Categories
ಅರೋಗ್ಯ ಆರೋಗ್ಯ ಮಾಹಿತಿ

ಮೊಳಕೆ ಬಂದ ಕಾಳುಗಳನ್ನ ಹೀಗೆ ಮಾಡಿಕೊಂಡು ತಿಂದ್ರೆ , ನಮ್ಮ ಆರೋಗ್ಯವನ್ನ ಸಕ್ಕತ್ತಾಗಿ ಇಟ್ಕೋಬಹುದು …

ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ಹೌದು ಈ ಮೊಳಕೆ ಕಾಳುಗಳನ್ನು ಪ್ರತಿದಿನ ಸೇವನೆ ಮಾಡುವುದರಿಂದ ಆರೋಗ್ಯ ಪ್ರಯೋಜನಗಳಿವೆ ಹಾಗೂ ಇನ್ನೂ ನಾನಾ ತರಹದ ಪ್ರಯೋಜನಗಳನ್ನು ನಾವು ಈ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಪಡೆದುಕೊಳ್ಳಬಹುದಾಗಿದೆ .

ಹಾಗಾದರೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಏನೆಲ್ಲ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಈ ಮೊಳಕೆ ಕಟ್ಟಿದಂತಹ ಕಾಳುಗಳನ್ನು ಅಥವಾ ಧಾನ್ಯಗಳನ್ನು ತಿನ್ನುವುದರಿಂದ ಎಂದು .

ಎಲ್ಲಾ ತರಹದ ಕಾಳುಗಳನ್ನು ಮೊಳಕೆ ಕಟ್ಟಿ ತಿನ್ನಬಹುದು ಎಂದು ಕೇಳುವುದಾದರೆ ಎಲ್ಲಾ ಸ್ನೇಹಿತರ ಎಲ್ಲಾ ಕಾಳುಗಳನ್ನು ಅಥವಾ ಧಾನ್ಯಗಳನ್ನು ಮೊಳಕೆ ಕಟ್ಟೋದಕ್ಕೆ ಸಾಧ್ಯವಾಗುವುದಿಲ್ಲ ಕೆಲವೊಂದು ಕಾಳುಗಳು ಯಾವುವು ಅಂದರೆ ಅವರೆ ಕಡಲೆ ಕಾಳು ಬಟಾಣಿ ಹೆಸರು ಕಾಳು ಹುರುಳಿ ಕಾಳು ಇಂತಹ ಕಾಳುಗಳನ್ನು ಮೊಳಕೆ ಕಟ್ಟಿಸಿ ತಿನ್ನಬಹುದಾಗಿದೆ .

ಏನೆಲ್ಲಾ ಪ್ರಯೋಜನಗಳು ಪಡೆದುಕೊಳ್ಳಬಹುದು ಅಂದರೆ ಮೊದಲನೆಯದಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೆಚ್ಚಾಗಿ ಎದುರಿಸುತ್ತಿರುವಂತಹ ಸಮಸ್ಯೆ ಎಂದರೆ ತೂಕ ಹೆಚ್ಚಾಗುವುದು ಮತ್ತು ಅನಗತ್ಯ ಕೊಬ್ಬು ಇಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂಥವರು ಮೊಳಕೆ ಕಟ್ಟಿದ ಕಾಳುಗಳನ್ನು ಪ್ರತಿದಿನ ತಿನ್ನುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ .

ಹೌದು ಮೊಳಕೆ ಕಾಳುಗಳಲ್ಲಿ ಹೆಚ್ಚು ಪ್ರೋಟಿನ್ ವಿಟಮಿನ್ ಮತ್ತು ಖನಿಜಾಂಶಗಳು ಇರುವ ಕಾರಣದಿಂದಾಗಿ ಇದು ತಿಂದ ಕೂಡಲೇ ಹೊಟ್ಟೆ ತುಂಬಿದಂತೆ ಆಗುತ್ತದೆ ಆಗ ಹಸಿವು ಕಡಿಮೆಯಾಗಿ ತೂಕ ಇಳಿಸಲು ಇದು ಸಹಾಯ ಮಾಡುತ್ತದೆ . ಅದೇ ರೀತಿಯಲ್ಲಿಯೂ ಅನಗತ್ಯ ಕೊಬ್ಬನ್ನು ಕರಗಿಸಲು ಕೂಡ ಈ ಮೊಳಕೆ ಕಟ್ಟಿದಂತಹ ಕಾಲುಗಳು ಸಹಾಯಕಾರಿಯಾಗಿದೆ ಇದರಲ್ಲಿರುವ ವಿಟಮಿನ್ ಸಿ ಅಂಶವೂ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ .

ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಈ ಮೊಳಕೆ ಕಟ್ಟಿದ ಕಾಳುಗಳು ಹೆಚ್ಚು ಸಹಾಯಕಾರಿ ಹೌದು ಸ್ನೇಹಿತರೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿ ಇರುತ್ತದೆ ಈ ಮೊಳಕೆ ಕಟ್ಟಿದಂತಹ ಕಾಲುಗಳಲ್ಲಿ ಆದ್ದರಿಂದ ರೋಗ ನಿರೋಧಕ ಶಕ್ತಿ ಉತ್ತಮವಾಗಿ ವೃದ್ಧಿಸುತ್ತದೆ ಹಾಗೂ ವಿಟಮಿನ್ ಸಿ ಅಂಶವು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ .

ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ ಹೌದು ಸ್ನೇಹಿತರೆ ಇದರಲ್ಲಿರುವ ಐರನ್ ಅಂಶ ಕೆಂಪು ರಕ್ತಕಣಗಳನ್ನು ಹೆಚ್ಚು ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ ಈ ಕಾರಣದಿಂದಾಗಿ ಅನಿಮಿಯ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ .

ಮೂಳೆಗಳನ್ನು ಬಲಪಡಿಸುತ್ತದೆ ಆದ್ದರಿಂದ ವಯಸ್ಸಾದ ಕಾಲದಲ್ಲಿ ಮೂಳೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಎದುರಾಗುವುದಿಲ್ಲ ಜೊತೆಗೆ ಫೈಟ್ ಆಮ್ಲವನ್ನು ಇದು ಉತ್ಪತ್ತಿ ಮಾಡುವ ಕಾರಣದಿಂದಾಗಿ ದೇಹದಲ್ಲಿ ಕ್ಯಾಲಿ ಯಂ ಅಂಶವೂ ಕೂಡ ಹೇರಳವಾಗಿ ದೊರೆಯುತ್ತದೆ .

ಕಣ್ಣು ದೃಷ್ಟಿಯನ್ನು ವೃದ್ಧಿಸುವುದರಲ್ಲಿ ಈ ಮೊಳಕೆ ಕಟ್ಟಿದಂತಹ ಕಾಳುಗಳು ಹೆಚ್ಚು ಸಹಾಯಕಾರಿಯಾಗಿರುತ್ತದೆ ಹೌದು ಕಣ್ಣಿಗೆ ಅಪಾಯವನ್ನು ತಂದುಕೊಡುವಂತಹ ಫ್ರೀ ರಾಡಿಕಲ್ ನೋ ಇವು ನಿಷ್ಕ್ರಿಯಗೊಳಿಸಿ ಕಣ್ಣು ದೃಷ್ಟಿಯನ್ನು ಹೆಚ್ಚು ಮಾಡುವುದರಲ್ಲಿ ಕಾಳುಗಳು ಹೆಚ್ಚು ಸಹಾಯಕಾರಿಯಾಗಿರುತ್ತದೆ .

ಮೊಳಕೆ ಕಟ್ಟಿದ ಕಾಳುಗಳನ್ನು ಅಥವಾ ನೆನೆಸಿಟ್ಟ ಕಾಲುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಕೂಡ ಇದು ಹೆಚ್ಚು ಮಾಡುತ್ತದೆ .ಆದ್ದರಿಂದ ಪ್ರತಿ ದಿನ ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ತಪ್ಪದೇ ಈ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ ಶುಭ ದಿನ .

Leave a Reply