Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮಾನಸಿಕ ಒತ್ತಡವನ್ನ ಕಡಿಮೆ ಮಾಡಿಕೊಳ್ಳೊದು ಹೇಗೆ….!ಇದಕ್ಕೆ ಇದೆ ಉತ್ತಮ ಉಪಾಯ ..!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ಮಾಸ್ಟರ್ ಕಂಟ್ರೋಲ್ ಹೌದು ಈ ಮಿದುಳಿನ ಬಗ್ಗೆ ಒಂದಿಷ್ಟು ವಿಚಾರವನ್ನ ತಿಳಿಸಿಕೊಡುತ್ತವೆ ಮೆದುಳು ಅನ್ನೋದು ನಮ್ಮ ಇಡೀ ದೇಹದಲ್ಲಿ ಹೆಚ್ಚಿನ ಕೆಲಸವನ್ನು ಮಾಡುವ ಒಂದು ಅಂಗ ಅಂತ ಹೇಳಬಹುದು ಇನ್ನು ಕೆಲವರಿಗೆ ಇಡೀ ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವ ವಸ್ತು ಯಾವುದು ಅಂದರೆ.

ಕೆಲವರು ಬೆಳಕು ಇನ್ನ ಕೆಲವರು ಗಾಳಿ ಹೀಗೆಲ್ಲಾ ಉತ್ತರ ಹೇಳ್ತಾರೆ ಆದರೆ ಇನ್ನೂ ಕೆಲ ಬುದ್ದಿವಂತರು ಮನಸ್ಸು, ಮನಸ್ಸಿನಲ್ಲಿರುವ ಯೋಚನೆಗಳು ಅಂತ ಕೂಡ ಹೇಳ್ತಾರೆ. ಈ ಒಂದು ವಿಚಾರವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುವುದಾದರೆ ಮನಸ್ಸಿನಲ್ಲಿ ಯೋಚನೆಗಳು ಮೂಡುವುದಕ್ಕೂ ಕೂಡ ಮೂಲ ಮಿದುಳೆ ಆಗಿರುತ್ತದೆ.

ಹಾಗಾದರೆ ಇಷ್ಟೆಲ್ಲ ಕೆಲಸವನ್ನು ಮಾಡುವ ಮೆದುಳಿಗೆ ಆಗಾಗ ಆಯಸ್ಸು ಆಗ್ತಾನೇ ಇರುತ್ತದೆ. ಮೆದುಳಿಗೆ ಸುಸ್ತಾ ಅಂತ ನೀವು ಯೋಚನೆ ಮಾಡಬಹುದು ಹೌದು ಕೆಲವೊಂದು ಬಾರಿ ನಮ್ಮ ಮೆದುಳು ವಿಪರೀತವಾಗಿ ಕೆಲಸ ಮಾಡಲು ಶುರು ಮಾಡಿಬಿಡುತ್ತದೆ ಆಗ ನಮ್ಮ ಮಿದುಳಿನಲ್ಲಿ ಎಷ್ಟೆಲ್ಲ ಯೋಚನೆಗಳು ಓಡಾಡುತ್ತಾ ಇರುತ್ತದೆ ಅಲ್ವಾ. ಹಾಗಾದರೆ ನಾವು ಈ ಮೆದುಳಿಗೆ ವಿಶ್ರಾಂತಿಯನ್ನು ಹೇಗೆ ನೀಡುವುದು? ಇದಕ್ಕೂ ಕೂಡ ಕೆಲವೊಂದು ಟಿಪ್ಸ್ ಗಳು ಇವೆ. ಅದನ್ನು ನಾವು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ನೀವು ಇದನ್ನು ಪಾಲಿಸಿದರೆ ಸಾಕು ನಿಮ್ಮ ಮಿದುಳಿಗೆ ವಿಶ್ರಾಂತಿ ದೊರೆಯುತ್ತದೆ ನಿಮ್ಮ ಮಿದುಳಿನ ಮೇಲೆ ಆಗುವ ಒತ್ತಡ ಕಡಿಮೆಯಾಗುತ್ತದೆ.

* ಮೊದಲನೆಯದಾಗಿ ನಿಮ್ಮ ಯೋಚನೆಗಳನ್ನು ಬರವಣಿಗೆಯ ರೂಪದಲ್ಲಿ ಬರೆದಿಡಿ. ಹೌದು ನಿಮ್ಮ ಮೆದುಳಿಗೆ ಹೆಚ್ಚು ಯೋಚನೆ ಬಂದಾಗ ಅದು ನಿಮ್ಮ ಮೆದುಳಿಗೆ ಹೆಚ್ಚು ಒತ್ತಡ ಆಗುತ್ತಿದೆ ಅಂದಾಗ ನೀವು ಅದನ್ನ 1ಪೇಪರ್ ಮೇಲೆ ಬರೆದಿಡಿ ಆಗ ನಿಮ್ಮ ಮೆದುಳಿನ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತಾ ಬರುತ್ತದೆ. ಇದೊಂದು ಉತ್ತಮವಾದ ಹವ್ಯಾಸ ಎಷ್ಟೊ ಮಂದಿ ಈ ಪರಿಹಾರವನ್ನು ಮಾಡಿಕೊಂಡು ತಮ್ಮ ಮಿದುಳಿನ ಮೇಲೆ ಆಗುವ ಒತ್ತಡವನ್ನು ಕಡಿಮೆ ಮಾಡಿಕೊಂಡಿದ್ದಾರೆ.

* ಎರಡನೆಯದಾಗಿ ಧ್ಯಾನ, ಎಷ್ಟು ಮಂದಿ ಧ್ಯಾನ ಅಂದರೆ ಮುಖ ಮರೆತರೆ ದೂರ ಸರಿದರು ಆದರೆ ಧ್ಯಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ ಆದ ಕಾರಣ ಮೆದುಳಿನ ಮೇಲೆ ಬೀರುವ ಒತ್ತಡವನ್ನು ಕಡಿಮೆ ಮಾಡಲು ಈ ಪರಿಹಾರ ಉತ್ತಮ ಮತ್ತು ಸರಳ ಮತ್ತು ಸುಲಭ ಅಂತ ಹೇಳಬಹುದು. ಈ ಧ್ಯಾನ ಮಾಡುವುದರಿಂದ ನಿಮ್ಮ ಮೆದುಳಿನ ಮೇಲೆ ಆಗುವ ಒತ್ತಡ ಸಾಕಷ್ಟು ಕಡಿಮೆ ಆಗುತ್ತದೆ.

* ಮೂರನೆಯದಾಗಿ ವ್ಯಾಯಾಮ, ಹೌದು ವ್ಯಾಯಾಮವನ್ನು ಮಾಡುವುದರಿಂದ ಮೆದುಳಿನ ಮೇಲೆ ಆಗುವ ಒತ್ತಡ ಕೂಡ ಕಡಿಮೆಯಾಗುತ್ತದೆ. ಇನ್ನು ದೇಹದ ಮೇಲೆ ಆಗುತ್ತಿರುವ ಒತ್ತಡ ಕೂಡ ಕಡಿಮೆಯಾಗುತ್ತದೆ ಏನಂತಿರ ಫ್ರೆಂಡ್ಸ್ ಪ್ರತಿದಿನ ವ್ಯಾಯಾಮ ಮಾಡ್ತೀರಾ ಅಲ್ವಾ.

* ನಾಲ್ಕನೆಯ ಪರಿಹಾರ ನೀವು ದೇವರನ್ನು ನಂಬುವುದಾದರೆ ದೇವರ ಮೊರೆ ಹೋಗಿ ಅಥವಾ ನೀವು ನಿಮ್ಮನ್ನ ನಂಬೋದು ಅಥವಾ ನಿಮ್ಮ ನಂಬಿಕೆಗಳನ್ನ ನಂಬುವುದಾದರೆ ಆ ನಂಬಿಕೆಗಳ ಬಗ್ಗೆ ಸ್ವಲ್ಪ ಸಮಯ ಯೋಚನೆ ಮಾಡಿ ಆಗ ನಿಮ್ಮ ಮೆದುಳಿನ ಮೇಲೆ ಬೀರುತ್ತಿರುವ ಒತ್ತಡ ಕಡಿಮೆ ಆಗುತ್ತದೆ. ಇಂತಹ ಕೆಲವೊಂದು ಪರಿಹಾರಗಳು ನಿಮ್ಮ ಮೆದುಳಿನ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಿ ನಿಮ್ಮ ದೇಹದ ಮೇಲೆ ಮಾನಸಿಕವಾಗಿ ಆಗುವ ಒತ್ತಡತೆಯನ್ನು ಕೂಡ ಕಡಿಮೆ ಮಾಡುತ್ತದೆ ದೇಹದ ಆರೋಗ್ಯವನ್ನು ಕಾಪಾಡುತ್ತದೆ.