Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮೂಗು ಗಂಟಲು ಎದೆಯಲ್ಲಿ ಕಟ್ಟಿದ ಕಫ ತಕ್ಷಣ ಹೋಗಲು ಈ ಮನೆಮದ್ದು | ಶೀತ ಕೆಮ್ಮು ಅಲರ್ಜಿ ಹೋಗುತ್ತೆ ..!

ಗಂಟಲು ಎದೆ ಮೂಗು ಇಂತಹ ಭಾಗಗಳಲ್ಲಿ ಕಟ್ಟಿರುವಂತಹ ಕಫವನ್ನು ಕರಗಿಸುವುದಕ್ಕಾಗಿ ಮನೆಯಲ್ಲಿಯೆ ಕೆಲವೊಂದು ಸುಲಭ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಈ ಗಂಟಲು ಕಟ್ಟಿದ್ದರೆ ಅಥವಾ ಎದೆಯಲ್ಲಿ ಗಂಟಲಿನಲ್ಲಿ ಮತ್ತು ಮೂಗಿನಲ್ಲಿ ಕಟ್ಟಿರುವಂತಹ ಕಫವನ್ನು ತರಿಸುವುದಕ್ಕಾಗಿ ನೀವು ಮನೆಯಲ್ಲಿಯೇ ದೊರೆಯುವಂತಹ ಅತ್ಯಂತ ಸುಲಭ ಪದಾರ್ಥಗಳನ್ನು ಬಳಸಿ ಪರಿಹಾರಗಳನ್ನು ಮಾಡಿಕೊಳ್ಳಬಹುದು ಇದರ ಜೊತೆಗೆ ಬೇಗನೆ ನಿಮಗೆ ಈ ಗಂಟಲು ನೋವಿನಿಂದ ಮತ್ತು ಗಂಟಲಿನ ಕಟ್ಟಿರುವಂತಹ ಕಫದಿಂದ ಶಮನ ಕೂಡ ದೊರೆಯುತ್ತದೆ. ಆ ಪರಿಹಾರಗಳು ಏನು ಎಂಬುದನ್ನು ತಿಳಿಯೋಣ ಕೆಳಗಿನ ಮಾಹಿತಿಯಲ್ಲಿ.

ಮೊದಲನೆಯದಾಗಿ ನೀವು ಒಂದು ಡ್ರಿಂಕ್ ಅನ್ನ ಮಾಡಿಕೊಳ್ಳಬಹುದು ಈ ಡ್ರಿಂಕ್ ಗಾಗಿ ಬೇಕಾಗಿರುವಂಥ ಪದಾರ್ಥಗಳು ಶುಂಠಿ ಏಲಕ್ಕಿ ಮತ್ತು ಒಂದು ಲೋಟ ನೀರು. ಮೊದಲಿಗೆ ಒಂದರಿಂದ ಒಂದೂವರೆ ಲೋಟ ನೀರನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಶುಂಠಿಯನ್ನು ಸಣ್ಣದಾಗಿ ಕತ್ತರಿಸಿ ಸ್ವಲ್ಪ ಜಜ್ಜಿ ನೀರಿಗೆ ಹಾಕಿ. ಇದೀಗ ಎರಡು ಏಲಕ್ಕಿ ಅನ್ನು ಹಾಕಿ ಈ ನೀರನ್ನು ಕುದಿಸ ಬೇಕು. ನೀರು ಒಂದೂವರೆ ಲೋಟದಿಂದ ಒಂದು ಲೋಟಕ್ಕೆ ನೀರಿನ ಪ್ರಮಾಣ ಬರಬೇಕು ಅಷ್ಟು ಪ್ರಮಾಣದಲ್ಲಿ ನೀರನ್ನು ಕುದಿಸಿ ಈ ನೀರನ್ನು ಶೋಧಿಸಿ ಕುಡಿಯುವುದರಿಂದ ಗಂಟಲಿನಲ್ಲಿ ಕಟ್ಟಿರುವಂತಹ ಕಫ ಬೇಗನೆ ಶಮನವಾಗುತ್ತದೆ.

ಎರಡನೆಯದಾಗಿ ಈ ಪರಿಹಾರ ಗಂಟಲು ನೋವನ್ನು ಕೂಡ ಕಡಿಮೆ ಮಾಡುತ್ತದೆ ಕೆಮ್ಮನ್ನು ಕೂಡ ಶಮನಗೊಳಿಸುತ್ತದೆ ಮತ್ತು ಎದೆಯಲ್ಲಿ ಕಟ್ಟಿರುವಂತಹ ಕಸವನ್ನು ಕೂಡ ಕರಗಿಸಲು ಸಹಕರಿಸುತ್ತದೆ ಅದೇನೆಂದರೆ ಅನಾನಸ್ ಹೌದು ಈ ಅನಾನಸ್ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಮೆಣಸಿನ ಕಾಲಿನ ಪುಡಿಯನ್ನು ಮಿಶ್ರ ಮಾಡಬೇಕು ನಂತರ ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಕೂಡ ನೀವು ಬೆರೆಸಿಕೊಳ್ಳಬಹುದು ಆದರೆ ಉಪ್ಪನ್ನು ಮಾತ್ರ ಬಳಸಬೇಡಿ. ನಂತರ ಈ ಅನಾನಸ್ ಅನ್ನು ತಿನ್ನುವುದರಿಂದ ಕೂಡ ಕೆಮ್ಮಿ ನಿಂದ ಹಿಡಿದು ಗಂಟಲಿನಲ್ಲಿ ಕಟ್ಟಿರುವಂತಹ ಕಫವು ಕೂಡಾ ಕರಗುತ್ತದೆ. ಕೆಮ್ಮು ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಮೂರನೆಯದಾಗಿ ಎದೆಯಲ್ಲಿ ಗಂಟಲಿನಲ್ಲಿ ಕಟ್ಟಿರುವಂತಹ ಕಫ ಕರಗಬೇಕು ಅಂದರೆ ಈರುಳ್ಳಿಯಿಂದ ಈರುಳ್ಳಿಯ ರಸವನ್ನು ತೆಗೆದು ಅದಕ್ಕೆ ಬೆಲ್ಲ ಅಥವಾ ಜೇನು ತುಪ್ಪವನ್ನು ಬೆರೆಸಿ ರಾತ್ರಿ ಸಮಯದಲ್ಲಿ ಕುಡಿದು ಮಲಗಬೇಕು ನಂತರ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬಾರದು ಈ ರೀತಿ ಈರುಳ್ಳಿಯ ರಸ ಮತ್ತು ಬೆಲ್ಲ ಅಥವಾ ಜೇನು ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಗಂಟಿನಲ್ಲಿ ಕಟ್ಟಿರುವಂತಹ ಕಫ ಕರಗುತ್ತದೆ ಕೆಮ್ಮು ನಿವಾರಣೆಯಾಗುತ್ತದೆ. ಅಷ್ಟೆಲ್ಲ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಈರುಳ್ಳಿಯನ್ನು ತಿನ್ನುವುದರಿಂದ ಬಿಪಿ ಕಂಟ್ರೋಲ್ಗೆ ಬರುತ್ತದೆ ಮತ್ತು ಕೆಮ್ಮು ಕೂಡ ನಿವಾರಣೆಯಾಗುತ್ತದೆ.

ಇನ್ನು ಹಿಪ್ಪಲಿ ಇದರ ಹೆಸರನ್ನು ನೀವು ಕೇಳಿರಬಹುದು ಈ ಹಿಪ್ಪಲಿ ನಿಮಗೆ ಆಯುರ್ವೇದದ ಅಂಗಡಿಯಲ್ಲಿ ದೊರೆಯುತ್ತದೆ ಈ ಹಿಪ್ಪಲಿಯ ಹಂಚಿನ ಮೇಲೆ ಹಾಕಿ ಸ್ವಲ್ಪ ಸಮಯ ಹುರಿದು ಅದನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ನಂತರ ಇದನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಕ್ಕಳ ನಾಲಿಗೆಗೆ ಸ್ವಲ್ಪವೇ ಸ್ವಲ್ಪ ಹಚ್ಚಬೇಕು ಇದರಿಂದ ಕಫ ಕರಗುತ್ತದೆ ಮತ್ತು ಕೆಮ್ಮು ಕೂಡ ಬೇಗನೆ ನಿವಾರಣೆಯಾಗುತ್ತದೆ. ದೊಡ್ಡವರು ಕೂಡ ಈ ಹಿಪ್ಪಲಿಯ ಪುಡಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದರಿಂದ ಕೆಮ್ಮು ನಿವಾರಣೆಯಾಗುತ್ತದೆ ಹಾಗೆ ಗಂಟಲಿನಲ್ಲಿ ಇರುವ ಕಫ ಗುಣ ಕರಗುತ್ತದೆ.