Categories
ಮಾಹಿತಿ ಸಂಗ್ರಹ

ಮುದೋಳ ನಾಯಿಯ ಇತಿಹಾಸ ಏನು ಗೊತ್ತಾ … ಭಾರತದ ಮಿಲಿಟರಿಯೇ ಶಾಕ್ ಆಗಿರೋದು ಯಾಕೆ ಗೊತ್ತ ….

ಭಾರತ ಸೇನೆಯಲ್ಲಿಯೂ ಇದೀಗ ನಮ್ಮ ರಾಜ್ಯದ ಮುಧೋಳ್ ನಾಯಿಯ ಬಳಕೆಯಾಗುತ್ತಿದೆ ಅಂದರೆ ಈ ಬೇಟೆ ನಾಯಿಯ ಬಗ್ಗೆ ನಾವು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡಿರಲೇ ಬೇಕು, ಹೌದು ಮುಧೋಳ ನಾಯಿಯ ಬಗೆಗಿನ ಸ್ವಲ್ಪ ಹಿನ್ನೆಲೆಯನ್ನು ನಾವು ಹುಡುಕುತ್ತಾ ಹೋದರೆ .

ನಾವು ಈ ಬೇಟೆ ನಾಯಿಯನ್ನು ಕುರಿತು ಸಾಕಷ್ಟು ವಿಚಾರಗಳನ್ನು ಕೇಳಬಹುದು ಅದನ್ನೇ ನಾವು ಈ ದಿನದ ಈ ಲೇಖನದಲ್ಲಿ ನಿಮಗೆಲ್ಲರಿಗೂ ತಿಳಿಸಿಕೊಡಲು ಬಂದಿದ್ದೇವೆ ಈ ಮಾಹಿತಿ ನಿಮಗೆ ನಿಜಕ್ಕೂ ಯೂಸ್ಫುಲ್ ಹಾಗೂ ಇಂಟರೆಸ್ಟಿಂಗ್ ಆಗಿರುತ್ತದೆ ತಪ್ಪದೆ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಮಾಹಿತಿ ಇಷ್ಟ ಆದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೂ ಇದನ್ನ ಶೇರ್ ಮಾಡಿ.

ಮುಧೋಳ ನಾಯಿಯ ಮೂಲ ಎಲ್ಲರೂ ಕೂಡ ಅಂದುಕೊಂಡಿರುವ ಹಾಗೆ ಮುಧೋಳ ಅಲ್ಲಾ, ಈ ನಾಯಿಯು ಮೊದಲು ಇದ್ದದ್ದಾದರೂ ಎಲ್ಲಿ ಅಂತ ಹೇಳುವುದಾದರೆ ಇವು ಪರ್ಶಿಯಾದ ಸಿಲುಕಿ ಮತ್ತು ಅಫ್ಘಾನ್ನ ತಾಜಿನ್ ನಾಯಿಯ ತಳೀಯ ಕುಲಕ್ಕೆ ಸೇರಿದ ನಾಯಿಯಾಗಿದ್ದು.

ಅಫ್ಘನ್ನರು ಪಠಾಣರು ಪರ್ಷಿಯನ್ನರು ಖೈಬರ್ ಪಾಸ್ ಎಂಬ ಬೆಟ್ಟದ ಮೂಲಕ ಈ ನಾಯಿಯ ತಳಿಯನ್ನು ಭಾರತಕ್ಕೆ ತಂದರು. 1884 ರಿಂದ 1937 ರ ನಡುವೆ ಬ್ರಿಟಿಷ್ ಆಳ್ವಿಕೆ ಅಲ್ಲಿ ಬಾಗಲಕೋಟೆಯ ಪ್ರದೇಶವನ್ನು ರಾಜಾಸಾಹೇಬ್ ವೆಂಕಟ ಗೋಪಾಲ ಎಂಬ ರಾಜರು ಆಳ್ವಿಕೆ ನಡೆಸುತ್ತಿದ್ದರು, ಈ ಮುಧೋಳ ತಳಿಯನ್ನು ಮೊದಲು ಇಲ್ಲಿ ತಂದು ಸಾಕಲಾಗಿತ್ತು. ಈ ಪ್ರದೇಶಕ್ಕೆ ಸೇರಿದ ಬುಡಕಟ್ಟು ಜನಾಂಗದವರು ಕೂಡ ನಂತರ ಮುಧೋಳ ನಾಯಿ ಅನ್ನು ಬೇಟೆಗಾಗಿ ಬಳಸುತ್ತಿದ್ದರು.

ಇನ್ನು ಮಾಲೋಜಿ ರಾವ್ ರವರು ಈ ನಾಯಿಯ ಸಣ್ಣನೆಯ ಮೈಕಟ್ಟನ್ನು ಕಂಡು ಇದನ್ನು ಬೇಟೆಗಾಗಿ ಬಳಸುತ್ತಿದ್ದರಂತೆ. ೧೯೦೦ ರಲ್ಲಿ ಮಾಲೋಜಿ ರಾವ್ ರವರು ಇಂಗ್ಲೆಂಡ್ ನ ಕಿಂಗ್ ಜಾರ್ಜ್ ಎಂಬುವವರಿಗೆ ಎರಡು ಜೊತೆ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದು ಈ ಬೇಟೆ ನಾಯಿಗಳ ಪ್ರಸಿದ್ಧತೆ ಅಲ್ಲಿನಿಂದ ಇಂಗ್ಲೆಂಡ್ನಲ್ಲಿಯೂ ಕೂಡ ಹಬ್ಬಲು ಶುರುವಾಯಿತು.

ಇನ್ನು ಈ ನಾಯಿಗಳ ಬಗ್ಗೆ ಹೆಚ್ಚು ಹೇಳಬೇಕೆಂದರೆ ಈ ಬೇಟೆ ನಾಯಿಗಳು ಇವತ್ತಿಗೂ ಕೂಡ ಬಾಗಲಕೋಟೆಯ ಮುಧೋಳದಲ್ಲಿ ಸುಮಾರು ಏಳು ನೂರು ಕುಟುಂಬಗಳು ಈ ತಳಿಯನ್ನು ಸಾಕುತ್ತಾರೆ ಹಾಗೂ ಈ ಬೇಟೆ ನಾಯಿಗಳು ಅಷ್ಟು ಸುಲಭವಾಗಿ ಯಾವ ಆರೋಗ್ಯ ಸಮಸ್ಯೆಗಳಿಗೂ ಜಗ್ಗುವುದಿಲ್ಲ. ಸುಮಾರು ಹತ್ತರಿಂದ ಹನ್ನೆರಡು ವರುಷಗಳ ವರೆಗೂ ಬದುಕಬಲ್ಲ ಈ ನಾಯಿಗಳನ್ನು ಇದೀಗ ಸೇನೆಯಲ್ಲಿಯೂ ಕೂಡ ಬಳಸಲಾಗುತ್ತಿದೆ.

ಲ್ಯಾಬ್ರಡಾರ್ ಜರ್ಮನ್ ಶಫರ್ಡ್ ಬೆಲ್ಜಿಯಂ ಶಫರ್ಡ್ ನಂತಹ ತಳಿಗಳ ನಡುವೆಯೂ ಇದೀಗ ನಮ್ಮ ರಾಜ್ಯಕ್ಕೆ ಸೇರಿದ ಮುಧೋಳ್ ತಳಿ ದೇಶ ವಿದೇಶಗಳಲ್ಲಿ ಸಕತ್ ಪ್ರಸಿದ್ಧ ಯನ್ನು ಹೊಂದುತ್ತಿದೆ ಎಂದರೆ ಇದೊಂದು ಹೆಮ್ಮೆ ಪಡುವಂತಹ ವಿಚಾರವೇ ಆಗಿದೆ ಎನ್ನುವ ಆರ್ಮಿಯಲ್ಲಿ ಈ ಮುಧೋಳ ನಾಯಿಗಳಿಗೆ ವಿಶೇಷವಾದ ಟ್ರೈನಿಂಗ್ ಅನ್ನು ಕೂಡ ನೀಡಲಾಗುತ್ತದೆ.

ಮುಧೋಳ ನಾಯಿಯ ಬಗ್ಗೆ ತಿಳಿಯಬೇಕಾದ ಮತ್ತೊಂದು ಮಹತ್ವಕರ ವಿಚಾರವು ಎನು ಅಂದರೆ ಇದೊಂದು ಬೇಟೆ ನಾಯಿ ಜಾತಿಗೆ ಸೇರಿದ್ದು, ಇದು ಬೇಟೆಗೆ ಇಳಿದರೆ ಒಂದು ತಾನು ಸಾಯಬೇಕು ಇಲ್ಲ ಎದುರಾಳಿ ಸಾಯಬೇಕು ಅಲ್ಲಿಯವರೆಗೂ ಬೇಟೆಯನ್ನು ಈ ನಾಯಿ ನಿಲ್ಲಿಸುವುದಿಲ್ಲ. ನಿಜಕ್ಕೂ ಈ ಒಂದು ಬೇಟೆ ನಾಯಿ ನಮ್ಮ ರಾಜ್ಯದ ತಳಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸುತ್ತದೆ ಏನಂತೀರಾ ಫ್ರೆಂಡ್ಸ್.