Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಮೊಳಕೆ ಕಾಳು ಪ್ರತಿನಿತ್ಯ ತಿನ್ನುವುದರಿಂದ ಏನೆಲ್ಲಾ ಆರೋಗ್ಯದ ಲಾಭಗಳನ್ನ ಹೊಂದಬಹುದು ಗೊತ್ತ ..!

ಬೆಳೆಯುವ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಬೇಕು ಅಂತಹ ಒಂದು ಆಹಾರ ಅಂದರೆ ಮೊಳಕೆ ಕಟ್ಟಿದ ಕಾಳುಗಳು. ಹೌದು ನಾವು ಮೊಳಕೆ ಕಟ್ಟಿಸಿದ ಕಾಳುಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಬುದ್ಧಿ ಮತ್ತು ದೇಹ ಬೆಳೆಯುತ್ತದೆ. ಅಷ್ಟೇ ಅಲ್ಲ ಮೊಳಕೆ ಕಟ್ಟಿದ ಕಾಳುಗಳು ತಿನ್ನೋದ್ರಿಂದ ಇನ್ನೂ ಅನೇಕ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ನೀವು ಕೂಡ ಆ 1ವಿಚಾರವನ್ನು ತಿಳಿದುಕೊಳ್ಳಬೇಕು .

ಅಂದರೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ ಹಾಗೂ ಈ ಮೊಳಕೆ ಕಟ್ಟಿದ ಕಾಳುಗಳನ್ನು ಯಾವ ಸಮಯದಲ್ಲಿ ತಿನ್ನುವದರಿಂದ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡುತ್ತವೆ ನೀವು ಕೂಡ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯಕ್ಕಾಗಿ 1ಲೇಖನವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ.

ಮೊಳಕೆ ಕಟ್ಟಿಸದ ಕಾಳನ ತಿನ್ನುವುದರಿಂದ ಕೂದಲುದುರುವ ಸಮಸ್ಯೆಯಿಂದ ಹಿಡಿದು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ. ಅಷ್ಟೆ ಅಲ್ಲ ಈ ಕಾಳುಗಳನ್ನು ಮೊಳಕೆ ಕಟ್ಟಿಸಿದ ನಂತರ ಅದನ್ನ ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಇದನ್ನು ಬೇಯಿಸಿ ತಿನ್ನುವುದು ಅಷ್ಟೊಂದು ಉತ್ತಮವಲ್ಲ. ಹಾಗೆ ಈ ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ದೇಹದಲ್ಲಿ ವಿಷಕಾರಿ ಅಂಶ ಇದ್ದರೆ ಅದನ್ನು ಕೂಡ ಹೊರಹಾಕುವ ಕೆಲಸ ಈ ಮೊಳಕೆ ಕಾಳುಗಳು ಮಾಡುತ್ತದೆ. ಈ ಮೊಳಕೆಕಾಳಿನ ಮೆಗ್ನೀಷಿಯಂ ವಿಟಮಿನ್ಸ್ ಮಿನರಲ್ಸ್ ಹೇರಳವಾಗಿದ್ದು ವೀರ್ಯಾಣು ಉತ್ಪನ್ನಕ್ಕೆ ಹೆಚ್ಚು ಸಹಕಾರಿಯಾಗಿದೆ, ಆದಕಾರಣ ಗಂಡು ಮಕ್ಕಳು ತಪ್ಪದೆ ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನಬಹುದು.

ಇನ್ನೂ ಅನಗತ್ಯ ಕೊಬ್ಬನ್ನು ಕರಗಿಸುವ ಶಕ್ತಿ ಈ ಮೊಳಕೆಕಾಳಿನಲ್ಲಿ ಇರುತ್ತದೆ ಹಾಗೆ ಮೂಳೆಗಳಿಗೆ ಬಲ ನೀಡುವ ಈ ಮೊಳಕೆ ಕಾಳುಗಳು ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ. ತೂಕವನ್ನು ಇಳಿಸಲು ಸಹಕಾರಿಯಾಗಿರುವ ಈ ಮೊಳಕೆ ಕಾಳುಗಳು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅಷ್ಟೇ ಅಲ್ಲಾ ಯಾರು ಸದೃಢ ಮೈಕಟ್ಟನ್ನು ಹೊಂದಬೇಕು ಅಂತ ಇರುತ್ತಾರೊ ಅಂಥವರು ಪ್ರತಿದಿನ ಮೊಳಕೆ ಕಟ್ಟಿದ ಕಾಳುಗಳು ಹಸಿಯಾಗಿ ಸೇವನೆ ಮಾಡುತ್ತ ಬರಬೇಕು. ಈ ಮೊಳಕೆ ಕಟ್ಟಿದ ಕಾಳುಗಳು ಬೆಳಗ್ಗಿನ ಸಮಯದಲ್ಲಿ ತಿನ್ನುವುದರಿಂದ ಒಳ್ಳೆಯ ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತದೆ. ಇದರಿಂದ ನಾವು ದಿನಪೂರ್ತಿ ಚೈತನ್ಯವಾಗಿ ಇರುವುದಕ್ಕೆ ಸಹಾಯಕಾರಿಯಾಗಿರುತ್ತದೆ.

ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆದವರು ಮೊಳಕೆ ಕಟ್ಟಿದ ಕಾಳುಗಳು ತಿನ್ನಲೇಬೇಕು ಇದರ ಪ್ರಯೋಜನವನ್ನು ನಾವು ಪಡೆದುಕೊಳ್ಳುತ್ತ ಬರುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಸಮತೋಲನಕ್ಕೆ ಬರುತ್ತದೆ. ಹಾಗೆ ಅನೇಕ ಸಮಸ್ಯೆಗಳನ್ನು ದೂರ ಮಾಡುವ ಈ ಮೊಳಕೆ ಕಾಳುಗಳು ವಯಸ್ಸಾಗಿರುವ ಗುಣಲಕ್ಷಣಗಳನ್ನು ಮರೆಮಾಚಲು ಸಹಕಾರಿಯಾಗಿದೆ. ಆದಕಾರಣ ತರುಣರಂತೆ ಕಾಣಲು ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಮಕ್ಕಳಿಗೆ ಚಾರ್ಜ್ ನೀಡುವುದಕ್ಕಿಂತ ಈ ಮೊಳಕೆ ಕಾಳುಗಳ ಸಲಾಡ್ ರೂಪದಲ್ಲಿ ನೀಡುತ್ತ ಬರುವುದರಿಂದ ಮಕ್ಕಳು ಒಳ್ಳೆಯದು ಶಕ್ತಿ ಇದರಿಂದ ಪಡೆದುಕೊಳ್ತಾರೆ. ಗರ್ಭಿಣಿ ಸ್ತ್ರೀಯರು ಈ ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಮಗುವಿಗೆ ಒಳ್ಳೆಯ ಪೋಷಣೆ ದೊರೆಯುತ್ತದೆ ಮಗು ಆರೋಗ್ಯಕರವಾಗಿ ಹುಟ್ಟುತ್ತದೆ.

ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಮೊಳಕೆ ಕಟ್ಟಿದ ಕಾಳುಗಳು ಪ್ರತಿಯೊಬ್ಬರೂ ಸೇವಿಸಬಹುದು. ಆದರೆ ಮೊಳಕೆ ಕಟ್ಟಿದ ಕಾಳುಗಳು ಬೇಯಿಸಿ ತಿನ್ನುವುದಕ್ಕಿಂತ ಅದನ್ನು ಹಸಿಯಾಗಿ ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಹಾಗಾದರೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದ.