Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಮೂತ್ರ ಮಾಡುವ ಸಮಯದಲ್ಲಿ ಉರಿ ಬಂದರೆ ಎಚ್ಚರ ಈ ಸಮಸ್ಯೆಗಳು ನಿಮ್ಮನ್ನು ಕಾಡಲಿದೆ..!!

ಮೂತ್ರ ವ್ಯಾಧಿ ಪ್ರಾರ್ಥಮಿಕ ಕಾರಣ ಅಸ್ವಚ್ಛತೆ ಮೂತ್ರ ನಾಳದಲ್ಲಿ ಸೋಂಕು ಉಂಟಾದಾಗ ಮೂತ್ರ ವಿಸರ್ಜನೆ ಮಾಡಿದಾಗ ನೋವು ಉರಿ ಕಾಣಿಸಿಕೊಳ್ಳುವುದು, ಅಂತಹ ನೋವನ್ನು ಶಮನಗೊಳಿಸಲು ಕೆಲವು ಸಲಹೆಗಳು ಮತ್ತು ಸೂಚನೆಗಳು.

ಮೂತ್ರ ವಿಸರ್ಜಿಸುವ ಸ್ಥಳವನ್ನು ಸೂಚಿಯಾಗಿ ಇಟ್ಟುಕೊಳ್ಳಬೇಕು.ಮೂತ್ರ ವಿಸರ್ಜಿಸುವಾಗ ಉರಿ ಉಂಟಾದರೆ ಮೊಸರು ಅನ್ನಕ್ಕೆ ಬೆಲ್ಲ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ತಿನ್ನಬೇಕು ಆಗ ಉರಿ ಶಮನ ಆಗುವುದು.

ಮೂತ್ರ ಮಾಡುವಾಗ ಉರಿ ಕಂಡು ಬಂದರೆ ಒಂದು ಗ್ಲಾಸ್ ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಶಮಾನ ಗೊಳ್ಳುವುದು.

ಮೂತ್ರ ವಿಸರ್ಜಿಸುವಾಗ ಉರಿ ಕಂಡು ಬಂದರೆ ಒಂದು ಉಪಾಯ ಉಂಟು, ಬಿಸಿನೀರಿಗೆ ನಿಂಬೆ ರಸ ಹಿಂಡಿ ಕೊಂಡು ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ ಆಗ ಮೂತ್ರದಲ್ಲಿ ಉರಿ ದೂರವಾಗುವುದು.

ಮೂತ್ರ ಮಾಡುವಾಗ ಉಂಟಾಗುವ ಉರಿಯನ್ನು ದೂರ ಮಾಡಲು ಕೆಂಪಕ್ಕಿ ಅನ್ನವನ್ನು ಮಾಡಿಕೊಂಡು ನಿಂಬೆ ರಸ ಮತ್ತು ಮೊಸರು ಹಾಕಿಕೊಂಡು ಊಟ ಮಾಡಿ ಆಗ ಮೂತ್ರದಲ್ಲಿ ಉರಿ ನಿವಾರಣೆಯಾಗುವುದು.

ಒಂದು ಗ್ಲಾಸ್ ಎಳನೀರಿಗೆ ಸ್ವಲ್ಪ ಬೆಲ್ಲ ಸೇರಿಸಿ ನಂತರ ಒಂದು ಚಮಚ ಹವೀಜದ ಚೂರ್ಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ ಆಗಾಗ ಮೂತ್ರ ಉರಿ ದೂರವಾಗುವುದು.

ನಿಂಬೆರಸವನ್ನು ಆಹಾರದಲ್ಲಿ ಬಳಸಿ ಆಗ ಮೂತ್ರದ ಉರಿ ನೋವು ದೂರವಾಗುವುದು.

ಮೂತ್ರ ವಿಸರ್ಜನೆ ಮಾಡುವಾಗ ಉರಿ ನೋವು ಕಂಡುಬಂದರೆ ಹಾಗೂ ಮೂತ್ರ ವಿಸರ್ಜನೆ ಸರಾಗವಾಗಿ ನಡೆಯದಿದ್ದರೆ ಒಂದು ಕೆಲಸ ಮಾಡಿ ಕಬ್ಬಿನ ರಸಕ್ಕೆ ಹಸಿ ಶುಂಠಿ ರಸ ನಿಂಬೆರಸ ಎಲ್ಲಕಿಯ ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಬೆರೆಸಿ ನಂತರ ಕುಡಿಯಿರಿ ಆಗ ಮೂತ್ರ ವಿಸರ್ಜನೆ ಸರಾಗವಾಗಿ ನಡೆಯುವುದು.

ಮೂತ್ರ ವಿಸರ್ಜನೆ ಸರಾಗವಾಗಿ ನಡೆಯಲು ಬಿಳಿ ದ್ರಾಕ್ಷಿಯನ್ನು ಸೇವಿಸಿ.

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಟೊಮೆಟೋ ಹಣ್ಣನ್ನು ಸೇರಿಸಿದರೆ ಸಾಕು ಮೈಯಲ್ಲಿ ಶೇಖರವಾಗಿರುವ ಬೊಜ್ಜು ಕರಗುವುದು ಮಲಬದ್ಧತೆ ನಿವಾರಣೆ ಆಗುವುದು ಮೂತ್ರ ಸರಾಗವಾಗಿ ವಿಸರ್ಜನೆ ಆಗುವುದು.

ಕಲ್ಲಂಗಡಿ ಹಣ್ಣನ್ನು ಯಥೇಚ್ಛವಾಗಿ ಸೇವಿಸುವುದರಿಂದ ಮೂತ್ರವು ಸಾರಾಗವಾಗಿ ವಿಸರ್ಜನೆ ಆಗುವುದು.

ಮೂಲಂಗಿ ಸೊಪ್ಪಿನ ರಸವನ್ನು ಕುಡಿಯುವುದರಿಂದ ಮೂತ್ರ ಸರಾಗವಾಗಿ ಬಿಡುಗಡೆ ಆಗುವುದು.

ಕಲ್ಲಂಗಡಿ ಹಣ್ಣಿನ ರಸಕ್ಕೆ ನಿಂಬೆ ರಸವನ್ನು ಬೆರೆಸಿಕೊಂಡು ಸೇವಿಸಬೇಕು ಮೂತ್ರ ವ್ಯಾಧಿಗಳು ದೂರವಾಗುವುದು.

ಮೂತ್ರದಲ್ಲಿ ಉರಿ ಇದ್ದರೆ ಮುಂಜಾನೆ ಖಾಲಿ ಹೊಟ್ಟೆಗೆ ನೀರನ್ನು ಸೇವಿಸಬೇಕು, ಆಗ ಮೂತ್ರದ ಉರಿ ಮತ್ತು ಮೂತ್ರವು ಸರಾಗವಾಗಿ ವಿಸರ್ಜನೆ ಆಗುವುದು.

ಅನಾನಸ್ ರಸವನ್ನು ಕುಡಿಯುವುದರಿಂದ ಮೂತ್ರ ವ್ಯಾಧಿಯನ್ನು ದೂರ ಮಾಡಬಹುದು.

ಸಿಹಿ ದಾಳಿಂಬೆ ಹಣ್ಣಿನ ರಸವನ್ನು ಸೇವಿಸುವುದರಿಂದ ಮೂತ್ರಪಿಂಡದ ರೋಗವನ್ನು ದೂರ ಮಾಡಬಹುದು ಮೂತ್ರ ವ್ಯಾಧಿಗಳನ್ನು ದೂರ ಮಾಡಬಹುದು.

ಬಾಳೆ ಹೂವಿನ ರಸ ಮತ್ತು ಸೌತೆಕಾಯಿ ರಸವನ್ನು ಸೇರಿಸಿ ಕುಡಿಯುವುದರಿಂದ ಮೂತ್ರ ವ್ಯಾಧಿಗಳು ದೂರವಾಗುತ್ತದೆ ಹಾಗಾಗಿ ಮೂತ್ರವು ಸರಾಗವಾಗಿ ವಿಸರ್ಜನೆ ಆಗುವುದು.

ರಾತ್ರಿ ಮಲಗುವಾಗ ಮೊದಲು ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುವವರಿಗೆ ಒಳ್ಳೆಯದು ಇದು ಬಹು ಮೂತ್ರ ರೋಗವನ್ನು ಹತೋಟಿಯಲ್ಲಿಡುವುದು.

ಮೂತ್ರ ವ್ಯಾಧಿಯಿಂದ ನರಳುವವರು ನೆಲ್ಲಿಕಾಯಿ ಪುಡಿಯನ್ನು ನೀರಿಗೆ ಬೆರೆಸಿ ನಂತರ ಶೋಧಿಸಿ ಶೋಧಿಸಿದ ನೀರಿಗೆ ಸಕ್ಕರೆ ಹಾಕಿ ಪಾನಕ ಮಾಡಿಕೊಂಡು ಕುಡಿಯಬೇಕು ಆಗ ರೋಗವು ನಿವಾರಣೆಯಾಗುವುದು.

ಹೆಚ್ಚಾಗಿ ನೀರನ್ನು ಕುಡಿಯಬೇಕು ಆಗ ಮೂತ್ರ ವ್ಯಾಧಿ ದೂರವಾಗುತ್ತದೆ.