ್ವಲ್ಪ ಸಾಸಿವೆಯನ್ನು ಹಾಕಿ ಈರುಳ್ಳಿಯನ್ನು ಹಾಕಿಕೊಳ್ಳಿ.

ಎಷ್ಟು ಈರುಳ್ಳಿಯನ್ನು ತೆಗೆದುಕೊಳ್ಳಬೇಕು ಅಂದರೆ ದೊಡ್ಡ ಗಾತ್ರದ ಈರುಳ್ಳಿ ಆದರೆ ನಾಲ್ಕರಿಂದ ಐದು ಈರುಳ್ಳಿಯನ್ನು ತೆಗೆದುಕೊಳ್ಳಿ ಅಥವಾ ಚಿಕ್ಕ ಗಾತ್ರದ ಈರುಳ್ಳಿ ಆಗಿದ್ದರೆ ಎಂಟರಿಂದ ಒಂಬತ್ತು ಈರುಳ್ಳಿಯನ್ನು ಕತ್ತರಿಸಿ ಇಟ್ಟುಕೊಂಡು ಇದೀಗ ಕಾದ ಎಣ್ಣೆಗೆ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಐದರಿಂದ ಆರು ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಬಾಡಿಸಿ.

ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿದ ಬಳಿಕ ಒಂದು ಚಮಚ ಹುಣಸೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ಇದೀಗ ಸ್ವಲ್ಪ ಸಮಯದವರೆಗೂ ಹಸಿ ವಾಸನೆ ಹೋಗುವ ವರೆಗು ಫ್ರೈ ಮಾಡಿ , ಇದು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ, ಈ ಮಿಶ್ರಣವನ್ನು ರುಬ್ಬಿಕೊಳ್ಳುವ ವೇಳೆ ಸ್ವಲ್ಪ ನೀರನ್ನು ಹಾಕಿ ಚಟ್ನಿಯ ಹಾಗೆ ರುಬ್ಬಿಕೊಳ್ಳಿ.

ಇದೀಗ ನೀವು ಈ ಚಟ್ನಿಯನ್ನು ಅನ್ನದೊಂದಿಗೆ ಬೆರೆಸಿಕೊಂಡು ತಿನ್ನಬಹುದಾಗಿದೆ ಆರೋಗ್ಯಕರವಾಗಿಯೂ ಕೂಡ ಈ ಚಟ್ನಿ ಇರುತ್ತದೆ ಆದ್ದರಿಂದ ನೀವು ಈ ಚಟ್ನಿಯನ್ನು ನಿಮಗೆ ಸಮಯ ಕಡಿಮೆ ಇದ್ದಾಗ ತಯಾರಿಸಿಕೊಂಡು ತಿನ್ನಿರಿ ಮತ್ತು ಮೆಣಸಿನಕಾಯಿ ಮತ್ತು ಈರುಳ್ಳಿ ನಿಮ್ಮ ಆರೋಗ್ಯಕ್ಕೆ ಉಪಯುಕ್ತ ಆರೋಗ್ಯಕರ ಪ್ರಯೋಜನಗಳನ್ನು ನೀಡುವುದರಿಂದ ಈ ಚಟ್ನಿಯನ್ನು ನೀವು ನಿಯಮಿತವಾಗಿ ಪ್ರತಿದಿನ ಸೇವಿಸುವುದರಿಂದ ಯಾವುದೇ ಸಮಸ್ಯೆಗಳು ಆಗುವುದಿಲ್ಲ.

ಚಟ್ನಿಯನ್ನು ತಯಾರಿಸಿಕೊಂಡು ನಂತರ ಅದಕ್ಕೆ ಸಾಸಿವೆ ಮತ್ತು ಎಣ್ಣೆಯಿಂದ ಒಗ್ಗರಣೆ ಮಾಡಿ ಈ ಚಟ್ನಿಗೆ ಹಾಕಿಕೊಳ್ಳಿ ಇದೀಗ ನೀವು ಈ ಚಟ್ನಿಯನ್ನು ಅನ್ನದೊಂದಿಗೆ ತಿನ್ನುವುದಕ್ಕೆ ತಯಾರಾಗಿದೆ ಹಾಗೂ ಈ ರೆಸಿಪಿಯನ್ನು ನೀವು ಮನೆಯಲ್ಲಿ ಟ್ರೈ ಮಾಡಿದ್ದರೆ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.