Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮನುಷ್ಯನಿಗೆ ಎಷ್ಟು ಗಂಟೆ ನಿದ್ರೆ ಅವಶ್ಯಕ ಅನ್ನೋದು ನಿಮಗೆ ಗೊತ್ತ … ಎಲ್ರು ತಿಳ್ಕೊಳ್ಳಲೇ ಬೇಕು ..

ಮನುಷ್ಯನಿಗೆ ನಿದ್ರೆ ಎಂಬುದು ಎಷ್ಟು ಅವಶ್ಯಕತೆ ಇರುತ್ತದೆ ಎಂದರೆ ಅದು ಅವನ ಜೀವನದ ಒಂದು ಅವಿಭಾಜ್ಯ ಅಂಗವಾಗಿರುತ್ತದೆ , ಹಾಗಾದರೆ ಒಬ್ಬ ಮನುಷ್ಯ ಎಷ್ಟು ಗಂಟೆಗಳ ಕಾಲ ನಿದ್ರಿಸಬೇಕು ಮತ್ತು ಎಷ್ಟು ಗಂಟೆಗೆ ಮಲಗಬೇಕು ,

ಎಷ್ಟು ಗಂಟೆಗೆ ಬೆಳಗ್ಗೆ ಎದ್ದೇಳಬೇಕು ಅನ್ನೋದನ್ನು ತಿಳಿಯೋಣ ಮತ್ತು ನಿದ್ರಾಹೀನತೆ ಸಮಸ್ಯೆಯಿಂದ ನೀವೇನಾದರೂ ಬಳಲುತ್ತಿದ್ದರೆ ಆ ಒಂದು ಸಮಸ್ಯೆಗೆ ಪರಿಹಾರವನ್ನು ಕೂಡ ಈ ಮಾಹಿತಿಯಲ್ಲಿ ತಿಳಿಯೋಣ.

ತಪ್ಪದೇ ಒಂದು ಲೇಖನವನ್ನು ಸಂಪೂರ್ಣವಾಗಿ ತಿಳಿದು ಬೇರೆಯವರೊಂದಿಗೂ ಕೂಡ ಮಾಹಿತಿ ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಆರೋಗ್ಯ ಮಾಹಿತಿಗೆ ನಮ್ಮ ಪೇಜ್ ಲೈಕ್ ಮಾಡಿ .

ವೈದ್ಯರು ತಿಳಿಸುತ್ತಾರೆ ಒಬ್ಬ ಮನುಷ್ಯ ಎಂಟು ಗಂಟೆಗಳ ಕಾಲ ನಿದ್ರಿಸಬೇಕು ಅಂತ ಹಾಗೆಯೇ ಮಕ್ಕಳು ಹೆಚ್ಚಿನ ಕಾಲ ನಿದ್ರಿಸಬೇಕು ಅಂತ , ಹಾಗಾದರೆ ಮನುಷ್ಯ ಯಾಕೆ ಎಂಟು ಗಂಟೆಗಳ ಕಾಲ ನಿದ್ರಿಸಬೇಕು ಅಂತ ಹೇಳುವುದಾದರೆ ಆರೋಗ್ಯಕರ ಜೀವನಕ್ಕಾಗಿ ಮನುಷ್ಯ ನಿದ್ರಿಸಬೇಕು ,

ಇಲ್ಲವಾದಲ್ಲಿ ಅವನು ಆ ದಿನ ಕೆಲಸ ಮಾಡಿ ದಣಿವಾದಾಗ ಆದಂತಹ ಸುಸ್ತು ಹೋಗುವುದಿಲ್ಲ ಮತ್ತು ಮಾರನೆ ದಿವಸ ಚಟುವಟಿಕೆಯಿಂದ ಕೆಲಸವನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದಾಗಿ ಒಬ್ಬ ಮನುಷ್ಯ ೮ ಗಂಟೆಗಳ ಕಾಲ ನಿದ್ರಿಸಲೇಬೇಕು ಎಂದು ಹೇಳಲಾಗುವುದು .

ಆದರೆ ಇತ್ತೀಚಿನ ದಿನಗಳಲ್ಲಿ ಜನರು ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಕಾರಣದಿಂದಾಗಿ ಸರಿಯಾದ ಸಮಯಕ್ಕೆ ಮಲಗುವುದು ಇಲ್ಲ ಮತ್ತು ಸರಿಯಾದ ಸಮಯಕ್ಕೆ ಎದ್ದೇಳುವುದು ಇಲ್ಲ ಈ ರೀತಿ ಮಾಡುವುದರಿಂದ ಕೂಡ ಅನಾರೋಗ್ಯಕ್ಕೆ ಆದ್ದರಿಂದ ಆಯುರ್ವೇದದ ಪ್ರಕಾರ ಒಬ್ಬ ವ್ಯಕ್ತಿ ಇಂತಹ ಸಮಯಕ್ಕೆ ಮಲಗಬೇಕು ಮತ್ತು ಇಂತಹ ಸಮಯಕ್ಕೆ ಎದ್ದೇಳಬೇಕು ಎಂದು ಹೇಳಲಾಗುವುದು .

ಹಾಗಾದರೆ ಮಲಗುವುದಕ್ಕೆ ಸೂಕ್ತವಾದ ಸಮಯ ರಾತ್ರಿ ಎಂಟು ಗಂಟೆಗೆ ಮತ್ತು ಬೆಳಗ್ಗೆ ಬ್ರಾಹ್ಮೀ ಮುಹೂರ್ತದ ಕಾಲದಲ್ಲಿಯೇ ಎದ್ದೆ ಏಳುವುದರಿಂದ ಆರೋಗ್ಯ ವೃದ್ಧಿಸುತ್ತದೆ ,

ಬ್ರಾಹ್ಮಿ ಮುಹೂರ್ತ ಬೆಳಗ್ಗೆ ನಾಲ್ಕು ಗಂಟೆಯಿಂದ ಐದು ಗಂಟೆಗಳ ವರೆಗೂ ಇರುತ್ತದೆ ಈ ಸಮಯದಲ್ಲಿ ಮನುಷ್ಯ ಎದ್ದು ಪ್ರಕೃತಿಯಲ್ಲಿ ಉಸಿರಾಟವನ್ನು ಮಾಡುವುದರಿಂದ ಇದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು .ಯಾರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರಿಗಾಗಿ ಈ ದಿನ ನಾವು ಸುಲಭ ಮನೆ ಮದ್ದನ್ನು ತಿಳಿಸುತ್ತೇವೆ.

ಹೀಗೆ ಮಾಡಿದರೆ ಸಾಕು ಒಳ್ಳೆಯ ನಿದ್ರೆಯನ್ನು ಮಾಡಬಹುದು , ಮಲಗುವ ಅರ್ಧ ಗಂಟೆಯ ಮೊದಲು ಒಂದು ಗ್ಲಾಸ್ ಹಾಲಿಗೆ ಒಂದು ಚಮಚ ದೇಸಿ ಹಸುವಿನ ತುಪ್ಪ ಅರ್ಧ ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಬ್ರಾಹ್ಮಿ ಎಲೆಯ ಪುಡಿ ಸ್ವಲ್ಪ ಜಾಯಿಕಾಯಿ ಪುಡಿ ಮತ್ತು ಬಜೆಯ ಪುಡಿ ಅನ್ನು ಬೆರೆಸಿ ಕುಡಿಯುವುದರಿಂದ ಒಳ್ಳೆಯ ನಿದ್ರೆ ಬರುವುದು .

ಈ ರೀತಿ ಮಾಡಲು ಸಾಧ್ಯವಾಗದಿದ್ದಲ್ಲಿ ಸುಲಭವಾಗಿ ಒಂದು ರೆಸಿಪಿಯನ್ನು ಮಾಡಿ ತಿನ್ನುವುದರಿಂದ ಕೂಡ ನಿದ್ರೆ ಚೆನ್ನಾಗಿ ಬರುವುದು , ಮೊದಲಿಗೆ ಕೊಬ್ಬರಿ ತುರಿಯನ್ನು ತುರಿದುಕೊಂಡು ಅದಕ್ಕೆ ಸ್ವಲ್ಪ ಗಸಗಸೆ ಪುಡಿಯನ್ನು ನಂತರ ಪುಡಿ ಮಾಡಿದಂತಹ ಏಲಕ್ಕಿ ಪುಡಿಯನ್ನು ಹಾಕಬೇಕು ಹಾಗೆಯೇ ಒಂದು ಅಂಜೂರದ ಹಣ್ಣನ್ನು ಕತ್ತರಿಸಿ ಇದಕ್ಕೆ ಹಾಕಿಕೊಳ್ಳಬೇಕು .

ಇದಿಷ್ಟು ಮಾಡಿದ ಬಳಿಕ ಕಲ್ಲಂಗಡಿ ಬೀಜದ ಪುಡಿಯನ್ನು ಇದಕ್ಕೆ ಬೆರೆಸಿ ಚೆನ್ನಾಗಿ ಮಿಶ್ರಿತ ಮಾಡಿ ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ಆರೋಗ್ಯ ಕೂಡ ಚೆನ್ನಾಗಿರುತ್ತದೆ . ಇದನ್ನು ತಿನ್ನುವುದು ಹೇಗೆ ಅಂದರೆ ಮಲಗುವ ಎರಡು ಗಂಟೆಗಳ ಮುಂಚೆ ತಿನ್ನಬೇಕು ಅಂದರೆ ಊಟ ಮಾಡುವ ಒಂದು ಗಂಟೆಗಳ ಮುಂಚೆ ತಿನ್ನುವುದರಿಂದ ಬೊಜ್ಜು ಕೂಡ ಕರಗುವುದು ನಿದ್ರೆ ಕೂಡ ಚೆನ್ನಾಗಿ ಬರುತ್ತದೆ .