Categories
ಭಕ್ತಿ ಮಾಹಿತಿ ಸಂಗ್ರಹ

ಯಮಲೋಕದ ಬಗ್ಗೆ ಗರುಡ ಪುರಾಣದ ಮಹಾ ರಹಸ್ಯ ಬಯಲು! ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ..

ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಧರ್ಮವಾಗಿದ್ದು ಈ ಹಿಂದೂ ಧರ್ಮದಲ್ಲಿ ಸಾಕಷ್ಟು ರೀತಿ ರಿವಾಜುಗಳು ಇವೆ , ಹಿಂದು ಧರ್ಮದಲ್ಲಿ ನಾವು ಕೋಟಿ ಕೋಟಿ ದೇವರುಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಈ ಧರ್ಮದಲ್ಲಿ ಜನರಿಗೆ ಮುಕ್ಕೋಟಿ ದೇವರುಗಳ ಆಶೀರ್ವಾದವೂ ಇರುತ್ತದೆ .

ಹೀಗೆ ಹಿಂದೂ ಧರ್ಮವನ್ನು ಎತ್ತಿ ಹಿಡಿಯಲು ಸಾಕಷ್ಟು ಧರ್ಮ ಗ್ರಂಥಗಳನ್ನು ನಾವು ನೋಡಬಹುದು ಅಂತಹ ಗ್ರಂಥಗಳಲ್ಲಿ ಒಂದು ಗರುಡ ಪುರಾಣ ಎಂಬ ಗ್ರಂಥವೂ ಕೂಡ ಈ ಒಂದು ಗರುಡ ಪುರಾಣದಲ್ಲಿ ವಿಷ್ಣು ಗರುಡನಿಗೆ ಹೇಳಿರುವಂತಹ ಕೆಲವೊಂದು ಮುಖ್ಯವಾದ ಕಥನಗಳನ್ನು ನಾವು ನೋಡಬಹುದು ನಿಜಕ್ಕೂ ಈ ಒಂದು ಗರುಡ ಪುರಾಣದ ಗ್ರಂಥವನ್ನು ಓದಿದರೆ ಮನುಷ್ಯನು ತನ್ನ ಜೀವನದಲ್ಲಿ ಅತ್ಯಂತ ಮೇಲ್ಮಟ್ಟಕ್ಕೆ ಹೋಗುವುದರಲ್ಲಿ ಸಂದೇಹವೇ ಇಲ್ಲ.

ವಿಷ್ಣು ದೇವರ ವಾಹನವಾಗಿರುವ ಗರುಡ ಒಮ್ಮೆ ವಿಷ್ಣು ದೇವರಿಗೆ ಕೇಳುತ್ತಾರಂತೆ ಯಮಲೋಕ ಹೇಗಿದೆ ಎಂದು ಆಗ ದೇವ ವಿಷ್ಣು ಗರುಡನಿಗೆ ಯಮಲೋಕ ಹೇಗಿದೆ ಎಂದು ವರ್ಣಿಸುವ ಒಂದು ಸಂಗತಿ ಗರುಡ ಪುರಾಣದಲ್ಲಿ ಇದೆ ಹಾಗಾದರೆ ಯಮಲೋಕ ಹೇಗಿದೆ ಎಂದು ಚಿಕ್ಕ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ,

ಗರುಡ ಪುರಾಣದಲ್ಲಿ ಈ ರೀತಿ ಯಮಲೋಕ ಹೇಗಿದೆ ಎಂದು ವರ್ಣಿಸಿದ್ದಾರೆ ಹಾಗಾದರೆ ಮಾಹಿತಿ ಪೂರ್ತಿಯಾಗಿ ಓದಿ ನಷ್ಟವಾಗಿದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ . ವಿಷ್ಣು ದೇವರು ಯಮ ಲೋಕವು ಭೂಮಿಯಿಂದ ಸುಮಾರು ಎಂಬತ್ತು ಎರಡು ಸಾವಿರ ಯೋಜನೆ ದೂರದಲ್ಲಿದೆ ಅಂದರೆ ಹತ್ತು ಲಕ್ಷದ ಮೂವತ್ತು ಎರಡು ಸಾವಿರ ಕಿಲೋಮೀಟರ್ ದೂರದಲ್ಲಿದೆ ಯಂತೆ ಯಮಲೋಕ .

ಅಂದಿನ ಕಾಲದಲ್ಲಿ ಯೊಜಿನ್ ಅಂದರೆ ನಾವು ಇಂದು ಬಳಸುವಂತಹ ಕಿಲೋಮೀಟರ್ ಅಂದರೆ ಒಂದು ಯೋಜನೆ ಬೆಲೆ ಹನ್ನೆರಡು ಕಿಲೋಮೀಟರ್ . ಭೂಮಿ ಮೇಲೆ ಕರ್ಮ ಮಾಡಿದವರು ಯಮಲೋಕಕ್ಕೆ ಹೋಗುವಾಗ ಅತ್ಯಂತ ಕ್ಲಿಷ್ಟವಾದ ದಾರಿಯನ್ನು ಅವರು ಎದುರಿಸಬೇಕಾಗುತ್ತದೆ.

ಯಂತೆ ಸುಡುವ ಬೆಂಕಿಯ ಕೆಂಡದ ದಾರಿಯನ್ನು ಭೂಮಿಯ ಮೇಲೆ ಪಾಪ ಮಾಡಿದವರು ನಡೆದುಕೊಂಡು ಹೋಗಬೇಕಾಗುತ್ತದೆ ಯಂತೆ ಮತ್ತು ಅವರು ಭೂಲೋಕದಲ್ಲಿ ಇದ್ದಾಗ ಏನೇನು ಪಾಪ ಮಾಡಿರುತ್ತಾರೋ ಅಷ್ಟೇ ಹಿಂಸೆಯನ್ನು ಯಮಲೋಕದಲ್ಲಿ ಅವರಿಗೆ ಕೊಡಲಾಗುತ್ತದೆಯಂತೆ .

ಭೂಮಿ ಮೇಲೆ ಒಳ್ಳೆಯ ಕೆಲಸ ಮಾಡಿದವರು ದಾನ ಧರ್ಮ ಮಾಡಿದವರಿಗೆ ಅವರು ಏನೇನು ದಾನ ಮಾಡಿರುತ್ತಾರೋ ಆ ಎಲ್ಲ ವಸ್ತುಗಳು ಅವರ ದಾರಿಯಲ್ಲಿ ಸಿಗುತ್ತದೆಯಂತೆ . ಯಮಲೋಕದಲ್ಲಿ ಒಳ್ಳೆಯ ಕೆಲಸ ಮಾಡಿರುವವರಿಗೆ ಗಂಧರ್ವ ಕನ್ಯೆಯರು ಸ್ವಾಗತಿಸುತ್ತಾರೆ ಅಂತ ಹೇಳಲಾಗಿದೆ . ವಿಷ್ಣುದೇವ ಹೇಳುವ ಹಾಗೆ ದಕ್ಷಿಣ ಮತ್ತು ನೈಋುತ್ಯ ಮಧ್ಯದಲ್ಲಿ ಯಮಪುರಿ ಇದೆ ಮತ್ತು ವಜ್ರದಂತೆ ಹೊಳೆಯುವ ಈ ಯಮಪುರಿಗೆ ಯಾರ ಪ್ರವೇಶವೂ ಇಲ್ಲವಂತೆ ರಾಕ್ಷಸರು ಮಾತ್ರ ಅಲ್ಲ ದೇವತೆಗಳಿಗೂ ಕೂಡ ಈ ಒಂದು ಯಮಪುರಿಗೆ ಪ್ರವೇಶವಿಲ್ಲ ಅಂತಾ ಹೇಳಲಾಗುತ್ತದೆ .ಯಮಪುರಿಯು ಚೌಕಾಕಾರದಲ್ಲಿ ಇದೆ ಮತ್ತು ಇದು ಒಂದು ಸಾವಿರ ಯೋಜಿನ್ ಅಂದರೆ ಹನ್ನೆರಡು ಸಾವಿರ ಕಿಲೋಮೀಟರ್ ಅಷ್ಟು ಅಗಲವಿದೆ .

ಯಮ ಪುರಿಯಲ್ಲಿ ಯಮರಾಜ ಮತ್ತು ರಾಕ್ಷಸರ ಮನೆಯಿದೆ ಮತ್ತು ಯಮಪುರಿಯ ಮಧ್ಯದಲ್ಲಿ ಸುಮಾರು ಇಪ್ಪತ್ತು ಅಯ್ದು ಯೂಜಿನ್ ಅಗಲದಲ್ಲಿ ಚಿತ್ರಗುಪ್ತರ ಐಷಾರಾಮಿ ಜೀವನವನ್ನು ನೋಡಬಹುದು ಮತ್ತು ಇದರಲ್ಲಿ ಕುಳಿತು ಚಿತ್ರಗುಪ್ತ ರು ಜನರು ಭೂಮಿ ಮೇಲೆ ಮಾಡಿದಂತಹ ಪಾಪಗಳನ್ನು ಎಣಿಸುತ್ತಾ ಇರುತ್ತಾರಂತೆ . ಚಿತ್ರಗುಪ್ತರ ಮನೆಯ ಸುತ್ತ ಹಲವಾರು ರೋಗಗಳು ಇರುತ್ತವೆಯಂತೆ ಮತ್ತು ಶಿವನು ಹೇಳಿದ ಹಾಗೆ ಆ ರೋಗಗಳು ಮನುಷ್ಯರನ್ನು ಕಾಡುತ್ತದೆ ಅಂತ ಹೇಳುತ್ತಾರೆ . ಯಮರಾಜನ ಬಂಗಲೆ ಸುಮಾರು ಐನೂರು ಯೋಜಿನ್ಗಳಲ್ಲಿ ಇರುತ್ತದೆಯಂತೆ ಮತ್ತು ಯಮರಾಜನ ಈ ಬಂಗಲೆ ಚಿನ್ನದಿಂದ ಮಾಡಲಾಗಿದ್ದು ಪಳಪಳನೆ ಹೊಳೆಯುತ್ತ ಇರುತ್ತದೆಯಂತೆ ಮತ್ತು ಯಮರಾಜನ ಬಂಗಲೆಯಲ್ಲಿ ಸುಮಾರು ಸಾವಿರ ಕಂಬಗಳು ಇರುತ್ತದೆ ಮತ್ತು ಇಲ್ಲಿರುವ ಗಂಟೆಗಳು ಅಲ್ಲಿ ಸಂಗೀತದ ವಾದ್ಯದಂತೆ ಇರುತ್ತದೆ .

ಯಮರಾಜನು ಸುಮಾರು ಹತ್ತು ಯೋಜನೆಗಳ ಎತ್ತರದ ಆ ಸ್ಥಾನದಲ್ಲಿ ಕುಳಿತುಕೊಂಡಿರುತ್ತಾರೆ ಮತ್ತು ಚಿನ್ನದ ಕಿರೀಟವನ್ನು ಧರಿಸಿಕೊಂಡು ವಿಜೃಂಭಣೆಯ ಆಸ್ಥಾನದಲ್ಲಿ ಕುಳಿತಿರುತ್ತಾರೆ ಇವರ ಸುತ್ತಮುತ್ತ ಅಪ್ಸರೆಯರು ಇರುತ್ತಾರೆ .
ಯಮರಾಜನ ಬಂಗಲೆಯಲ್ಲಿ ಯಾವುದೇ ರೀತಿಯ ಕೆಟ್ಟ ಶಬ್ದವನ್ನು ಉಪಯೋಗಿಸುವಂತಿಲ್ಲ ಮತ್ತು ಭೂಮಿ ಮೇಲೆ ಪುಣ್ಯ ಮಾಡಿರುವವರನ್ನು ಯಮರಾಜನೇ ಅಲ್ಲಿಗೆ ಸ್ವಾಗತಿಸಿ ಸಿಂಹಾಸನದ ಮೇಲೆ ಕೂರಿಸಿ ಗಂಧದಿಂದ ಪೂಜಿಸುತ್ತಾರೆ ಮತ್ತು ಅಲ್ಲಿರುವವರಿಗೆ ಕೂಡ ಇವರಿಗೆ ಪೂಜಿಸಲು ಹೇಳುತ್ತಾರಂತೆ ಮತ್ತು ಯಮರಾಜನ ಬಂಗಲೆಯಲ್ಲಿ ಶಿವಗಣರು ಚಿತ್ರಗುಪ್ತರ ಕೂಡ ಇರುತ್ತಾರೆ .
ನೋಡಿದ್ರಲ್ಲ ಸ್ನೇಹಿತರೇ ಗರುಡ ಪುರಾಣದ ಪ್ರಕಾರ ಯಮ ಲೋಕವು ಹೇಗೆ ಇರುತ್ತದೆ ಅಂತ .

Leave a Reply