Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ

ಮೊಳಕೆ ಕಾಳುಗಳನ್ನ ಯಾವ ಸಮಯದಲ್ಲಿ ಹೇಗೆ ತಿಂದರೆ ಹೆಚ್ಚು ಪ್ರಯೋಜನ ಗೊತ್ತ …

ಮೊಳಕೆ ಕಟ್ಟಿದ ಕಾಳು ಈ ಕಾಳುಗಳನ್ನು ತಿನ್ನುವುದರಿಂದ ಎಷ್ಟೆಲ್ಲ ಲಾಭಗಳಿವೆ ಅಂತ ನೀವು ಈಗಾಗಲೇ ಹಿಂದಿನ ಮಾಹಿತಿಯಲ್ಲಿ ಓದಿದ್ದೀರಾ ಮತ್ತು ತಿಳಿದುಕೊಂಡಿದ್ದೀರಾ ಹೌದು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಅಂದರೆ ಯಾವುದೆಂದರೆ ಯಾವುದೇ ಸಮಯದಲ್ಲಿ ಈ ರೀತಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಯಾವುದೇ ಲಾಭಗಳು ಇರುವುದಿಲ್ಲ .

ಹಾಗಾದರೆ ಈ ಒಂದು ಮೊಳಕೆ ಕಾಳುಗಳನ್ನು ಯಾವ ರೀತಿ ಸೇವಿಸಬೇಕು ಮತ್ತು ಯಾವ ಸಮಯದಲ್ಲಿ ಸೇವಿಸಿದರೆ ಒಳ್ಳೆಯ ಉತ್ತಮ ಫಲಿತಾಂಶ ಸಿಗಲಿವೆ ಅನ್ನೋದನ್ನು ಈ ಒಂದು ಮಾಹಿತಿಯಲ್ಲಿ ತೆಗೆದುಕೊಳ್ಳೋಣ , ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಂತರ ನಿಮ್ಮ ಗೆಳೆಯರಿಗೂ ಕೂಡಾ ತಪ್ಪದೇ ಇಂತಹ ಉಪಯುಕ್ತ ಆರೋಗ್ಯ ಮಾಹಿತಿಯನ್ನು ಶೇರ್ ಮಾಡಿ .

ಹೌದು ಸ್ನೇಹಿತರೇ ನೀವೆಲ್ಲರೂ ಆರೋಗ್ಯ ಪದ್ಧತಿಯಲ್ಲಿ ಕೇವಲ ತರಕಾರಿಗಳನ್ನು ಸೊಪ್ಪುಗಳನ್ನು ಬಳಸಿದರೆ ಸಾಕು ಒಳ್ಳೆಯ ಪೌಷ್ಟಿಕಾಂಶ ದೊರೆಯುತ್ತದೆ ಅಂತ ಅಂದುಕೊಂಡಿರುತ್ತೀರಿ ಆದರೆ ಆಹಾರ ಪದ್ಧತಿಯಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ಬಳಸುವುದರಿಂದ ಸಾಕಷ್ಟು ಲಾಭಗಳಿವೆ ಮತ್ತು ಒಂದು ಹಿಡಿ ಮೊಳಕೆ ಕಟ್ಟಿದ ಕಾಳನ್ನು ತಿನ್ನೋದರಿಂದ ದಿನವಿಡೀ ನಾವು ಶಕ್ತಿಯಿಂದ ಇರಬಹುದು ಅಷ್ಟು ಪೌಷ್ಟಿಕಾಂಶ ಇರುತ್ತದೆ ಈ ಒಂದು ಮೊಳಕೆ ಕಟ್ಟಿದ ಕಾಲುಗಳಲ್ಲಿ .

ಮೊಳಕೆ ಕಟ್ಟಿದ ಕಾಳಿನಲ್ಲಿ ಫೈಬರ್ ಅಂಶವು ಹೆಚ್ಚಾಗಿರುವುದರಿಂದ ಮೊಳಕೆ ಕಟ್ಟಿದ ಕಾಲನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ . ಮೊಳಕೆ ಕಟ್ಟಿದ ಕಾಲಿನಲ್ಲಿ ಫೈಬರ್ ಮತ್ತು ಪ್ರೋಟಿನ್ ಅಂಶವೂ ಹೆಚ್ಚಾಗಿರುವ ಕಾರಣದಿಂದಾಗಿ ಇದನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವಂತಹ ಪ್ರೋಟೀನ್ ಮತ್ತು ಫೈಬರ್ ಅಂಶವು ಹೇರಳವಾಗಿ ದೊರೆಯಲಿದೆ ಮತ್ತು ಪ್ರೊಟೀನ್ ನಲ್ಲಿ ದೇಹಕ್ಕೆ ಬೇಕಾಗಿರುವಂತಹ ಕ್ಯಾಲ್ಷಿಯಂ ಅಂಶವು ಸಾಕಷ್ಟಿದೆ ಆದ್ದರಿಂದ ಮೊಳಕೆ ಕಟ್ಟಿದ ಕಾಲನ್ನು ತಿನ್ನುವುದರಿಂದ ಮೂಳೆಗಳ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು .

ಹೌದು ಸ್ನೇಹಿತರೇ ಅದೇನೆಂದರೆ ಮೊಳಕೆ ಕಟ್ಟಿದ ಕಾಳಿನಲ್ಲಿ ನಮ್ಮ ಹಲ್ಲುಗಳಲ್ಲಿ ಎಷ್ಟು ಕ್ಯಾಲ್ಶಿಯಂ ಅಂಶವೂ ಇರುತ್ತದೋ ಅಷ್ಟೇ ಕ್ಯಾಲ್ಷಿಯಂ ಅಂಶವು ಮೊಳಕೆ ಕಟ್ಟಿದ ಕಾಲಿನಲ್ಲಿ ಇರುತ್ತದೆ ಆದ್ದರಿಂದ ಇದನ್ನು ತಿನ್ನೋದರಿಂದ ನಮ್ಮ ದೇಹಕ್ಕೆ ಹೇರಳವಾಗಿ ಕ್ಯಾಲ್ಶಿಯಂ ಅಂಶವು ದೊರೆಯುತ್ತದೆ .

ದೇಹ ಸದೃಢವಾಗಿ ಇರಬೇಕು ಅಂತ ಹೆಚ್ಚಿಸುತ್ತಾರೆ ಪ್ರತಿ ದಿನ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿದರೆ ಸಾಕು ಆರೋಗ್ಯದ ಜೊತೆಗೆ ದೇಹವೂ ಕೂಡ ಸುಂದರ ಆಕಾರವನ್ನು ಪಡೆದುಕೊಳ್ಳುತ್ತದೆ ಮತ್ತು ಮುಖದ ಅಂದವನ್ನು ಕೂಡ ಹೆಚ್ಚಿಸುತ್ತದೆ ಇವನ್ನು ಮೊಳಕೆ ಕಟ್ಟಿದಂತಹ ಕಾಳುಗಳು . ಮೊಳಕೆ ಕಟ್ಟಿದ ಕಾಳುಗಳು ಹಸಿಯಾಗಿರುವುದರಿಂದ ಇದರಲ್ಲಿ ಬ್ಯಾಕ್ಟಿರಿಯಾಗಳು ಇರಬಹುದು ಆದ್ದರಿಂದ ಈ ಒಂದು ಮೊಳಕೆ ಕಟ್ಟಿದ ಕಾಳುಗಳನ್ನು ಬೇಯಿಸಿ ತಿನ್ನುವುದು ನಮಗೆ ಉತ್ತಮ .

ಮೊಳಕೆ ಕಟ್ಟಿದ ಕಾಳನ್ನು ಹಾಗೆ ತಿನ್ನುವುದರ ಬದಲು ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಮತ್ತೆ ಸ್ವಲ್ಪ ಕೊತ್ತಂಬರಿ ಸೊಪ್ಪು ಬೇಯಿಸಿದ ಮೂಲಂಗಿ ತುರಿ ಕ್ಯಾರೆಟ್ ತುರಿ ಮತ್ತು ಕ್ಯಾಬೆಜ್ ತುರಿಯನ್ನು ಬೆರೆಸಿ ಅದಕ್ಕೆ ಚಿಟಕಿ ಉಪ್ಪು ಮತ್ತು ನಿಂಬೆರಸವನ್ನು ಹಾಕಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಆಗಲಿದೆ .

ಈ ರೀತಿಯಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾಗಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುತ್ತಾ ಬಂದರೆ ತುಂಬಾನೇ ಪ್ರಯೋಜನ ಮತ್ತು ಗರ್ಭಿಣಿ ಸ್ತ್ರೀಯರು ಬೆಳಗಿನ ವೇಳೆ ಈ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸುವುದರಿಂದ ತುಂಬಾನೇ ಒಳ್ಳೆಯದು ಮತ್ತು ಇದನ್ನು ಚಿಕ್ಕ ಮಕ್ಕಳಿಂದ ವಯಸ್ಸಾಗಿರುವವರು ಕೂಡ ಸೇವಿಸಬಹುದು .